wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ನಾಮಪದಗಳು)

Total questions: 50

Worksheet time: 25mins

Name
Class
Date
1.
ನಾಮಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರಿ ಆಗುವ ಪದ
a)
ನಾಮಪದ
b)
ಸಂಧಿ ಪದ
c)
ಸಮಾಸ ಪದ
d)
ವಿಭಕ್ತಿ ಪದ
2.
ಸಾಮಾನ್ಯವಾಗಿ ಯಾವುದಾದರೂ ಒಂದು ವಸ್ತು,ಸ್ಥಳ, ವ್ಯಕ್ತಿ, ಗುಣ, ಸಂಖ್ಯೆ,ಭಾವ,ದಿಕ್ಕು,ಇತ್ಯಾದಿ ಹೆಸರುಗಳನ್ನು ಸೂಚಿಸುವ ವಾಚಕ ಪದಗಳು
a)
ನಾಮಪದಗಳು
b)
ಸಂಧಿಗಳು
c)
ಸಮಾಸಗಳು
d)
ಕ್ರಿಯಾಪದಗಳು
3.
ನಾಮವಾಚಕಗಳ ವಿಧಗಳು
a)
ವಸ್ತುವಾಚಕ,ಗುಣವಾಚಕ,ಸಂಖ್ಯಾವಾಚಕ
b)
ಸಂಖ್ಯೇಯವಾಚಕ, ಪರಿಮಾಣವಾಚಕ, ದಿಗ್ವಾಚಕ
c)
ಭಾವನಾಮ,ಸರ್ವನಾಮ
d)
ಇಲ್ಲಿ ಹೇಳಿರುವ ಎಲ್ಲವೂ
4.
ವಸ್ತುವಾಚಕಗಳ ವಿಧಗಳು
a)
ರೂಢನಾಮ
b)
ಅಂಕಿತನಾಮ
c)
ಅನ್ವರ್ಥನಾಮ
d)
ಇವೆಲ್ಲವೂ
5.
ರೂಢಿಯಿಂದ ಬಂದ ಪದಗಳು
a)
ರೂಢನಾಮಗಳು
b)
ಅಂಕಿತನಾಮಗಳು
c)
ಅನ್ವರ್ಥನಾಮಗಳು
d)
ಸರ್ವನಾಮಗಳು
6.
ವ್ಯಾವಹಾರದ ಸಲುವಾಗಿ, ನಿರ್ದಿಷ್ಟವಾಗಿ ಗುರುತಿಸಲು ಇಟ್ಟ ಹೆಸರುಗಳು
a)
ರೂಢನಾಮಗಳು
b)
ಅಂಕಿತನಾಮಗಳು
c)
ಅನ್ವರ್ಥನಾಮಗಳು
d)
ಭಾವನಾಮಗಳು
7.
ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳು
a)
ರೂಢನಾಮಗಳು
b)
ಅಂಕಿತನಾಮಗಳು
c)
ಅನ್ವರ್ಥನಾಮಗಳು
d)
ಭಾವನಾಮಗಳು
8.
ವಸ್ತುಗಳ, ವ್ಯಕ್ತಿಗಳ ಗುಣ,ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳು
a)
ಭಾವನಾಮಗಳು
b)
ಸರ್ವನಾಮಗಳು
c)
ಗುಣವಾಚಕಗಳು
d)
ದಿಗ್ವೀಶೇಷಣಗಳು
9.
ಸಂಖ್ಯೆಯನ್ನು ಹೇಳುವ ಶಬ್ದಗಳು
a)
ಸಂಖ್ಯೇಯವಾಚಕಗಳು
b)
ಸಂಖ್ಯಾವಾಚಕಗಳು
c)
ಸಂಙ್ಞಾವಾಚಕಗಳು
d)
ಸರ್ವನಾಮಗಳು
10.
ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳು
a)
ಸಂಖ್ಯೇಯವಾಚಕಗಳು
b)
ಸಂಖ್ಯಾವಾಚಕಗಳು
c)
ಸಂಙ್ಞಾವಾಚಕಗಳು
d)
ಸರ್ವನಾಮಗಳು
11.
ವಸ್ತು ಮತ್ತು ಕ್ರಿಯೆಯ ಭಾವಗಳನ್ನು ತಿಳಿಸುವ ಪದಗಳು
a)
ಗುಣವಾಚಕಗಳು
b)
ಭಾವನಾಮಗಳು
c)
ಸರ್ವನಾಮಗಳು
d)
ಪರಿಮಾಣ ವಾಚಕಗಳು
12.
ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳು
a)
ಪರಿಮಾಣ ವಾಚಕಗಳು
b)
ಭಾವನಾಮಗಳು
c)
ಗುಣವಾಚಕಗಳು
d)
ದಿಗ್ವಾಚಕಗಳು
13.
ದಿಕ್ಕುಗಳನ್ನು ಸೂಚಿಸುವ ಪದಗಳು
a)
ಗುಣವಾಚಕಗಳು
b)
ದಿಗ್ವಾಚಕಗಳು
c)
ಸಂಖ್ಯಾವಾಚಕಗಳು
d)
ಪರಿಮಾಣ ವಾಚಕಗಳು
14.
ನಾಮಪದದ ಬದಲಿಗೆ ಬಳಸುವ ವಾಚಕಗಳು
a)
ನಾನು ವಾಚಕಗಳು
b)
ಅಂಕಿತನಾಮಗಳು
c)
ರೂಢನಾಮಗಳು
d)
ಸರ್ವನಾಮಗಳು
15.
'ನದಿ' ಎಂಬ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
a)
ರೂಢನಾಮ
b)
ಅಂಕಿತನಾಮ
c)
ಅನ್ವರ್ಥನಾಮ
d)
ಸರ್ವನಾಮ
16.
'ಸಹದೇವ' ಎನ್ನುವ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
a)
ರೂಢನಾಮ
b)
ಅಂಕಿತನಾಮ
c)
ಅನ್ವರ್ಥನಾಮ
d)
ಸರ್ವನಾಮ
17.
'ವ್ಯಾಪಾರಿ' ಎಂಬ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
a)
ಸರ್ವನಾಮ
b)
ಭಾವನಾಮ
c)
ಗುಣವಾಚಕ
d)
ಅನ್ವರ್ಥನಾಮ
18.
ಪರ್ವತ : ರೂಢನಾಮ : : ಧರ್ಮರಾಯ : ------------
a)
ಅನ್ವರ್ಥನಾಮ
b)
ಸರ್ವನಾಮ
c)
ಅಂಕಿತನಾಮ
d)
ಭಾವನಾಮ
19.
ರಾಹುಲ : ಅಂಕಿತನಾಮ : : ಊರು : -----------
a)
ಸರ್ವನಾಮ
b)
ಭಾವನಾಮ
c)
ಪ್ರಶ್ನಾರ್ಥಕ ಸರ್ವನಾಮ
d)
ರೂಢನಾಮ
20.
'ಅನ್ವರ್ಥನಾಮ' ಪದಕ್ಕೆ ಉದಾಹರಣೆ
a)
ಮನುಷ್ಯ
b)
ಲಕ್ಷ್ಮಣ
c)
ವಿದ್ವಾಂಸ
d)
ದೇಶ
21.
'ರೂಢನಾಮ' ಪದಕ್ಕೆ ಉದಾಹರಣೆ
a)
ಮನುಷ್ಯ
b)
ಕಮಲಾಕ್ಷ
c)
ವಿಜ್ಞಾನಿ
d)
ಹಳತು
22.
ಸರ್ವನಾಮಗಳು ವಿಧ
a)
ಪುರುಷಾರ್ಥಕ ಸರ್ವನಾಮ
b)
ಪ್ರಶ್ನಾರ್ಥಕ ಸರ್ವನಾಮ
c)
ಆತ್ಮಾರ್ಥಕ ಸರ್ವನಾಮ
d)
ಇಲ್ಲಿನ ಎಲ್ಲವೂ
23.
ಆತ್ಮಾರ್ಥಕ ಸರ್ವನಾಮ ಪದಕ್ಕೆ ಉದಾಹರಣೆ
a)
ಯಾರು
b)
ತಾನು
c)
ಅವನು
d)
ಏನು
24.
ತಾವು : ಆತ್ಮರ್ಥಕ ಸರ್ವನಾಮ : : ಯಾವುದು : ------------
a)
ವಿದ್ಯಾರ್ಥಕ ಸರ್ವನಾಮ
b)
ಸಂಭವನಾರ್ಥಕ ಸರ್ವನಾಮ
c)
ಪ್ರಶ್ನಾರ್ಥಕ ಸರ್ವನಾಮ
d)
ಸಂಖ್ಯಾವಾಚಕ ಸರ್ವನಾಮ
25.
ಪುರುಷಾರ್ಥಕ ಸರ್ವನಾಮಗಳ ವಿಧ
a)
ಉತ್ತಮ ಪುರುಷ ಸರ್ವನಾಮ
b)
ಮಧ್ಯಮ ಪುರುಷ ಸರ್ವನಾಮ
c)
ಪ್ರಥಮ ಪುರುಷ ಸರ್ವನಾಮ
d)
ಇಲ್ಲಿ ಹೇಳಿರುವ ಎಲ್ಲವೂ
26.
ಒಳ್ಳೆಯ : ಗುಣವಾಚಕ : : ಕೆಂಪು : -----------
a)
ಭಾವನಾಮ
b)
ಆತ್ಮಾರ್ಥಕ ಸರ್ವನಾಮ
c)
ದಿಗ್ವಾಚಕ ಪದ
d)
ರೂಢನಾಮ
27.
ಅನ್ವರ್ಥನಾಮಪದಕ್ಕೆ ಉದಾಹರಣೆ
a)
ಶಿಕ್ಷಕ
b)
ವಿದ್ಯಾರ್ಥಿ
c)
ಪೂಜಾರಿ
d)
ಎಲ್ಲವೂ
28.
ನಾಮ ಪ್ರಕೃತಿಗೆ ಉದಾಹರಣೆ
a)
ಮನೆಯಲ್ಲಿ
b)
ಕಾಡಿಗೆ
c)
ಬಸವ
d)
ಕಾವ್ಯಳನ್ನು
29.
ಸೂರ್ಯನು ಪಡುವಣ ದಿಕ್ಕಿನಲ್ಲಿ ಮೂಡಿದನು ವಾಕ್ಯದಲ್ಲಿ ದಿಗ್ವಾಚಕ ಪದ
a)
ಪಡುವಣ
b)
ದಿಕ್ಕು
c)
ಸೂರ್ಯ
d)
ಮೂಡು
30.
ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು? - ವಾಕ್ಯದಲ್ಲಿ ಪರಿಮಾಣವಾಚಕ ಪದ
a)
ಅಷ್ಟು
b)
ದೊಡ್ಡ
c)
ಮರವನ್ನು
d)
ಕಡಿದರು
31.
ತೆಂಕಣ, ಮಯೂರ, ಚಂದ್ರ, ಆಕಾಶ, ಇವುಗಳಲ್ಲಿ ದಿಗ್ವಾಚಕ ಪದ
a)
ಮಯೂರ
b)
ತೆಂಕಣ
c)
ಚಂದ್ರ
d)
ಆಕಾಶ
32.
ಇತ್ತೀಚಿನ ದಿನಗಳಲ್ಲಿ ಹಲವು ರೋಗಗಳು ಮನುಷ್ಯನನ್ನು ಕಾಡುತ್ತಿವೆ ವಾಕ್ಯದಲ್ಲಿರುವ ಪರಿಮಾಣವಾಚಕ ಪದ
a)
ದಿನ
b)
ಹಲವು
c)
ರೋಗ
d)
ಕಾಡು
33.
ಭಾವನಾಮಕ್ಕೆ ಉದಾಹರಣೆ
a)
ಹಿರಿಮೆ
b)
ಅಷ್ಟು
c)
ಇಂತಹ
d)
ತೆಂಕಣ
34.
ತರಗತಿಯ ಕಪ್ಪುಹಲಗೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುತ್ತದೆ ವಾಕ್ಯದಲ್ಲಿ ಭಾವನಾಮ :
a)
ಕಪ್ಪು
b)
ಹಲಗೆ
c)
ಭವಿಷ್ಯ
d)
ತರಗತಿ
35.
ಉತ್ತಮ ಪುರುಷ ಸರ್ವನಾಮ ಏಕವಚನಕ್ಕೆ ಉದಾಹರಣೆ
a)
ನೀನು
b)
ಅವನು
c)
ಅದು
d)
ನಾನು
36.
ಪ್ರಥಮ ಪುರುಷ ಸರ್ವನಾಮ ಉದಾಹರಣೆ
a)
ಅವರು
b)
ಇವರು
c)
ಅದು
d)
ಇವೆಲ್ಲವುಗಳು
37.
ದಿಗ್ವಾಚಕ ಪದಕ್ಕೆ ಉದಾಹರಣೆ
a)
ಈಶಾನ್ಯ
b)
ಆಗ್ನೇಯ
c)
ಮೂಡಣ
d)
ಈ ಎಲ್ಲವೂ
38.
ಶಾಲೆ : ರೂಢನಾಮ : : ದ್ರೋಣ : -----
a)
ಅಂಕಿತನಾಮ
b)
ಸರ್ವನಾಮ
c)
ಅನ್ವರ್ಥನಾಮ
d)
ಭಾವನಾಮ
39.
ಶಬರಿ : ಅಂಕಿತನಾಮ : : ಕುರುಡ : ----------
a)
ಭಾವನಾಮ
b)
ರೂಢನಾಮ
c)
ಅನ್ವರ್ಥನಾಮ
d)
ಸರ್ವನಾಮ
40.
ಸರ್ವನಾಮ ಪದಗಳು
a)
ಅವನು - ಇವನು
b)
ಅವಳು - ಇವಳು
c)
ಅದು - ಇದು
d)
ಈ ಎಲ್ಲವೂ
41.
ಭಾವ ನಾಮಕ್ಕೆ ಉದಾಹರಣೆ
a)
ಬಿಳುಪು
b)
ಮಾಟ
c)
ನೋಟ
d)
ಎಲ್ಲವೂ
42.
ಗುಣವಾಚಕ ಪದಕ್ಕೆ ಉದಾಹರಣೆಗಳು
a)
ಚಿಕ್ಕ - ದೊಡ್ಡ
b)
ಸಣ್ಣ - ದಪ್ಪ
c)
ಹಳತು - ಹೊಸತು
d)
ಎಲ್ಲವೂ
43.
ನಾನು ಹನ್ನೆರಡು ವರ್ಷಗಳಿಂದ ಹತ್ತನೆಯ ತರಗತಿ ಓದುತ್ತಿದ್ದೇನೆ ಈ ವಾಕ್ಯದಲ್ಲಿರುವ ಸಂಖ್ಯೇಯವಾಚಕ
a)
ಹನ್ನೆರಡು
b)
ಹತ್ತನೆಯ
c)
ತರಗತಿ
d)
ನಾನು
44.
ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ
a)
ತಾವು
b)
ತಮ್ಮ
c)
ತಮಗಾಗಿ
d)
ಈ ಎಲ್ಲವೂ
45.
ನೀವು : ಪುರುಷವಾಚಕ ಸರ್ವನಾಮ : : ತಮ್ಮಲ್ಲಿ : ------------
a)
ಆತ್ಮರ್ಥಕ ಸರ್ವನಾಮ
b)
ರೂಢನಾಮ
c)
ಪ್ರಶ್ನಾರ್ಥಕ ಸರ್ವನಾಮ
d)
ಅಂಕಿತನಾಮ
46.
ವಿದ್ವಾಂಸ : ಅನ್ವರ್ಥಕ ಸರ್ವನಾಮ : : ದೇಶ : ----------
a)
ರೂಢನಾಮ
b)
ಅಂಕಿತನಾಮ
c)
ಸರ್ವನಾಮ
d)
ಭಾವನಾಮ
47.
ನೀನು, ನೀವು : ಮಧ್ಯಮ ಪುರುಷ ಸರ್ವನಾಮಗಳು : : ಅವು ,ಇವು : ------------
a)
ಉತ್ತಮ ಪುರುಷ ಸರ್ವನಾಮ ಗಳು
b)
ಪ್ರಥಮ ಪುರುಷ ಸರ್ವನಾಮಗಳು
c)
ದಿಗ್ವಾಚಕಗಳು
d)
ಪರಿಮಾಣ ವಾಚಕಗಳು
48.
ಆತನು ಎದ್ದು ನಿಲ್ಲಲು ಪ್ರಯತ್ನಿಸಿದನು -ಈ ವಾಕ್ಯದಲ್ಲಿ ಸರ್ವನಾಮ ಪದ
a)
ಎದ್ದು
b)
ನಿಲ್ಲಲು
c)
ಪ್ರಯತ್ನ
d)
ಆತನು
49.
ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು - ಈ ವಾಕ್ಯದಲ್ಲಿ ನ ರೂಢನಾಮ ಪದ
a)
ಲಂಡನ್
b)
ಪಟ್ಟಣ
c)
ಸ್ವತಂತ್ರ
d)
ಒಂದು
50.
ಮನೆ ಮಂಚಮ್ಮ : ಅಂಕಿತನಾಮ : : ಕುಂಟ : ----------
a)
ರೂಢನಾಮ
b)
ಅನ್ವರ್ಥನಾಮ
c)
ಭಾವನಾಮ
d)
ಸರ್ವನಾಮ