wayground logo

Free Printable Worksheets

NEW

Font size

S
M
L
XL
Worksheets

ಮಾದರಿ ಪ್ರಶ್ನೆ ಪತ್ರಿಕೆ - 1

Total questions: 20

Worksheet time: 11mins

Name
Class
Date
1.

ಒಂದು ದ್ರಾವಣದ pH ಮೌಲ್ಯ ಕಡಿಮೆಯಾದಂತೆ

a)

OH- ಅಯಾನುಗಳ ಸಂಖ್ಯೆ ಹೆಚ್ಚಾಗುತ್ತದೆ

b)

OH- ಮತ್ತು H+ ಅಯಾನುಗಳ ಸಂಖ್ಯೆ ಸಮನಾಗಿರುತ್ತದೆ

c)

H+ ಅಯಾನುಗಳ ಸಂಖ್ಯೆ ಕಡಿಮೆಯಾಗುತ್ತದೆ

d)

H+ ಅಯಾನುಗಳ ಸಂಖ್ಯೆ ಹೆಚ್ಚಾಗುತ್ತದೆ

2.

ಲೋಹದ ಕಾರ್ಬೋನೇಟ್ ಅದುರುಗಳನ್ನು ಅವುಗಳ ಆಕ್ಸೈಡ್ ಗಳಾಗಿ ಪರಿವರ್ತಿಸುವ ಕ್ರಿಯೆ

a)

ವಿದ್ಯುದ್ವಿಭಜನೆ

b)

ಅಪಕರ್ಷಣೆ

c)

ಕಾಸುವಿಕೆ

d)

ಹುರಿಯುವಿಕೆ

3.

ಸಸ್ಯಗಳಲ್ಲಿ ಬೇರಿನಿಂದ ಎಲೆಗಳಿಗೆ ನೀರು ಮತ್ತು ಅದರಲ್ಲಿ ಕರಗಿರುವ ಲವಣಗಳ ಹೀರುವಿಕೆ ಮತ್ತು ಮೇಲ್ಮುಖ ಚಲನೆಗೆ ಸಹಾಯ ಮಾಡುವ ಪ್ರಕ್ರಿಯೆ

a)

ವಸ್ತುಸ್ಥಾನಾಂತರಣ

b)

ಬಾಷ್ಪವಿಸರ್ಜನೆ

c)

ದ್ಯುತಿಸಂಶ್ಲೇಷಣೆ

d)

ಉಸಿರಾಟ

4.

ಮಾನವನ ದೇಹದಲ್ಲಿ ಆಕ್ಸಿಜನ್ ಸಹಿತ ರಕ್ತವು ಶ್ವಾಸಕೋಶಗಳಿಂದ ಹೃದಯಕ್ಕೆ ಬರುವ ಸರಿಯಾದ ಮಾರ್ಗ

a)

ಪುಪ್ಪುಸಕ ಅಪಧಮನಿಗಳು --> ಬಲಹೃತ್ಕುಕ್ಷಿ --> ಬಲಹೃತ್ಕರ್ಣ

b)

ಪುಪ್ಪುಸಕ ಅಭಿಧಮನಿಗಳು --> ಎಡಹೃತ್ಕುಕ್ಷಿ --> ಎಡಹೃತ್ಕರ್ಣ

c)

ಪುಪ್ಪುಸಕ ಅಪಧಮನಿಗಳು --> ಬಲಹೃತ್ಕರ್ಣ --> ಬಲಹೃತ್ಕುಕ್ಷಿ

d)

ಪುಪ್ಪುಸಕ ಅಭಿಧಮನಿಗಳು -->

ಎಡಹೃತ್ಕರ್ಣ --> ಎಡಹೃತ್ಕುಕ್ಷಿ

5.

ಮಾನವನ ದೇಹದಲ್ಲಿ ಕಾರ್ಬೋಹೈಡ್ರೇಟ್ ಪ್ರೊಟೀನ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನು

a)

ಥೈರಾಕ್ಸಿನ್

b)

ಇನ್ಸುಲಿನ್

c)

ಅಡ್ರಿನಲಿನ್

d)

ಡೋಪಮಿನ್

6.

ವಿದ್ಯುತ್ ಮಂಡಲದಲ್ಲಿ ರೋಧವನ್ನು ಬದಲಾಯಿಸಲು ಉಪಯೋಗಿಸುವ ಸಾಧನ

a)

ವೋಲ್ಟ್ ಮೀಟರ್

b)

ಅಮ್ಮೀಟರ್

c)

ಗ್ಯಾಲ್ವನೋಮೀಟರ್

d)

ರಿಯೋಸ್ಟಾಟ್

7.

ವಿದ್ಯುಜ್ಜನಕದ ಕಾರ್ಯ

a)

ವಿದ್ಯುತ್ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುತ್ತದೆ

b)

ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ

c)

ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ

d)

ಮಂಡಲದಲ್ಲಿ ವಿದ್ಯುತ್ ಪ್ರವಾಹದ ಇರುವಿಕೆಯನ್ನು ಕಂಡುಹಿಡಿಯುತ್ತದೆ

8.

ಫ್ಲೆಮಿಂಗನ ಎಡಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು

a)

ವಾಹಕದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು

b)

ಕಾಂತಕ್ಷೇತ್ರದ ದಿಕ್ಕು

c)

ವಾಹಕದ ಚಲನೆಯ ದಿಕ್ಕು

d)

ವಿದ್ಯುತ್ಪ್ರವಾಹದ ದಿಕ್ಕು

9.

ಹೊಂದಿಕೆಯಾಗದ ಜೋಡಿ

a)

ಪಿಟ್ಯುಟರಿ ಗ್ರಂಥಿ ----> ಅಡ್ರಿನಲಿನ್

b)

ಅಂಡಾಶಯ ----> ಈಸ್ಟ್ರೋಜನ್

c)

ಥೈರಾಯ್ಡ್ ಗ್ರಂಥಿ ----> ಥೈರಾಕ್ಸಿನ್

d)

ಮೆದೋಜೀರಕ ಗ್ರಂಥಿ ----> ಇನ್ಸುಲಿನ್

10.

ಐಚ್ಛಿಕ ಕ್ರಿಯೆಗಳ ನಿಖರತೆ ಮತ್ತು ದೇಹದ ಭಂಗಿ ಹಾಗೂ ಸಮತೋಲನವನ್ನು ಕಾಪಾಡಲು ಕಾರಣವಾದ ಮಾನವನ ಮೆದುಳಿನ ಭಾಗ

a)

ಹೈಪೋಥಲಮಸ್

b)

ಮಹಾಮಸ್ತಿಷ್ಕ

c)

ಮೆಡುಲ್ಲಾ

d)

ಅನುಮಸ್ತಿಷ್ಕ

11.

ವಿದ್ಯುತ್ ವಾಹಕದ ರೋಧವು ಅವಲಂಬಿಸದೇ ಇರುವುದು

a)

ವಾಹಕದ ಉದ್ದ

b)

ವಾಹಕದ ಅಡ್ಡಕೊಯ್ತ

c)

ಕಾಂತೀಯ ಗುಣ

d)

ವಾಹಕದ ಪ್ರಾಕೃತಿಕ ಗುಣ

12.

ವ್ಯಾಟ್ ಎಂಬುದು ಇದರ SI ಏಕಮಾನವಾಗಿದೆ

a)

ವಿದ್ಯುತ್ ಪ್ರವಾಹ

b)

ವಿದ್ಯುದಾವೇಶ

c)

ವಿದ್ಯುತ್ ವಿಭವಾಂತರ

d)

ವಿದ್ಯುತ್ ಸಾಮರ್ಥ್ಯ

13.

ಡಿಸಿ ವಿದ್ಯುತ್ ಜನಕವು ಕಾರ್ಯನಿರ್ವಹಿಸುವ ತತ್ವ

a)

ವಿದ್ಯುತ್ ಕಾಂತೀಯ ಪ್ರೇರಣೆ

b)

ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ

c)

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ

d)

ವಿದ್ಯುತ್ ಪ್ರವಾಹದ ಉಷ್ಣೋತ್ಪಾದನಾ ಪರಿಣಾಮ

14.

ವಾತಾವರಣದ ಉನ್ನತ ಸ್ತರದಲ್ಲಿ ಆಮ್ಲಜನಕವು ಓಝೋನ್ ಆಗಿ ರೂಪುಗೊಳ್ಳುವುದು ಇವುಗಳ ಪ್ರಭಾವದಿಂದ

a)

ರೇಡಿಯೋ ತರಂಗಗಳು

b)

ಅವಕೆಂಪು ವಿಕಿರಣಗಳು

c)

ನೆರಳಾತೀತ ವಿಕಿರಣಗಳು

d)

ಕ್ಷ-ಕಿರಣಗಳು

15.

ಕೆಳಗಿನವುಗಳಲ್ಲಿ ತಟಸ್ಥೀಕರಣ ಕ್ರಿಯೆಯನ್ನು ಪ್ರತಿನಿಧಿಸುವ ರಾಸಾಯನಿಕ ಸಮೀಕರಣ

a)
b)
c)
d)
16.

'X' ಧಾತುವಿನ ಪರಮಾಣು ಸಂಖ್ಯೆ 11 ಮತ್ತು 'Y' ಧಾತುವಿನ ಪರಮಾಣು ಸಂಖ್ಯೆ 17. ಹಾಗಾದರೆ ಈ ಧಾತುಗಳ ನಡುವೆ ಉಂಟಾಗುವ ಬಂಧದ ವಿಧ

a)

ಲೋಹೀಯ ಬಂಧ

b)

ಸಹವೆಲೆನ್ಸೀಯ ಬಂಧ

c)

ಅಯಾನಿಕ ಬಂಧ

d)

ಹೈಡ್ರೋಜನ್ ಬಂಧ

17.

Zn + FeSO4 --------> ZnSO4 + Fe

Fe + CuSO4 -------> FeSO4 + Cu

ಈ ಮೇಲಿನ ರಾಸಾಯನಿಕ ಕ್ರಿಯೆಗಳಲ್ಲಿರುವ ಲೋಹಗಳ ಕ್ರಿಯಾಶೀಲತೆಯ ಇಳಿಕೆ ಕ್ರಮ

a)

Cu > Fe > Zn

b)

Zn > Fe > Cu

c)

Fe > Cu > Zn

d)

Zn > Cu > Fe

18.

a)

N

b)

K

c)

M

d)

L

19.

ಒಂದು ವಿದ್ಯುತ್ ಹೀಟರ್ ವಿದ್ಯುತ್ ಮೂಲದಿಂದ 4A ವಿದ್ಯುತ್ ಸೆಳೆಯುವಾಗ ಅದರ ತುದಿಗಳ ನಡುವಿನ ವಿಭವಾಂತರವು 60V ಆದರೆ, ಸದರಿ ವಿದ್ಯುತ್ ಹೀಟರ್ ನ ಸುರುಳಿಯ ರೋಧ

a)

24 ಓಮ್

b)

240 ಓಮ್

c)

64 ಓಮ್

d)

15 ಓಮ್

20.

ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧಗಳನ್ನು ಅಜೀರ್ಣದ ಚಿಕಿತ್ಸೆಗೆ ಬಳಸಲಾಗುತ್ತದೆ

a)

ಆಮ್ಲಶಾಮಕ

b)

ನೋವುನಿವಾರಕ

c)

ಜೀವನಿರೋಧಕ

d)

ನಂಜುನಿವಾರಕ