NEW
Font size
Worksheetsಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು
Total questions: 26
Worksheet time: 25mins
ಆಮ್ಲಗಳು ________ರುಚಿಯನ್ನು ಹೊಂದಿರುತ್ತದೆ.
ಸಿಹಿ
ಕಹಿ
ಹುಳಿ
ಉಪ್ಪು
ಆಮ್ಲಗಳು ಅವುಗಳ ಜಲಿಯ ದ್ರಾವಣದಿಂದ ______ನ್ನು ನೀಡುವ ವಸ್ತುಗಳಾಗಿವೆ
H+
OH-
H-
OH+
ಜಲಿಯ ದ್ರಾವಣದಲ್ಲಿ ಸಾರರಿಕ್ತ ದ್ರಾವಣ ವೆಂದರೆ
ಆಮ್ಲದ ಸಾರತೆ ಹೆಚ್ಚು
ಆಮ್ಲದಲ್ಲಿ ಪ್ರತ್ಯಾಮ್ಲ ಸೇರಿದ್ದರೆ
ಆಮ್ಲದ ಸಾರತೆ ಕಡಿಮೆ
ತಟಸ್ಥ ವಿದ್ದಾಗ
ಮಾನವನ ಜಠರದಲ್ಲಿ ಬಿಡುಗಡೆಯಾಗುವ ಆಮ್ಲ ಇದು
ಸಲ್ಫ್ಯೂರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಕಾರ್ಬೋನಿಕ್ ಆಮ್ಲ
ನೈಟ್ರಿಕ್ ಆಮ್ಲ
ಜಠರದಲ್ಲಿರುವ ಆಮ್ಲ ಮಾಧ್ಯಮ ಇವುಗಳ ಗರಣಿಗಟ್ಟುವಿಕೆ ಹಾಗೂ ಜೀರ್ಣಕ್ರಿಯೆಗೆ ಸಹಾಯಕ
ಖನಿಜಗಳು
ಕೊಬ್ಬು
ಕಾರ್ಬೋಹೈಡ್ರೇಟ್ಗಳು
ಪ್ರೋಟೀನ್ ಗಳು
ಜಠರದಲ್ಲಿರುವ ಆಮ್ಲ ಮಾಧ್ಯಮವು ಆಹಾರದಲ್ಲಿರುವ ________ಗಳನ್ನು ಕೊಲ್ಲುತ್ತದೆ
ಪ್ರೋಟೀನ್ ಗಳನ್ನು
ಬ್ಯಾಕ್ಟೀರಿಯಾಗಳನ್ನು
ಜೀವಕೋಶಗಳನ್ನು
ಪೋಷಕಾಂಶಗಳನ್ನು
ಉರಿಯುತ್ತಿರುವ ಬೆಂಕಿ ಕಡ್ಡಿಯನ್ನು _________ ಅನಿಲ ಇರುವ ಸಾಬೂನಿನ ಗುಳ್ಳಿಯ ಸಮೀಪಕ್ಕೆ ತಂದರೆ ಪಾಪ್ ಶಬ್ದ ಮಾಡುತ್ತದೆ
ಕ್ಯಾಲ್ಸಿಯಂ ಆಕ್ಸೈಡ್
ಹೈಡ್ರೋಜನ್
ಆಕ್ಸಿಜನ್
ಇಂಗಾಲದ ಡೈಆಕ್ಸೈಡ್
ಸುಣ್ಣದ ತಿಳಿ ನೀರಿನ ಮೂಲಕ ಈ ಅನಿಲವನ್ನು ಹಾಯಿಸಿದಾಗ ಹಾಲಿನಂತೆ ಬೆಳ್ಳಗೆ ಆಗುತ್ತದೆ
ಸಲ್ಫರ್ ಡೈಆಕ್ಸೈಡ್
ನೈಟ್ರೋಜನ್ ಆಕ್ಸೈಡ್
ಇಂಗಾಲದ ಡೈಯಾಕ್ಸೈಡ್
ಕಾರ್ಬನ್ ಮೋನಾಕ್ಸೈಡ್
ಕೆಂಪು ಈರುಳ್ಳಿಯ ಸಿಪ್ಪೆ, ಕೆಂಪು ಕ್ಯಾಬೇಜ್ ಎಲೆಗಳು, ಬೀಟ್ರೂಟ್ ರಸ, ವಿವಿಧ ಹೂವುಗಳ ಬಣ್ಣದ ದಳಗಳು ಇವೆಲ್ಲವೂ
ಘ್ರಾಣ ಸೂಚಕಗಳು
ಮುಖ್ಯ ಸಸ್ಯಗಳ ಭಾಗಗಳು
ತರಕಾರಿಗಳು
ನೈಸರ್ಗಿಕ ಸೂಚಕಗಳು
ಜಲಿಯ ದ್ರಾವಣದ ಸ್ಥಿತಿಯಲ್ಲಿ ಆಮ್ಲ ಮತ್ತು ಪ್ರತ್ಯಾಮ್ಲ ಉತ್ತಮ ವಿದ್ಯುತ್ ವಾಹಕಗಳು ಅದಕ್ಕೆ ಕಾರಣ ಅವುಗಳಲ್ಲಿರುವ
ಧಾತುಗಳು
ಸ್ವತಂತ್ರ ಅಯಾನುಗಳು
ಅಣುಗಳು
ಪರಮಾಣುಗಳು
ಕೃತಕ ಸೂಚಕಗಳಾದ
ಪಿನಾಫ್ತಲಿನ್, ಆಮ್ಲ ಮತ್ತು ಪ್ರತ್ಯಾಮ್ಲ ಜೊತೆಗೆ ಹಾಗೂ
ಮಿಥೈಲ್ ಆರೆಂಜ್, ಆಮ್ಲ ಮತ್ತು ಪ್ರತ್ಯಾಮ್ಲಗಳು
ಜೊತೆಗೆ ಉಂಟುಮಾಡುವ ಬಣ್ಣಗಳು ಕ್ರಮವಾಗಿ ಹೀಗಿವೆ
ಬಣ್ಣರಹಿತ, ನೇರಳೆ ಬಣ್ಣ ಮತ್ತು ಕೆಂಪು, ಹಳದಿ
ಕೆಂಪು, ಹಳದಿ ಮತ್ತು ಬಣ್ಣ ರಹಿತ, ನೀಲಿ
ಬಣ್ಣರಹಿತ, ಕೆಂಪು ಮತ್ತು ನೇರಳೆ ಬಣ್ಣ, ಹಳದಿ
ನೀಲಿ, ಕೆಂಪು ಮತ್ತು ಹಳದಿ, ಬಣ್ಣರಹಿತ
ಸ್ಥಾನಪಲ್ಲಟ ಕ್ರಿಯೆಯಲ್ಲಿ ಲೋಹ ಮತ್ತು ಆಮ್ಲ ಪ್ರತಿಕ್ರಿಯಿಸಿದಾಗ ಉಂಟಾಗುವುದು ಹೈಡ್ರೋಜನ್ ಅನಿಲ ಮತ್ತು ಲೋಹಿಯ ____________
ಆಕ್ಸೈಡ್
ಹೊಳಪು
ಲವಣಗಳು
ವತ್ತರ
ಅಜೀರ್ಣವಾದಾಗ ಜಠರದಲ್ಲಿ ಸ್ರವಿಸುವ ಹೈಡ್ರೋಕ್ಲೋರಿಕ್ ಆಮ್ಲದಿಂದ ಪಿಎಚ್ ಮೌಲ್ಯ 1.5 ರಿಂದ 3.0 ಆದಾಗ ತಟಸ್ಥೀಕರಣ ಗೊಳಿಸಲು ಬಳಸುವ ಆಮ್ಲ ಶಾಮಕ
ಸುಣ್ಣದ ತಿಳಿ ನೀರು
ಲಿಂಬೆ ಹಣ್ಣಿನ ರಸ
ಮಿಲ್ಕ್ ಅಫ್ ಮಗ್ನೆಸಿಯ
ಎಲ್ಲವೂ
ತಂಪು ಪಾನೀಯಗಳು, ಚಾಕೊಲೇಟುಗಳು ಮತ್ತು ಸಿಹಿ ಪದಾರ್ಥಗಳು ಆರೋಗ್ಯ ಮತ್ತು ಹಲ್ಲುಗಳಿಗೆ ಹಾನಿಕಾರಕಗಳು ಇವು ಬಾಯಿಯಲ್ಲಿ _______________ ಉತ್ಪತ್ತಿಮಾಡಿ ಹಲ್ಲುಗಳ ಕುಳಿಗಳಿಗೆ ಕಾರಣವಾಗುತ್ತವೆ
ಆಕ್ಸೈಡ್ಗಳು
ಆಮ್ಲ
ಪ್ರತ್ಯಾಮ್ಲ
ಲವಣ
ಪ್ರಬಲ ಆಮ್ಲ ಮತ್ತು ಪ್ರತ್ಯಾಮ್ಲ ದಿಂದ ಉಂಟಾದ ತಟಸ್ಥ ಲವಣಗಳ ಪಿಎಚ್ ಮೌಲ್ಯ
3.2
2.3
7.0
9.4
ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲ ಗಳಿಗೆ ಹೀಗೆನ್ನುವರು
ಅಯಾನುಗಳು
ಆಮ್ಲಗಳು
ಕ್ಷಾರಗಳು
ಸೂಚಕಗಳು
ಆಮ್ಲ ಮತ್ತು ಪ್ರತ್ಯಾಮ್ಲಗಳ ತಟಸ್ಥೀಕರಣ ಕ್ರಿಯೆಯಿಂದ ಉಂಟಾಗುವ ಅಯಾನಿಕ ಸಂಯುಕ್ತಗಳು
ಸೂಚಕ
ಲವಣ
ಪಿ.ಹೆಚ್
ಹೈಡ್ರೋಜನ್
ಜಲಿಯ ದ್ರಾವಣ ದಲ್ಲಿ ಅಯಾನುಗಳ ಆಗಿ ಪ್ರತ್ಯೇಕಗೊಳ್ಳುವ ಕ್ರಿಯೆಗೆ ಹೀಗೆನ್ನುವರು
ಅಯಾನೀಕರಣ
ತಟಸ್ಥೀಕರಣ
ಆಮ್ಲೀಕರಣ
ಸಾರರಿಕ್ತ ಗೊಳಿಸುವುದು
ಸಸ್ಯ ಮತ್ತು ಪ್ರಾಣಿ ಮೂಲಗಳಿಂದ ಪಡೆದ ಆಮ್ಲಗಳಿಗೆ ಹೀಗೆನ್ನುವರು
ನಿರವಯವ ಆಮ್ಲಗಳು
ಸೂಚಕಗಳು
ಕ್ಷಾರಗಳು
ಸಾವಯವ ಆಮ್ಲಗಳು
ಆಮ್ಲಿಯ ಆಕ್ಸೈಡನ್ನು ಉಂಟುಮಾಡುವ ಧಾತು
Mg
P
Na
Al
ಒಂದು ದ್ರಾವಣ, ಪುಡಿಮಾಡಿದ ಮೊಟ್ಟೆಯ ಚೂರುಗಳೊಂದಿಗೆ ಬಿಡುಗಡೆ ಮಾಡುವ ಅನಿಲ ಸುಣ್ಣದ ತಿಳಿ ನೀರನ್ನು ಬಿಳಿಯಾಗಿರುತ್ತದೆ. ಹಾಗಾದರೆ ಆ ದ್ರಾವಣ ಇದನ್ನು ಒಳಗೊಂಡಿದೆ.
KCl
LiCl
NaCl
HCl
ಮೊಸರು ಮತ್ತು ಹುಳಿ ಪದಾರ್ಥಗಳನ್ನು ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿದಾಗ ಈ ಆಹಾರ
ರುಚಿ ಯಾಗುತ್ತದೆ
ವಿಷಪೂರಿತ ವಾಗುತ್ತದೆ
ಆರೋಗ್ಯಕ್ಕೆ ಉತ್ತಮ
ಪಾತ್ರೆಗಳನ್ನು ಹಾಳುಮಾಡುತ್ತದೆ
ಸಮುದ್ರದಿಂದ ಸಿಗುವ ಒಂದು ಲೋಹಿಯ ಲವಣ ವಿದು
ಸೋಡಾ
ಮೆಗ್ನೀಷಿಯಂ ಕ್ಲೋರೈಡ್
ಕ್ಯಾಲ್ಸಿಯಂ ಕ್ಲೋರೈಡ್
ಉಪ್ಪು
X ಮತ್ತು Y ದ್ರಾವಣಗಳನ್ನು ಸಾರ್ವತ್ರಿಕ ಸೂಚಕ ದಿಂದ ಪರೀಕ್ಷಿಸಲಾಗಿದೆ, X ದ್ರಾವಣ ಕಿತ್ತಳೆ ಬಣ್ಣಕ್ಕೆ Y ದ್ರಾವಣ ಕೆಂಪು ಬಣ್ಣಕ್ಕೆ ಬದಲಾಗಿದೆ ಇವುಗಳಲ್ಲಿ ಯಾವುದು ಪ್ರಬಲ ಆಮ್ಲ
Y ದ್ರಾವಣ
X ದ್ರಾವಣ
X ಮತ್ತು Y ದ್ರಾವಣ
ಯಾವುದು ಅಲ್ಲ
ಇರುವೆ ಕಡಿತ ಅಥವಾ ತುರಿಕೆ ಗಿಡದ ಆಮ್ಲವನ್ನು ಹೆಸರಿಸಿ
ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ
ಪ್ರಬಲ ನೈಟ್ರಿಕ್ ಆಮ್ಲ
ಮೇಥನೊಯಿಕ್ ಅಮ್ಲ
ಸಿಟ್ರಿಕ್ ಆಮ್ಲ
ಹಾಲು ಮೊಸರಾಗಿ ಬದಲಾದಾಗ ಅದರ ಪಿ.ಎಚ್ ಮೌಲ್ಯ
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ತಟಸ್ಥ ವಾಗುತ್ತದೆ
ಬದಲಾವಣೆಯಾಗುವುದಿಲ್ಲ
