wayground logo

Free Printable Worksheets

NEW

Font size

S
M
L
XL
Worksheets

ಪದ್ಯ-ಸಂಕಲ್ಪ ಗೀತೆ (ರಚನೆ-ಸುನಿಲ್ ಕುಮಾರ್ ಬಿ.ಎಸ್.MMDRS ಚನ್ನಪಟ್ಟಣ)

Total questions: 25

Worksheet time: 13mins

Name
Class
Date
1.

'ಸಂಕಲ್ಪಗೀತೆ' ಪದ್ಯವು ಯಾವ ಗೀತೆ ಪ್ರಕಾರವಾಗಿದೆ ?

a)

ಭಾವಗೀತೆ

b)

ಲಾವಣಿಗೀತೆ

c)

ಶೋಕಗೀತೆ

d)

ಚಿತ್ರಗೀತೆ

2.

ವ್ಯಕ್ತಿಯ ಭಾವನೆಗಳಿಗೆ ಅಭಿವ್ಯಕ್ತಿ ಕೊಡುವ ಕವನವೇ_____________.

a)

ಭಾವಗೀತೆ

b)

ಲಾವಣಿಗಳು

c)

ವೀರಗೀತೆ

d)

ಶೋಕಗೀತೆ

3.

ಜಿ.ಎಸ್ ಶಿವರುದ್ರಪ್ಪ ನವರ ಪೂರ್ಣ ಹೆಸರು

a)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

b)

ಗುಗ್ಗರಿ ಶಾಂತರಾಜಪ್ಪ ಶಿವರುದ್ರಪ್ಪ

c)

ಗುಗ್ಗರಿ ಶಾಂತೇಶ್ವರ ಶಿವರುದ್ರಪ್ಪ

d)

ಗುಗ್ಗಿರಿ ಶಾಂತರಸ ಶಿವರುದ್ರಪ್ಪ

4.

ಕೆಳಗಿನವುಗಳಲ್ಲಿ ಯಾವ ಕೃತಿಯನ್ನು ಶಿವರುದ್ರಪ್ಪ ನವರು ಬರೆದಿಲ್ಲ.

a)

ಸಾಮಗಾನ

b)

ಒಲವು-ಚೆಲವು

c)

ದೀಪದ ಹೆಚ್ಚು

d)

ಕುಸುಮ ಬಾಲೆ

5.

ರಾಷ್ಟ್ರಕವಿ ಬಿರುದಾಂಕಿತರನ್ನು ಕಾಲಾನುಕ್ರಮದಲ್ಲಿ ಬರೆಯಿರಿ.

a)

ಕುವೆಂಪು, ಗೋವಿಂದ ಪೈ,ಜಿ.ಎಸ್.ಶಿವರುದ್ರಪ್ಪ

b)

ಗೋವಿಂದ ಪೈ,ಕುವೆಂಪು, ಜಿ.ಎಸ್ ಶಿವರುದ್ರಪ್ಪ

c)

ಜಿ.ಎಸ್ ಶಿವರುದ್ರಪ್ಪ, ಗೋವಿಂದ ಪೈ,ಕುವೆಂಪು

d)

ಜಿ.ಎಸ್ ಶಿವರುದ್ರಪ್ಪ, ಕುವೆಂಪು, ಗೋವಿಂದ ಪೈ

6.

ಸಂಕಲ್ಪಗೀತೆ ಪದ್ಯವನ್ನು ಯಾವ ಕವನ ಸಂಕಲನದಿಂದ ಆರಿಸಲಾಗಿದೆ?

a)

ಸಾಮಗಾನ

b)

ಒಲವು-ಚೆಲವು

c)

ದೀಪದ ಹೆಜ್ಜೆ

d)

ಎದೆತುಂಬಿ ಹಾಡುವೆನು

7.

'ಕಲುಷಿತ' ಪದದ ಸಮನಾರ್ಥಕ ಪದವಿದು.

a)

ಮಲಿನ

b)

ಮಸುಕಾದ

c)

ಪೊಳ್ಳು

d)

ನಾವೆ

8.

'ಹಣತೆ' ಪದದ ಸಮನಾರ್ಥಕ ಪದವಿದು.

a)

ದೀಪ

b)

ದಾರಿ

c)

ಹೆಜ್ಜೆ

d)

ಕನಸು

9.

'ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ದ ಹಕ್ಕು'ಎಂದವರು________.

a)

ಬಾಲಗಂಗಾಧರ ತಿಲಕರು

b)

ಮಹಾತ್ಮ ಗಾಂಧಿಯವರು

c)

ಸುಭಾಷ್ ಚಂದ್ರ ಬೋಸ್ ರವರು

d)

ನೆಲ್ಸನ್ ಮಂಡೇಲಾ ರವರು

10.

ಈ ಪದಗಳನ್ನು ಬಳಸಿ ಸರಿಯಾದ ವಾಕ್ಯ ರಚಿಸಿ.

'ಹಿಂದೆ ಮುಂದೆ ಗುರಿಯಿದ್ದ ಗುರುವಿದ್ದ ಗುರಿಯಿತ್ತು ದೀರರದಂಡು ಸಾಗುತಿತ್ತು

a)

ಹಿಂದೆ ಗುರುಯಿದ್ದ,ಮುಂದೆ ಗುರಿಯಿತ್ತು,ಸಾಗುತ್ತಿತ್ತು ದೀರರ ದಂಡು

b)

ಹಿಂದೆ ಗುರಿಯಿತ್ತು,ಮುಂದೆ ಗುರುಯಿತ್ತು,ಸಾಗುತ್ತಿತ್ತು ದೀರರ ದಂಡು

c)

ಹಿಂದೆ ಗುರುಯಿದ್ದ,ಮುಂದೆ ಗುರುಯಿತ್ತು,ಸಾಗುತ್ತಿತ್ತು ದೀರರ ದಂಡು

d)

ಹಿಂದೆ ಮುಂದೆ ಗುರಿ ಗುರು,ಸಾಗುತ್ತಿತ್ತು ದೀರರ ದಂಡು

11.

'ಸಂಕಲ್ಪ ಗೀತೆ' ಪದ್ಯದ ಆಶಯ ವಿದು.

a)

ಜೀವನದಲ್ಲಿ ಧನಾತ್ಮಕ ಭಾವನೆ.

b)

ದೃಢಸಂಕಲ್ಪ

c)

ಯಾವುದೇ ರೀತಿಯ ಸವಾಲುಗಳು ಎದುರಾದಾಗ ಆತ್ಮವಿಶ್ವಾಸ ದಿಂದ ಇರುವುದು.

d)

ಮೇಲಿನ ಎಲ್ಲವೂ

12.

ಈ ಪದಗಳಿಗೆ ವಿರುದ್ಧಾರ್ಥಕ ಪದಗಳಿವು.

ಹಚ್ಚೋಣ-ಕಲುಷಿತ-ಬರಡು

a)

ನಂದಿಸೋಣ- ಪರಿಶುದ್ಧ-ಸಮೃದ್ಧಿ

b)

ನಂದಿಸೋಣ- ಪರಿಶುದ್ಧ-ಕಾಡು

c)

ಹಣತೆ- ಪರಿಶುದ್ಧ-ಸಮೃದ್ಧಿ

d)

ನಂದಿಸೋಣ- ನದೀಜಲ-ಸಮೃದ್ಧಿ

13.

'ಕಾಡುಮೇಡು' ಪದವು ಈ ಕೆಳಗಿನ ಯಾವ ವ್ಯಾಕರಣಾಂಶಕ್ಕೆ ಉದಾಹರಣೆ.

a)

ದ್ವಿರುಕ್ತಿ

b)

ಜೋಡುನುಡಿ

c)

ಸಂಧಿ

d)

ಅವ್ಯಯ

14.

'ಮೇಲೆಬ್ಬಿಸಿ' ಪದವು ________ ಸಂಧಿಗೆ ಉದಾಹರಣೆ.

a)

ಲೋಪ

b)

ಆಗಮ

c)

ಆದೇಶ

d)

ಸವರ್ಣ

15.

ಪದ್ಯ ಪೂರ್ಣಗೊಳಿಸಿರಿ.

ಕಲುಷಿತವಾದೀ ________________

_____________ಮಳೆಯಾಗೋಣ.

a)

ನದೀಜಲಗಳಿಗೆ

ಮುಂಗಾರಿನ

b)

ಪಥಗಳಿಗೆ

ಎಚ್ವರದಲಿ

c)

ಕಾಡುಮೇಡುಗಳ

ವಸಂತವಾಗುತ

d)

ನದೀಜಲಗಳಿಗೆ

ಹಿಂಗಾರಿನ

16.

ಯಾವುದನ್ನು ಎಚ್ಚರಲ್ಲಿ ಮುನ್ನೆಡಸಬೇಕು?

a)

ಬಿರುಗಾಳಿಗೆ ಹೊಯ್ದಾಡುವ ಹಡಗನು

b)

ಬಿರುಗಾಳಿಗೆ ಹೊಯ್ದಾಡುವ ಗಾಳಿಪಟವನ್ನು

c)

ಬರಡಾಗಿರುವ ಕಾಡುಮೇಡುಗಳನ್ನು

d)

ಬರಡಾಗಿರುವ ಪಥವನ್ನು

17.

ನದೀ ಜಲಗಳು ಏನಾಗಿವೆ?

a)

ಕೆಂಪಾಗಿವೆ

b)

ಕಲುಷಿತವಾಗಿವೆ

c)

ಕಳೆದೋಗಿವೆ

d)

ಕಸತುಂಬಿವೆ

18.

ಯಾವುದಕ್ಕೆ ಮುಂಗಾರಿನ ಮಳೆಯಾಗ ಬೇಕು?

a)

ಕಲುಷಿತವಾದ ನದಿ ಜಲಗಳಿಗೆ

b)

ಕಲುಷಿತವಾದ ಕಾಡುಗಳಿಗೆ

c)

ಕಲುಷಿತವಾದ ಹಣತೆಗೆ

d)

ಕಲುಷಿತವಾದ ಕಂದಿದ ಕಣ್ಣಿಗೆ

19.

ಕತ್ತಲೆಯೊಳು ___________ ಹಚ್ಚೋಣ.

a)

ದ್ವೇಷದ ಹಣತೆ

b)

ರಾಗದ ಹಣತೆ

c)

ಪ್ರೀತಿಯ ಹಣತೆ

d)

ಅನುಮಾನದ ಹಣತೆ

20.

ಯಾವ ಎಚ್ಚರದಲ್ಲಿ ಬದುಕಬೇಕು?

a)

ಸುತ್ತಲು ಕವಿಯುವ ಕತ್ತಲಲ್ಲಿ

b)

ಕಾಡುಗಳೆಲ್ಲ ಶುದ್ಧ ವಾದವು ಎನ್ನುವ

c)

ಮತಗಳೆಲ್ಲವೂ ಕಣ್ಣುಗಳು ಎನ್ನುವ

d)

ಮತಗಳೆಲ್ಲವೂ ಪಥಗಳು ಎನ್ನುವ

21.

ಕ್ರಿಯಾಪದದ ಮೂಲ ರೂಪ__________.

a)

ಅವ್ಯಯ

b)

ವಿಧ್ಯಾರ್ಥಕ

c)

ಕರ್ತರಿ

d)

ಧಾತು

22.

'ಹಸೀನ ಹಾಡನ್ನು ಹಾಡಿದಳು' ಇದನ್ನು ಕರ್ಮಣಿ ಪ್ರಯೋಗದಲ್ಲಿ ಬರೆಯಿರಿ.

a)

ಹಸೀನ ಹಾಡುತ್ತಾ ಕಣಿದಳು

b)

ಹಸೀನಾಳಿಂದ ಹಾಡು ಹಾಡಲ್ಪಟ್ಟಿತು.

c)

ಹಸೀನಾ ಹಾಡು ಹಾಡಿತು

d)

ಹಸೀನಾ ಹಾಡನ್ನು ಹಾಡಲ್ಪಟ್ಟಿತು

23.

ಹೊಂದಿಸಿ ಬರೆಯಿರಿ.

1.ವಿಧ್ಯಾರ್ಥಕ- A ಮುಟ್ಟೋಣ

2.ನಿಷೇಧಾರ್ಥಕ- B ಹಾಡಳು

3.ಸಂಭವನಾರ್ಥಕ- C ಮಲಗು

4.ಅಕರ್ಮಕ- D. ಮಾಡಿಯಾಳು.

a)

1-A, 2-B, 3-C, 4-D

b)

1-D, 2-B, 3-C, 4-A

c)

1-A, 2-C, 3-B, 4-D

d)

1-A, 2-B, 3-D, 4-C

24.

ಚತುರ್ಥಿ ವಿಭಕ್ತಿ ಪ್ರತ್ಯಯದ ಕಾರಕಾರ್ಥಕ _____

a)

ಕರ್ತೃ

b)

ಕರ್ಮ

c)

ಕರಣ

d)

ಸಂಪ್ರದಾನ

25.

'ಸಂತತಿಯೋಳ್' ಇಲ್ಲಿರುವ ವಿಭಕ್ತಿ ಪ್ರತ್ಯಯ____________.

a)

ಪ್ರಥಮ

b)

ತೃತೀಯ

c)

ಪಂಚಮಿ

d)

ಸಪ್ತಮಿ