wayground logo

Free Printable Worksheets

Font size

S
M
L
XL
Worksheets

ವ್ಯಾಕರಣ ರಸಪ್ರಶ್ನೆ -01

Total questions: 20

Worksheet time: 7mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವರ್ಣಗಳ ಸಂಖ್ಯೆ______________.

a)

34

b)

25

c)

49

d)

09

2.

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ____________.

a)

10

b)

09

c)

34

d)

13

3.

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ________.

a)

2

b)

5

c)

6

d)

15

4.

ಅಕ್ಷರಗಳನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ___________ ಗಳ ಲೆಕ್ಕಾಚಾರದಲ್ಲಿ ಅಳೆಯುವರು.

a)

ಕಾಲ

b)

ಮಾತ್ರೆ

c)

ಗುಳಿಗೆ

d)

ಗಳಿಗೆ

5.

ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳಿಗೆ ___________ ಎನ್ನುವರು.

a)

ಯೋಗವಾಹಗಳು

b)

ಸ್ವರಗಳು

c)

ವ್ಯಂಜನಗಳು

d)

ಗುಣಿತಾಕ್ಷರಗಳು

6.

ಈ ಕೆಳಗಿನವುಗಳಲ್ಲಿ ಸ್ವರಾಕ್ಷರಗಳ ಪಟ್ಟಿ__________.

a)

ಅಆಇಈಉಊಋ

b)

ಕಚಟತಪ

c)

ಖಛಠಥಫ

d)

ಯರಲವಶಷಸಹಳ

7.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ ________________.

a)

10

b)

20

c)

34

d)

25

8.

ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳಿಗೆ _______________ ಎನ್ನುವರು.

a)

ಅಲ್ಪಪ್ರಾಣಾಕ್ಷರಗಳು

b)

ಮಹಾಪ್ರಾಣಾಕ್ಷರಗಳು

c)

ಅನುನಾಸಿಕಾಕ್ಷರಗಳು

d)

ಯೋಗವಾಹಗಳು

9.

ಈ ಕೆಳಗಿನವುಗಳಲ್ಲಿ ಅವರ್ಗೀಯ ವ್ಯಂಜನಾಕ್ಷರಗಳಿಂದ ಕೂಡಿದ ಗುಂಪು ____________.

a)

ಕಚಟತಪ

b)

ಗಜಡದಬ

c)

ಯರಲವಶಷಸಹಳ

d)

ಅಆಇಈಉಊ

10.

ವ್ಯಂಜನಕ್ಕೆ ಸ್ವರ ಸೇರಿ ಆಗುವ ಅಕ್ಷರಗಳಿಗೆ ______________ ಎನ್ನುವರು.

a)

ಸ್ವರಗಳು

b)

ಗುಣಿತಾಕ್ಷರಗಳು

c)

ಯೋಗವಾಹಗಳು

d)

ಅನುನಾಸಿಕಗಳು

11.

ಈ ಕೆಳಗಿನವುಗಳಲ್ಲಿ ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳು_______________.

a)

ಙಞಣನಮ

b)

ಕಚಟತಪ

c)

ಯರಲವ

d)

ಅಆಇಈ

12.

ಈ ಕೆಳಗಿನವುಗಳಲ್ಲಿ ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳು ________________.

a)

ಆಈಋಊ

b)

ಖಛಠಫ

c)

ಯರಲವ

d)

ಕಚಟತಪ

13.

ವರ್ಗದ ಕೊನೆಯ ಅಕ್ಷರಗಳೆಂದು __________ಗಳನ್ನು ಕರೆಯುವರು.

a)

ಙಞಣನಮ

b)

ಕಚಟತಪ

c)

ಗಜಡದಬ

d)

ಘಝಢಧಭ

14.

ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರಗಳು_____________.

a)

ಉಊ

b)

ಎಏ

c)

ಐಔ

d)

ಅಂಅಃ

15.

ಈ ಕೆಳಗಿನವುಗಳಲ್ಲಿ ಸವರ್ಣ ಸ್ವರಗಳು___________.

a)

ಕಖಗಘ

b)

ಚಛಜಝ

c)

ಟಠಡಢ

d)

ಅಆಇಈಉಊ

16.

ಒಂದು ಮಾತ್ರಾ ಕಾಲಾವಧಿಯಲ್ಲಿ ಉಚ್ಚರಿಸಲಾಗುವ ಸ್ವರಗಳಿಗೆ ____________ ಎನ್ನುವರು.

a)

ಹ್ರಸ್ವಸ್ವರಗಳು

b)

ದೀರ್ಘಸ್ವರಗಳು

c)

ಪ್ಲುತಸ್ವರಗಳು

d)

ಅಲ್ಪಪ್ರಾಣಗಳು

17.

ಓ ರಾಮಾsss ಎಂದು ಸೀತೆ ಕೂಗಿದಳು. ಇಲ್ಲಿ ರಾಮಾsss ಎಂಬಲ್ಲಿ ಇರುವ ಸ್ವರದ ಪ್ರಕಾರ ಇದು__________.

a)

ಹ್ರಸ್ವಸ್ವರ

b)

ಪ್ಲುತಸ್ವರ

c)

ದೀರ್ಘಸ್ವರ

d)

ಅಪಸ್ವರ

18.

ಈ ಕೆಳಗಿನವುಗಳಲ್ಲಿ ಅನುಸ್ವಾರಯುಕ್ತ ಪದ_________.

a)

ದುಃಖ

b)

ಸ್ವತಃ

c)

ಸಂಧಿ

d)

ಕನ್ನಡ

19.

ಈ ಕೆಳಗಿನವುಗಳಲ್ಲಿ ಅವರ್ಗೀಯ ವ್ಯಂಜನಾಕ್ಷರವಿರುವ ಪದ___________.

a)

ಯಾರು

b)

ಊಟ

c)

ಪಾಠ

d)

ಓಟ

20.

ಈ ಕೆಳಗಿನವುಗಳಲ್ಲಿ ಅಕ್ಷರಗಳ ಸರಿಯಾದ ಕ್ರಮವಿದು___________.

a)

ಸಶಷ

b)

ಸಷಶ

c)

ಷಶಸ

d)

ಶಷಸ