wayground logo

Free Printable Worksheets

NEW

Font size

S
M
L
XL
Worksheets

ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ 10ನೆಯ ತರಗತಿ ವೃಕ್ಷಸಾಕ್ಷಿ

Total questions: 50

Worksheet time: 25mins

Name
Class
Date
1.
ದುರ್ಗಸಿಂಹ ಕವಿಯ ಕಾಲ
a)
ಕ್ರಿ.ಶ.1031
b)
ಕ್ರಿ.ಶ.1051
c)
ಕ್ರಿ.ಶ.1011
d)
ಕ್ರಿ.ಶ.1010
2.
ದುರ್ಗಸಿಂಹನು ಈ ಊರಿನವನು
a)
ಕತ್ಲೆಕಾಡಿನ ರಯ್ಯಡಿ
b)
ದಟ್ಟಕಾಡಿನ ದಮ್ಮಡಿ
c)
ಕಿಸುಕಾಡು ನಾಡಿನ ಸಯ್ಯಡಿ
d)
ಚಾರ್ಮಾಡಿ ಘಾಟ್ ನಸಯ್ಯಡಿ
3.
ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕ ಹಾಗೂ ಸಂಧಿವಿಗ್ರಹಿಯೂ ಆಗಿದ್ದವನು-
a)
ದುಷ್ಟಬುದ್ಧಿ
b)
ಧರ್ಮಬುದ್ಧಿ
c)
ದುರ್ಗಸಿಂಹ
d)
ಧರ್ಮಾಧಿಕರಣರು
4.
ಕನ್ನಡದ ಪಂಚತಂತ್ರ ಕೃತಿಯ ಕರ್ತೃ--------
a)
ಗುಣಾಢ್ಯ
b)
ದುರ್ಗಸಿಂಹ
c)
ವಸುಭಾಗಭಟ್ಟ
d)
ಧರ್ಮಬುದ್ಧಿ
5.
ಪಂಚತಂತ್ರಗಳಲ್ಲಿ ಯಾವ ತಂತ್ರ ಬಿಟ್ಟು ಹೋಗಿದೆ ಭೇದ,ಪರೀಕ್ಷಾ,ವಿಶ್ವಾಸ,ವಂಚನಾ ಮತ್ತು-----------
a)
ಶುಭಕಾರ್ಯ
b)
ಅನ್ಯಕಾರ್ಯ
c)
ಶತ್ರುಕಾರ್ಯ
d)
ಮಿತ್ರಕಾರ್ಯ
6.
ವೃಕ್ಷಸಾಕ್ಷಿ ಪಾಠದಲ್ಲಿ ಪ್ರಸ್ತಾಪವಾಗಿರುವ ಗಾದೆ------------
a)
ಸತ್ಯಕ್ಕೆ ಸಾವಿಲ್ಲ,ಸುಳ್ಳಿಗೆ ಸುಖವಿಲ್ಲ.
b)
ಮಾಡಿದುಣ್ಣೋ ಮಾರಾಯ
c)
ಹಣಕ್ಕಿಂತ ಗುಣಮೇಲು
d)
ಮೇಲಿನ ಎಲ್ಲವೂ
7.
ದುಷ್ಟಬುದ್ಧಿ ಸಂಪತ್ತಿಗಾಗಿ ಬಲಿಕೊಟ್ಟಿದ್ದು-
a)
ಮಗನನ್ನು
b)
ತಂದೆಯನ್ನು
c)
ತಾಯಿಯನ್ನು
d)
ಮಿತ್ರನನ್ನು
8.
ದುಷ್ಟಬುದ್ಧಿಯ ತಂದೆಯ ಹೆಸರು
a)
ಪ್ರೇಮಮತಿ
b)
ಗುಣಮತಿ
c)
ಇಂದುಮತಿ
d)
ಶಬರಮತಿ
9.
ಅನೃತ ಪದದ ಅರ್ಥ----------
a)
ಅನ್ಯರು
b)
ಅನೇಕ
c)
ಸುಳ್ಳು
d)
ಸತ್ಯ
10.
ಅಬ್ಜೋದರ ಎಂದರೆ ಇವರು----------
a)
ಬ್ರಹ್ಮ
b)
ವಿಷ್ಣು
c)
ಮಹೇಶ್ವರ
d)
ಕೃಷ್ಣ
11.
ಕಟ್ಟೇಕಾಂತ ಪದವು -------------ಸಮಾಸಕ್ಕೆ ಉದಾಹರಣೆಯಾಗಿದೆ.
a)
ತತ್ಪುರುಷ
b)
ಕರ್ಮಧಾರೆಯ
c)
ದ್ವಿಗು
d)
ಅಂಶಿ
12.
ದಿಙ್ಮುಖ ಪದವು --------------ಸಂಧಿಪದ
a)
ಜಶ್ತ್ವ
b)
ಶ್ಚುತ್ವ
c)
ಅನುನಾಸಿಕ
d)
ಯಾವುದೂ ಅಲ್ಲ
13.
ನೇಸರ್ ಎಂದರೆ---------
a)
ಹೆಸರು
b)
ಎಸರು
c)
ಸೂರ್ಯ
d)
ಚಂದ್ರ
14.
ವ್ಯಯ ಪದದ ತದ್ಭವರೂಪ--------
a)
ಖರ್ಚು
b)
ವೆಚ್ಚ
c)
ಸಾಲ
d)
ಬೀಯ
15.
ಬೇಹಾರಿ ಪದದ ತತ್ಸಮ ಪದ------------
a)
ಬಿಹಾರಿ
b)
ವ್ಯಾಪಾರಿ
c)
ಬಿಕಾರಿ
d)
ನಗಾರಿ
16.
ಸಂದೆಯ ಪದದ ತತ್ಸಮರೂಪ------
a)
ಸಂದೇಹ
b)
ಸಂಧ್ಯಾ
c)
ಸಂದರ್ಭ
d)
ಸಂಗತಿ
17.
ಕೋಕಿಲಾ ಪದದ ತದ್ಭವ ಪದ---------
a)
ಕೋಗಿಲೆ
b)
ನವಿಲು
c)
ಕಾಗೆ
d)
ಗಿಳಿ
18.
ಮೇದಿನಿ ಪದದ ಅರ್ಥ----------
a)
ಪರ್ವತ
b)
ನದಿ
c)
ಆಕಾಶ
d)
ಭೂಮಿ
19.
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಇಬ್ಬರು -----------------ಪುತ್ರರು
a)
ವಣಿಕ
b)
ರಾಜ
c)
ಕ್ಷತ್ರಿಯ
d)
ಬ್ರಾಹ್ಮಣ
20.
ಪೊನ್ನನೆಲ್ಲಮಂ ನೀನೆ ಕೋಡೆ ಎಂದವರು------------
a)
ಧರ್ಮಬುದ್ಧಿ
b)
ದುಷ್ಟಬುದ್ಧಿ
c)
ಪ್ರೇಮಮತಿ
d)
ವಟವೃಕ್ಷ
21.
ಪೃಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ --------------
a)
ಏರ್ಪುದುಂ
b)
ಇಳಿವುದುಂ
c)
ಕುಂದುಗುಂ
d)
ಅಂತ್ಯಂ
22.
ಹುಸಿಯದ ಬೇಹಾರಿಯೇ ಇಲ್ಲ ಎಂದವರು ----------
a)
ಧರ್ಮಬುದ್ಧಿ
b)
ದುಷ್ಟಬುದ್ಧಿ
c)
ಪ್ರೇಮಮತಿ
d)
ಧರ್ಮಾಧಿಕರಣರು
23.
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?
a)
ಕಳ್ಳತನದ ಆರೋಪ
b)
ಸುಳ್ಳಿನ ಆರೋಪ
c)
ದರೋಡೆಯ ಆರೋಪ
d)
ಕೊಲೆಯ ಆರೋಪ
24.
ವಟವಿಟಪಿ ಎಂದರೆ-------
a)
ಬೇವಿನಮರ
b)
ಹಲಸಿನಮರ
c)
ಮಾವಿನಮರ
d)
ಅಶ್ವಥ ಮರ
25.
ದುಷ್ಟಬುದ್ಧಿ ಧರ್ಮಬುದ್ಧಿಯರು ಹೊನ್ನನು ಅಡಗಿಸಿಟ್ಟ ಜಾಗ----
a)
ಧರ್ಮಬುದ್ಧಿಯ ಮನೆ
b)
ದುಷ್ಟಬುದ್ಧಿಯ ಮನೆ
c)
ಮಹಾವಟವಿಟಪಿಯ ಕೆಳಗೆ
d)
ಮರದ ಮೇಲೆ
26.
ತಸ್ಕರಸ್ಯಾನೃತ-------------------------
a)
ವಲಂ
b)
ಬಲಂ
c)
ಕುಲಂ
d)
ನಲಂ
27.
ದುಷ್ಟಬುದ್ಧಿಯು ಧರ್ಮಬುದ್ಧಿಯು ನ್ಯಾಯತೀರ್ಮಾನಕ್ಕಾಗಿ ಇವರ ಬಳಿ ಬಂದರು
a)
ಪ್ರೇಮಮತಿ
b)
ವಟವೃಕ್ಷ
c)
ದುರ್ಗಸಿಂಹ
d)
ಧರ್ಮಾಧಿಕರಣರು
28.
ಈತನ ಮಾತು ಅಶ್ರುತಪೂರ್ವಮ್" ಎಂದವರು
a)
ಧರ್ಮಾಧಿಕರಣರು
b)
ಪ್ರೇಮಮತಿ
c)
ದುರ್ಗಸಿಂಹ
d)
ಧರ್ಮಬುದ್ಧಿ
29.
ಹೊನ್ನು ಬಚ್ಚಿಟ್ಟಿದ್ದಕ್ಕೆ ಇವರು ಸಾಕ್ಷಿ ಎಂದು ದುಷ್ಟಬುದ್ಧಿ ನುಡಿದನು
a)
ತನ್ನ ತಂದೆ
b)
ಧರ್ಮಬುದ್ಧಿ
c)
ವಟವೃಕ್ಷ
d)
ಉದ್ಯಾನವನ
30.
ಧರ್ಮಾಧಿಕರಣರು ವಿಸ್ಮಯಗೊಳ್ಳಲು ಕಾರಣ-----
a)
ಧರ್ಮಬುದ್ಧಿ ಕಳ್ಳನೆಂಬುದ ಕೇಳಿ
b)
ದುಷ್ಟಬುದ್ಧಿ ಕಳ್ಳನಲ್ಲನೆಂಬುದ ಕೇಳಿ
c)
ವಟವೃಕ್ಷವೇ ಸಾಕ್ಷಿಯೆಂಬುದ ಕೇಳಿ
d)
ಪ್ರೇಮಮತಿಯ ಸಾಕ್ಷಿ ಕೇಳಿ
31.
ನಮ್ಮನ್ನು ಕೆಡಿಸುವ ಗುಣಗಳಿವು-------------
a)
ಪರಧನಹರಣ
b)
ವಿಶ್ವಾಸಘಾತುಕ
c)
ಸ್ವಾಮಿದ್ರೋಹ
d)
ಮೇಲಿನ ಎಲ್ಲವೂ
32.
ಮನುಷ್ಯರ ಸುಕೃತದುಷ್ಕೃತಂಗಳು ------------ಗಳರಿಗುಮಂ
a)
ದೈವ
b)
ದೆವ್ವ
c)
ಮರ
d)
ಪ್ರಾಣಿ
33.
ದುಷ್ಟಬುದ್ಧಿಯು ಕಟ್ಟೇಕಾಂತಕ್ಕೆ ಕರೆದೊಯ್ದಿದ್ದು ------------ರನ್ನು
a)
ಧರ್ಮಾಧಿಕರಣರು
b)
ವಟವೃಕ್ಷ
c)
ಧರ್ಮಬುದ್ಧಿ
d)
ಪ್ರೇಮಮತಿ
34.
ತನ್ನ ತಂದೆ ಸುಳ್ಳು ಹೇಳುವುದರಿಂದ ಈ ಅನುಕೂಲಗಳು ತಮ್ಮ ಕುಟುಂಬಕ್ಕೆ ಆಗುತ್ತವೆಂದು ದುಷ್ಟಬುದ್ದಿ ಹೇಳುತ್ತಾನೆ
a)
ಅವರ ಇಡೀ ಪರಿವಾರ ಹಲವುಕಾಲ ಹಸಿಯದೆ ಉಣ್ಣುವಷ್ಟು ಧನ ಸಿಗುವುದು
b)
ಅವರ ಇಡೀ ಪರಿವಾರ ಆ ಊರಿನ ರಾಜರಾಗುವರು
c)
ದುಷ್ಟಬುದ್ಧಿಗೆ ಧರ್ಮಾಧಿಕರಣ ಹುದ್ಧೆ ಸಿಗುವುದು
d)
ದುಷ್ಟಬುದ್ಧಿಗೆ ಬುದ್ಧಿ ಬರುವುದು
35.
ಬಳಾರಿಯ ಮನೆಯಂ ಪರಕೆಯ ---------------ಪುಗಿಸುವಂತೆ
a)
ನರಿಯಂ
b)
ಕುರಿಯಂ
c)
ಕೋಳಿಯಂ
d)
ಹಂದಿಯಂ
36.
ಬಳಾರಿಯ ಮನೆಯಂ ಪರಕೆಯ ಕುರಿಯಂ ಪುಗಿಸುವಂತೆ ಈ ವಾಕ್ಯವು ------------------ಅಲಂಕಾರವಾಗಿದೆ
a)
ರೂಪಕ
b)
ಉಪಮಾ
c)
ದೃಷ್ಟಾಂತ
d)
ಅರ್ಥಾಂತರನ್ಯಾಸ
37.
ಧರ್ಮಬುದ್ಧಿ ಬೆಳಗಿನ ಹೊತ್ತನ್ನು ಹೀಗೆ ಕಳೆದನು----
a)
ಮುಖ ತೊಳೆಯದೆ
b)
ಸ್ನಾನ ಮಾಡುತ್ತ
c)
ದೇವಗುರು ದ್ವಿಜಪೂಜೆ ಮಾಡುತ್ತ
d)
ದುಷ್ಟಬುದ್ಧಿಯೊಂದಿಗೆ ಜಗಳವಾಡುತ್ತ
38.
ಬವರ ಪದದ ಅರ್ಥ-----------
a)
ಜಗಳ
b)
ಬರಗಾಲ
c)
ಬರುವಿಕೆ
d)
ಗಾಯ
39.
ವಟವೃಕ್ಷಕ್ಕೆ ಈ ವಿಧದ ಅರ್ಚನೆಯಿಂದ ಅರ್ಚಿಸಲಾಯಿತು
a)
ಪಂಚವಿಧ
b)
ನವವಿಧ
c)
ಶತವಿಧ
d)
ಅಷ್ಟವಿಧ
40.
ಯಕ್ಷಾದಿ ದಿವ್ಯದೇವತೆಗಳು ವಾಸ ಮಾಡುವ ಸ್ಥಳ------
a)
ಧರ್ಮಬುದ್ಧಿಯ ಮನೆ
b)
ದುಷ್ಟಬುದ್ಧಿಯ ಮನೆ
c)
ವಟವೃಕ್ಷ
d)
ಮಧುರೆಯ ಉದ್ಯಾನವನ
41.
ಧರ್ಮಬುದ್ಧಿಯೇ ಧನಮಂ ತೆಗೆದುಕೊಂಡನೆಂದು ನುಡಿದವರು
a)
ವಟವೃಕ್ಷ
b)
ದುಷ್ಟಬುದ್ಧಿ
c)
ಧರ್ಮಾಧಿಕರಣರು
d)
ಪ್ರೇಮಮತಿ
42.
ಧರ್ಮಬುದ್ಧಿ ಇಲ್ಲೇನೋ ಮೋಸವಾಗಿದೆ ಎಂದು ಗುರುತಿಸಿದ್ದು
a)
ಮರದ ಸುತ್ತ ಮನುಷ್ಯ ಸಂಚಾರವಾಗಿರುವುದ ಕಂಡು
b)
ಪ್ರೇಮಮತಿ ಮರದ ಪೊಟರೆಯೊಳಗಿರುವುದ ಕಂಡು
c)
ದುಷ್ಟಬುದ್ಧಿ ಧರ್ಮಾಧಿಕರಣರಿಗೆ ಲಂಚಕೊಡುವುದ ಕಂಡು
d)
ದುಷ್ಟಬುದ್ಧಿ ನಗುವುದ ಕಂಡ
43.
ಧರ್ಮಬುದ್ಧಿಯ ಪ್ರಕಾರ ಹೊನ್ನನು ಸುತ್ತಿಕೊಂಡಿದ್ದು-
a)
ಮೀನು
b)
ಪನ್ನಗ
c)
ಮೊಸಳೆ
d)
ಬಳ್ಳಿ
44.
ದುಷ್ಟಬುದ್ಧಿಯ ಮನೆಯೊಳ್ ಕಿಚ್ಚನಿಕ್ಕುವಂತೆ ಧರ್ಮಬುದ್ಧಿ ಕಿಚ್ಚ ನಿಕ್ಕಿದ್ದು------------------ಗೆ
a)
ವಟವೃಕ್ಷದಪೊಳಲೊಳಗೆ
b)
ಪ್ರೇಮಮತಿಯ ಮನೆಯೊಳಗೆ
c)
ಧರ್ಮಬುದ್ಧಿಯ ಮನೆಯೊಳಗೆ
d)
ದುಷ್ಟಬುದ್ಧಿಯ ಮನೆಯೊಳಗೆ
45.
ಉತ್ಪಲಾಮಾಲಾವೃತ್ತ ದಲ್ಲಿ ಗಣ ವಿನ್ಯಾಸ ಈ ರೀತಿ ಇರುತ್ತದೆ
a)
ಭರನಭಭರ ಲ/ ಗು
b)
ಮಸಜಸತತ / ಗು
c)
ನಜಭಜಜಜರ
d)
ಮರಭನಯಯಯ
46.
ಶಾರ್ದೂಲವಿಕ್ರೀಡಿತ ವೃತ್ತ ದಲ್ಲಿ ಗಣ ವಿನ್ಯಾಸ ಈ ರೀತಿ ಇರುತ್ತದೆ
a)
ಭರನಭಭರ ಲ/ ಗು
b)
ಮಸಜಸತತ / ಗು
c)
ನಜಭಜಜಜರ
d)
ಮರಭನಯಯಯ
47.
ಕಂದಪದ್ಯದಲ್ಲಿ ಮೊದಲ ಸಾಲಿನಲ್ಲಿ ------------ಮಾತ್ರೆಯ --------ಗಣಗಳಿರುತ್ತವೆ.
a)
5 ಮಾತ್ರೆಯ 4 ಗಣ
b)
3/4 ಮಾತ್ರೆಯ ಎರೆಡೆರೆಡು ಗಣ
c)
4 ಮಾತ್ರೆಯ 3 ಗಣ
d)
4 ಮಾತ್ರೆಯ 5 ಗಣ
48.
ಕಂದಪದ್ಯದಲ್ಲಿ ಎರಡನೆಯ ಸಾಲಿನಲ್ಲಿ ------------ಮಾತ್ರೆಯ --------ಗಣಗಳಿರುತ್ತವೆ.
a)
5 ಮಾತ್ರೆಯ 4 ಗಣ
b)
3/4 ಮಾತ್ರೆಯ ಎರೆಡೆರೆಡು ಗಣ
c)
4 ಮಾತ್ರೆಯ 3 ಗಣ
d)
4 ಮಾತ್ರೆಯ 5 ಗಣ
49.
ಸಾಕ್ಷಿಮಾಡಿ ಪದವು ------------------ಸಮಾಸಕ್ಕೆ ಉದಾಹರಣೆ
a)
ತತ್ಪುರುಷ
b)
ಕರ್ಮಧಾರೆಯ
c)
ದ್ವಿಗು
d)
ಕ್ರಿಯಾ
50.
ಸ್ವಾಮಿದ್ರೋಹ ಪದವು --------------ಸಮಾಸವಾಗಿದೆ
a)
ತತ್ಪುರುಷ
b)
ಕರ್ಮಧಾರೆಯ
c)
ದ್ವಿಗು
d)
ಕ್ರಿಯಾ