Wayground logo

Free Printable Worksheets

Font size

S
M
L
XL
Worksheets

ಸುಕುಮಾರಸ್ವಾಮಿ ಕಥೆ + ಕೆಮ್ಮನೆ ಮೀಸೆವೊತ್ತನೆ+ ಒಗಟು

Total questions: 50

Worksheet time: 36mins

Name
Class
Date
1.

ಈ ಕೆಳಗಿನ ಕೃದಂತ ಭಾವನಾಮ ಪದ ಹೆಸರಿಸಿ

a)

ಮಾಡಲಿಕ್ಕೆ

b)

ತೊಡುಗೆ

c)

ಬಾಳಿದ

d)

ತಿನ್ನುವ

2.

"ಬಸವೇಶ್ವರರು ನಮ್ಮ ನಾಡಿನ ಹಿರಿಮೆ" ಈ ವಾಕ್ಯದಲ್ಲಿ ಭಾವನಾಮ ಪದ ಯಾವುದು?

a)

ನಮ್ಮ

b)

ಬಸವೇಶ್ವರರು

c)

ಹಿರಿಮೆ

d)

ನಾಡಿನ

3.

'ನೈಮಿತ್ತಿಕಂ' ಪದದ ಹೊಸಗನ್ನಡ ರೂಪ ಯಾವುದು?

a)

ಜೋಯಿಸನು

b)

ಜೋಯಿಸನ

c)

ಜೋಯಿಸನನ್ನು

d)

ಜೋಯಿಸನೇ

4.

'ನಾಣಿಲಿ' ಪದದ ಸಮಾಸ ಹೆಸರಿಸಿ

a)

ಕರ್ಮಧಾರೆಯ ಸಮಾಸ

b)

ಗಮಕ ಸಮಾಸ

c)

ಬಹುರ್ವೀಹಿ ಸಮಾಸ

d)

ತತ್ಪುರುಷ ಸಮಾಸ

5.

'ಮೃತ್ಪಾತ್ರ' ಸಮಾನಾರ್ಥಕ ಪದ ಇದು;

a)

ಕಡೆಗೋಲು

b)

ಮಣ್ಣಿನ ಪಾತ್ರೆ

c)

ಸುರಪಾನ

d)

ಮರಣ

6.

ಎರಡು ವಸ್ತು ಅಥವಾ ಸನ್ನಿವೇಶಗಳ ಸಾದೃಶ್ಯ ಸಂಪತ್ತನ್ನು ಪರಸ್ಪರ ಹೋಲಿಸುವ ಅಲಂಕಾರ ಇದು;

a)

ರೂಪಕ ಅಲಂಕಾರ

b)

ಉತ್ಪ್ರೇಕ್ಷಾಲಂಕಾರ

c)

ದೃಷ್ಟಾಂತ ಅಲಂಕಾರ

d)

ಉಪಮಾಲಂಕಾರ

7.

ಮದೋನ್ಮತ್ತ ; ಗುಣಸಂಧಿ :; ವಲ್ಕಲಾವೃತ ; ———

a)

ಆದೇಶ ಸಂಧಿ

b)

ಸವರ್ಣದೀರ್ಘ ಸಂಧಿ

c)

ಯಣ್ ಸಂಧಿ

d)

ವೃದ್ಧಿ ಸಂಧಿ

8.

ಆಂಬರಂ ; ನನ್ನ ವರೆಗೂ : ; ಚಟ್ಟರಿಂ ; ————

a)

ಚೆಟ್ಟದರಿಂದ

b)

ಛಲದವರೆಗೆ

c)

ಶಿಷ್ಯರಿಂದ

d)

ಗೆಳೆಯರಿಂದ

9.

ತಾನು ; ಆತ್ಮಕ ಸರ್ವನಾಮ. : ; ನಾನು ; ———

a)

ಪ್ರಶ್ನಾರ್ಥಕ ಸರ್ವನಾಮ

b)

ದರ್ಶಕ ಸರ್ವನಾಮ

c)

ಆತ್ಮರ್ಥಕ ಸರ್ವನಾಮ

d)

ಪುರುಷಾರ್ಥಕ ಸರ್ವನಾಮ

10.

"ಸುಕುಮಾರಸ್ವಾಮಿಯ ಅರಮನೆಯ ಬಾವಿಯ ಮಾಟ ಮನೋಹರವಾಗಿತ್ತು " ಈ ವಾಕ್ಯದಲ್ಲಿ ಬಂದಿರುವ ಕೃದಂತ ಹೆಸರಿಸಿ

a)

ಕೃದಂತನಾಮ

b)

ಕೃದಂತಾವ್ಯಯ

c)

ಕೃದಂತ ಭಾವನಾಮ

d)

ತದ್ದಿತಾಂತ ಭಾವನಾಮ

11.

ಸುಕುಮಾರಸ್ವಾಮಿಯ ತಂದೆ-ತಾಯಿಗಳ ಹೆಸರೇನು?

a)

ಇಂದ್ರದತ್ತ ಗುಣಮತಿ

b)

ಸುಭದ್ರ ಸರ್ವಯಶಿ

c)

ಸೂರದತ್ತ ಯಶೋಭದ್ರೆ

d)

ವೃಷಭಾಂಕ ಜ್ಯೋತಿರ್ಮಾಲೆ

12.

ಉಜ್ಜಯಿನಿ ಅರಸ ವೃಷಭಾಂಕ ಆಶ್ಚರ್ಯಗೊಳ್ಳಲು ಕಾರಣವೇನು?

a)

ರತ್ನ ವ್ಯಾಪಾರಿ ಯಶೋಭದ್ರೆಗೆ ರತ್ನಗಂಬಳಿಗಳನ್ನು ಮಾರಿದ್ದು

b)

ಲಕ್ಷದೀನಾರ ಗಳನ್ನು ಕೊಟ್ಟು ರತ್ನ ಕಂಬಳಿಗಳನ್ನು 32 ತುಂಡು ಮಾಡಿದ್ದು

c)

32 ತುಂಡುಗಳನ್ನು ಸೊಸೆಯರಿಗೆ ಕೊಟ್ಟು ಅವರು ಚಪ್ಪಲಿಯಲ್ಲಿ ಸೇರಿಸಿದ್ದು

d)

ಎ ಮತ್ತು ಬಿ ಸರಿ

e)

ಎ ಬಿ ಸಿ ಸರಿ

13.

ವೃಷಭಾಂಕನು ಸುಕುಮಾರ ಸ್ವಾಮಿಗೆ ವ್ಯಾದಿ ಇದೆಯೆಂದು ಹೇಳಲು ಕಾರಣವೇನು?

a)

ದೀಪದ ಬೆಳಕನ್ನು ನೋಡಿ ಕಣ್ಣೀರು ಸುರಿಸುತ್ತಿದ್ದ ರಿಂದ

b)

ಮಂತ್ರಾಕ್ಷತೆ ಹಾಕಿದ ಸಾಸುವೆಗಳ ಮೇಲೆ ಕೂತಿದ್ದರಿಂದ ಸೊಂಟ ಅಲ್ಲಾಡಿಸುತ್ತಿರುವುದರಿಂದ

c)

ಅರ್ಧ ಆಹಾರವನ್ನು ನುಂಗುತ್ತಿದ್ದ ಇನ್ನರ್ಧ ಆಹಾರವನ್ನು ಉಗುಳುತ್ತಿದ್ದ ದ್ದರಿಂದ

d)

ಬಿ ಮತ್ತು ಸಿ ಸರಿ

e)

ಎ ಬಿ ಸಿ ಸರಿ

14.

ಅರಸನು ಬರುವ ದಾರಿಯನ್ನು ಯಶೋಭದ್ರೆಯು ಹೇಗೆ ಅಲಂಕರಿಸಿದ್ದಳು?

a)

ಅರಸರು ಬರುವ ದಾರಿಯಲ್ಲಿ ಪಂಚರತ್ನ ಗಳಿಂದ ರಂಗೋಲಿ ಹಾಕಿದ್ದರು

b)

ಬಂಗಾರದ ಚಪ್ಪರ ಹಾಕಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು

c)

ನೇತ್ರ ಪಟ್ಟು ದುಕೂಲ ಚೀನಾದಿ ದಿವ್ಯ ವಸ್ತ್ರಗಳಿಂದ ನೆಲದ ಮೇಲೆ ಹಾಸಿದ್ದರು

d)

ರತ್ನಮಣಿ ಬಂಗಾರದ ಹಾರಗಳಿಂದ ತೋರಣ ಕಟ್ಟಿಸಿದ್ದರು

e)

ಎ.ಸಿ.ಡಿ ಮಾತ್ರ ಸರಿ

15.

ರತ್ನದ ವ್ಯಾಪಾರಿಯಿಂದ ಯಶೋಭದ್ರೆ ರತ್ನಗಂಬಳಿಯನ್ನು ಎಷ್ಟು ಹಣ ಕೊಟ್ಟು ಕೊಂಡುಕೊಂಡರು?

a)

ಲಕ್ಷ ರೂಪಾಯಿ

b)

ಸಾವಿರ ದಿನಾರು

c)

ಕೋಟಿ ದಿನಾರು

d)

ಲಕ್ಷ ದಿನಾರು

16.

ಪರಶುರಾಮನು ದ್ರೋಣನಿಗೆ ನೀಡಿದ ಅಸ್ತ್ರಗಳಾವುವು?

a)

ವರುಣ ವಾಯುವ್ಯ ಬ್ರಹ್ಮಾಸ್ತ್ರ

b)

ವಾಯುವ್ಯ ಆಗ್ನೇಯ ಸೌಗಂಧಿ

c)

ವಾಯುವ್ಯ ವರುಣ ಪೌರಂದರ ಆಗ್ನೇಯ

d)

ವಾಯುವ್ಯ ವರುಣ ಆಗ್ನೇಯ ಫನ್ನಂಧರ

17.

ದ್ರೋಣನು ಪರಶುರಾಮನ ಬಳಿ ಏಕೆ ಬಂದನು?

a)

ವಿದ್ಯೆ ಬೇಡಲು

b)

ದ್ರವ್ಯ ಬೇಡಲು

c)

ಅಸ್ತ್ರ ಬೇಡಲು

d)

ರಾಜ್ಯ ಬೇಡಲು

18.

ದ್ರೋಣನು ಪಡಿಯಱನಿಗೆ ಏನೆಂದು ಹೇಳಿ ಕಳುಹಿಸಿದನು?

a)

ನಿಮ್ಮೊಡನಾಡಿದ ಕೆಳೆಯಂ ಪಾರ್ವ ಬಂದನೆಂದು ತಿಳಿಸು

b)

ದ್ರೋಣನು ಯಾರೆಂದು ನಾನು ತಿಳಿಯನು ಅವನನ್ನು ಹೊರಗೆ ತಳ್ಳು

c)

ಸಿರಿಯು ಹೆಂಡ ದೊಡನೆ ಹುಟ್ಟಿದ್ದು ಎಂಬುವುದನ್ನು

d)

ದ್ರೋಣ ನೆಂಬ ಬ್ರಾಹ್ಮಣ ಅಂಥವನು ನನ್ನ ಗೆಳೆಯನಲ್ಲ

19.

ದ್ರುಪದನು ಪಡಿಯಱನಿಗೆ ಏನೆಂದು ಹೇಳಿ ಕಳುಹಿಸಿದನು?

a)

ನಿಮ್ಮೊಡನಾಡಿದ ಕೆಳೆಯಂ ಪಾರ್ವ ಬಂದನೆಂದು ತಿಳಿಸು

b)

ದ್ರೋಣನು ಯಾರೆಂದು ನಾನು ತಿಳಿಯೆನು ಅವನನ್ನು ಹೊರಗೆ ತಳ್ಳು

c)

ಸಿರಿಯು ಹೆಂಡ ದೊಡನೆ ಹುಟ್ಟಿದ್ದು ಎಂಬುವುದನ್ನು

d)

ದ್ರೋಣ ನೆಂಬ ಬ್ರಾಹ್ಮಣ ಅಂಥವನು ನನ್ನ ಗೆಳೆಯನಲ್ಲ

e)

ಬಿ , ಡಿ ಮಾತ್ರ ಸರಿ

20.

ದುಷ್ಟ ನೊಣಕ್ಕೆ ಯಾವುದು ಶ್ರೇಷ್ಠ?

a)

ರಾಜ್ಯಾಧಿಕಾರ

b)

ಸಂಪತ್ತು

c)

ಕಸದ ತಿಪ್ಪೆ

d)

ಹೆಂಡ

21.

ಒಗಟುಗಳಿಂದಾಗುವ ಶೈಕ್ಷಣಿಕ ಲಾಭವೇನು?

a)

ಚಿಂತನೆ ಮಾಡುವ ತಾರ್ಕಿಕ ಯೋಚನಾ ಸಾಮರ್ಥ್ಯ ಬೆಳೆಯುತ್ತದೆ

b)

ಕಾಲಹರಣ ಮಾಡಬಹುದು

c)

ಸಮಯದ ಸದುಪಯೋಗ, ಉತ್ತರಿಸುವ ಪ್ರಶ್ನಿಸುವ ಕೌಶಲ ಬೆಳೆಯುತ್ತದೆ

d)

ಎ, ಬಿ ಸರಿ

e)

ಎ, ಸಿ ಸರಿ

22.

'ತಾವರೆ' ಎಂದು ಉತ್ತರಿಸುವ ಒಗಟು ಇದು

a)

ಕೆಸರಲ್ಲೇ ಮಲಗುತ್ತದೆ ಕೆಸರಲ್ಲೇ ಏಳುತ್ತದೆ

b)

ಕೆಸರಲ್ಲೇ ಹುಟ್ಟುವುದು ಕೆಸರಲ್ಲಿ ಬೆಳೆಯುವುದು

c)

ಕೆಸರಲ್ಲೇ ಬೆಳೆಯುವುದು ಮನೆಯಲ್ಲಿ ಅರಳೋದು

d)

ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು

23.

ಈ ಕೆಳಗಿನವುಗಳಲ್ಲಿ ಯಾವುದು ಪಂಪನ ಬಿರುದು ಅಲ್ಲ?

a)

ಸಂಸಾರ ಸಾರೋದಯ

b)

ಕವಿತಾಗುಣಾರ್ಣವ

c)

ಗುಣಾರ್ಣವ

d)

ಸರಸ್ವತೀ ಮಣಿಹಾರ

e)

ಯಾವುದು ಅಲ್ಲ

24.

ಪಂಪನ ಕೃತಿಗಳ ಜೋಡಿ ಇದು

a)

ಅಜಿತಪುರಾಣ ಪಂಪಭಾರತ

b)

ಅನಂತನಾಥಪುರಾಣ ವಿಕ್ರಮಾರ್ಜುನ ವಿಜಯ

c)

ಶಾಂತಿಪುರಾಣ ತ್ರಿವಿಕ್ರಮ ವಿಜಯ

d)

ಆದಿಪುರಾಣ ಪಂಪಭಾರತ

25.

ಪಂಪನ ಈ ಕೆಳಗಿನ ಯಾವ ಅರಸರಲ್ಲಿ ಆಸ್ಥಾನ ಕವಿಯಾಗಿದ್ದನು?

a)

ಚಾಲುಕ್ಯರ ಪುಲಿಕೇಶಿ

b)

ಹೊಯ್ಸಳ ವಿಷ್ಣುವರ್ಧನ

c)

ಚಾಲುಕ್ಯರ ಅರಿಕೇಸರಿ

d)

ವಿಜಯನಗರದ ಕೃಷ್ಣರಾಯ

26.

ಶಿವಕೋಟ್ಯಚಾರ್ಯರ ವಡ್ಡಾರಾಧನೆ ಕೃತಿಯನ್ನು ಸಂಪಾದಿಸಿದವರು ಯಾರು?

a)

ಆರ್ ನರಸಿಂಹಾಚಾರ್

b)

ಡಿ ಎಲ್ ನರಸಿಂಹಾಚಾರ್

c)

ಪುತಿ ನರಸಿಂಹಾಚಾರ್

d)

ಬಿ. ನರಸಿಂಹಾಚಾರ್

27.

ಶಿವಕೋಟ್ಯಚಾರ್ಯ ರು ಎಲ್ಲಿ ಜನಿಸಿದರು?

a)

ಗದಗ ಪ್ರಾಂತ್ಯದ ಕೋಳಿವಾಡ

b)

ಗದಗಿನ ರೋಣ ತಾಲೂಕಿನ ಸವಡಿ

c)

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ

d)

ಬಿಜಾಪುರ ಜಿಲ್ಲೆಯ ಮುಧೋಳ

28.

ಶಿವಕೋಟ್ಯಚಾರ್ಯರ ಕೃತಿ ಯಾವುದು?

a)

ಕರ್ನಾಟಕ ಪಂಚತಂತ್ರ

b)

ಕರ್ಣಾಟ ಭಾರತ ಕಥಾ ಮಂಜರಿ

c)

ವಡ್ಡಾರಾಧನೆ

d)

ಪಂಪಭಾರತ

29.

"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್ " ಈ ಮಾತನ್ನು ಯಾರು ಯಾರಿಗೆ ಹೇಳಿದರು

a)

ಜೋಯಿಸನು ಸರ್ವಯಶಿಗೆ

b)

ಜೋಯಿಸನು ಜ್ಯೋತಿರ್ಮಾಲೆಗೆ

c)

ಯಶೋಭದ್ರೆ ಯು ಜೋಯಿಸರಿಗೆ

d)

ಜೋಯಿಸರು ಎ ಸುಭದ್ರೆಗೆ

30.

"ನಮ್ಮನಾಳ್ವರುಮೊಳರೆ" ಮಾತನ್ನು ಯಾರು ಯಾರಿಗೆ ಕೇಳುತ್ತಾರೆ

a)

ಯಶೋಭದ್ರೆ ಸುಕುಮಾರಸ್ವಾಮಿಗೆ

b)

ಸುಕುಮಾರಸ್ವಾಮಿಯ ಯಶೋಭದ್ರೆಗೆ

c)

ಸುಕುಮಾರಸ್ವಾಮಿಯ ಗುಣಮತಿಗೆ

d)

ಯಶೋಭದ್ರೆ ಗುಣಮತಿ ಗೆ

31.

"ದೇವಾ ಆತಂಗಿವು ಕುತ್ತಮಲ್ಲವು" ಈ ಮಾತನ್ನು ಯಾರು ಯಾರಿಗೆ ಹೇಳುತ್ತಾರೆ

a)

ಯಶೋಭದ್ರೆಯು ವೃಷಭಾಂಕ ಅರಸರಿಗೆ

b)

ವೃಷಭಾಂಕನು ಯಶೋಭದ್ರೆಗೆ

c)

ಜೋಯಿಸನು ಅರಸರಿಗೆ

d)

ವೃಷಭಾಂಕನು ಸುಕುಮಾರನಿಗೆ

32.

'ಕೆಮ್ಮನೆ ಮೀಸೆವೊತ್ತನೆ' ಪದ್ಯದಿಂದ ಆಯ್ದ ಹೇಳಿಕೆ ಯಾವುದಲ್ಲ?

a)

ವಿದ್ಯಾಧನಮೆ ಧನಮಪ್ಪುದು

b)

ಈಗಳೊಂದಡಕೆಯುಮಿಲ್ಲ ಬಾಯೊಳ್

c)

ನೊಳವಿಂಗೆ ಕುಪ್ಪೆ ವರಂ

d)

ಈಗಳೊಂದಡಕೆಯುಮಿಲ್ಲ

33.

"ಖಳನೊಳವಿಂಗೆ ಕುಪ್ಪೆ ವರಂ" ಈ ಮಾತನ್ನು ಯಾರು ಯಾರಿಗೆ ಹೇಳಿದರು?

a)

ದ್ರುಪದನು ದ್ರೋಣನಿಗೆ

b)

ದ್ರೋಣನು ದ್ರುಪದನಿಗೆ

c)

ಪರಶುರಾಮ ದ್ರೋಣನಿಗೆ

d)

ದ್ರೋಣನು ಪರಶುರಾಮನಿಗೆ

34.

ಈ ಕೆಳಗಿನ ಹೇಳಿಕೆಗಳಲ್ಲೊಂದು ಮಾತನ್ನು ಪರಶುರಾಮನು ದ್ರೋಣನಿಗೆ ಹೇಳಿದ ಮಾತಲ್ಲ

a)

ಸಿರಿ ಕಳ್ಳೊಡವುಟ್ಟಿತೆಂಬುದಂ

b)

ಒಡವೆಯನರ್ಥಿಗಿತ್ತೆನ್

c)

ಅವನೀತಳಮಂ ಗುರುಗಿತ್ತೆನ್

d)

ಈಗಳೊಂದಡಕೆಯುಮಿಲ್ಲ ಕೈಯೊಳ್

e)

ಇನ್ನಿದೊಂದು ಧನುರ್ವಿದುದು

35.

" ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು" ಈ ವಾಕ್ಯವು ಯಾವ ಅಲಂಕಾರ ವಾಗಿದೆ

a)

ರೂಪಕ ಅಲಂಕಾರ

b)

ಉತ್ಪ್ರೇಕ್ಷಾಲಂಕಾರ

c)

ದೃಷ್ಟಾಂತ ಅಲಂಕಾರ

d)

ಉಪಮಾಲಂಕಾರ

36.

" ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು" ಈ ಅಲಂಕಾರದಲ್ಲಿನ ಉಪಮೇಯ ಪದ ಯಾವುದು?

a)

ಖಳನೊಳವಿಂಗೆ ಕುಪ್ಪೆ ವರ

b)

ನಿನ್ನದೊಂದಳವು( ದ್ರುಪದನ ಯೋಗ್ಯತೆ)

c)

ಆಂಬರಮಂ

d)

ವೊಲ್

37.

" ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು" ಈ ಅಲಂಕಾರದಲ್ಲಿನ ಉಪಮಾನ ಪದ ಯಾವುದು?

a)

ಖಳನೊಳವಿಂಗೆ ಕುಪ್ಪೆ ವರ

b)

ನಿನ್ನದೊಂದಳವು( ದ್ರುಪದನ ಯೋಗ್ಯತೆ)

c)

ಆಂಬರಮಂ

d)

ವೊಲ್

38.

" ಖಳನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂದಳವು" ಈ ಪದ್ಯ ಭಾಗದ ಛಂದಸ್ಸು ತಿಳಿಸಿ

a)

ಉತ್ಪಲಮಾಲಾವೃತ್ತ

b)

ಮತ್ತೇಭವಿಕ್ರೀಡಿತ ವೃತ್ತ

c)

ಚಂಪಕಮಾಲಾ ವೃತ್ತ

d)

ಸ್ರಗ್ಧರಾ ವೃತ್ತ

39.

"ಒಡವೆಯನರ್ಥಿಗಿತ್ತೆನವನೀತಳಮಂ ಗುರುಗಿತ್ತೆನೀಗಳೊಂ"

ಈ ಪದ್ಯ ಭಾಗಕ್ಕೆ ಸರಿಯಾದ ಛಂದಸ್ಸು ತಿಳಿಸಿ

a)

ಭರನಭಭರ - ಉತ್ಪಲಮಾಲೆ

b)

ಮಸಜಸತತಗ- ಶಾರ್ದೂಲ ವಿಕ್ರೀಡಿತ ವೃತ್ತ

c)

ಸಭರನಮಯ - ಚಂಪಕಮಾಲಾವೃತ್ತ

d)

ನಜಭಜಜಜರ - ಚಂಪಕಮಾಲಾ ವೃತ್ತ

40.

ಅಂತೆಂಬನಾರ್ಗೆ ಪಿರಿದುಂ


- ಈ ಛಂದಸ್ಸಿನ ಮೊದಲ ಸಾಲಿನ ಗಣ ರೂಪ ಇದು

a)

ನ, ಜ, ಭ, ಜ

b)

3/4/3/4

c)

4/4/4

d)

5/5/5

41.

A.ಕಂತಪ್ಪನನಱಿಯೆನೆಂದು ಸಭೆಯೊಳ್ ನುಡಿದಂ

B.ಅಂತೆಂಬನಾರ್ಗೆ ಪಿರಿದುಂ

C. ೞೆಂತೆನಗೆ ಕೆಳೆಯನೇ ನೂಂ

D. ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ


ಈ ಕಂಠಪಾಠ ಪದ್ಯದ ಸರಿಯಾದ ಕ್ರಮ ತಿಳಿಸಿ.

a)

ABCD

b)

CBDA

c)

DABC

d)

BDCA

42.

A.ಕಂತಪ್ಪನನಱಿಯೆನೆಂದು ಸಭೆಯೊಳ್ ನುಡಿದಂ

B.ಅಂತೆಂಬನಾರ್ಗೆ ಪಿರಿದುಂ

C. ೞೆಂತೆನಗೆ ಕೆಳೆಯನೇ ನೂಂ

D. ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ


ಈ ಕಂಠಪಾಠ ಪದ್ಯದ ಮೊದಲ ಸಾಲು ತಿಳಿಸಿ.

a)

B ಸಾಲು

b)

C ಸಾಲು

c)

D ಸಾಲು

d)

Aಸಾಲು

43.

A.ಕಂತಪ್ಪನನಱಿಯೆನೆಂದು ಸಭೆಯೊಳ್ ನುಡಿದಂ

B.ಅಂತೆಂಬನಾರ್ಗೆ ಪಿರಿದುಂ

C. ೞೆಂತೆನಗೆ ಕೆಳೆಯನೇ ನೂಂ

D. ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ


ಈ ಕಂಠಪಾಠ ಪದ್ಯದ ಕೊನೆ ಸಾಲು ತಿಳಿಸಿ.

a)

B ಸಾಲು

b)

C ಸಾಲು

c)

D ಸಾಲು

d)

Aಸಾಲು

44.

A.ಕಂತಪ್ಪನನಱಿಯೆನೆಂದು ಸಭೆಯೊಳ್ ನುಡಿದಂ

B.ಅಂತೆಂಬನಾರ್ಗೆ ಪಿರಿದುಂ

C. ೞೆಂತೆನಗೆ ಕೆಳೆಯನೇ ನೂಂ

D. ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ


ಈ ಕಂದಪದ್ಯದ ಉತ್ತರಾರ್ಧದ ಮೊದಲ ಸಾಲು ತಿಳಿಸಿ.

a)

B ಸಾಲು

b)

C ಸಾಲು

c)

D ಸಾಲು

d)

Aಸಾಲು

45.

A.ಕಂತಪ್ಪನನಱಿಯೆನೆಂದು ಸಭೆಯೊಳ್ ನುಡಿದಂ

B.ಅಂತೆಂಬನಾರ್ಗೆ ಪಿರಿದುಂ

C. ೞೆಂತೆನಗೆ ಕೆಳೆಯನೇ ನೂಂ

D. ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ


ಈ ಕಂದಪದ್ಯದ ಪೂರ್ವಾರ್ಧ ಸಾಲುಗಳನ್ನು ತಿಳಿಸಿ

a)

B D ಸಾಲು

b)

C D ಸಾಲು

c)

D A ಸಾಲು

d)

AB ಸಾಲು

46.

'ಕೆಮ್ಮನೆ ಮೀಸೆವೊತ್ತನೆ' ಪದ್ಯಕ್ಕೆಸರಿ ಹೊಂದುವ ಗಾದೆ

a)

ಕಾಯಕವೇ ಕೈಲಾಸ

b)

ಗುಣ ನೋಡಿ ಗೆಳೆತನ ಮಾಡು

c)

ಕಸ ತಿನ್ನುವುದಕ್ಕಿಂತ ತುಸು ತಿನ್ನು

d)

ಆರೋಗ್ಯವೇ ಭಾಗ್ಯ

47.

ದುಡ್ಡೇ ದೊಡ್ಡಪ್ಪ ವಿದ್ಯೆ ಅವರಪ್ಪ ಈ ಗಾದೆ ಮಾತಿನ ಅರ್ಥ ಏನು

a)

ದುಡ್ಡು ವಿದ್ಯೆಯ ತಂದೆ

b)

ಹಣಕ್ಕಿಂತ ಹೆಚ್ಚು

c)

ಸಂಪತ್ತಿಗಿಂತ ವಿದ್ಯೆಯೇ ಹೆಚ್ಚು

d)

ಶ್ರೀಮಂತಿಕೆ ಗಿಂತ ವಿದ್ಯೆ ಬಡವ

48.

ಗಾದೆಯ ಮಹತ್ವ ಇವುಗಳಲ್ಲಿ ಯಾವುದು ಅಲ್ಲ

a)

ಗಾದೆ ತುಂಬಾ ಚಿಕ್ಕವು ಅರ್ಥವು ಸ್ವಲ್ಪ

b)

ಗಾದೆ ಚಿಕ್ಕದಾದರೂ ಅರ್ಥ ದೊಡ್ಡದು

c)

ಗಾದೆ ವೇದಗಳಿಗೆ ಸಮಾನ

d)

ಗಾದೆ ಜನರ ಅನುಭವದ ನುಡಿಗಳು

49.

ನಿಮ್ಮ ತಾಯಿಯವರಿಗೆ ಪತ್ರ ಬರೆಯುವಾಗ ಏನೆಂದು ಸಂಬೋಧಿಸುವಿರಿ

a)

ಪ್ರೀತಿಯ ಅಮ್ಮ

b)

ಪೂಜ್ಯ‌ನೀಯ ತಾಯಿಯವರಿಗೆ

c)

ಲವ್ಲೀ ಮದರ್ಸ್

d)

ಡಿಯರ್ ಮಮ್ಮಿ

50.

ಕಚೇರಿ ಪತ್ರವನ್ನು ಬರೆಯುವಾಗ ಕೊನೆಯಲ್ಲಿ ಏನೆಂದು ಮುಕ್ತಾಯಗೊಳಿಸುವಿರಿ

a)

ಇಂತಿ ವಿಶ್ವಾಸಿ

b)

ಇಂತಿ ಪ್ರೀತಿಯ

c)

ಇಂತಿ ನಲ್ಮೆಯ

d)

ಇಂತಿ ಸೇವಕ