wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಛಂದಸ್ಸು

Total questions: 50

Worksheet time: 25mins

Name
Class
Date
1.

ಪದ್ಯ ರಚನಾ ನಿಯಮ ಶಾಸ್ತ್ರವನ್ನು ಹೀಗೆ ಕರೆಯಲಾಗುತ್ತದೆ

a)

ಅಲಂಕಾರಗಳು

b)

ಛಂದಸ್ಸು

c)

ಪ್ರಾಸ

d)

ಯತಿ

2.
ಗಣ ಎಂದರೆ
a)
ಅಕ್ಷರಗಳ ಗುಂಪು
b)
ಮಾತ್ರೆಗಳ ಗುಂಪು
c)
ಅಂಶಗಳ ಗುಂಪು
d)
ಈ ಮೂರು ಹೌದು
3.
ಅಕ್ಷರಗಣದಲ್ಲಿ ಎಷ್ಟು ಅಕ್ಷರಗಳಿಗೆ ಒಂದು ಗುಂಪು ಮಾಡಲಾಗುತ್ತದೆ ?
a)
ಮೂರು ಅಕ್ಷರಗಳು
b)
ನಾಲ್ಕು ಅಕ್ಷರಗಳು
c)
ಐದು ಅಕ್ಷರಗಳು
d)
ಎರಡು ಅಕ್ಷರಗಳು
4.
ಗುರು ಲಘು ಮೂರಿರೆ
a)
ಮ - ನ ಗಣ
b)
ಭ - ಯ ಗಣ
c)
ಜ - ರ ಗಣ
d)
ಸ - ತ ಗಣ
5.
ಗುರು-ಲಘು ಮೊದಲಿರೆ
a)
ಮ - ನ ಗಣ
b)
ಭ - ಯ ಗಣ
c)
ಜ - ರ ಗಣ
d)
ಸ - ತ ಗಣ
6.
ಗುರು ಲಘು ನಡುವಿರೆ
a)
ಮ - ನ ಗಣ
b)
ಭ - ಯ ಗಣ
c)
ಜ - ರ ಗಣ
d)
ಸ - ತ ಗಣ
7.
ಗುರು-ಲಘು ಕೊನೆಯಿರೆ
a)
ಮ - ನ ಗಣ
b)
ಭ - ಯ ಗಣ
c)
ಜ - ರ ಗಣ
d)
ಸ - ತ ಗಣ
8.
ಅಕ್ಷರ ಗಣಗಳು ಎಷ್ಟಿವೆ ?
a)
8
b)
10
c)
12
d)
6
9.
ಅಕ್ಷರಗಳನ್ನು ಉಚ್ಚರಿಸಲು ತೆಗೆದುಕೊಳ್ಳುವ ಸಮಯವನ್ನು ಹೀಗೆ ಕರೆಯಲಾಗುತ್ತದೆ
a)
ವಡಿ
b)
ಪ್ರಾಸ
c)
ಮಾತ್ರೆ
d)
ಯತಿ
10.
ಒಂದು ಮಾತ್ರಾ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರಗಳು
a)
ಹ್ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಧ್ವನಿ ಸ್ವರ
11.
ಎರಡು ಮಾತ್ರಾ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರಗಳು
a)
ಹ್ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಧ್ವನಿ ಸ್ವರ
12.
ಮೂರು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು
a)
ಹ್ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಧ್ವನಿ ಸ್ವರ
13.
ಲಘು ಆಗುವ ಅಕ್ಷರಗಳು
a)
ಹ್ರಸ್ವ ಸ್ವರಗಳು
b)
ಹ್ರಸ್ವಸ್ವರ ಸಹಿತ ವ್ಯಂಜನಾಕ್ಷರಗಳು
c)
ಶಿಥಿಲದ್ವಿತ್ವಗಳು
d)
ಈ ಮೂರು ರೀತಿಯ ಅಕ್ಷರಗಳು ಹೌದು
14.
ಇವುಗಳಲ್ಲಿ ಲಘು ಆಗುವ ಅಕ್ಷರ
a)
b)
c)
d)
ಈ ಮೂರು ಹೌದು
15.
ಇವುಗಳಲ್ಲಿ ಗುರು ಆಗುವ ಅಕ್ಷರ
a)
b)
c)
d)
16.
ಗುರು ಆಗುವ ಅಕ್ಷರಗಳು
a)
ಒತ್ತಕ್ಷರದ ಹಿಂದಿನ ಅಕ್ಷರಗಳು
b)
ಬಿಂದು ಮತ್ತು ವಿಸರ್ಗದಿಂದ ಕೂಡಿರುವ ಅಕ್ಷರ (0,:)
c)
ವ್ಯಂಜನಾಕ್ಷರದ ಹಿಂದಿನ ಅಕ್ಷರ
d)
ಎಲ್ಲಾ ರೀತಿಯ ಅಕ್ಷರಗಳು
17.
ಲಘುವನ್ನು ಯಾವ ಚಿಹ್ನೆಯಿಂದ ಗುರುತಿಸಲಾಗುತ್ತದೆ
a)
S
b)
U
c)
L
d)
-
18.
ಕಂದ ಪದ್ಯ ಎಷ್ಟು ಸಾಲುಗಳಿಂದ ಕೂಡಿರುತ್ತದೆ
a)
2
b)
3
c)
4
d)
6
19.
ಕಂದ ಪದ್ಯದಲ್ಲಿ ಎಷ್ಟು ಮಾತ್ರೆಗಳಿಗೆ ಒಂದು ಗಣ ಮಾಡಲಾಗುತ್ತದೆ
a)
4
b)
5
c)
3
d)
6
20.
ಕಂದ ಪದ್ಯದ ಮೊದಲ ಸಾಲಿನ ಗಣಗಳು
a)
.4/4/4/
b)
4/4/4/4/4
c)
.5/5/5
d)
3/4/3/4
21.
ಕಂದ ಪದ್ಯದ ಎರಡನೇ ಸಾಲಿನ ಗಣಗಳು
a)
4/3/4/3/4
b)
4/4/4/4/4
c)
6/6/6/6/6/6
d)
5/5/5/5/5
22.
ಕಂದಪದ್ಯದ ಮೊದಲಿನ ಸಾಲಿನಲ್ಲಿ ಇರುವ ಮಾತ್ರೆಗಳ ಸಂಖ್ಯೆ
a)
14
b)
20
c)
12
d)
21
23.
ಕಂದಪದ್ಯದ ಎರಡನೇ ಸಾಲಿನಲ್ಲಿರುವ ಮಾತ್ರೆಗಳ ಸಂಖ್ಯೆ
a)
12
b)
14
c)
16
d)
20
24.
ಷಟ್ಪದಿಯಲ್ಲಿರುವ ಪಾದಗಳ ಸಂಖ್ಯೆ
a)
4
b)
3
c)
6
d)
1
25.
ಷಟ್ಪದಿಯ ಒಂದು ಲಕ್ಷಣ
a)
ಒಂದು ಮತ್ತು ಎರಡನೇ ಪಾದಗಳು ಸಮ
b)
ಮೂರು ಮತ್ತು ಆರನೆಯ ಪಾದಗಳು ಸಮ
c)
ನಾಲ್ಕು ಮತ್ತು ಐದನೆಯ ಪಾದಗಳು ಸಮ
d)
ಈ ಎಲ್ಲಾ ಲಕ್ಷಣಗಳು ಹೌದು
26.
ಭಾಮಿನಿ ಷಟ್ಪದಿಯಲ್ಲಿ ಮೊದಲ ಸಾಲಿನ ಮಾತ್ರೆಗಳ ಸಂಖ್ಯೆ
a)
12
b)
14
c)
16
d)
20
27.
ಭಾಮಿನಿ ಷಟ್ಪದಿಯ ಮೊದಲ ಸಾಲಿನ ಲಕ್ಷಣ
a)
3/4/3/4
b)
5/5/5/5
c)
4/4/4.
d)
3/4/3/4/3/4
28.
ವಾರ್ಧಕ ಷಟ್ಪದಿಯ ಮೊದಲನೇ ಸಾಲಿನ ಲಕ್ಷಣ
a)
5/5/5/5
b)
4/4/4/4
c)
3/4/3/4
d)
4/4/4.
29.
ವಾರ್ಧಕ ಷಟ್ಪದಿಯ ಮೊದಲನೇ ಸಾಲಿನ ಮಾತ್ರೆಗಳ ಸಂಖ್ಯೆ
a)
14
b)
12
c)
20
d)
30
30.
ಕುಮಾರವ್ಯಾಸನ 'ಕೌರವೇಂದ್ರನ ಕೊಂದೆ ನೀನು' ಪದ್ಯ ಯಾವ ಷಟ್ಪದಿಯಲ್ಲಿದೆ
a)
ಶರ ಷಟ್ಪದಿ
b)
ಕುಸುಮ ಷಟ್ಪದಿ
c)
ವಾರ್ಧಕ ಷಟ್ಪದಿ
d)
ಭಾಮಿನಿ ಷಟ್ಪದಿ
31.
ಲಕ್ಷ್ಮೀಶ ವಿರಚಿತ 'ವೀರಲವ' ಪದ್ಯ ಯಾವ ಷಟ್ಪದಿಯಲ್ಲಿದೆ
a)
ಭಾಮಿನಿ ಷಟ್ಪದಿ
b)
ವಾರ್ಧಕ ಷಟ್ಪದಿ
c)
ಭೋಗ ಷಟ್ಪದಿ
d)
ಪರಿವರ್ಧಿನಿ ಷಟ್ಪದಿ
32.
ಅಕ್ಷರ ಗಣಗಳ ಛಂದಸ್ಸು
a)
ಕಂದಪದ್ಯ
b)
ಭಾಮಿನಿ ಷಟ್ಪದಿ
c)
ವೃತ್ತಗಳು
d)
ವಾರ್ಧಕ ಷಟ್ಪದಿ
33.
ಗುರುವೊಂದಾದಿಯೊಳ್(ಪಾದದ ಆದಿಯಲ್ಲಿ ಒಂದು ಗುರುವಿದ್ದರೆ)
a)
ಉತ್ಪಲಮಾಲಾ ವೃತ್ತ
b)
ಶಾರ್ದೂಲವಿಕ್ರೀಡಿತ ವೃತ್ತ
c)
ಸ್ರಗ್ಧರಾ ವೃತ್ತ
d)
ಚಂಪಕಮಾಲಾ ವೃತ್ತ
34.
ಗುರು ಮೊದಲ್ ಮೂರಾಗೆ (ಪಾದದ ಆದಿಯಲ್ಲಿ ಮೊದಲು ಮೂರು ಗುರು ಬಂದರೆ ಅದು)
a)
ಉತ್ಪಲಮಾಲಾ ವೃತ್ತ
b)
ಶಾರ್ದೂಲ ವಿಕ್ರೀಡಿತ ವೃತ್ತ
c)
ಸ್ರಗ್ಧರಾ ವೃತ್ತ
d)
ಚಂಪಕಮಾಲಾ ವೃತ್ತ
35.

ಗುರು ನಾಲ್ಕ್ ಆಗಿರಲ್ (ಪಾದದ ಆದಿಯಲ್ಲಿ ಮೊದಲು ನಾಲ್ಕು ಗುರು ಬಂದರೆ ಅದು)

a)

ಮತ್ತೇಭ ವಿಕ್ರೀಡಿತ ವೃತ್ತ

b)

ಸ್ರಗ್ಧರಾ ವೃತ್ತ

c)

ಶಾರ್ದೂಲ ವಿಕ್ರೀಡಿತ ವೃತ್ತ

d)

ಉತ್ಪಲಮಾಲಾ ವೃತ್ತ

36.
ಲಘು ದ್ವಯ ಗುರುದ್ವಯ (ಪಾದದ ಆದಿಯಲ್ಲಿ ಎರಡು ಲಘು ಎರಡು ಗುರು ಬಂದರೆ ಅದು)
a)
ಉತ್ಪಲಮಾಲಾ ವೃತ್ತ
b)
ಮತ್ತೇಭ ವಿಕ್ರೀಡಿತ ವೃತ್ತ
c)
ಸ್ರಗ್ಧರಾ ವೃತ್ತ
d)
ಚಂಪಕಮಾಲಾ ವೃತ್ತ
37.
ಲಘು ದ್ವಯ ತ್ರಿ ಗುರುವಿಂದಕ್ಕುಂ(ಪಾದದ ಆದಿಯಲ್ಲಿ ಎರಡು ಲಘು ಮೂರು ಗುರು ಬಂದರೆ ಅದು)
a)
ಉತ್ಪಲಮಾಲಾ ವೃತ್ತ
b)
ಸ್ರಗ್ಧರಾ ವೃತ್ತ
c)
ಚಂಪಕಮಾಲಾ ವೃತ್ತ
d)
ಮಹಾ ಸ್ರಗ್ಧರಾ ವೃತ್ತ
38.
ಲಘು ನಾಲ್ಕ್ ಆಗಿರಲ್ (ಪಾದದ ಆದಿಯಲ್ಲಿ ನಾಲ್ಕು ಲಘು ಬಂದರೆ ಅದು
a)
ಮತ್ತೇಭ ವಿಕ್ರೀಡಿತ ವೃತ್ತ
b)
ಚಂಪಕಮಾಲಾ ವೃತ್ತ
c)
ಉತ್ಪಲಮಾಲಾ ವೃತ್ತ
d)
ಶಾರ್ದೂಲ ವಿಕ್ರೀಡಿತ ವೃತ್ತ
39.
ನಾಲ್ಕು ಸಾಲು : ಕಂದ ಪದ್ಯ : : ಆರು ಸಾಲು : -------
a)
ವೃತ್ತಗಳು
b)
ರಗಳೆ
c)
ಷಟ್ಪದಿ
d)
ತ್ರಿಪದಿ
40.
ನಜಭಜಜಜರ : ಚಂಪಕಮಾಲಾ ವೃತ್ತ : : ಸಭರನಮಯ ಲಗ : ------
a)
ಮತ್ತೇಭ ವಿಕ್ರೀಡಿತ ವೃತ್ತ
b)
ಚಂಪಕಮಾಲಾ ವೃತ್ತ
c)
ಉತ್ಪಲಮಾಲಾ ವೃತ್ತ
d)
ಶಾರ್ದೂಲ ವಿಕ್ರೀಡಿತ ವೃತ್ತ
41.

ಭರನಭಭರ ಲಗ : ಉತ್ಪಲಮಾಲಾ ವೃತ್ತ : : ಮರಭನಯಯಯ : ------

a)

ಮತ್ತೇಭ ವಿಕ್ರೀಡಿತ ವೃತ್ತ

b)

ಉತ್ಪಲಮಾಲಾ ವೃತ್ತ

c)

ಸ್ರಗ್ಧರಾ ವೃತ್ತ

d)

ಮಹಾ ಸ್ರಗ್ಧರಾ ವೃತ್ತ

42.
ಸತತನಸರರ ಗ : ಮಹಾ ಸ್ರಗ್ಧರಾ ವೃತ್ತ : ಮಸಜಸತತಗ : : ------
a)
ಉತ್ಪಲಮಾಲಾ ವೃತ್ತ
b)
ಶಾರ್ದೂಲ ವಿಕ್ರೀಡಿತ ವೃತ್ತ
c)
ಸ್ರಗ್ಧರಾ ವೃತ್ತ
d)
ಚಂಪಕಮಾಲಾ ವೃತ್ತ
43.
ಅಕ್ಷರ : ಭಗಣ : : ಬೆಸಕೈ : ----
a)
ಸಗಣ
b)
ತಗಣ
c)
ಜಗಣ
d)
ರಗಣ
44.

ಕೊರಳ ಸೆರೆ ಹಿಗ್ಗಿದವು ದೃಗುಜಲ |

ಉರವಣಿಸಿ ಕಡುನೊಂದನಕಟಾ ||

ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ |||

 ಈ ಪದವು ಯಾವ ಛಂದಸ್ಸಿನಲ್ಲಿದೆ

a)

ಕಂದಪದ್ಯ

b)

ವಾರ್ಧಕ ಷಟ್ಪದಿ

c)

ಭಾಮಿನಿ ಷಟ್ಪದಿ

d)

ಪರಿವರ್ಧಿನಿ ಷಟ್ಪದಿ

45.
ಖಳ ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನದೊಂ -ಈ ಸಾಲು ಯಾವ ವೃತ್ತ ಛಂದಸ್ಸಿನಲ್ಲಿದೆ ?
a)
ಉತ್ಪಲಮಾಲಾ ವೃತ್ತ
b)
ಶಾರ್ದೂಲ ವಿಕ್ರೀಡಿತ ವೃತ್ತ
c)
ಸ್ರಗ್ಧರಾ ವೃತ್ತ
d)
ಚಂಪಕಮಾಲಾ ವೃತ್ತ
46.
ಮೇದಿನಿಯಂ ಕ್ರಮಕ್ರಮದೆ ಪರ್ವಿದುದಾತ್ತನ ಭೋವಿಭಾಗಮಾ - ಈ ಪಾದವು ಯಾವ ವೃತ್ತ ಛಂದಸ್ಸಿನಲ್ಲಿದೆ ?
a)
ಉತ್ಪಲಮಾಲಾ ವೃತ್ತ
b)
ಶಾರ್ದೂಲ ವಿಕ್ರೀಡಿತ ವೃತ್ತ
c)
ಸ್ರಗ್ಧರಾ ವೃತ್ತ
d)
ಚಂಪಕಮಾಲಾ ವೃತ್ತ
47.
ನೆಲಕಿರಿವೆನೆಂದು ಬಗೆದಿರೆ | ಛಲಕಿರಿವೆಂ ಪಾಂಡು ಸುತರೊಳೀನೆಲನಿದು ಪಾ || - ಈ ಪದವು ಯಾವ ಛಂದಸ್ಸಿನಲ್ಲಿದೆ ?
a)
ಕಂದಪದ್ಯ
b)
ವಾರ್ಧಕ ಷಟ್ಪದಿ
c)
ಭಾಮಿನಿ ಷಟ್ಪದಿ
d)
ಪರಿವರ್ಧಿನಿ ಷಟ್ಪದಿ
48.
ಪದ್ಯದ ಪ್ರತಿಪಾದದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬಂದರೆ ಅದು
a)
ಯತಿ
b)
ಪ್ರಾಸ
c)
ವಡಿ
d)
ಕಂದಪದ್ಯ
49.
ಪದ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ತಾಣವನ್ನು ಹೀಗೆ ಕರೆಯಲಾಗುತ್ತದೆ
a)
ಯತಿ
b)
ಪ್ರಾಸ
c)
ಅಕ್ಕರ
d)
ಗಣ
50.
ಮೆರೆವೆಂ - ಈ ಪದದ ಸರಿಯಾದ ಪ್ರಸ್ತಾರ ರೂಪ
a)
UUU
b)
U--
c)
UU-
d)
UUUU