wayground logo

Free Printable Worksheets

NEW

Font size

S
M
L
XL
Worksheets

KSEEB SSLC MCQ SET=2 KALEEL

Total questions: 40

Worksheet time: 20mins

Name
Class
Date
1.

ವಿದ್ಯುತ್ ಮಂಡಲ ಮತ್ತು ವಿದ್ಯುತ್ ಉಪಕರಣಗಳನ್ನು ರಕ್ಷಿಸಲು ಬಳಸುವ ಸುರಕ್ಷಾ ಸಾಧನ

a)

ಅಮ್ಮಿಟರ್

b)

ಫ್ಯೂಸ್

c)

ದಿಕ್ಪರಿವರ್ತಕ

d)

ಗ್ಯಾಲ್ವನೋಮೀಟರ್

2.

ಒಂದು ವಸ್ತುವನ್ನು ಪೀನ ಮಸೂರದ F1 ಮತ್ತು 2F1 ಮಧ್ಯೆ ಇರಿಸಿದಾಗ ಉಂಟಾಗುವ ಪ್ರತಿಬಿಂಬದ ಸ್ಥಾನ (F ಪೀನ ಮಸೂರದ ಪ್ರಧಾನ ಸಂಗಮ)

a)

F2 ಮತ್ತು 2F2 ಗಳ ಮಧ್ಯೆ

b)

2F2 ವಿನಲ್ಲಿ

c)

2F2 ಆಚೆಗೆ

d)

ಅನಂತ ದೂರದಲ್ಲಿ

3.

ವಿದ್ಯುತ್ ಉತ್ಪಾದಿಸಲು ಟರ್ಬೈನ್ ನ್ನು ಉಪಯೋಗಿಸದೇ ಇರುವ ವಿದ್ಯುತ್ ಸ್ಥಾವರ

a)

ಸೌರ ವಿದ್ಯುತ್ ಸ್ಥಾವರ

b)

ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ

c)

ಜಲ ವಿದ್ಯುತ್ ಸ್ಥಾವರ

d)

ಉಷ್ಣ ವಿದ್ಯುತ್ ಸ್ಥಾವರ

4.

20 ಓಮ್ ರೋಧವಿರುವ ವಿದ್ಯುತ್ ದೀಪ ಮತ್ತು 4 ಓಮ್ ರೋಧವಿರುವ ವಾಹಕ ವನ್ನು ಚಿತ್ರದಲ್ಲಿ ತೋರಿಸಿರುವಂತೆ 6V ವಿಭವಾಂತರವಿರುವ ಶುಷ್ಕಕೋಶಕ್ಕೆ ಜೋಡಿಸಲಾಗಿದೆ. ಹಾಗಾದರೆ ಮಂಡಲದಲ್ಲಿ ಪ್ರವಹಿಸುವ ಒಟ್ಟು ವಿದ್ಯುತ್ ಪ್ರವಾಹ

a)

36A

b)

0.6A

c)

4A

d)

0.25A

5.

ಫ್ಲೆಮಿಂಗನ ಬಲಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು

a)

ವಾಹಕದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು

b)

ವಾಹಕದ ಚಲನೆಯ ದಿಕ್ಕು

c)

ಕಾಂತ ಕ್ಷೇತ್ರದ ದಿಕ್ಕು

d)

ವಿದ್ಯುತ್ ಪ್ರವಾಹದ ದಿಕ್ಕು

6.

ಕೆಳಗಿನ ಕೋಷ್ಟಕವನ್ನು ಗಮನಿಸಿ. ಯಾವ ದ್ರವ್ಯ ಮಾಧ್ಯಮದಲ್ಲಿ ಬೆಳಕಿನ ವೇಗ ಅತ್ಯಂತ ಹೆಚ್ಚು

a)

Q

b)

S

c)

R

d)

P

7.

ತಾಮ್ರದ ಆಯಾತಾಕಾರದ ಸುರುಳಿಯನ್ನು ಕಾಂತ ಕ್ಷೇತ್ರದಲ್ಲಿ ತಿರುಗಿಸಿದಾಗ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು ಪ್ರತಿ ಬಾರಿ ಬದಲಾಗುವುದು

a)

ಎರಡು ಸುತ್ತಿಗಳಿಗೊಮ್ಮೆ

b)

ಒಂದು ಸುತ್ತಿಗೊಮ್ಮೆ

c)

ಅರ್ಧ ಸುತ್ತಿಗೊಮ್ಮೆ

d)

ನಾಲ್ಕನೇ ಒಂದು ಸುತ್ತಿಗೊಮ್ಮೆ

8.

ಜೈವಿಕ ಅನಿಲದ ಪ್ರಮುಖ ಘಟಕ..

a)

ಈಥೇನ್

b)

ಮೀಥೇನ್

c)

ಬ್ಯೂಟೇನ್

d)

ಪ್ರೋಪೇನ್

9.

ನಿಮ್ನ ಮಸೂರದ ಒಂದು ಗುಣ, ಇದು

a)

ಬೆಳಕಿನ ಕಿರಣಗಳನ್ನು ವಿಕೇಂದ್ರೀಕರಿಸುತ್ತದೆ

b)

ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ

c)

ಅಂಚುಗಳಲ್ಲಿ ತೆಳುವಾಗಿದ್ದು ಮಧ್ಯದಲ್ಲಿ ದಪ್ಪವಾಗಿರುತ್ತದೆ

d)

ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸುತ್ತದೆ

10.

220 V ವಿದ್ಯುತ್ ಜನರೇಟರ್ ಗೆ ಒಂದು ವಿದ್ಯುತ್ ಬಲ್ಬ್ ನ್ನು ಸಂಪರ್ಕಿಸಲಾಗಿದೆ. ಆ ಬಲ್ಬ್ ನ ಮೂಲಕ 0.50A ವಿದ್ಯುತ್ ಪ್ರವಹಿಸುವುದಾದರೆ ಬಲ್ಬ್ ನ ಸಾಮರ್ಥ್ಯ..

a)

44W

b)

1100W

c)

110W

d)

220W

11.

ವಿದ್ಯುತ್ ಮಂಡಲದಲ್ಲಿ ಅಮ್ಮಿಟರ್ ನ ಕಾರ್ಯ, ಇದು..

a)

ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖ ಗೊಳಿಸುತ್ತದೆ

b)

ವಿದ್ಯುತ್ ಪ್ರವಾಹದ ದರವನ್ನು ಅಳೆಯುತ್ತದೆ

c)

ವಿದ್ಯುತ್ ಉಪಕರಣಗಳನ್ನು ರಕ್ಷಿಸುತ್ತದೆ

d)

ವಿಭವಾಂತರವನ್ನು ಅಳೆಯುತ್ತದೆ

12.

ಒಂದು ವಸ್ತುವಿನ ವಿದ್ಯುತ್ ರೋಧಶೀಲತೆಯು ಹೆಚ್ಚಾದಂತೆ

a)

ರೋಧವು ಕಡಿಮೆಯಾಗುತ್ತದೆ

b)

ವಾಹಕತೆ ಹೆಚ್ಚಾಗುತ್ತದೆ

c)

ದ್ರವನ ಬಿಂದು ಕಡಿಮೆಯಾಗುತ್ತದೆ

d)

ರೋಧವು ಹೆಚ್ಚಾಗುತ್ತದೆ

13.

ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹಾದು ಹೋಗುವಾಗ ಬಾಗುತ್ತದೆ.ಈ ವಿದ್ಯಮಾನ

a)

ಬೆಳಕಿನ ವಕ್ರೀಭವನ

b)

ಬೆಳಕಿನ ಪ್ರತಿಫಲನ

c)

ಬೆಳಕಿನ ಆಂತರಿಕ ಪ್ರತಿಫಲನ

d)

ಬೆಳಕಿನ ಪಾರ್ಶ್ವ ಪರಿವರ್ತನೆ

14.

ಇವುಗಳಲ್ಲಿ ಯಾವುದು ಕಾಂತೀಯ ಬಲ ರೇಖೆಗಳ ಗುಣ ಲಕ್ಷಣವಲ್ಲ?

a)

ಕಾಂತೀಯ ಬಲ ರೇಖೆಗಳು ಧ್ರುವಗಳ ಬಳಿ ದಟ್ಟವಾಗಿರುತ್ತವೆ

b)

ಕಾಂತೀಯ ಬಲ ರೇಖೆಗಳು ಆವೃತ ಜಾಲವಾಗಿವೆ

c)

ಕಾಂತೀಯ ಬಲ ರೇಖೆಗಳು ಒಂದನ್ನೊಂದು ಛೇಧಿಸುತ್ತವೆ

d)

ಕಾಂತೀಯ ಬಲ ರೇಖೆಗಳು ಉತ್ತರ ಧ್ರುವದಲ್ಲಿ ಉತ್ಸರ್ಜಿತವಾಗಿ ದಕ್ಷಿಣ ಧ್ರುವದಲ್ಲಿ ವಿಲೀನಗೊಳ್ಳುತ್ತದೆ

15.

ತಾಮ್ರ ವನ್ನು ಗಾಳಿಯಲ್ಲಿ ದೀರ್ಘಕಾಲದವರೆಗೆ ಇರಿಸಿದಾಗ ಹಸಿರು ಬಣ್ಣದ ಪದರವನ್ನು ಪಡೆದುಕೊಳ್ಳುತ್ತದೆ ಏಕೆಂದರೆ ಅದು ಪ್ರತಿವರ್ತಿಸುವುದು

a)

ಸಲ್ಫರ್ ನೊಂದಿಗೆ

b)

ನೈಟ್ರೋಜನ್ ನೊಂದಿಗೆ

c)

ತೇವ ಪೂರಿತ ಆಕ್ಸಿಜನ್ ನೊಂದಿಗೆ

d)

ತೇವ ಪೂರಿತ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ

16.

ಬೆಂಜೀನ್ ಅಣು ರಚನೆಯಲ್ಲಿರುವ ಏಕಬಂಧಗಳು ಮತ್ತು ದ್ವಿಬಂಧಗಳ ಸಂಖ್ಯೆಗಳು ಕ್ರಮವಾಗಿ

a)

6 ಮತ್ತು 6

b)

9 ಮತ್ತು 3

c)

7 ಮತ್ತು 5

d)

3 ಮತ್ತು 9

17.

ಸೋಡಿಯಂ ಕಾರ್ಬೋನೇಟ್ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ

a)

ಹೈಡ್ರೋಜನ್

b)

ಕ್ಲೋರಿನ್

c)

ನೈಟ್ರೋಜನ್ ಡೈ ಆಕ್ಸೈಡ್

d)

ಕಾರ್ಬನ್ ಡೈ ಆಕ್ಸೈಡ್

18.

ಸೈಕ್ಲೋ ಪ್ರೊಪೇನ್ ಮತ್ತು ಪ್ರೊಪೀನ್ ಗಳೆರಡರ ಸಾಮಾನ್ಯ ಅಣುಸೂತ್ರ

a)

C3H6

b)

C3H8

c)

C3H4

d)

C2H6

19.

ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ವಸ್ತು

a)

ಸೋಡಿಯಂ ಕ್ಲೋರೈಡ್ ದ್ರಾವಣ

b)

ಲಿಂಬೆ ರಸ

c)

ಶುದ್ಧ ನೀರು

d)

ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ

20.

ಈ ಕೆಳಗಿನವುಗಳಲ್ಲಿ ಉಭಯವರ್ತಿ ಆಕ್ಸೈಡ್

a)

ಸೋಡಿಯಂ ಆಕ್ಸೈಡ್

b)

ಸತುವಿನ ಆಕ್ಸೈಡ್

c)

ಕ್ಯಾಲ್ಸಿಯಂ ಆಕ್ಸೈಡ್

d)

ಪೊಟಾಸಿಯಂ ಆಕ್ಸೈಡ್

21.

ತಾಮ್ರ ಮತ್ತು ತವರದಿಂದಾಗಿರುವ ಮಿಶ್ರ ಲೋಹ

a)

ಹಿತ್ತಾಳೆ

b)

ಬೆಸುಗೆ ಲೋಹ

c)

ಕಂಚು

d)

ಕಲೆ ರಹಿತ ಉಕ್ಕು

22.

ಕಾರ್ಬನ್ ಡೈ ಆಕ್ಸೈಡ್ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿದಾಗ ಲವಣ ಮತ್ತು ನೀರು ಉತ್ಪತ್ತಿಯಾಗುತ್ತವೆ. ಹಾಗಾದರೆ ಕಾರ್ಬನ್ ಡೈ ಆಕ್ಸೈಡ್ ನ ಗುಣ

a)

ಆಮ್ಲೀಯ

b)

ಲೋಹೀಯ

c)

ಆಮ್ಲೀಯ ಮತ್ತು ಪ್ರತ್ಯಾಮ್ಲೀಯ

d)

ಪ್ರತ್ಯಾಮ್ಲೀಯ

23.

"ಮೂರು ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ, ಅವುಗಳಲ್ಲಿ ಮಧ್ಯದ ಧಾತುವಿನ ಪರಮಾಣು ರಾಶಿಯು ಉಳಿದೆರಡು ಧಾತುಗಳ ಪರಮಾಣು ರಾಶಿಗಳ ಸರಿಸುಮಾರು ಸರಾಸರಿಗೆ ಸಮ" ಈ ನಿಯಮವನ್ನು ಪ್ರತಿಪಾದಿಸಿದವರು

a)

ಡೋಬರೈನರ್

b)

ಮೆಂಡಲೀವ್

c)

ಹೆನ್ರಿ ಮೋಸ್ಲೆ

d)

ನ್ಯೂಲೆಂಡ್ಸ್

24.

ಕಾರ್ಬನ್ ಇತರೆ ಕಾರ್ಬನ್ ಪರಮಾಣುಗಳೊಂದಿಗೆ ಬಂಧಗಳನ್ನು ಏರ್ಪಡಿಸಿಕೊಂಡು ಬೃಹತ್ ಅಣುಗಳನ್ನು ಕೊಡುತ್ತದೆ. ಕಾರ್ಬನ್ ನ ಈ ಅನನ್ಯ ಗುಣ

a)

ಸಾಬೂನೀಕರಣ

b)

ಕೆಟನೀಕರಣ

c)

ಹೈಡ್ರೋಜನೀಕರಣ

d)

ಎಸ್ಟರೀಕರಣ

25.

ಇವುಗಳಲ್ಲಿ ಅನುರೂಪ ಶ್ರೇಣಿಯಲ್ಲಿರುವ ಸಂಯುಕ್ತಗಳ ಗುಂಪು

a)

CH4, C2H6, C3H8

b)

CH4, C2H4, C2H2

c)

CH4, CH3-OH , H-CHO

d)

C2H2, C3H6, C4H10

26.

ಆಧುನಿಕ ಆವರ್ತಕ ಕೋಷ್ಟಕದಲ್ಲಿರುವ ಆವರ್ತಗಳು ಮತ್ತು ಗುಂಪುಗಳ (ಅಥವಾ ವರ್ಗಗಳ) ಸಂಖ್ಯೆಯು ಕ್ರಮವಾಗಿ

a)

7 ಮತ್ತು 18

b)

7 ಮತ್ತು 9

c)

18 ಮತ್ತು 7

d)

9 ಮತ್ತು 7

27.

ಸಸ್ಯಗಳಲ್ಲಿ ಅಬ್ಸಿಸಿಕ್ ಆಮ್ಲದ(ಹಾರ್ಮೋನ್) ಪ್ರಮುಖ ಕಾರ್ಯ

a)

ಕೋಶಗಳ ಉದ್ದವನ್ನು ಹೆಚ್ಚಿಸುವುದು

b)

ಸಸ್ಯದ ಬೆಳವಣಿಗೆಯನ್ನು ಪ್ರತಿಬಂಧಿಸುವುದು

c)

ಕೋಶ ವಿಭಜನೆಯನ್ನು ಉತ್ತೇಜಿಸುವುದು

d)

ಕಾಂಡದ ಬೆಳವಣಿಗೆಯನ್ನು ಉತ್ತೇಜಿಸುವುದು

28.

ಈ ಕೆಳಗಿನವುಗಳಲ್ಲಿ ಹೂಬಿಡುವ ಸಸ್ಯಗಳ ಮತ್ತು ಮಾನವರ ಸಂತಾನೋತ್ಪತ್ತಿ ವ್ಯವಸ್ಥೆ ಗಳೆರಡರಲ್ಲೂ ಕಂಡು ಬರುವ ಸಾಮಾನ್ಯ ಭಾಗ

a)

ವೀರ್ಯನಾಳ

b)

ಪರಾಗ ಕೋಶ

c)

ಅಂಡಾಶಯ

d)

ಶಲಾಕಾ ನಳಿಕೆ

29.

ಈ ಕೆಳಗಿನವುಗಳಲ್ಲಿ ಆನುವಂಶೀಯವಾಗುವ ಗುಣ ಯಾವುದು?

a)

ಹಸಿವಿನ ಕಾರಣದಿಂದ ಜೀವಿಯ ತೂಕ ಕಡಿಮೆಯಾಗುವುದು

b)

ಇಲಿಗಳ ಬಾಲವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವುದು

c)

ಕ್ರೀಡಾಪಟುಗಳಲ್ಲಿ ಸ್ನಾಯುಗಳ ಬೆಳವಣಿಗೆ

d)

ಮಾನವರಲ್ಲಿ ಕಿವಿಯ ಹಾಲೆಯ ವಿಧ

30.

ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳಗಳು

a)

ಅಪಧಮನಿಗಳು

b)

ಲೋಮನಾಳಗಳು

c)

ಅಭಿಧಮನಿಗಳು

d)

ಪುಪ್ಪುಸಕ ಅಪಧಮನಿಗಳು

31.

ಈ ಪ್ರಕ್ರಿಯೆಯಿಂದ ಸಸ್ಯಗಳು ಹೆಚ್ಚಿನ ನೀರನ್ನು ಹೊರ ಹಾಕುತ್ತದೆ

a)

ದ್ಯುತಿ ಸಂಶ್ಲೇಷಣೆ

b)

ಭಾಷ್ಪ ವಿಸರ್ಜನೆ

c)

ಉಸಿರಾಟ

d)

ವಸ್ತು ಸ್ಥಾನಾಂತರಣ

32.

ಮಾನವನ ವಿಸರ್ಜನಾಂಗ ವ್ಯೂಹದಲ್ಲಿ ಮೂತ್ರ ಹರಿಯುವ ಸರಿಯಾದ ಮಾರ್ಗ

a)

ಮೂತ್ರಪಿಂಡ --->ಮೂತ್ರನಾಳ --->ಮೂತ್ರ ದ್ವಾರ--->ಮೂತ್ರ ಕೋಶ

b)

ಮೂತ್ರಪಿಂಡ --->ಮೂತ್ರ ಕೋಶ --->ಮೂತ್ರ ದ್ವಾರ --->ಮೂತ್ರ ನಾಳ

c)

ಮೂತ್ರಪಿಂಡ --->ಮೂತ್ರ ನಾಳ --->ಮೂತ್ರ ಕೋಶ --->ಮೂತ್ರ ದ್ವಾರ

d)

ಮೂತ್ರ ಕೋಶ --->ಮೂತ್ರ ಪಿಂಡ--->ಮೂತ್ರ ನಾಳ --->ಮೂತ್ರ ದ್ವಾರ

33.

ಈ ಕೆಳಗಿನವುಗಳಲ್ಲಿ ಯಾವುದು ಜೀವ ವೈವಿಧ್ಯತೆಯ ಸೂಕ್ಷ್ಮ ತಾಣಗಳು?

a)

ಮರುಭೂಮಿಗಳು

b)

ನದಿಗಳು

c)

ಸಾಗರಗಳು

d)

ಅರಣ್ಯಗಳು

34.

ಸಸ್ಯಗಳ ಹೂವಿನಲ್ಲಿ ಅಂಡಾಣುಗಳ ಕಡೆಗೆ ಪರಾಗ ರೇಣುವಿನ ನಳಿಕೆಗಳು ಬೆಳೆಯುವುದು

a)

ರಾಸಾಯನಿಕ ಅನುವರ್ತನೆ

b)

ದ್ಯುತಿ ಅನುವರ್ತನೆ

c)

ಗುರುತ್ವ ಅನುವರ್ತನೆ

d)

ಜಲಾನುವರ್ತನೆ

35.

ಈ ಕೆಳಗಿನವುಗಳಲ್ಲಿ ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳನ್ನು ಮಾತ್ರ ಒಳಗೊಂಡಿರುವ ಗುಂಪು

a)

ಪಾಲಿಥೀನ್, ಮರ, ಚರ್ಮ

b)

ಚರ್ಮ, ಮಾರ್ಜಕ, ಪ್ಲಾಸ್ಟಿಕ್

c)

ಮರ, ಹುಲ್ಲು, ಚರ್ಮ

d)

ಕಾಗದ, ಬೇಕಲೈಟ್, ಹುಲ್ಲು

36.

ಬಾಯಲ್ಲಿ ನೀರೂರುವಿಕೆ ಮತ್ತು ರಕ್ತದೊತ್ತಡಗಳಂತಹ ಅನೈಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸುವ ಮಾನವನ ಮಿದುಳಿನ ಭಾಗ

a)

ಪಾನ್ಸ್

b)

ಮೆಡುಲ್ಲಾ

c)

ಮಹಾ ಮಸ್ತಿಷ್ಕ

d)

ಅನು ಮಸ್ತಿಷ್ಕ

37.

ಈ ಕೆಳಗಿನವುಗಳಲ್ಲಿ ಯಾವುದು ಮಾನವರ ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಭಾಗವಲ್ಲ?

a)

ಅಂಡಾಶಯ

b)

ಗರ್ಭಕೋಶ

c)

ವೀರ್ಯನಾಳ

d)

ಅಂಡನಾಳ

38.

ಜಲ ಕೊಯ್ಲು ರಚನೆಗಳನ್ನು ನಿರ್ಮಿಸುವುದರ ಮುಖ್ಯ ಉದ್ದೇಶ

a)

ಮಳೆ ನೀರನ್ನು ಭೂಮಿಯ ಮೇಲ್ಮೈ ಯಲ್ಲಿ ಹಿಡಿದಿಟ್ಟುಕೊಳ್ಳಲು

b)

ನೀರಾವರಿಗಾಗಿ ನೀರನ್ನು ಬಳಸಲು

c)

ಮೀನುಗಳ ಕೃಷಿಗೆ ನೀರನ್ನು ಬಳಸಲು

d)

ಅಂತರ್ಜಲವನ್ನು ಮರುಭರ್ತಿ ಮಾಡಲು

39.

ಶುದ್ಧ ಎತ್ತರದ ಬಟಾಣಿ (TT) ಸಸ್ಯವನ್ನು ಕುಬ್ಜ ಬಟಾಣಿ (tt) ಸಸ್ಯದೊಂದಿಗೆ ಸಂಕರಣಗೊಳಿಸಲಾಗಿದೆ. F2 ಪೀಳಿಗೆಯಲ್ಲಿ ಉತ್ಪತ್ತಿಯಾಗುವ ಶುದ್ಧ ಎತ್ತರದ ಬಟಾಣಿ ಸಸ್ಯಗಳಿಗೆ ಕುಬ್ಜ ಸಸ್ಯಗಳ ಅನುಪಾತ

a)

3:1

b)

1:1

c)

1:3

d)

2:1

40.

ಬಾವಲಿ ಮತ್ತು ಪಾರಿವಾಳಗಳ ರೆಕ್ಕೆಗಳು ಇವುಗಳಿಗೆ ಉದಾಹರಣೆಯಾಗಿದೆ

a)

ಕಾರ್ಯಾನುರೂಪಿ ಅಂಗಗಳು

b)

ವೆಸ್ಟಿಜಿಯಲ್ ಅಂಗಗಳು

c)

ರಚನಾನುರೂಪಿ ಅಂಗಗಳು

d)

ಹೊಂದಾಣಿಕೆಯ ಅಂಗಗಳು