NEW
Font size
Worksheetsವ್ಯಾಕರಣ ರಸಪ್ರಶ್ನೆ ಸಂಸ್ಕೃತ ಸಂಧಿಗಳು
Total questions: 20
Worksheet time: 11mins
ಈ ಕೆಳಗಿನ ಪಟ್ಟಿಯಲ್ಲಿ ಸಂಸ್ಕೃತ ಸಂಧಿಯಲ್ಲದ್ದು ____________.
ಗುಣ ಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಆಗಮ ಸಂಧಿ
ಈ ಕೆಳಗಿನವುಗಳಲ್ಲಿ __________ ಸಂಸ್ಕೃತ ಸ್ವರ ಸಂಧಿಯಲ್ಲ.
ಜಶ್ತ್ವ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಆಯ್ಕೆ_________
ಅನುನಾಸಿಕ ಸಂಧಿ
ಸುವರ್ಣ ದೀರ್ಘ ಸಂಧಿ
ಜಶ್ತ್ವ ಸಂಧಿ
ಶ್ಚುತ್ವ ಸಂಧಿ
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಆಯ್ಕೆ__________.
ಗ್ರಂಥಾಲಯ
ಗಿರೀಶ
ಮಹೇಶ
ಗುರೂಪದೇಶ
ಇವುಗಳಲ್ಲಿ ಸವರ್ಣದೀರ್ಘ ಸಂಧಿಗೆ ಉದಾಹರಣೆ ______________.
ಜನೈಕ್ಯ
ಏಕೈಕ
ಚಳಿಗಾಲ
ವಾಚನಾಲಯ
ಗಣೇಶ ಪದವು __________ ಸಂಧಿಗೆ ಉದಾಹರಣೆಯಾಗಿದೆ.
ಗುಣಸಂಧಿ
ಸವರ್ಣದೀರ್ಘ ಸಂಧಿ
ಯಣ್ ಸಂಧಿ
ಜಶ್ತ್ವ ಸಂಧಿ
ಈ ಕೆಳಗಿನವುಗಳಲ್ಲಿ ಗುಣಸಂಧಿಗೆ ಉದಾಹರಣೆಯಾದ ಪದ ____________.
ಅಜಂತ
ಸನ್ಮಾನ
ಮಹರ್ಷಿ
ಪಿತ್ರಾರ್ಜಿತ
ಸನ್ಮಾನ ಪದವನ್ನು ಬಿಡಿಸಿ ಬರೆದಾಗ ________.
ಸನ್ + ಮಾನ
ಸತ್ + ಮಾನ
ಸತ್ತ + ಮಾನ
ಸನ್ನ + ಮಾನ
ಸತ್ + ಜನ = ______________
ಸತ್ತಜನ
ಸತ್ತಾನ
ಸಾಯ್ತಾನ
ಸಜ್ಜನ
ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ
ವಿದ್ಯಾಲಯ
ವಿದ್ಯಾರ್ಥಿ
ರಮೇಶ
ಗಜಾನನ
ಜಶ್ತ್ವ ಸಂಧಿಯ ನಿಯಮವಿದು _________
ಸವರ್ಣ ಸ್ವರಗಳು ಪರಸ್ಪರ ಪರವಾದಾಗ ಒಂದೇ ದೀರ್ಘ ಸ್ವರ ಆದೇಶವಾಗುವುದು
ಪೂರ್ವ ಪದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಕ್ರಮವಾಗಿ ಗಜಡದಬ ವ್ಯಂಜನಗಳು ಆದೇಶವಾಗುವವು
ಉತ್ತರ ಪದದ ಆದಿಯಲ್ಲಿರುವ ಕಚಟತಪ ವ್ಯಂಜನಗಳಿಗೆ ಕ್ರಮವಾಗಿ ಗಜಡದಬ ವ್ಯಂಜನಗಳು ಆದೇಶವಾಗುವವು
ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಏ ಕಾರ ಆದೇಶವಾಗುವುದು
ವರ್ಗ ಪ್ರಥಮ ವ್ಯಂಜನಗಳಿಗೆ ಯಾವುದೇ ಅನುನಾಸಿಕ ಅಕ್ಷರ ಪರವಾದರೂ ಸಂಧಿಯಾಗುವಾಗ ಅದೇ ವರ್ಗದ ಕೊನೆಯ ವ್ಯಂಜನ ಆದೇಶವಾಗುವುದು _____________ ಸಂಧಿಯಲ್ಲಿ.
ಜಶ್ತ್ವ
ಆದೇಶ
ಗುಣ
ಅನುನಾಸಿಕ
ಈ ಕೆಳಗಿನವುಗಳಲ್ಲಿ ಯಾವುದು ಗುಣ ಸಂಧಿಯ ನಿಯಮವಲ್ಲ?
ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಏ ಕಾರ ಆದೇಶವಾಗುವುದು
ಅ ಆ ಕಾರಗಳಿಗೆ ಎ ಏ ಕಾರಗಳು ಪರವಾದರೆ ಔ ಕಾರ ಆದೇಶವಾಗುವುದು
ಅ ಆ ಕಾರಗಳಿಗೆ ಉ ಊ ಕಾರಗಳು ಪರವಾದರೆ ಓ ಕಾರ ಆದೇಶವಾಗುವುದು
ಅ ಆ ಕಾರಗಳಿಗೆ ಋ ಕಾರ ಪರವಾದರೆ ಅರ್ ಕಾರ ಆದೇಶವಾಗುವುದು
ಇವುಗಳಲ್ಲಿ ಗುಂಪಿಗೆ ಸೇರದ ಆಯ್ಕೆ ______________.
ಹಳೆಗನ್ನಡ
ಅಜಂತ
ಷಡಾನನ
ಗಜಾನನ
ಇವುಗಳಲ್ಲಿ ಶ್ಚುತ್ವ ಸಂಧಿಯ ಉದಾಹರಣೆ ____________.
ಜಗಜ್ಜ್ಯೋತಿ
ಚಿನ್ಮಯ
ಸನ್ಮಾನ
ಸಜ್ಜನ
ಸಂಸ್ಕೃತ ಸ್ವರ ಸಂಧಿಗಳ ಸಂಖ್ಯೆ ___________.
4
5
3
7
ಯಣ್ ಸಂಧಿಗೆ ಉದಾಹರಣೆ ___________.
ಅತ್ಯಂತ
ಮನ್ವಂತರ
ಪಿತ್ರಾರ್ಜಿತ
ಮೇಲಿನ ಎಲ್ಲವೂ
ಅತ್ಯಂತ ಪದವನ್ನು ಬಿಡಿಸಿ ಬರೆಯುವ ಕ್ರಮ ___________.
ಅತ್ + ಅಂತ
ಅಚ್ + ಅಂತ
ಅತಿ + ಅಂತ
ಅತ್ಯ + ಅಂತ
ಅಜಂತ : ಜಶ್ತ್ವ ಸಂಧಿ :: ಚನ್ನೇಶ : _________
ಗುಣ ಸಂಧಿ
ಯಣ್ ಸಂಧಿ
ವೃದ್ಧಿ ಸಂಧಿ
ಜಶ್ತ್ವ ಸಂಧಿ
ಹರೀಶ : ಸವರ್ಣ ದೀರ್ಘ ಸಂಧಿ :: ವಾಗ್ದೇವಿ : __________
ಗುಣ ಸಂಧಿ
ಯಣ್ ಸಂಧಿ
ಜಶ್ತ್ವ ಸಂಧಿ
ಶ್ಚುತ್ವ ಸಂಧಿ
