wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-8 ಅಗ್ನಿಭೂತಿ ವಾಯುಭೂತಿ ಕತೆ ಭಾಗ-1

Total questions: 25

Worksheet time: 13mins

Name
Class
Date
1.

ಕನ್ನಡದ ಮೊಟ್ಟಮೊದಲ ಗದ್ಯ ಕೃತಿ ಯಾವುದು?

a)

ವಡ್ಡಾರಾಧನೆ

b)

ಕವಿರಾಜಮಾರ್ಗ

c)

ಆದಿಪುರಾಣ

d)

ಚಾವುಂಡರಾಯ ಪುರಾಣ

2.
ಅಗ್ನಿಭೂತಿ ವಾಯುಭೂತಿಯರ ಕಥೆಯನ್ನು ಈ ಕೃತಿಯಿಂದ ಆರಿಸಿಕೊಳ್ಳಲಾಗಿದೆ.
a)
ಪಂಪಭಾರತ
b)
ಗದಾಯುದ್ಧ
c)
ವಡ್ಡಾರಾಧನೆ
d)
ಜೈನಪುರಾಣ
3.
ವಡ್ಡಾರಾಧನೆ ಕೃತಿಯನ್ನು ರಚಿಸಿದವರು.
a)
ಶಿವಕೋಟ್ಯಾಚಾರ್ಯ
b)
ಪಂಪ
c)
ರನ್ನ
d)
ದೇವಿದಾಸ
4.
ಶಿವಕೋಟ್ಯಾಚಾರ್ಯರ ಕಾಲ:
a)
೯ನೆಯ ಶತಮಾನ
b)
೧೦ನೆಯ ಶತಮಾನ
c)
೧೧ನೆಯ ಶತಮಾನ
d)
೧೨ನೆಯ ಶತಮಾನ
5.
ಶಿವಕೋಟ್ಯಾಚಾರ್ಯರ ಊರು:
a)
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಕೋಗಳಿ ನಾಡು
b)
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಕೋಳಿವಾಡ
c)
ಗದಗ ಜಿಲ್ಲೆಯ ಕೋಳಿವಾಡ
d)
ಬಾಗಲಕೋಟೆ ಜಿಲ್ಲೆಯ ಮುಧೋಳ
6.
ವಡ್ಡಾರಾಧನೆ ಕೃತಿಯಲ್ಲಿರುವ ಕಥೆಗಳ ಸಂಖ್ಯೆ:
a)
15
b)
16
c)
18
d)
19
7.
ಅಗ್ನಿಭೂತಿ ವಾಯುಭೂತಿಯರ ಕಥೆಯನ್ನು ಈ ಕತೆಯಿಂದ ಆರಿಸಿಕೊಳ್ಳಲಾಗಿದೆ.
a)
ಸುಕೌಶಳಸ್ವಾಮಿಯ ಕಥೆ
b)
ವಿದ್ಯುಚ್ಚೋರ ಋಷಿಯ ಕಥೆ
c)
ಸೋಮಶರ್ಮರ ಕಥೆ
d)
ಸುಕುಮಾರಸ್ವಾಮಿಯ ಕಥೆ
8.
`ಅೞ್ತಿ' ಪದದ ಸಮಾನಾರ್ಥಕ ಪದ:
a)
ಅಳಿವು, ನಾಶ
b)
ಇಷ್ಟ, ಪ್ರೀತಿ
c)
ಅತ್ತಿಗೆ, ನಾದಿನಿ
d)
ದ್ವೇಷ, ವೈರುದ್ಯ
9.
`ಉರ್ಕು' ಎಂದರೆ
a)
ನಿಸ್ವಾರ್ಥ
b)
ನಿರಹಂಕಾರ
c)
ದರ್ಪ, ಅಹಂಕಾರ
d)
ಕೋಪ, ಕ್ರೋಧ
10.
'ಉಬ್ಬೆಗ' ಪದದ ಸಮಾನಾರ್ಥಕ
a)
ಸಂತೋಷ, ಆನಂದ
b)
ಉದ್ಯೋಗ, ಕೆಲಸ
c)
ದುಃಖ, ಚಿಂತೆ
d)
ಕಣ್ಣಿನ ಉಬ್ಬು
11.
'ಆದಮಾನುಮ್' ಎಂದರೆ
a)
ವಿಶೇಷವಾಗಿ
b)
ಆದಾಯವನ್ನು
c)
ನಿಜವಾಗಿ
d)
ಆದ ಮನಸ್ಸನ್ನು
12.
'ಓಜ' ಎಂಬ ಪದದ ಸಮಾನಾರ್ಥಕ ಪದ:
a)
ಅಜ್ಜ
b)
ಓಲಗ
c)
ತಂದೆ
d)
ಉಪಾಧ್ಯಾಯ
13.
'ಕತಿಪಯ' ಎಂದರೆ
a)
ಹೆಚ್ಚು
b)
ಕೆಲವು
c)
ಕಡಿಮೆ
d)
ಬೇರೆ
14.
'ತುೞಿಲ್' ಪದದ ಸಮಾನಾರ್ಥಕ ಪದ
a)
ತುಡಿತ
b)
ನಮಸ್ಕಾರ
c)
ಕೊಳಲು
d)
ಸ್ನಾನ
15.
'ಪಸರ' ಎಂದರೆ
a)
ಜಾತ್ರೆ
b)
ಹರಡು
c)
ಬೇಸರ
d)
ಸಲುಗೆ
16.
'ಪ್ರತಿಪತ್ತಿ'' ಪದದ ಸಮಾನಾರ್ಥಕ ಪದ:
a)
ಅವಮಾನ
b)
ಪ್ರತ್ಯುತ್ತರ
c)
ಗೌರವ
d)
ತಾಳೆಪತ್ರ
17.
'ಬಿಚ್ಚಳಿಸು' ಎಂದರೆ
a)
ಬಿಚ್ಚಿಬಿಡು
b)
ಹೊಗಳು
c)
ಬೈಯು
d)
ಅಳು
18.
'ಕೞಿ' ಎಂದರೆ
a)
ಸಾವು
b)
ಹುಟ್ಟು
c)
ಹಿಟ್ಟು
d)
ಸಂಕಲನ ಮಾಡು
19.
'ಪಲಂಬರ್' ಪದದ ಹೊಸಗನ್ನಡ ರೂಪ"
a)
ಹಲುಬಲು
b)
ಹಲವು ಕಾಲ
c)
ಹಲವರು
d)
ಕೆಲವರು
20.
'ಪೊಡೆಮಡು' ಪದದ ಸಮಾನಾರ್ಥಕ ಪದ:
a)
ಬೀಳು
b)
ನಮಸ್ಕರಿಸು
c)
ಹೊಟ್ಟೆ ಉರಿ
d)
ಹೊರೆ ಮಡಗು
21.
ಬಿಯ - ಎಂದರೆ
a)
ಆದಾಯ
b)
ಭಯ
c)
ಸಂಜೆ
d)
ವೆಚ್ಚ
22.
ಕೌಸಂಬಿಯ ಅರಸ
a)
ಸೋಮಶರ್ಮ
b)
ಅತಿಬಳ
c)
ಭರತ
d)
ಕೌಸಂಬಿ
23.
ಅಗ್ನಿಭೂತಿ ಮತ್ತು ವಾಯುಭೂತಿಯರು ರಾಜನ ಮುಂದೆ ಮಾತನಾಡದೆ ನಿಂತಾಗ ಜನರು ಹೀಗೆಂದು ಬೈದರು:
a)
ಇವರು ಮೂರ್ಖರು, ಕೆಟ್ಟ ಶಿಕ್ಷಣ ಪಡೆದಿಲ್ಲ, ಸಪ್ತವ್ಯಸನಿಗಳಲ್ಲ
b)
ಇವರು ಎಲ್ಲವನ್ನೂ ತಿಳಿದವರು ಆದರೆ ಮೂರ್ಖರಂತೆ ನಿಂತಿದ್ದಾರೆ. ಇವರಿಗೆ ಶಿಕ್ಷೆನೀಡಿ.
c)
ಇವರು ಮೂರ್ಖರು, ಯಾವ ಶಿಕ್ಷಣವನ್ನೂ ಪಡೆದಿಲ್ಲ, ಸಪ್ತವ್ಯಸನಿಗಳು
d)
ಇವರು ಮಹಾ ಮೂರ್ಖರು, ಅನೇಕ ಒಳ್ಳೆಯ ಶಿಕ್ಷಣವನ್ನು ಪಡೆದಿದ್ದರೂ ಸಪ್ತವ್ಯಸನಿಗಳಾಗಿದ್ದಾರೆ.
24.
ಸೋಮಶರ್ಮ ಸತ್ತ ವಿಷಯ ತಿಳಿದು, ಆತನ ಮಕ್ಕಳಿಗೆ ರಾಜನು ಹೇಗೆ ಸಮಾಧಾನಪಡಿಸಿದನು?
a)
ಕೂಡಲೇ ಕರೆಸಿ ಮಂತ್ರಿ ಪದವಿಯನ್ನು ನೀಡಿದನು
b)
ಸ್ನಾನ-ಬಟ್ಟೆ-ಊಟ ಬಡಿಸಿ, ತಾಂಬೂಲ ಕೊಟ್ಟು ಉಪಚರಿಸಿ, ಅವರಿಗೆ ಇಷ್ಟವಾದ ಹುದ್ದೆಗಳನ್ನು ಕೊಟ್ಟು ಗೌರವಿಸಿದನು.
c)
ದುಃಖ ಪಡಬೇಡಿ ಎಂದು ಸಮಾಧಾನಪಡಿಸಿ, ಕೂಡಲೇ ಅವರಿಗೆ ಇಷ್ಟವಾದ ಹುದ್ದೆಗಳನ್ನು ಕೊಟ್ಟು ಗೌರವಿಸಿದನು.
d)
ಅರಮನೆಗೆ ಕರೆಸಿ ಸ್ನಾನ-ಬಟ್ಟೆ-ಊಟ ಬಡಿಸಿ, ತಾಂಬೂಲ ಕೊಟ್ಟು ಉಪಚರಿಸಿ ದುಃಖಪಡಬೇಡಿ ಎಂದು ಸಮಾಧಾನಪಡಿಸಿದನು.
25.
ರಾಜನು ಎರಡನೆಯ ಬಾರಿ ಅಗ್ನಿಭೂತಿ-ವಾಯುಭೂತಿಯರನ್ನು ಕರೆಸಿ ಏನೆಂದು ಪ್ರಶ್ನಿಸಿದನು?
a)
ನೀವು ಯಾವ ಓದುಗಳನ್ನು ಬಲ್ಲಿರಿ?
b)
ನಿಮಗೆ ಇಷ್ಟವಾದ ಪದವಿ ಯಾವುದು?
c)
ನಾನು ನಿಮಗೆ ಯಾವ ಪದವಿಯನ್ನು ನೀಡಲಿ?
d)
ನೀವು ಯಾವ ಕೆಲಸ ತಿಳಿದಿರುವಿರಿ?