Font size
Worksheets2024 ವಾರ್ಷಿಕ ಪೂರಕ ರಾಜ್ಯಮಟ್ಟದ ರಾಜ್ಯಮಟ್ಟದ ಮಾದರಿ ಮತ್ತು ಪೂರ್ವ ಸಿದ್ಧತ
Total questions: 87
Worksheet time: 44mins
ಕಾನಸ್ಟಾಂಟಿನೋಪಲ್ ಅನ್ನು ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗುತ್ತಿತ್ತು. ಏಕೆಂದರೆ
ಅದು ಯುರೋಪಿನ ಗಡಿಯಾಗಿತ್ತು
ಅದು ಅಂತರಾಷ್ಟ್ರೀಯ ಜಲಮಾರ್ಗದ ಬಂದರು ಮಾರ್ಗವಾಗಿತ್ತು
ಅದು ವಿಶ್ವಸಂಸ್ಥೆಯ ಕೇಂದ್ರವಾಗಿತ್ತು
ಅದು ಅಂತರಾಷ್ಟ್ರೀಯ ವ್ಯಾಪಾರದ ಕೇಂದ್ರವಾಗಿತ್ತು
ಗೋವಾ 1987ರಲ್ಲಿ ಒಂದು ರಾಜ್ಯವಾಯಿತು. ರಾಜ್ಯ ವಾಗುವುದಕ್ಕೆ ಮುನ್ನ ಅದು
ಪೋರ್ಚುಗೀಸರ ವಸಾಹತುವಾಗಿತ್ತು
ಸ್ವತಂತ್ರ ರಾಜ್ಯವಾಗಿತ್ತು
ಕೇಂದ್ರಾಡಳಿತ ಪ್ರದೇಶವಾಗಿತ್ತು
ಕರ್ನಾಟಕದ ಒಂದು ಭಾಗವಾಗಿತ್ತು
ರಷ್ಯಾ ಕ್ರಾಂತಿ ಮತ್ತು ಫ್ರೆಂಚ್ ಕ್ರಾಂತಿಗಳು ಪುಷ್ಟಿ ನೀಡಿರುವುದು
ಮಾನವ ಹಕ್ಕುಗಳ ಹೋರಾಟಕ್ಕೆ
ಏಕೀಕರಣ ಚಳುವಳಿಗೆ
ಮಹಾಯುದ್ಧಗಳಿಗೆ
ಕೈಗಾರಿಕಾ ಕ್ರಾಂತಿಗೆ
ಬಾಲ್ಯ ವಿವಾಹವನ್ನು ತಡೆಯಲು ನಾವು ಕರೆ ಮಾಡಿ ಮಾಹಿತಿಯನ್ನು ನೀಡುವ ಉಚಿತ ಸಹಾಯವಾಣಿ
101
108
1089
1098
ಮಾನವ ಕುಲ ತಾನೊಂದೇ ವಲಂ ಎಂದು ಹೇಳಿದವರು
ಪಂಪ
ರನ್ನ
ಜನ್ನ
ಪೊನ್ನ
ಭಾರತದ ಸಿಲಿಕಾನ್ ಸಿಟಿ ಇರುವುದು
ಮಹಾರಾಷ್ಟ್ರದಲ್ಲಿ
ತಮಿಳುನಾಡಿನಲ್ಲಿ
ಕರ್ನಾಟಕದಲ್ಲಿ
ಗುಜರಾತಿನಲ್ಲಿ
ರಾಜೇಶನು ತನ್ನ ಪಾಸ್ ಬುಕ್ ನಲ್ಲಿ ಆತನ ಖಾತೆಗೆ ಬ್ಯಾಂಕು ಸೇವಾಶುಲ್ಕ ವಿಧಿಸಿರುವುದನ್ನು ಗಮನಿಸುತ್ತಾನೆ. ಆತನು ಹೊಂದಿರುವ ಬ್ಯಾಂಕ್ ಖಾತೆಯ ವಿಧ
ಉಳಿತಾಯ ಖಾತೆ
ಚಾಲ್ತಿ ಖಾತೆ
ನಿಶ್ಚಿತ ಠೇವಣಿ ಖಾತೆ
ಆವರ್ತ ಠೇವಣಿ ಖಾತೆ
ಭಾರತಕ್ಕೆ ಯೋಜಿತ ಅರ್ಥ ವ್ಯವಸ್ಥೆ ಎಂಬ ಪುಸ್ತಕವನ್ನು ಬರೆದವರು
ಸರ್ ಎಂ ವಿಶ್ವೇಶ್ವರಯ್ಯ
ಜವಹರಲಾಲ್ ನೆಹರು
ಮಹಾತ್ಮ ಗಾಂಧೀಜಿ
ಬಾಲಗಂಗಾಧರ್ ತಿಲಕ್
ದಿವಾನಿ ಅದಾಲತ್ ಗಳೆಂದರೆ
ಅಪರಾಧ ನ್ಯಾಯಾಲಯಗಳು
ನಾಗರಿಕ ನ್ಯಾಯಾಲಯಗಳು
ಕಾಜಿ ನ್ಯಾಯಾಲಯಗಳು
ಜಿಲ್ಲಾ ನ್ಯಾಯಾಲಯಗಳು
ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಏಕೆಂದರೆ
ಸರ್ವರ ಸಮಾಜಿಕ ಅಭಿವೃದ್ಧಿಗಾಗಿ
ಬಡವರ ಶಿಕ್ಷಣಕ್ಕಾಗಿ
ರಾಮಕೃಷ್ಣ ಪರಮಹಂಸರ ಧ್ಯೇಯಾದಶ೯ಗಳನ್ನು ಪ್ರಚಾರ ಮಾಡಲು
ದಲಿತರ ಶಿಕ್ಷಣಕ್ಕಾಗಿ
ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ದೇಶಗಳು
ಭಾರತ ಮತ್ತು ಪಾಕಿಸ್ತಾನ
ಭಾರತ ಮತ್ತು ಬಾಂಗ್ಲಾದೇಶ
ಭಾರತ ಮತ್ತು ರಷ್ಯಾ
ಭಾರತ ಮತ್ತು ಚೀನಾ
ಒಂದು ಕೆಲಸವನ್ನು ಜನರು ತಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯ, ವಯಸ್ಸು, ವಿಶೇಷ ಪರಿಣಿತಿ, ಕೌಶಲ್ಯ ಹಾಗೂ ಲಿಂಗಭೇದಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದನ್ನು ಹೀಗೆ ಕರೆಯುತ್ತೇವೆ
ಶ್ರಮ ವಿಭಜನೆ
ವರ್ಗ ವ್ಯವಸ್ಥೆ
ಕರ್ಮ ಸಿದ್ದಾಂತ
ಜಾತಿ ವ್ಯವಸ್ಥೆ
ಕೊಲ್ಕತ್ತಾದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು
ರಾಜೀವಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಅಣ್ಣಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ನದಿಗಳು ಅವುಗಳ ಪಾತ್ರದ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿ ನದಿ ದಂಡಗಳ ಇಕ್ಕೆಲಗಳಲ್ಲಿ ಉಕ್ಕಿ ಹರಿಯುವುದನ್ನ ಹೀಗೆ ಕರೆಯುತ್ತಾರೆ
ಭೂಕುಸಿತ
ಚಂಡಮಾರುತ
ಪ್ರವಾಹ
ಕಡಲಕೊರೆತ
ಒಂದು ಚಟುವಟಿಕೆಯನ್ನು ಕೈಗೆತ್ತಿಕೊಳ್ಳುವವನನ್ನು ಹೀಗೆ ಕರೆಯುತ್ತಾರೆ
ವ್ಯಾಪಾರಿ
ಉದ್ಯಮಿ
ಗ್ರಾಹಕ
ಸಗಟು ವ್ಯಾಪಾರಿ
ಸರ್ಕಾರದ ಒಂದು ವರ್ಷದ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಹೀಗೆ ಕರೆಯುತ್ತಾರೆ
ಮುಂಗಡ ಪತ್ರ ಅಥವಾ ಆಯವ್ಯಯ ಅಥವಾ ಬಜೆಟ್
ತೆರಿಗೆ
ಟೆಲಿಶಾಪಿಂಗ್
ಸಾರ್ವಜನಿಕ ವೆಚ್ಚ
ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದವರು
ಡಾಲ್ ಹೌಸಿ
ವೆಲ್ಲೆಸ್ಲಿ
ರಾಬರ್ಟ್ ಕ್ಲೈವ್
ಕಾರ್ನ್ ವಾಲೀಸ್
ತೀನ್ ಮೂರ್ತಿ ಭವನ ಇರುವುದು
ಜೋಧಪುರ್
ಮೈಸೂರು
ಹೈದರಾಬಾದ್
ನವದೆಹಲಿ
ಪರ್ಯಾಯ ಪ್ರಸ್ಥಭೂಮಿಯಲ್ಲಿ ಅತಿ ಹೆಚ್ಚು ಪ್ರದೇಶವನ್ನು ಆವರಿಸಿರುವ ಮಣ್ಣು
ಕಪ್ಪು ಮಣ್ಣು
ಕೆಂಪು ಮಣ್ಣು
ಮೆಕ್ಕಲು ಮಣ್ಣು
ಮರುಭೂಮಿ ಮಣ್ಣು
ಭಾರತದ ಹಸಿರು ಕ್ರಾಂತಿಯ ಪಿತಾಮಹ
ವರ್ಗೀಸ್ ಕುರಿಯನ್
ಸರ್ ಎಮ್ ವಿಶ್ವೇಶ್ವರಯ್ಯ
ಡಾ. ಎಂ ಎಸ್ ಸ್ವಾಮಿನಾಥನ್
ನಾರ್ಮನ್ ಬೋರ್ಲಾಗ್
ದಕ್ಷಿಣ ಭಾರತದ ಅತ್ಯುನ್ನತ ಶಿಖರ
ಆರ್ಮಕೊಂಡ
ಅನೈಮುಡಿ
ಮಹೇಂದ್ರಗಿರಿ
ಗೌರಿಶಂಕರ
ಮಕ್ಕಳ ಸಹಾಯವಾಣಿ ಸಂಖ್ಯೆ
1089
1098
101
108
ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಉದ್ಘೋಷಣೆ ಮಾಡಿದ ವರ್ಷ
1947
1945
2007
1948
ಪ್ರತಿ ವರ್ಷ ವಿಶ್ವ ಗ್ರಾಹಕ ದಿನವನ್ನು ಆಚರಿಸುವುದು
ಮಾರ್ಚ್ 15
ಡಿಸೆಂಬರ್ 10
ಜುಲೈ 11
ಜೂನ್ 5
ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜೀನಾಮೆ ನೀಡಿ ಇಂಗ್ಲೆಂಡಿಗೆ ಮರಳಿದನು. ಏಕೆಂದರೆ
ಆತನ ಯುದ್ಧ ಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು. ಆದ್ದರಿಂದ ಮರಳಿದನು
ಆತನ ಕಾಲದಲ್ಲಿ ಭಾರತದಲ್ಲಿ ಹೆಚ್ಚು ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಆದ್ದರಿಂದ ಮರಳಿದನು
ಇಂಗ್ಲೆಂಡಿನಲ್ಲಿ ಕ್ರಾಂತಿ ಹೆಚ್ಚಾಗಿದ್ದರಿಂದ ಇಂಗ್ಲೆಂಡಿಗೆ ಮರಳಿದನು
ಭಾರತದಲ್ಲಿ ಆತನ ವಿರುದ್ಧ ದಂಗೆ ಆಗುತ್ತಿತ್ತು. ಆದ್ದರಿಂದ ಮರಳಿದನು
ಮೊದಲ ಮಹಾಯುದ್ಧಕ್ಕೆ ತಕ್ಷಣದ ಕಾರಣ
ಜರ್ಮನಿಯಿಂದ ಪೋಲೆಂಡ್ ಮೇಲೆ ದಾಳಿ
ರಷ್ಯಾದಿಂದ ಜಪಾನ್ ಮೇಲೆ ದಾಳಿ
ಆರ್ಕ್ಹಡ್ಯೂಕ್ ಫ್ರಾನ್ಸಿಸ್ ಫರ್ಡಿನೆಂಡನ ಹತ್ಯೆ
ಅಅಮೆರಿಕಾದಿಂದ ಜಪಾನ್ ಮೇಲೆ ದಾಳಿ
ವಿಶ್ವಸಂಸ್ಥೆಯ ಸಚಿವ ಸಂಪುಟ ಎಂದು ಕರೆಯಲ್ಪಡುವ ಅಂಗಸಂಸ್ಥೆ
ಸಾಮಾನ್ಯ ಸಭೆ
ಭದ್ರತಾ ಸಮಿತಿ
ದತ್ತಿ ಸಮಿತಿ
ಸಚಿವಾಲಯ
ಜನರನ್ನು ಆದಾಯ, ಶಿಕ್ಷಣ, ಜಾತಿ, ಬಣ್ಣ, ಲಿಂಗ, ಉದ್ಯೋಗ ಮೊದಲಾದವುಗಳ ಆಧಾರದ ಮೇಲೆ ಮೇಲು ಕೀಳು ಎಂದು ವಿಂಗಡಿಸುವುದನ್ನು ಹೀಗೆ ಕರೆಯುತ್ತಾರೆ
ಜಾತಿ ವ್ಯವಸ್ಥೆ
ಶ್ರಮವಿಭಜನೆ
ವರ್ಣವ್ಯವಸ್ಥೆ
ಸಾಮಾಜಿಕ ಸ್ತರವಿನ್ಯಾಸ
ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಏಕೆಂದರೆ
ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸಲು
ಬಾಲಕಾರ್ಮಿಕ ಮಕ್ಕಳಿಗೆ ಶಿಕ್ಷಣ ಒದಗಿಸಲು
ಬಾಲಕಾರ್ಮಿಕ ಮಕ್ಕಳಿಗೆ ರಕ್ಷಣೆ ಒದಗಿಸಲು
ಬಾಲಕಾರ್ಮಿಕ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲು
ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರವು ತನ್ನ ಆದಾಯ, ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅನುಸರಿಸುವ ನೀತಿಯನ್ನು ಹೀಗೆ ಕರೆಯುವರು
ಸಾರ್ವಜನಿಕ ನೀತಿ
ಕೋಶಿಯ ನೀತಿ (ವಿತ್ತೀಯ ನೀತಿ)
ಕಂದಾಯ ನೀತಿ
ಯೋಜನಾ ನೀತಿ
ಟೆಲಿಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಏಕೆಂದರೆ
ವಸ್ತುಗಳನ್ನು ನೇರವಾಗಿ ಕೊಳ್ಳುವುದರಿಂದ
ವಸ್ತುಗಳನ್ನು ಸಗಟು ವ್ಯಾಪಾರಿಗಳಿಂದ ಕೊಳ್ಳುವುದರಿಂದ
ವಸ್ತುಗಳನ್ನು ಚಿಲ್ಲರೆ ವ್ಯಾಪಾರಿಗಳಿಂದ ಕೊಳ್ಳುವುದರಿಂದ
ಮನೆಯಲ್ಲಿಯೇ ಕುಳಿತು ವಸ್ತುಗಳನ್ನು ಕೊಳ್ಳುವುದರಿಂದ
ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು
ವಾರನ್ ಹೇಸ್ಟಿಂಗ್ಸ್
ಕಾರ್ನ್ ವಾಲೀಸ್
ವೆಲ್ಲೆಸ್ಲಿ
ಡಾಲ್ ಹೌಸಿ
ಎರಡನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ಮುಖ್ಯ ಕಾರಣ
ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು
ಬ್ರಿಟಿಷರು ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು
ಬ್ರಿಟಿಷರು ಕಾರವಾರ ಮತ್ತು ಕೊಯಮುತ್ತೂರುಗಳನ್ನು ವಶಪಡಿಸಿಕೊಂಡಿದ್ದು
ಬ್ರಿಟಿಷರು ಮಂಗಳೂರು ಒಪ್ಪಂದದ ಶರತ್ತುಗಳನ್ನು ಉಲ್ಲಂಘನೆ ಮಾಡಿದ್ದು
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಚೇರಿ ಇರುವುದು
ನ್ಯೂಯಾರ್ಕ್
ಪ್ಯಾರಿಸ್
ರೋಮ್
ಜಿನೇವಾ
ಭಾರತದ ಚಹಾದ ಬಂದರು
ವಿಶಾಖಪಟ್ಟಣ
ಮರ್ಮಗೋವ
ಕೊಲ್ಕತ್ತಾ
ಮುಂಬೈ
ಸಂವಿಧಾನದ 17ನೇ ವಿಧಿಯ ಮಹತ್ವ
ಬಾಲಕಾರ್ಮಿಕರ ನಿಷೇಧ
ಅಸ್ಪೃಶ್ಯತೆ ನಿವಾರಣೆ
ಅನಕ್ಷರತೆ ನಿವಾರಣೆ
ವರದಕ್ಷಿಣೆಯ ನಿವಾರಣೆ
ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದ್ದರು
ಬಾಬಾ ಆಮ್ಟೆ ಮತ್ತು ಮೇಧಾ ಪಾಟ್ಕರ್
ಸುಂದರ್ ಲಾಲ್ ಬಹುಗುಣ ಮತ್ತು ಚಂಡಿ ಪ್ರಸಾದ್ ಭಟ್
ಡಾ. ಶಿವರಾಂ ಕಾರಂತ ಮತ್ತು ಕುಸುಮಾ ಭಟ್
ಕರ್ವೆ ಮತ್ತು ಶಾಮ್ ಜಿ ಕೃಷ್ಣವರ್ಮ
ರಮೇಶ ಎಂಬ ವ್ಯಕ್ತಿಗೆ 5 ವರ್ಷದ ಮಗಳಿದ್ದಾಳೆ ಭವಿಷ್ಯದಲ್ಲಿ ಅವಳ ವಿವಾಹಕ್ಕೆ ಹಣವನ್ನು ಉಳಿತಾಯ ಮಾಡಲು ನಿರ್ಧರಿಸುತ್ತಾನೆ. ಹಾಗಾದರೆ ಅವರು ತೆರೆಯಬೇಕಾದ ಸೂಕ್ತವಾದ ಬ್ಯಾಂಕ್ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಸತ್ಯಾರ್ಥ ಪ್ರಕಾಶ ಎಂಬ ಕೃತಿಯನ್ನು ರಚಿಸಿದವರು
ರಾಜಾರಾಮ್ ಮೋಹನ್ ರಾಯ್
ಆತ್ಮರಾಮ್ ಪಾಂಡುರಂಗ
ದಯಾನಂದ ಸರಸ್ವತಿ
ಜ್ಯೋತಿಬಾಪುಲೆ
ಇಲ್ಬರ್ಟ್ ಮಸೂದೆಯ ಮೂಲ ಉದ್ದೇಶ
ಬಂಗಾಳ ವಿಭಜನೆ
ಏಕರೂಪ ಕಾನೂನು ವ್ಯವಸ್ಥೆ ಜಾರಿಗೆ ತರುವುದು
ಶಸ್ತ್ರಾಸ್ತ್ರಗಳ ಕಾಯ್ದೆ ನಿಯಂತ್ರಣ
ಪತ್ರಿಕಾ ಸ್ವಾತಂತ್ರ್ಯ ಜಾರಿ
ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತ ಹಂತವಾಗಿ ಇಲ್ಲವಾಗಿಸುವ ಪ್ರಕ್ರಿಯೆಯನ್ನು ಹೀಗೆ ಕರೆಯುವರು
ನಿಶ್ಯಸ್ತ್ರೀಕರಣ
ಸಾಮ್ರಾಜ್ಯಶಾಹಿತ್ವ
ವಸಾಹತುಶಾಹಿತ್ವ
ಅಲಿಪ್ತ ನೀತಿ
ಪೆಟ್ರೋಲಿಯಂ ಅನ್ನು ದ್ರವರೂಪದ ಚಿನ್ನ ಎಂದು ಕರೆಯಲಾಗಿದೆ. ಏಕೆಂದರೆ
ಅದು ಹೆಚ್ಚು ಬೆಲೆಯನ್ನು ಹೊಂದಿರುವುದರಿಂದ
ಯುದ್ಧ ಮತ್ತು ಶಾಂತಿಕಾಲದಲ್ಲಿ ಉಪಯುಕ್ತವಾಗಿರುವುದರಿಂದ
ಅಧಿಕ ಜನರು ಬಳಕೆ ಮಾಡುವುದರಿಂದ
ಅದು ಹೆಚ್ಚು ಮೌಲ್ಯವನ್ನು ಹೊಂದಿರುವುದರಿಂದ
ಹಳ್ಳಿಯ ಆಡಳಿತ ಅಧಿಕಾರ ಮತ್ತು ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಯನ್ನು ಹಳ್ಳಿಯ ಜನರಿಗೆ ವಹಿಸಿಕೊಡುವುದನ್ನು ಹೀಗೆ ಕರೆಯುತ್ತಾರೆ
ಅಧಿಕಾರ ವಿಕೇಂದ್ರೀಕರಣ
ಗ್ರಾಮೀಣಾಭಿವೃದ್ಧಿ
ಪ್ರಜಾಪ್ರಭುತ್ವ ವ್ಯವಸ್ಥೆ
ಅಧಿಕಾರ ಕೇಂದ್ರೀಕರಣ
ಜಿಲ್ಲಾ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಏಕೆಂದರೆ
ನಗರ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪಿಸಲು
ದೇಶದಲ್ಲಿ ಕೈಗಾರಿಕೆ ಹೆಚ್ಚು ಸ್ಥಾಪಿಸಲು
ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪಿಸಲು
ಕೈಗಾರಿಕಾ ಪ್ರದೇಶಗಳನ್ನು ನಿಯಂತ್ರಿಸಲು
ಮಳೆ ನೀರು ಕೊಯ್ಲು ಇಂದು ಅತ್ಯವಶ್ಯಕವಾಗಿದೆ. ಏಕೆಂದರೆ
ಬಾವಿ ನೀರನ್ನು ಸಂಗ್ರಹಿಸಲು
ಕಾಲುವೆ ನೀರನ್ನು ಸಂಗ್ರಹಿಸಲು
ಜಲಾಶಯಗಳ ನೀರನ್ನು ಸಂಗ್ರಹಿಸಲು
ಮಳೆ ನೀರನ್ನು ಸಂಗ್ರಹಿಸಿ, ಬಳಕೆ ಮಾಡಲು
ಕೇಂದ್ರದಲ್ಲಿ ದ್ವಿ ಸರ್ಕಾರವನ್ನು ಸ್ಥಾಪಿಸಲು ಅವಕಾಶ ಮಾಡಿದ ಕಾಯ್ದೆ
1773ರ ರೆಗ್ಯುಲೆಟಿಂಗ್ ಕಾಯ್ದೆ
1909ರ ಭಾರತೀಯ ಪರಿಷತ್ ಕಾಯಿದೆ
1919ರ ಭಾರತ ಸರ್ಕಾರದ ಕಾಯ್ದೆ
1935 ರ ಭಾರತ ಸರ್ಕಾರದ ಕಾಯ್ದೆ
ಇವುಗಳಲ್ಲಿ ಉಳಿದವುಗಳಿಗಿಂತ ಭಿನ್ನವಾಗಿರುವುದು
ಆಕ್ಸಿಸ್
ಕದನ ಬಾಂಧವ್ಯತ್ರಯ
ಕದನ ಸೌಹಾರ್ದತ್ರಯ
ಬೂದು ಅಂಗಿದಳ
ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಇರುವ ನಗರ
ಪ್ಯಾರಿಸ್
ವಾಷಿಂಗ್ಟನ್ ಡಿ.ಸಿ.
ನ್ಯೂಯಾರ್ಕ್
ರೋಮ್
ಸ್ವ-ಸಹಾಯ ಸಮೂಹಗಳ ರಚನೆ ಉದ್ದೇಶ
ನಗರಾಭಿವೃದ್ಧಿ
ಮಹಿಳಾ ಸಬಲೀಕರಣ
ಕೈಗಾರಿಕೀಕರಣ
ವಿದೇಶಿ ವ್ಯಾಪಾರಕ್ಕೆ ಉತ್ತೇಜನ
ಭಾರತದಲ್ಲಿ ಅತ್ಯಂತ ಎತ್ತರವಾದ ವಿವಿಧೋದ್ದೇಶ ನದಿ ಕಣಿವೆ ಯೋಜನೆ
ದಾಮೋದರ ನದಿ ಕಣಿವೆ ಯೋಜನೆ
ತುಂಗಭದ್ರಾ ಯೋಜನೆ
ಕೋಸಿ ಯೋಜನೆ
ಭಾಕ್ರಾನಂಗಲ್ ಯೋಜನೆ
ಭಾರತದಿಂದ ಅಭ್ರಕದ ರಫ್ತು ಪ್ರಮಾಣ ಕಡಿಮೆಯಾಗುತ್ತಿರಲು ಕಾರಣ
ಅಬ್ರಕದ ನಿಕ್ಷೇಪಗಳು ಖಾಲಿಯಾಗುತ್ತಿವೆ
ಚೀನಾ ಅತ್ಯಂತ ಹೆಚ್ಚು ಅಬ್ರಕ ತಯಾರಿಸುತ್ತಿದೆ
ಅಬ್ರಕದ ಬದಲಿ ವಸ್ತುಗಳು ದೊರೆಯುತ್ತಿವೆ
ಅಬ್ರಕದ ಬೆಲೆ ದುಬಾರಿಯಾಗುತ್ತಿದೆ
ಗಿರೀಶನು ಖರೀದಿಯಲ್ಲಿ ತನಗಾದ ಅನ್ಯಾಯದ ವಿರುದ್ಧ ರಾಜ್ಯ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿರುವನು. ಅವನಿಗಾದ ಅನ್ಯಾಯದ ಮೌಲ್ಯ
ಒಂದು ಕೋಟಿಗಳಿಗಿಂತ ಕಡಿಮೆ
ಒಂದು ಕೋಟಿಗಿಂತ ಹೆಚ್ಚು, 10 ಕೋಟಿ ಗಿಂತ ಕಡಿಮೆ
10 ಕೋಟಿಗಿಂತ ಹೆಚ್ಚು
ಒಂದು ಲಕ್ಷದಿಂದ 10 ಲಕ್ಷ
ಪ್ರಥಮ ಆಂಗ್ಲೋ - ಮರಾಠ ಯುದ್ಧದ ಕೊನೆಯಲ್ಲಿ ಸಹಿ ಹಾಕಲಾದ ಒಪ್ಪಂದ
ಬೆಸ್ಸಿನ್ ಒಪ್ಪಂದ
ಮಂಗಳೂರು ಒಪ್ಪಂದ
ಪಾಂಡಿಚೇರಿ ಒಪ್ಪಂದ
ಸಾಲ್ಬಾಯಿ ಒಪ್ಪಂದ
1953ರಲ್ಲಿ ಫಜಲ್ ಅಲಿರವರ ಅಧ್ಯಕ್ಷತೆಯಲ್ಲಿ ಆಯೋಗವು ರಚನೆಯಾಯಿತು. ಏಕೆಂದರೆ
ಭಾಷಾವಾರು ಪ್ರಾಂತ್ಯಗಳ ರಚನೆ
ಬಂಗಾಳದ ವಿಭಜನೆಯನ್ನು ವಿರೋಧಿಸಲು
ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ವಿರೋಧಿಸಲು
ಸಂಸ್ಥಾನಗಳ ವಿಲೀನೀಕರಣಕ್ಕಾಗಿ
ಮೌನ ಕಣಿವೆ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು. ಏಕೆಂದರೆ
ಪರಿಸರ ಸಂರಕ್ಷಣೆ
ಅರಣ್ಯ ರಕ್ಷಣೆ
ಜೀವ ಸಂಕಲುಗಳ ಸಂರಕ್ಷಣೆ
ಕಾರ್ಮಿಕರ ಹಿತ ಕಾಪಾಡುವುದು
ಶಿಕ್ಷಣ ಹಕ್ಕು ಕಾಯ್ದೆಯನ್ನು (2009) ಜಾರಿಗೆ ತರಲಾಗಿದೆ. ಏಕೆಂದರೆ
6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಕಡ್ಡಾಯಗೊಳಿಸಲು
ಅಲ್ಪಸಂಖ್ಯಾತರಿಗೆ ಶಿಕ್ಷಣ ನೀಡಲು
ಅಂಗವಿಕಲರಿಗೆ ಕಡ್ಡಾಯ ಶಿಕ್ಷಣ ನೀಡಲು
ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ನೀಡಲು
ಸಾಂದ್ರ ಬೇಸಾಯದ ಒಂದು ಉಪಯೋಗ
ಜೀವನಾಧಾರದ ಬೆಳೆ ಬೆಳೆಯಲು ಸಹಾಯಕ
ವ್ಯಾಪಾರದ ಉದ್ದೇಶಕ್ಕಾಗಿ ಸಹಾಯಕ
ತೋಟಗಾರಿಕಾ ಬೇಸಾಯಕ
ಅಧಿಕ ಜನಸಂಖ್ಯೆಯುಳ್ಳ ಮತ್ತು ಫಲವತ್ತಾದ ಪ್ರದೇಶಗಳಿಗೆ ಉಪಯುಕ್ತವಾಗಿದೆ
ಭಾರತದಲ್ಲಿ ಹಣಕಾಸು ವರ್ಷದ ಅವಧಿ
ಜನವರಿ 1ರಿಂದ ಡಿಸೆಂಬರ್ 31
ಜನವರಿ 1 ರಿಂದ ಏಪ್ರಿಲ್ 31
ಏಪ್ರಿಲ್ 1ರಿಂದ ಮಾರ್ಚ್ 31
ಏಪ್ರಿಲ್ 1ರಿಂದ ಡಿಸೆಂಬರ್ 31
ಭಾರತ ಮತ್ತು ಯುರೋಪ್ ನಡುವೆ ಮರುವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಮೊದಲ ಯುರೋಪಿಯನ್ನರು
ಫ್ರೆಂಚರು
ಪೋರ್ಚುಗೀಸರು
ಡಚ್ಚರು
ಬ್ರಿಟಿಷರು
ಆರ್ಯ ಸಮಾಜದ ಸ್ಥಾಪಕರು
ರಾಜಾರಾಮ್ ಮೋಹನ್ ರಾಯ್
ಸ್ವಾಮಿ ವಿವೇಕಾನಂದರು
ಜ್ಯೋತಿಬಾಪುಲೆ
ದಯಾನಂದ ಸರಸ್ವತಿ
ಸಾರ್ವಜನಿಕ ಆಡಳಿತದ ಪಿತಾಮಹ
ಲೂಥರ್ ಗುಲಿಕ್
ಎಲ್ ಡಿ ವೈಟ್
ವುಡ್ರೋವಿಲ್ಸನ್
ಹರ್ಬರ್ಟ್ ಎ ಸೈಮನ್
ಅಸ್ಪೃಶ್ಯತೆಯು ಹಿಂದೂ ಸಮಾಜಕ್ಕೆ ಅಂಟಿದ ಕಳಂಕ ಎಂದು ಹೇಳಿದವರು
ಅಂಬೇಡ್ಕರ್
ಗಾಂಧೀಜಿ
ಬಸವೇಶ್ವರರು
ಸ್ವಾಮಿ ವಿವೇಕಾನಂದರು
ಕೆಳಗಿನವುಗಳಲ್ಲಿ ಭಾರತದ ಪ್ರಸಿದ್ಧ ಗಿರಿಧಾಮ
ಚಕ್ರಾತ
ನಾಗತಿಬ್ಬ
ಧವಳಗಿರಿ
ಪೀರಪಂಜಾಲ್
ತುಂಗಭದ್ರ ಅಣೆಕಟ್ಟು ಉಂಟುಮಾಡುವ ಜಲಾಶಯ
ಪಂಪ ಸಾಗರ
ರಾಮಪಾದ ಸಾಗರ
ಬಸವ ಸಾಗರ
ಗೋವಿಂದ ಸಾಗರ
ನೀತಿ ಆಯೋಗದ ನೇತೃತ್ವವನ್ನು ವಹಿಸಿದವರು
ರಾಷ್ಟ್ರಪತಿ
ಲೋಕಸಭೆಯ ಅಧ್ಯಕ್ಷರು
ಉಪರಾಷ್ಟ್ರಪತಿ
ಪ್ರಧಾನ ಮಂತ್ರಿ
ನವೀನನು 10 ವರ್ಷಗಳ ಬಳಿಕ ನಿವೇಶನವನ್ನು ಕೊಳ್ಳಲು ಪ್ರತಿ ತಿಂಗಳು ಹಣವನ್ನು ಉಳಿತಾಯ ಮಾಡಲು ಬಯಸುತ್ತಾನೆ. ಆತನು ತೆರೆಯಬೇಕಾದ ಸೂಕ್ತ ಬ್ಯಾಂಕ್ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಸರ್ ಸೈಯದ್ ಅಹಮದ್ ಖಾನರು ಆಂಗ್ಲೋ ಓರಿಯಂಟಲ್ ಕಾಲೇಜನ್ನು ಸ್ಥಾಪಿಸಿದರು. ಏಕೆಂದರೆ
ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣದ ಅರಿವನ್ನು ಮೂಡಿಸಲು
ಹಿಂದೂ ಮತ್ತು ಮುಸ್ಲಿಮರಲ್ಲಿ ಭಾವೈಕ್ಯತೆ ಮೂಡಿಸಲು
ಮುಸ್ಲಿಮರಿಗೆ ಸಂಸ್ಕೃತ ಭಾಷೆ ಕಲಿಯಲು
ಹಿಂದೂ ಮತ್ತು ಮುಸ್ಲಿಮರಿಗೆ ಸಂಸ್ಕೃತ ಕಲಿಯಲು
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವವರು
ಪ್ರಧಾನ ಮಂತ್ರಿ
ಉಪರಾಷ್ಟ್ರಪತಿ
ರಾಷ್ಟ್ರಪತಿ
ಸುಪ್ರೀಂ ಕೋರ್ಟಿನ ನ್ಯಾಯಾಧೀಶರು
ಒಂದು ಕೆಲಸವನ್ನು ಜನರು ತಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯ, ವಯಸ್ಸು, ವಿಶೇಷ ಪರಿಣಿತಿ, ಕೌಶಲ್ಯ ಹಾಗೂ ಲಿಂಗಭೇದಗಳ ಆಧಾರದ ಮೇಲೆ ಹಂಚಿಕೊಂಡು ಮಾಡುವುದನ್ನು ಹೀಗೆ ಕರೆಯುತ್ತಾರೆ
ವಿಶೇಷ ಪರಿಣಿತಿ
ಕೂಲಿ ಸಹಿತ ದುಡಿಮೆ
ಶ್ರಮ ವಿಭಜನೆ
ಸ್ತರವಿನ್ಯಾಸ
ಮಹಾ ಹಿಮಾಲಯವನ್ನು ಹಿಮಾದ್ರಿ ಎಂದು ಕರೆಯುತ್ತಾರೆ. ಏಕೆಂದರೆ
ಅದು ಅತ್ಯಧಿಕ ಎತ್ತರವಾಗಿದೆ
ಅದು ಹಲವು ನದಿಗಳ ಉಗಮ ಸ್ಥಾನವಾಗಿದೆ
ಸಂಪೂರ್ಣ ಹಿಮದಿಂದ ಆವೃತವಾಗಿದೆ
ಅಲ್ಲಿ ಹಿಮ ಹೆಚ್ಚು ಕರುಗುತ್ತದೆ
ಸರ್ ಎಂ ವಿಶ್ವೇಶ್ವರಯ್ಯನವರನ್ನು ಭಾರತದ ಆರ್ಥಿಕ ಯೋಜನೆ ಪಿತಾಮಹ ಎಂದು ಕರೆಯಲಾಗುತ್ತದೆ. ಏಕೆಂದರೆ
ಭಾರತಕ್ಕೆ ಯೋಜಿತ ಅರ್ಥ ವ್ಯವಸ್ಥೆ ಕೃತಿ ಬರೆದಿದ್ದರಿಂದ
ಭಾರತಕ್ಕೆ ಯೋಜನೆಗಳ ಅಗತ್ಯತೆಯನ್ನು ಒತ್ತಿ ಹೇಳಿದ್ದರಿಂದ
ಭಾರತದಲ್ಲಿ ಹಸಿರು ಕ್ರಾಂತಿ ಜಾರಿಗೆ ತಂದಿದ್ದರಿಂದ
ಭಾರತದಲ್ಲಿ ಉತ್ತಮ ಇಂಜಿನಿಯರಿಂಗ್ ಕಾರ್ಯನಿರ್ವಹಿಸಿದ್ದರಿಂದ
ಭಾರತದಲ್ಲಿ ಬ್ಯಾಂಕನ್ನು ಬ್ಯಾಂಕುಗಳ ಬ್ಯಾಂಕ್ ಎಂದು ಈ ಬ್ಯಾಂಕನ್ನು ಕರೆಯಲಾಗುತ್ತಿದೆ
ಭಾರತೀಯ ಸ್ಟೇಟ್ ಬ್ಯಾಂಕ್
ಭಾರತೀಯ ರಿಸರ್ವ ಬ್ಯಾಂಕ್
ಬ್ಯಾಂಕ್ ಆಫ್ ಹೈದರಾಬಾದ್
ಬ್ಯಾಂಕ್ ಆಫ್ ಬೆಂಗಳೂರು
ಮೂರನೇ ಕಾರ್ನಾಟಿಕ್ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ
ಪ್ಯಾರಿಸ್ ಒಪ್ಪಂದ
ಎಕ್ಸ್ ಲಾ ಚಾಪೆಲ್ ಒಪ್ಪಂದ
ಪಾಂಡಿಚೇರಿ ಒಪ್ಪಂದ
ಮದ್ರಾಸ್ ಒಪ್ಪಂದ
ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ಎಡ್ಮಂಡ್ ಬರ್ಕ್ ಟೀಕಿಸಿದ್ದು ಹೀಗೆ
ಪರೋಕ್ಷ ತೆರಿಗೆ
ಅಪರಾಧ ತೆರಿಗೆ
ನೇರ ತೆರಿಗೆ
ಕಂಪನಿ ತೆರಿಗೆ
ಹಸಿವೆಯಿಂದ ಜಾಗತಿಕ ಸಮುದಾಯವನ್ನು ವಿಮುಕ್ತಿ ಗೊಳಿಸುವ ಉದ್ದೇಶದಿಂದ ರಚನೆಗೊಂಡ ವಿಶ್ವಸಂಸ್ಥೆಯ ಸಂಘ-ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ
ಆಹಾರ ಮತ್ತು ಕೃಷಿ ಸಂಸ್ಥೆ
ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ
ವಿಶ್ವ ವ್ಯಾಪಾರ ಸಂಘ
ನಮ್ಮ ಸಂವಿಧಾನದ 24 ನೇ ವಿಧಿಯು ನಿಷೇಧಿಸಿರುವುದು
ಬಾಲ್ಯ ವಿವಾಹ
ಹೆಣ್ಣು ಭ್ರೂಣಹತ್ಯೆ
ಬಾಲಕಾರ್ಮಿಕತೆ
ಹೆಣ್ಣು ಶಿಶುಹತ್ಯೆ
ಮಹಾನದಿಯನ್ನು ಇಂದು ಒಡಿಶಾದ ಕಣ್ಣೀರಿನ ನದಿ ಎಂದು ಕರೆಯಲಾಗದು. ಕಾರಣ
ಭಾಕ್ರಾನಂಗಲ್ ಯೋಜನೆಯು ಪ್ರವಾಹವನ್ನು ನಿಯಂತ್ರಿಸಿದೆ
ದಾಮೋದರ ನದಿ ಕಣಿವೆ ಯೋಜನೆಯು ಪ್ರವಾಹವನ್ನು ನಿಯಂತ್ರಿಸಿದೆ
ಹಿರಾಕುಡ್ ಯೋಜನೆಯು ಪ್ರವಾಹವನ್ನು ನಿಯಂತ್ರಿಸಿದೆ
ಕೋಸಿ ಯೋಜನೆ ಪ್ರವಾಹವನ್ನು ನಿಯಂತ್ರಿಸಿದೆ
ಇಂದಿರಾ ಆವಾಸ್ ಯೋಜನೆಯ ಪ್ರಮುಖ ಉದ್ದೇಶ
ಉದ್ಯೋಗ ಒದಗಿಸುವುದು
ವಸತಿ ನಿರ್ಮಿಸಿಕೊಡುವುದು
ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸುವುದು
ಸಾಕ್ಷರತೆಯನ್ನು ಹೆಚ್ಚಿಸುವುದು
ಭಾನು ಎಂಬುವರು ಭವಿಷ್ಯದಲ್ಲಿ ತನ್ನ ಮಗಳ ಮದುವೆಗಾಗಿ ಇಂದಿನಿಂದ ಹಣ ಉಳಿತಾಯ ಮಾಡಲು ಸೂಕ್ತವಾದ ಬ್ಯಾಂಕ್ ಖಾತೆ
ಉಳಿತಾಯ ಖಾತೆ
ನಿಶ್ಚಿತ ಠೇವಣಿ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು
ಕಾರ್ನ್ಸ್ ವಾಲಿಸ್
ಡಾಲ್ ಹೌಸಿ
ವೆಲ್ಲೆಸ್ಲಿ
ವಾರನ್ ಹೇಸ್ಟಿಂಗ್
ರಾಜಾರಾಮ್ ಮೋಹನ್ ರಾಯ್ ರವರು ಪ್ರಾರಂಭಿಸಿದ ಪತ್ರಿಕೆ
ನ್ಯೂ ಇಂಡಿಯಾ
ಗುಲಾಮಗಿರಿ
ಸಂವಾದ ಕೌಮುದಿ
ಸತ್ಯಾರ್ಥ ಪ್ರಕಾಶ
ನಿಶ್ಯಸ್ತ್ರೀಕರಣ ಪ್ರಚಲಿತ ಜಗತ್ತಿನ ಅವಶ್ಯಕತೆಯಾಗಿದೆ. ಏಕೆಂದರೆ
ಮೂರನೇ ಮಹಾಯುದ್ಧ ಜರುಗಬಹುದೆಂಬ ಭೀತಿ
ಶಸ್ತ್ರಾಸ್ತ್ರಗಳ ಬಳಕೆ ಹೆಚ್ಚಾಗಿದೆ
ಭಾರತ ಶಾಂತಿ ಪ್ರಿಯ ರಾಷ್ಟ್ರ ಆಗಿರುವುದರಿಂದ
ವಸುದೈವ ಕುಟುಂಬಕಂ ಚಿಂತನೆಗೆ ವಿರೋಧವಾಗಿರುವುದರಿಂದ
ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯದ ಬಗ್ಗೆ ಹೊಂದಿರಬಹುದಾದ ಪೂರ್ವ ನಿರ್ದಾರಿತ ಮನೋಭಾವವನ್ನು ಹೀಗೆ ಕರೆಯುತ್ತಾರೆ
ಶ್ರಮ ವಿಭಜನೆ
ಅಸ್ಪೃಶ್ಯತೆ
ಜಾತಿ ವ್ಯವಸ್ಥೆ
ಪೂರ್ವಾಗ್ರಹ
ಕೂಲಿರಹಿತ ಕೆಲಸಗಾರರಿಗೆ ಒಂದು ಉದಾಹರಣೆ
ಗೃಹಿಣಿ
ದಾದಿ
ರೈತ
ಬೀದಿ ಕಾರ್ಮಿಕ
ಉತ್ತರ ಭಾರತದ ಮೈದಾನವನ್ನು ಸಂಚನ ಮೈದಾನ ಎಂದು ಕರೆಯುತ್ತಾರೆ. ಏಕೆಂದರೆ
ಅತ್ಯಂತ ವಿಶಾಲವಾಗಿರುವುದರಿಂದ
ಮೆಕ್ಕಲು ಮಣ್ಣಿನಿಂದ ಆವೃತವಾಗಿರುವುದರಿಂದ
ನದಿಗಳು ಹೊತ್ತು ತಂದು ಸಂಚಯಿಸಿದ ಮೆಕ್ಕಲು ಮಣ್ಣಿನಿಂದ ನಿರ್ಮಾಣವಾಗಿರುವುದರಿಂದ
ಅತ್ಯಂತ ಎತ್ತರವಾದ ಪ್ರದೇಶದಲ್ಲಿ ಇರುವುದರಿಂದ
ಸುವರ್ಣ ಗ್ರಾಮದ ಯೋಜನೆಯ ಮುಖ್ಯ ಉದ್ದೇಶ
ವಸತಿ ಒದಗಿಸಲು
ಮೂಲಸೌಕರ್ಯ ಒದಗಿಸುವುದು
ನಗರಾಭಿವೃದ್ಧಿ ಸಾಧಿಸಲು
ಭೂ ರಹಿತ ಕಾರ್ಮಿಕರಿಗೆ ಕೂಲಿ ಒದಗಿಸಲು
ಹರೀಶನು ಐವತ್ತು ಸಾವಿರ ರೂಪಾಯಿಯ ಒಂದು ಹೊಸ ಲ್ಯಾಪ್ಟಾಪ್ ಕೊಳ್ಳುತ್ತಾನೆ. ಆದರೆ ಅದು ಒಂದು ವಾರದಲ್ಲಿ ಕೆಟ್ಟು ಹೋಗುತ್ತದೆ. ಆತನ ಅಹವಾಲನ್ನು ಲ್ಯಾಪ್ ಟಾಪ್ ಪನಿಯವರು ಮನ್ನಿಸಲಿಲ್ಲ. ಹರೀಶನು ಈ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು
ಜಿಲ್ಲಾ ಗ್ರಾಹಕರ ವೇದಿಕೆ
ರಾಜ್ಯ ಗ್ರಾಹಕ ಆಯೋಗ
ರಾಷ್ಟ್ರೀಯ ಗ್ರಾಹಕ ಆಯೋಗ
ಅಂತರಾಷ್ಟ್ರೀಯ ಗ್ರಾಹಕ ಆಯೋಗ
