NEW
Font size
Worksheetsಕನ್ನಡ
Total questions: 25
Worksheet time: 51mins
"ದಯವಿಟ್ಟು ಬಾಗಿಲು ತೆಗೆಯಿರಿ ಗಾಯಗೊಂಡಿದ್ದೇನೆ" ಈ ವಾಕ್ಯವನ್ನು ರಾಹಿಲನು ಯಾವಾಗ ಹೇಳಿದನು?
ಸೈನಿಕರು ಬಂದಾಗ
ಮುದುಕಿಯ ಸೊಸೆ ಕೂಗಿಕೊಂಡಾಗ
ಗಾಯಗೊಂಡು ರಕ್ಷಣೆಗಾಗಿ ಮುದುಕಿಯ ಮನೆ ಬಳಿ ಬಂದಾಗ
ಪೈಲಟ್ ಜೊತೆ ವಿಮಾನದಲ್ಲಿ ಇದ್ದಾಗ
"ಅತ್ತ ಆವುದೀ ಮರುಳು?ನಮ್ಮಡೆಗೆ ಬರುತಿಹುದು " ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು?
ರಾಮನು ಲಕ್ಷ್ಮಣನಿಗೆ
ಲಕ್ಷ್ಮಣನು ರಾಮನಿಗೆ
ಸೀತೆಯು ರಾಮನಿಗೆ
ರಾಮನು ಸೀತೆಗೆ
ಮಧುಕರ : ದುಂಬಿ :: ತೇಜ :...........
ಧೈರ್ಯ
ಕಾಂತಿ
ದಾರಿ
ಪಾದ
ಸತಿ ಪತಿ : ಜೋಡುನುಡಿ :: ತುತ್ತತುದಿ : ..............
ಅನುಕರಣಾವ್ಯಯ
ದ್ವಿರುಕ್ತಿ
ಪಡೆನುಡಿ
ನಾಣ್ಣುಡಿ
'ಅವನು ಊಟವನ್ನು ಮಾಡುವನು'. ಈ ವಾಕ್ಯವು ಯಾವ ಕಾಲದಲ್ಲಿದೆ?
ಭೂತ
ವರ್ತಮಾನ
ಭವಿಷತ್
ರಾಹು
ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸ್ಥಾಪಿಸಿದ ಸಂಸ್ಥೆಗಳಾವುವು?
ಪ್ರಜಾಪ್ರತಿನಿಧಿ ಸಭೆ
ಕನ್ನಡ ಸಾಹಿತ್ಯ ಪರಿಷತ್ತು
ಮೈಸೂರು ವಿಶ್ವವಿದ್ಯಾಲಯ
ಮೇಲಿನ ಎಲ್ಲವು
ಈ ಕೆಳಗಿನ ಹೇಳಿಕೆಗಳಲ್ಲಿ ನೆಹರೂರವರ ಹೇಳಿಕೆಯನ್ನು ಗುರ್ತಿಸಿ.
"ಸಾಮಾಜಿಕ ಕಾನೂನುಗಳ ಹರಿಕಾರ"
"ಕೈಗಾರಿಕೀಕರಣ ಇಲ್ಲವೆ ಅವನತಿ"
"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು"
"ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ"
ಸ್ಥೈರ್ಯ : ದೃಢತೆ :: ಮುಕ್ತಕಂಠ :...........
ಒಳ್ಳೆಯ ಕಂಠ
ಸುಸ್ಸಂಗತ
ವಶ
ತೆರೆದ ಮನಸ್ಸು
ಒಂದು ಪದ ಅಥವಾ ವಾಕ್ಯವನ್ನು ಹೇಳಿ ಅದಕ್ಕೆ ಸಮಾನಾರ್ಥಕ ಪದ ಅಥವಾ ವಾಕ್ಯವನ್ನು ಹೇಳುವಾಗ ಬಳಸುವ ಚಿಹ್ನೆಯು ಯಾವುದು?
ವಾಕ್ಯವೇಷ್ಠನ
ಆವರಣ
ಅಲ್ಪವಿರಾಮ
ಅರ್ಧವಿರಾಮ
'ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ' ಈ ವಾಕ್ಯ ಬರುವ ಗದ್ಯ ಯಾವುದು?
ವ್ಯಾಘ್ರಗೀತೆ
ವೃಕ್ಷಸಾಕ್ಷಿ
ಭಾಗ್ಯಶಿಲ್ಪಗಳು
ಎದೆಗೆ ಬಿದ್ದ ಅಕ್ಷರ
ಇಮ್ಮಾವು : ಕರ್ಮಧಾರೆಯ ಸಮಾಸ :: ಮೈಮುಚ್ಟು :.................
ಕ್ರಿಯಾ ಸಮಾಸ
ದ್ವಂದ್ವ ಸಮಾಸ
ಗಮಕ ಸಮಾಸ
ಅಂಶಿ ಸಮಾಸ
ಕೃಷ್ಣಮೂರ್ತಿಯ ಅಜ್ಜಂದಿರು ಯಾವ ಜಿಲ್ಲೆಗೆ ಸೇರಿದವರು ?
ಹಾಸನ
ತುಮಕೂರು
ರಾಮನಗರ
ಬೆಂಗಳೂರು
ಶಾನುಭೋಗರು ಹುಲಿಯ ಮುಖಕ್ಕೆ ಯಾವುದರಿಂದ ರಾಚಿ ಹೊಡೆದರು?
ಕೈ
ಬಂದೂಕ
ಸಿಡಿಮದ್ದು
ಖಿರ್ದಿ ಪುಸ್ತಕ
ಕಪ್ಪು : ತದ್ದಿತಾಂತ ಭಾವನಾಮ :: ಭೀಮನಂತೆ :..............
ತದ್ದಿತಾಂತ ಅವ್ಯಯ
ತದ್ದಿತಾಂತ ನಾಮ
ಕೃದಂತ ಅವ್ಯಯ
ಕೃದಂತ ನಾಮ
ವೃಕ್ಷಸಾಕ್ಷಿ ಪಾಠದಲ್ಲಿ ಕಂಡುಬರುವ ನೀತಿ ಯಾವುದು ?
ಹಣಕ್ಕಿಂತ ಗುಣ ಮೇಲು
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ
ಮಾಡಿದ್ದುಣ್ಣೋ ಮಹಾರಾಯ
ಮೇಲಿನ ಎಲ್ಲವೂ
ಮೇದಿನಿ : ಭೂಮಿ :: ತಮಾಲ :........
ಮೋಡ
ವಿಷ್ಣು
ಕತ್ತಲೆ
ನ್ಯಾಯ
ಉತ್ಪಲಮಾಲೆ :20 ಅಕ್ಷರ :: ಚಂಪಕಮಾಲೆ :.............
19 ಅಕ್ಷರ
18 ಅಕ್ಷರ
22 ಅಕ್ಷರ
21ಅಕ್ಷರ
ಪರ್ವತ : ರೂಢನಾಮ :: ವ್ಯಾಪಾರಿ :.......
ಅಂಕಿತನಾಮ
ಪಂಗನಾಮ
ಸರ್ವನಾಮ
ಅನ್ವರ್ಥಕ ನಾಮ
ಉಡುಗೆ : ಕೃದಂತಭಾವನಾಮ :: ಮಾಡಲಿಕ್ಕೆ : ................
ತದ್ದಿತಾಂತಭಾವನಾಮ
ಕೃದಂತನಾಮ
ಕೃದಂತಾವ್ಯಯ
ತದ್ದಿತಾಂತ ನಾಮ
ಲೋಕದೊಳ್ ಎಂಬುದು ಈ ವಿಭಕ್ತಿಯಲ್ಲಿದೆ.......
ಪ್ರಥಮ
ದ್ವಿತೀಯ
ತೃತೀಯ
ಸಪ್ತಮಿ
ಮಾಡನು ಎಂಬುದು ಈ ಕ್ರಿಯಾರೂಪವಾಗಿದೆ
ವಿದ್ಯರ್ಥಕ
ಸಂಭವನಾರ್ಥಕ
ಕ್ರಿಯಾರ್ಥಕ
ನಿಷೇಧಾರ್ಥಕ
ಧಗಧಗ ಎಂಬುದು ಈ ಅವ್ಯಯವಾಗಿದೆ
ಸಾಮಾನ್ಯಾರ್ಥಕಾವ್ಯಯ
ಅನುಕರಣಾವ್ಯಯ
ಭಾವಸೂಚಕಾವ್ಯಯ
ಸಂಬಂಧಾರ್ಥಕಾವ್ಯಯ
ಬ್ರಹ್ಮ : ಬೊಮ್ಮ :: ಯುಗ :..........
ಜಗ
ಜುಗ
ಯೋಗ
ಬೋಗ
ಬಸ್ಸು : ಇಂಗ್ಲಿಷ್ :: ಅರ್ಜಿ :.........
ಹಿಂದೂಸ್ತಾನಿ
ಪಾರ್ಸಿ
ಅರಬ್ಬಿ
ಗ್ರೀಕ್
3/4, 3/4 : ಭಾಮಿನಿ :: 5/5/5/5 :..........
ತ್ರಿಪದಿ
ವಾರ್ಧಕ
ಶರ
ಕುಸುಮ
