WorksheetsSSLC ಪ್ರಥಮ ಭಾಷೆ ಕನ್ನಡ ವಿಷಯದ ಪೂರ್ವಸಿದ್ಧತಾ ಪರೀಕ್ಷೆ-1, 2020-21
Total questions: 16
Worksheet time: 11mins
ಆಮದು, ದಲ್ಲಾಳಿ, ದಿವಾನ’ ಪದಗಳು ಈ ಭಾಷೆಯಿಂದ ಕನ್ನಡಕ್ಕೆ ಬಂದಿವೆ; *
ಎ) ಫಾರ್ಸಿ/ಪರ್ಷಿಯನ್
ಬಿ) ಗ್ರೀಕ್ ಮತ್ತು ರೋಮನ್
ಸಿ) ಇಂಗ್ಲಿಷ್
ಡಿ) ಅರಬ್ಬೀ
’ದೇವರು ನಮ್ಮ ತಪ್ಪುಗಳನ್ನು ಕ್ಷಮಿಸಿಯಾನು’ ಈ ವಾಕ್ಯದ ಕ್ರಿಯಾರೂಪ; *
ಎ) ನಿಷೇಧಾರ್ಥಕ
ಬಿ) ಸಂಭಾವನಾರ್ಥಕ
ಸಿ) ವಿಧ್ಯರ್ಥಕ
ಡಿ) ಆತ್ಮಾರ್ಥಕ
’ಕಾಪು’ ಪದದ ಅರ್ಥ; *
ಎ) ಕಾಡು
ಬಿ) ಮಗು
ಸಿ) ರಕ್ಷಣೆ
ಡಿ) ಓಲೆ
’ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ’ ಅದು: *
ಎ) ಸಂಯೋಜಿತ ವಾಕ್ಯ
ಬಿ) ಮಿಶ್ರ ವಾಕ್ಯ
ಸಿ) ಸಾಮಾನ್ಯ ವಾಕ್ಯ
ಡಿ) ವಾಕ್ಯ ಪ್ರಭೇದ
’ಕೃದಂತ ಭಾವನಾಮ’ಕ್ಕೆ ಉದಾಹರಣೆ ಇದು; *
ಎ) ಮಾಡಲು
ಬಿ) ಮಾಡಲಿಕ್ಕೆ
ಸಿ) ಮಾಟ
ಡಿ) ಮಾಡಿದ
ಆಗಮಸಂಧಿಗೆ ಉದಾಹರಣೆಯಿದು : *
ಎ) ಮನೆಯೊಳಗೆ
ಬಿ) ಹೊಸಗಾಲ
ಸಿ) ತೆರೆದಿಕ್ಕುವ
ಡಿ) ದಿಗಂತ
ಮೈಸೂರು : ಅಂಕಿತನಾಮ : : ಭೂಮಿ : _______ *
ಎ) ಅನ್ವರ್ಥನಾಮ
ಬಿ) ರೂಢನಾಮ
ಸಿ) ಸರ್ವನಾಮ
ಡಿ) ಭಾವನಾಮ
ಆಮನೆ : ಗಮಕ ಸಮಾಸ: : ನಲ್ಗುದುರೆ : _______ *
ಎ) ಅಂಶಿಸಮಾಸ
ಬಿ) ಕರ್ಮಧಾರಯಸಮಾಸ
ಸಿ) ಬಹುವ್ರೀಹಿ ಸಮಾಸ
ಡಿ) ತತ್ಪುರುಷ ಸಮಾಸ
ಕಸಕಡ್ಡಿ : ಜೋಡುನುಡಿ : : ತುತ್ತತುದಿ : _______ *
ಎ) ಅನುಕರಣಾವ್ಯಯ
ಬಿ) ಮಾತಿಗೊಂದು ಗೀತು
ಸಿ) ದ್ವಿರುಕ್ತಿ
ಡಿ) ಪ್ರತಿಧ್ವನಿ ಶಬ್ದ
ಬಿನ್ನಹ : ವಿಜ್ಞಾಪನೆ : : ಬೀಯ : _______ *
ಎ) ಬ್ಯಯ
ಬಿ) ವೇಯ
ಸಿ) ಭಯ
ಡಿ) ವ್ಯಯ
ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ? *
ಎ) ಕವಿಯುನೋಡಿದ ಅಡಕೆಯತೋಟ ಬನದಅಂಚಿನಲ್ಲಿದೆ.
ಬಿ) ಕವಿಯು ನೋಡಿದ ಅಡಕೆಯ ತೋಟ ಹೊಳೆಯ ಅಂಚಿನಲ್ಲಿದೆ.
ಸಿ) ಕವಿಯು ನೋಡಿದ ಅಡಕೆಯ ತೋಟ ಊರಿನ ಅಂಚಿನಲ್ಲಿದೆ.
ಡಿ) ಕವಿಯು ನೋಡಿದ ಅಡಕೆಯ ತೋಟ ಹೊಲದ ಅಂಚಿನಲ್ಲಿದೆ
ಮನೆಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ ? *
ಎ) ಮನೆಮಂಚಮ್ಮ ಇಂದು ಚಾವಣಿ ಇರುವ ಗುಡಿಯಲ್ಲಿ ಪೂಜಿತಳಾಗುತ್ತಿದ್ದಾಳೆ.
ಬಿ) ಮನೆಮಂಚಮ್ಮ ಇಂದು ಬಾಗಿಲು ಇಲ್ಲದ ಗುಡಿಯಲ್ಲಿ ಪೂಜಿತಳಾಗುತ್ತಿದ್ದಾಳೆ.
ಸಿ) ಮನೆಮಂಚಮ್ಮಇಂದು ಚಾವಣಿಇಲ್ಲದ ಗುಡಿಯಲ್ಲಿ
ಪೂಜಿತಳಾಗುತ್ತಿದ್ದಾಳೆ.
ಡಿ) ಮನೆಮಂಚಮ್ಮ ಇಂದು ಗೋಪುರ ಇಲ್ಲದ ಗುಡಿಯಲ್ಲಿ ಪೂಜಿತಳಾಗುತ್ತಿದ್ದಾಳೆ.
ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು? *
ಎ) ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯ ನಡುವಿನ ಸ್ನೇಹವನ್ನು ಪರಿಹರಿಸುವುದಕ್ಕಾಗಿ ಸಲಹೆಯನ್ನುಕೇಳಲು ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದರು.
ಬಿ) ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯ ನಡುವಿನ ವ್ಯಾಜ್ಯವನ್ನು ಪರಿಹರಿಸುವುದಕ್ಕಾಗಿ ಸಾಕ್ಷಿಯನ್ನು ಕೇಳಲು ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದರು.
ಸಿ) ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯ ನಡುವಿನ ವ್ಯಾಜ್ಯವನ್ನು ಪರಿಹರಿಸುವುದಕ್ಕಾಗಿ ಪೂಜೆಮಾಡಲು ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದರು.
ಡಿ) ದುಷ್ಟಬುದ್ಧಿ ಮತ್ತು ಧರ್ಮಬುದ್ಧಿಯ ಹಣವನ್ನು ಸಮವಾಗಿ ಹಂಚಲು ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದರು.
ಹಕ್ಕಿಯು ಯಾವುದರ ಸಂಕೇತವಾಗಿದೆ? *
ಎ) ಹಕ್ಕಿಯು ಜ್ಞಾನದ ಸಂಕೇತವಾಗಿದೆ.
ಬಿ) ಹಕ್ಕಿಯು ಬೆಳಕಿನ ಸಂಕೇತವಾಗಿದೆ.
ಸಿ) ಹಕ್ಕಿಯು ಅಭಿವೃದ್ಧಿಯ ಸಂಕೇತವಾಗಿದೆ.
ಡಿ) ಹಕ್ಕಿಯುಕಾಲದ ಸಂಕೇತವಾಗಿದೆ
ಪುಟ್ಟಿಯ ಅಮ್ಮ ಎಲ್ಲಿ ಮಲಗಿದ್ದಾಳೆ? *
ಎ) ಪುಟ್ಟಿಯ ಅಮ್ಮ ಒಡೆಯರ ಮಹಲಿನಲ್ಲಿ ಮಲಗಿದ್ದಾಳೆ.
ಬಿ) ಪುಟ್ಟಿಯ ಅಮ್ಮ ತೂತು ಬಿದ್ದ ಹೆಂಚಿನ ಮನೆಯಲ್ಲಿ ಮಲಗಿದ್ದಾಳೆ.
ಸಿ) ಪುಟ್ಟಿಯಅಮ್ಮ ಗುಡಿಸಲಿನಲ್ಲಿ ಮಲಗಿದ್ದಾಳೆ.
ಡಿ) ಪುಟ್ಟಿಯ ಅಮ್ಮ ಗುಡಿಸಲಿನ ಮುಂಭಾಗ ಮಲಗಿದ್ದಾಳೆ
ಶಾನುಭೋಗರ ’ಬ್ರಹ್ಮಾಸ್ತ್ರ’ ಯಾವುದು? *
ಎ) ಶಾನುಭೋಗರ ’ಬ್ರಹ್ಮಾಸ್ತ್ರ’ ಖಿರ್ದಿಪುಸ್ತಕವಾಗಿತ್ತು
ಬಿ) ಶಾನುಭೋಗರ ’ಬ್ರಹ್ಮಾಸ್ತ್ರ’ ಹುಲಿಯ ಧರ್ಮಶ್ರದ್ಧೆಯಾಗಿತ್ತು
.
ಸಿ) ಶಾನುಭೋಗರ ’ಬ್ರಹ್ಮಾಸ್ತ್ರ’ ಶಾನುಭೋಗರ ಧರ್ಮಶ್ರದ್ಧೆಯಾಗಿತ್ತು
ಡಿ) ಶಾನುಭೋಗರ ’ಬ್ರಹ್ಮಾಸ್ತ್ರ’ ಭಗವದ್ಗೀತೆ ಪುಸ್ತಕವಾಗಿತ್ತು
