Wayground logo

Free Printable Worksheets

Font size

S
M
L
XL
Worksheets

ಶೈಕ್ಷಣಿಕ ಮನೋವಿಜ್ಞಾನ ಭಾಗ-6

Total questions: 25

Worksheet time: 13mins

Name
Class
Date
1.

ಥಾರ್ನ್ ಡೈಕ್ ಪ್ರಕಾರ ಪರಿಣಾಮ ನಿಯಮ ಯಾವುದನ್ನು ಒತ್ತಿ ಹೇಳುತ್ತದೆ

a)

ಅಭ್ಯಾಸದ ಪಾತ್ರ

b)

ಪುನರ್ಬಲನದ ಪಾತ್ರ

c)

ಒಳನೋಟದ ಪಾತ್ರ

d)

ಸಮಸ್ಯೆಯ ಮಟ್ಟ

2.

ಕಲಿಕೆ ಎಂದರೆ_____

a)

ದೈಹಿಕ ಬದಲಾವಣೆ

b)

ಮಾನಸಿಕ ಬದಲಾವಣೆ

c)

ವರ್ತನೆಯಲ್ಲಿ ಶಾಶ್ವತ ಬದಲಾವಣೆ

d)

ವರ್ತನೆಯಲ್ಲಿ ತಾತ್ಕಾಲಿಕ ಬದಲಾವಣೆ

3.

ಹೋಲಿಕೆ, ವಿಭಿನ್ನತೆ ಮತ್ತು ಸಾಮೀಪ್ಯತೆ ಇವುಗಳು ಯಾವುದರ ನಿಯಮಗಳು

a)

ಸಹಚರ್ಯ

b)

ಕ್ರಿಯೆ

c)

ಕಲಿಕೆ

d)

ಅನುವಂಶಿಯತೆ

4.

ಮಕ್ಕಳಲ್ಲಿ ಕಲಿಯುವಿಕೆಯ ಪ್ರಧಾನ ವಿಧಾನ ಯಾವುದು

a)

ಅನುಕರಣೆ

b)

ಓದುವಿಕೆ

c)

ಬರೆಯುವಿಕೆ

d)

ಆಲಿಸುವಿಕೆ

5.

ರೂಢಿಯ ಉದ್ದೇಶವೆಂದರೆ

a)

ತಕ್ಷಣ ಯಶಸ್ಸು ಮತ್ತು ವಿಸ್ಮೃತಿ

b)

ದೀರ್ಘಕಾಲಿಕ ಯಶಸ್ಸು ಮತ್ತು ನಿಧಾನ ಗತಿಯ ವಿಸ್ಮೃತಿ

c)

ತಕ್ಷಣ ಯಶಸ್ಸು ಮತ್ತು ದೀರ್ಘಕಾಲಿಕ ಉಳಿಕೆ

d)

ನಿಧಾನ ಗತಿಯ ಕಲಿಕೆ ಮತ್ತು ವಿಸ್ಮೃತಿ

6.

ಅನುಕ್ರಿಯೆ ಎಂಬುದು ಒಂದು ____

a)

ಉತ್ತರ

b)

ಮಾತು

c)

ಉದ್ದೀಪನಕ್ಕೆ ತೋರುವ ಕ್ರಿಯೆ

d)

ಸೂಚನೆ

7.

ಥಾರ್ನ್ ಡೈಕ್ ಪ್ರಯೋಗದಲ್ಲಿ ಪ್ರಯತ್ನಗಳು ಹೆಚ್ಚಾದಂತೆ ದೋಷಗಳು

a)

ಅಷ್ಟೇ ಇರುತ್ತವೆ

b)

ಸಮಾನುಪಾತದಲ್ಲಿ ಕಡಿಮೆಯಾಗುತ್ತವೆ

c)

ಹೆಚ್ಚುತ್ತವೆ

d)

ಕಡಿಮೆಯಾಗುತ್ತವೆ

8.

ವರ್ತನೆಗಳ ಸರಣಿಯನ್ನು ಕಲಿಯುವ ಪ್ರಕ್ರಿಯೆ

a)

ಸರಣಿ ಕಲಿಕೆ

b)

ವರ್ತನೆ ರೂಪಿಸುವಿಕೆ

c)

ಗುಂಪು ಕಲಿಕೆ

d)

ಅನುಬಂಧನ

9.

ಬೋಧನಾ ನಿಯಮಗಳನ್ನು ಯಾವ ಆಧಾರದ ಮೇಲೆ ರೂಪಿಸಿದ್ದಾರೆ

a)

ಮಕ್ಕಳ ಕಲಿಕೆಯ ಶಕ್ತಿಯ ಮೇಲೆ

b)

ಮಕ್ಕಳ ವಯಸ್ಸಿನ ಮೇಲೆ

c)

ಮಕ್ಕಳ ಜಾಣತನದ ಮೇಲೆ

d)

ಮಕ್ಕಳ ಆಸಕ್ತಿಗಳ ಮೇಲೆ

10.

ಒಂದು ಕೌಶಲ್ಯದ ಹೆಚ್ಚು ಉಳಿಕೆಯು ಸಾಧ್ಯವಾಗುವುದು ಕಲಿಕೆಯು ____

a)

ಸುಲಭವಾದಾಗ

b)

ಕ್ಲಿಷ್ಟವಾದಾಗ

c)

ಅತಿಯಾದ ಕಲಿಕೆಯಾದಾಗ

d)

ಮಕ್ಕಳ ಆಸಕ್ತಿಗೆ ಅನುಗುಣವಾಗಿ

11.

ದಣಿವು ಏನನ್ನು ಸೂಚಿಸುತ್ತದೆ

a)

ದೈಹಿಕ ಶಕ್ತಿಯ ಕ್ಷೀಣತೆಯನ್ನು

b)

ಮಾನಸಿಕ ಆಯಾಸವನ್ನು

c)

ಆಸಕ್ತಿಯ ಕೊರತೆಯನ್ನು

d)

ಅಭಿಪ್ರೇರಣೆಯ ಕೊರತೆಯನ್ನು

12.

ಸಂಪರ್ಕವಾದದಲ್ಲಿ ಪ್ರಯತ್ನ ದೋಷ ಕಲಿಕೆ ಸಿದ್ಧಾಂತವನ್ನು ಮಂಡಿಸಿದ ಮನೋವಿಜ್ಞಾನಿ

a)

ಜೆ.ಬಿ.ವ್ಯಾಟ್ಸನ್

b)

ಥಾರ್ನ ಡೈಕ್

c)

ಪಾವಲೋ

d)

ಕೋಹ್ಲರ್

13.

ಪಾವಲೋ ಈ ಕೆಳಗಿನ ಯಾವ ಕಲಿಕಾ ಸಿದ್ಧಾಂತವನ್ನು ಪ್ರತಿಪಾದಿಸಿದರು

a)

ಋಣಾತ್ಮಕ ಅನುಬಂಧನ

b)

ಸಾಂಪ್ರದಾಯಿಕ ಅನುಬಂಧನ

c)

ಸಾಧಕ ಅನುಬಂಧನ

d)

ಕ್ರಿಯಾಜನ್ಯ ಅನುಬಂಧನ

14.

S-R ಬಾಂಡ್ ಸಿದ್ದಾಂತವನ್ನು ಮಂಡಿಸಿದ ಮನೋವಿಜ್ಞಾನಿ

a)

ಪಾವಲೋ

b)

ಕೋಹ್ಲರ್

c)

ಥಾರ್ನ ಡೈಕ್

d)

ವ್ಯಾಟ್ಸನ್

15.

ಪ್ರಯತ್ನ ಪ್ರಮಾದ ಕಲಿಕೆ ಬಗ್ಗೆ ಮೊಟ್ಟಮೊದಲು ಪ್ರಯೋಗ ನಡೆಸಿದ ವ್ಯಕ್ತಿ

a)

ಪಾವಲೋ

b)

ಕೋಹ್ಲರ್

c)

ಥಾರ್ನ ಡೈಕ್

d)

ಯಾರು ಅಲ್ಲ

16.

"ನಾವು ಚಳಿಗಾಲದಲ್ಲಿ ಈಜುವುದನ್ನು ಮತ್ತು ಬೇಸಿಗೆಯಲ್ಲಿ ಸ್ಕೇಟಿಂಗ್ ಕಲಿಯುತ್ತೇವೆ" ಈ ಹೇಳಿಕೆಯ ಅರ್ಥ

a)

ಕಲಿಕೆಯು ಆ ವೇಳೆಯಲ್ಲಿ ಉಂಟಾಗುತ್ತದೆ

b)

S-R ಬಂಧನ ಜೋಡಣೆಯಾಗಲು ಸಮಯ ತೆಗೆದುಕೊಳ್ಳುತ್ತದೆ

c)

ವಿಶ್ರಾಂತಿಯ ವ್ಯಾಪ್ತಿಯು ಕಲಿಕೆಯನ್ನು ಸುಧಾರಿಸುತ್ತದೆ

d)

ಕಲಿಕೆ ವಿರಳವಾಗಿರುತ್ತದೆ

17.

ಬಾಹ್ಯವಾಗಿ ಅಭಿಪ್ರೇರಿಸಲ್ಪಟ್ಟ ಒಬ್ಬ ಆಟಗಾರನು ಆಡುವುದು

a)

ಮನರಂಜನೆಗಾಗಿ

b)

ಗಳಿಕೆಗಾಗಿ

c)

ವೈಯಕ್ತಿಕ ತೃಪ್ತಿಗಾಗಿ

d)

ಪ್ರತಿಭೆಯ ಬೆಳವಣಿಗೆಗಾಗಿ

18.

ಕತ್ತಲನ್ನು ಕಂಡರೆ ಭಯವಾಗುವುದು ಯಾವುದರ ಕಲಿಕೆಯ ಮೂಲ

a)

ಕ್ರಿಯಾಜನ್ಯ ಅನುಬಂಧನ

b)

ಪ್ರಯತ್ನ ದೋಷ

c)

ಶಾಸ್ತ್ರೀಯ ಅನುಬಂಧನ

d)

ಒಳನೋಟ ಕಲಿಕೆ

19.

ಋಣಾತ್ಮಕ ಅನುಬಂಧವನ್ನು ಈ ರೀತಿಯಿಂದಲೂ ಕರೆಯುವರು

a)

ಮುಮ್ಮಖ ಅನುಬಂಧನ

b)

ಹಿಮ್ಮುಖ ಅನುಬಂದನ

c)

ಪುನರ್ ಅನುಬಂಧನ

d)

ಅನುಬಂಧನದ ತೆರವು

20.

ಪಾವಲೋ ಪ್ರಯೋಗದಲ್ಲಿ ಗಂಟೆ ಶಬ್ದಕ್ಕೆ ನಾಯಿಯಿಂದ ಬರುವ ಪ್ರತಿಕ್ರಿ

a)

ಅಂತ: ಪ್ರೇರಣೆ

b)

ಸ್ವಾಭಾವಿಕ

c)

ಅನುಬಂಧಿತ

d)

ತತ್ ಕ್ಷಣ

21.

ಒಂದು ಕೌಶಲ್ಯದ ಹೆಚ್ಚು ಉಳಿಕೆಯು ಸಾಧ್ಯವಾಗುವುದು ಕಲಿಕೆಯು

a)

ಸುಲಭವಾಗಿದ್ದಾಗ

b)

ಕ್ಲಿಷ್ಟವಾದಾಗ

c)

ಅತಿಯಾದ ಕಲಿಕೆಯಾದಾಗ

d)

ಏಣಿಕೆಯಿಂದಾಗಿ

22.

ಗಾಗ್ನೆಯವರ ಶ್ರೇಣಿಕೃತ ಕಲಿಕಾ ಸಿದ್ಧಾಂತದಲ್ಲಿ ಅತ್ಯಂತ ಕೆಳಮಟ್ಟದ ಕಲಿಕೆಯ ವಿಧ

a)

ಶಾಬ್ಧಿಕ ಸಹಚರ್ಯ

b)

ಸಂಕೇತ ಕಲಿಕೆ

c)

ಪ್ರಚೋದನ ಅನುಕ್ರಿಯೆ

d)

ಯಾವುದು ಅಲ್ಲ

23.

ಸಾಮಾನ್ಯ ಸಂಭಾವ್ಯ ರೇಖೆ ಇರುವ ಆಕಾರ

a)

ಶಂಖಾಕಾರ

b)

ಗೋಳಾಕಾರ

c)

ಘಂಟಾಕಾರ

d)

ಅಂಡಾಕಾರ

24.

"ಯಶಸ್ಸಿಗೆ ಯಶಸ್ಸೇ ಉತ್ತರಾಧಿಕಾರಿ" ಈ ಹೇಳಿಕೆಯನ್ನು ವಿವರಿಸುವ ನಿಯಮ

a)

ಒಂದೇ ಎಂಬ ಭಾವನೆಯ ನಿಯಮ

b)

ಪರಿಣಾಮ ನಿಯಮ

c)

ಅಭ್ಯಾಸ ನಿಯಮ

d)

ಸಿದ್ಧತಾ ನಿಯಮ

25.

ವ್ಯಾಟ್ಸನ್ ಭಯವನ್ನು ಅನುಬಂಧಿಸಲು ಒಂದು ಮಗುವಿನ ಮೇಲೆ ಪ್ರಯೋಗ ಮಾಡಿದನು ಆ ಮಗುವಿನ ಹೆಸರು

a)

ಅಲೀನ್

b)

ಆಲ್ಬರ್ಟ್

c)

ರಾಬರ್ಟ್

d)

ಯಾರು ಅಲ್ಲ