NEW
Font size
WorksheetsMCQ 1 and 2
Total questions: 15
Worksheet time: 8mins
1. ವಿಭವಾಂತರದ SI ಏಕಮಾನ
a. ವೋಲ್ಟ್
b. ಆಂಫೀರ್
c. ಕೂಲಮ್
d. ಓಮ್ ಮೀಟರ್
2. ಮಸೂರದ ಸಂಗಮದೂರದ ವಿಲೋಮವು
a. ಮಸೂರದ ಸಾಮರ್ಥ್ಯವಾಗಿದೆ
b. ಮಸೂರದ ವಕ್ರತಾತ್ರಿಜ್ಯವಾಗಿದೆ
c. ವಸ್ತುದೂರ ಮತ್ತು ಪ್ರತಿಬಿಂಬದ ದೂರಗಳ ಮೊತ್ತಕ್ಕೆ ಸಮ
d. ವಸ್ತು ದೂರ ಮತ್ತು ಪ್ರತಿಬಿಂಬದ ದೂರಗಳ ವ್ಯತ್ಯಾಸಕ್ಕೆ ಸಮ
3. ಮೇಲಿನ ಚಿತ್ರದಲ್ಲಿ ವ್ಯಕ್ತಗೊಂಡಿರುವ ಪ್ರಯೋಗವನ್ನು ವಿಶ್ಲೇಷಿಸಿ.Y ದ್ರಾವಣವು KI ದ್ರಾವಣದೊಂದಿಗೆ ವರ್ತಿಸಿ ನೀಡುವ ಹಳದಿ ಬಣ್ಣದ ಪ್ರಕ್ಷೇಪ ಮತ್ತು ಇಲ್ಲಿ ಉಂಟಾಗುವ ಮತ್ತೊಂದು ಉತ್ಪನ್ನದ ಅಣುಸೂತ್ರಗಳು ಕ್ರಮವಾಗಿ
a. Pb(NO3)2 ಮತ್ತು KNO3
b. PbI2 ಮತ್ತು KNO3
c. Pb(NO3)2 ಮತ್ತು KI
d. Pb(NO3)2 ಮತ್ತು K2SO4
4. ಹಿತ್ತಾಳೆಯಲ್ಲಿರುವ ಘಟಕಲೋಹಗಳು
a. ತಾಮ್ರ ಮತ್ತು ಸತು
b. ತಾಮ್ರ ಮತ್ತು ತವರ
c. ಅಲ್ಯೂಮಿನಿಯಂ ಮತ್ತು ತವರ
d. ಸತು ಮತ್ತು ಅಲ್ಯೂಮಿನಿಯಂ
5. ದೊಡ್ಡ ಅಣುಗಳನ್ನು ಉಂಟುಮಾಡಲು ಕಾರಣವಾಗುವ ಕಾರ್ಬನ್ ನ ಗುಣ
a. ಚತುರ್ ವೇಲೆನ್ಸಿ
b. ಕೆಟನೀಕರಣ
c. ದಹ್ಯಶೀಲತೆ
d. ಬಹುರೂಪತೆ
6. ಪ್ರೋಟೀನನ್ನು ಜೀರ್ಣಿಸಲು ಮೇದೋಜೀರಕ ಗ್ರಂಥಿಯಿಂದ ಸ್ರವಿಕೆಯಾಗುವ ಕಿಣ್ವ
a. ಅಮೈಲೇಸ್
b. ಪೆಪ್ಸಿನ್
c. ಟ್ರಿಪ್ಸಿನ್
d. ಲೈಪೇಸ್
7. ಯುಗ್ಮಜವೊಂದರಲ್ಲಿ 24 ಜೊತೆ ವರ್ಣತಂತುಗಳಿವೆ. ಆಗ ಲಿಂಗಾಣುಗಳಲ್ಲಿರುವ ವರ್ಣತಂತುಗಳ ಸಂಖ್ಯೆಯು
a. 24 ಜೊತೆ
b. 6 ಜೊತೆ
c. 48
d. 24
8. ನೀಡಿರುವ ಚಿತ್ರವನ್ನು ಗಮನಿಸಿ, X ಭಾಗದ ಹೆಸರು ಮತ್ತು ಇದರ ಕಾರ್ಯವು
a. ನರಕೋಶ, ರಾಸಾಯನಿಕಗಳನ್ನು ವಿದ್ಯುತ್ ಆವೇಗಗಳಂತೆ ರವಾನಿಸುತ್ತದೆ
b. ಸಂಸರ್ಗ, ಆಕ್ಸಾನ್ ತುದಿಯಲ್ಲಿರುವ ಉತ್ಪತ್ತಿಯಾದ ವಿದ್ಯುತ್ ಸಂಕೇತಗಳನ್ನು ಡೆಂಡ್ರೈಟ್ ಗೆ ರವಾನಿಸುವುದು
c. ನರಕೋಶ, ವಿದ್ಯುತ್ ಆವೇಗಗಳನ್ನು ರಾಸಾಯನಿಕಗಳಂತೆ ರವಾನಿಸುವುದು
d. ಸಂಸರ್ಗ, ಆಕ್ಸಾನ್ ತುದಿಯಲ್ಲಿ ಉತ್ಪತ್ತಿಯಾದ ರಾಸಾಯನಿಕ ಸಂಕೇತಗಳನ್ನು ಡೆಂಡ್ರೈಟ್ ಗೆ ರವಾನಿಸುವುದು
9. ದರ್ಪಣವೊಂದು ವಸ್ತುವಿನ ನೇರ ಹಾಗೂ ದೊಡ್ಡದಾದ ಪ್ರತಿಬಿಂಬವನ್ನು ಉಂಟುಮಾಡಿದೆ.ಹಾಗಾದರೆ ಆ ದರ್ಪಣದ ವಿಧ ಮತ್ತು ಪ್ರತಿಬಿಂಬದ ಸ್ವಭಾವ ಕ್ರಮವಾಗಿ
a. ಪೀನ ದರ್ಪಣ -ಮಿಥ್ಯ ಪ್ರತಿಬಿಂಬ
b. ನಿಮ್ನದರ್ಪಣ-ಸತ್ಯಪ್ರತಿಬಿಂಬ
c. ಪೀನ ದರ್ಪಣ -ಸತ್ಯಪ್ರತಿಬಿಂಬ
d. ನಿಮ್ನದರ್ಪಣ-ಮಿಥ್ಯ ಪ್ರತಿಬಿಂಬ
10. ವಿದ್ಯುತ್ ಮಂಡಲದಲ್ಲಿ ಬಳಕೆಯಾದ ಶಕ್ತಿಯ ದರವು
a. ವಿದ್ಯುತ್ ಪ್ರವಾಹ
b. ವಿದ್ಯುತ್ ವಿಭವಾಂತರ
c. ವಿದ್ಯುತ್ ರೋಧ
d. ವಿದ್ಯುತ್ ಸಾಮರ್ಥ್ಯ
11. ಚಲುವೆಪುಡಿಯ ರಾಸಾಯನಿಕಸೂತ್ರ
a. NaCl
b. Na2CO3
c. CaCO3
d. CaoCl2
12. ಈ ಕೆಳಗಿನ ಸಮೀಕರಣಗಳನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಗುರುತಿಸಿರಿ.
CuSO4 + Fe -----> FeSO4+ Cu
2AgNO3 + Cu -----> Cu(NO3)2 + 2Ag
a. ತಾಮ್ರವು ಕಬ್ಬಿಣ ಮತ್ತು ಬೆಳ್ಳಿಗಿಂತ ಹೆಚ್ಚು ಕ್ರಿಯಾಶೀಲ
b. ಕಬ್ಬಿಣವು ತಾಮ್ರ ಮತ್ತು ಬೆಳ್ಳಿಗಿಂತ ಕಡಿಮೆ ಕ್ರಿಯಾಶೀಲ
c. ತಾಮ್ರವು ಬೆಳ್ಳಿಗಿಂತ ಹೆಚ್ಚು ಆದರೆ ಕಬ್ಬಿಣಕ್ಕಿಂತ ಕಡಿಮೆ ಕ್ರಿಯಾಶೀಲ
d. ಬೆಳ್ಳಿಯು ತಾಮ್ರ ಮತ್ತು ಕಬ್ಬಿಣಕ್ಕಿಂತ ಹೆಚ್ಚು ಕ್ರಿಯಾಶೀಲ
13. ಕೆಳಗಿನವುಗಳಲ್ಲಿ ಸಸ್ಯ ಪತ್ರರಂಧ್ರದ ಕಾರ್ಯವೆಂದರೆ
a. ಅನಿಲಗಳ ವಿನಿಮಯ
b. ನೀರು ಮತ್ತು ಆಹಾರ ಸಾಗಾಣಿಕೆ
c. ಆಹಾರ ತಯಾರಿಕೆ
d. ಅಭಿಸರಣಾ ಒತ್ತಡವನ್ನು ಏರ್ಪಡಿಸುವುದು
14. ಸಸ್ಯಗಳಲ್ಲಿ ದ್ಯುತಿಅನುವರ್ತನೆಗೆ ಕಾರಣವಾದ ಸಸ್ಯ ಹಾರ್ಮೋನ್
a. ಆಕ್ಸಿನ್
b. ಸೈಟೋಕೈನಿನ್
c. ಅಬ್ಸಿಸಿಕ್ ಆಮ್ಲ
d. ಜಿಬ್ಬರ್ಲಿನ್
15. ಮಾನವರಲ್ಲಿ ಲೈಂಗಿಕ ಸಂಪರ್ಕದಿಂದ ಸಾಮಾನ್ಯವಾಗಿ ಹರಡುವ ಬ್ಯಾಕ್ಟೀರಿಯಾ ಸೋಂಕು
a. ಗೊನೇರಿಯಾ
b. ಏಡ್ಸ್
c. ಹೆಪಟೈಟಿಸ್ - ಬಿ
d. ವರ್ಟ್ಸ್
