NEW
Font size
Worksheetsಸಿರಿ ಕನ್ನಡ ನುಡಿಬಳಗ : ಕ್ವಿಜ್
Total questions: 54
Worksheet time: 27mins
ಕೆಳಗಿನವುಗಳಲ್ಲಿ ವಿಜಾತೀಯ ಸಂಯುಕ್ತಾಕ್ಷರ ಗುರುತಿಸಿ.
1. ಕತ್ತಲೆ
2. ಡಾಕ್ಟರ್
3. ಎಚ್ಚರ
4. ಕಣ್ಣಿಗೆ
2. ವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ
1. 26
2. 25
3. 24
4. 28
3. ದೇವೇಂದ್ರ ಪದದ ಸಂಧಿ.
1. ಯಣ್ ಸಂಧಿ
2. ಗುಣ ಸಂಧಿ
3. ವೃದ್ಧಿ ಸಂಧಿ
4. ಜಸ್ತ್ವ ಸಂಧಿ
4. ಕೊಟ್ಟಿರುವ ಪದಗಳಲ್ಲಿನ ದ್ವಿರುಕ್ತಿ ಪದ.
1. ಮನೆಮಠ
2. ಹಣ್ಣು ಹಂಪಲು
3. ಸತಿಪತಿ
4. ತುತ್ತತುದಿ
5. "ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ" ಈ ವಾಕ್ಯದಲ್ಲಿನ ಲೇಖನ ಚಿಹ್ನೆ.
1. ಉದ್ಧರಣ ಚಿಹ್ನೆ
2. ಪೂರ್ಣವಿರಾಮ
3. ವಿವರಣಾತ್ಮಕ ಚಿಹ್ನೆ
4. ಅರ್ಧ ವಿರಾಮ
6. ಭೂತ ಕಾಲದ ಪ್ರತ್ಯಯ.
1. ವ
2. ಉವ
3. ದ
4. ಉತ್ತ
7. ದಿವಾನ ಪದದ ಭಾಷೆ.
1. ಉರ್ದು
2. ಇಂಗ್ಲಿಷ್
3. ಕನ್ನಡ
4. ಪರ್ಷಿಯನ್
8. ಪುಯ್ಲಿಟ್ಟು ಈ ಪದದ ಗಣ.
1. ಜ - ಗಣ
2. ರ - ಗಣ
3. ತ - ಗಣ
4. ಮ - ಗಣ
9. ಸಪ್ತಸ್ವರಗಳು ಇದು ಈ ಸಮಾಸದ ಉದಾಹರಣೆ.
1. ಕರ್ಮಧಾರೆಯ ಸಮಾಸ
2. ತತ್ಪುರುಷ ಸಮಾಸ
3. ದ್ವಿಗು ಸಮಾಸ
4. ದ್ವಂದ್ವ ಸಮಾಸ
10. ಧರ್ಮ ಶಬ್ದದ ವಿರುದ್ಧ ಪದ.
1. ಅಧರ್ಮ
2. ಸುಧರ್ಮ
3. ದಮ್ಮ
4. ಅಮ್ಮ
11. ಕ್ರೈಸ್ತ ಧರ್ಮದ ಪವಿತ್ರ ಗ್ರಂಥ.
1. ಭಗವದ್ಗೀತೆ
2. ಕುರಾನ್
3. ಬೈಬಲ್
4. ರಾಮಾಯಣ
12. ಮಡಕೆ ಮಾಡಲು ಕುಂಬಾರನು ಬಳಸುವ ಸಾಧನ.
1. ಕಾಲ ಚಕ್ರ
2. ಕುಲಾಲ ಚಕ್ರ
3. ಲಾಲಿ ಚಕ್ರ
4. ಟಾಯರ್ ಚಕ್ರ
13. ಮೋಸಗಾರ ಪದವು ಇದಕ್ಕೆ ಉದಾಹರಣೆ.
1. ತದ್ಧಿತಾಂತ ನಾಮಪದ
2. ಕೃದಂತ ನಾಮಪದ
3. ತದ್ಧಿತ ಭಾವನಾಮ
4. ತದ್ಧಿತಾವ್ಯಯ
14. ಕಿಡಿಸು ಪದದ ಅರ್ಥ.
1. ಕೊಡಿಸು
2. ಕಡಿಸು
3. ಕೆಡಿಸು
4. ಕೂಡಿಸು
15. ವ್ಯಾಪಾರಿ ಪದದ ತದ್ಭವ ರೂಪ.
1. ಬೇಹಾರಿ
2. ಹೌಹಾರಿ
3. ಆಹಾರ
4. ವಿಹಾರ
16. ಮೂಡಣ ಇದು ಈ ವಾಚಕ ಪದವಾಗಿದೆ.
1. ಸಂಖ್ಯಾ ವಾಚಕ
2. ದಿಗ್ವಾಚಕ
3. ಸಂಖ್ಯೇಯ ವಾಚಕ
4. ವಸ್ತು ವಾಚಕ
17. ಉತ್ತಮ ಪುರುಷ ಏಕ ವಚನ.
1. ನೀನು
2. ನೀವು
3. ನಾವು
4. ನಾನು
18. ಕ್ರಿಯಾಪದದ ಮೂಲ ರೂಪ.
1. ಸಕರ್ಮಕ ಧಾತು
2. ಧಾತು
3. ಅಕರ್ಮಕ ಧಾತು
4. ಸಾಧಿತ ಧಾತು
19. ರಾಮನು ಹಣ್ಣನ್ನು ತಿನ್ನಲಿ. ಇದರಲ್ಲಿ ತಿನ್ನಲಿ ಪದವು.
1. ನಿಷೇದಾರ್ಥಕ ಕ್ರಿಯಾಪದ
2. ವಿದ್ಯಾರ್ಥಕ ಕ್ರಿಯಾಪದ
3. ಸಂಭವನಾರ್ಥಕ ಕ್ರಿಯಾಪದ
4. ಯಾವುದು ಅಲ್ಲ
20. ಚತುರ್ಥಿ ವಿಭಕ್ತಿಯ ಕಾರಕಾರ್ಥ.
1. ಸಂಪ್ರದಾನ
2. ಅಪಾದನ
3. ಕರ್ತಾರ್ಥ
4. ಕರಣಾರ್ಥ
21. ಕಟ್ಟುವುದು - ಪದದಲ್ಲಿನ ಧಾತು.
1. ಕುಟ್ಟು
2. ಕೊಟ್ಟು
3. ಕಟ್ಟು
4. ಕೆಟ್ಟು
22. ಮೆಲ್ಲಗೆ ಇದು ಈ ಅವ್ಯಯವಾಗಿದೆ.
1. ಅನುಕರಣಾವ್ಯಯ
2. ಸಾಮಾನ್ಯಾವ್ಯಯ
3. ಸಂಬಂಧಾರ್ಥಕಾವ್ಯಯ
4. ಅವಧಾರಣಾರ್ಥಕಾವ್ಯಯ
23. ಕಾರಕೂನ - ಪದದ ಸಮನಾರ್ಥಕ ಪದ.
. ಗಮಾರ
ಕೋರಾನ
. ಕುರಾನ್
ಗುಮಾಸ್ತ
24. ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ.
1. ಗದಗ
2. ಧಾರವಾಡ
3. ಗುಲ್ಬರ್ಗಾ
4. ಬಾಗಲಕೋಟ
25. ಕಾರ್ಖಾನೆ - ಪದವು ಈ ಅನ್ಯ ಭಾಷೆಯ ಪದವಾಗಿದೆ.
1. ಇಂಗ್ಲಿಷ್
2. ಕನ್ನಡ
3. ಹಿಂದೂಸ್ತಾನಿ
4. ಪಾಕಿಸ್ತಾನ
26. ಇಸವಾಸ ಪದದ ಗ್ರಾಂಥಿಕ ರೂಪ.
1. ಈಸ್ವಾಸ
2. ವಿಶ್ವಾಸ
3. ಅವಿಶ್ವಾಸ
4. ಕೋಶ.
27. ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ. - ಇದು ಈ ಅಲಂಕಾರವಾಗಿದೆ.
1. ರೂಪಕಾಲಂಕಾರ
2. ಉಪಮಾಲಂಕಾರ
3. ಉತ್ಪ್ರೇಕ್ಷಾಲಂಕಾರ
4. ದೀಪಕಾಲಂಕಾರ
28. ಷಟ್ಪದಿಯಲ್ಲಿರುವ ಸಾಲುಗಳ ಸಂಖ್ಯೆ.
1. 6
2. 3
3. 5
4. 4
29. ಗುರು ಲಘು ಮೂರಿರೆ.
1. ಮ-ನ ಗಣ
2. ಸ-ತ ಗಣ
3. ಭ-ಯ ಗಣ
4. ಜ-ರ ಗಣ
30. ನಜಭಜ ಜಂಜರಂ ಬಗೆಗೊಳುತ್ತಿರೆ.
1. ಚಂಪಕಮಾಲೆ
2. ಉತ್ಪಲಮಾಲೆ
3. ಸ್ರಗ್ಧರಾ ವೃತ್ತ
4. ಮಹಾ ಸ್ರಗ್ಧರಾ ವೃತ್ತ
ಯೌವನ ನಾಗಿ, ಅತ್ಯಂತ ರೂಪ ,ಲಾವಣ್ಯ ಸೌಭಾಗ್ಯ ಕಾಂತಿ ಯಿಂದ ಕೂಡಿದ ವನ್ನಾಗಿ 32 ಅಂತಸ್ತು ಉಳ್ಳ ಸಂಪತ್ತುಳ್ಳವರೂ ದೇವರನ್ನು ಹೋಲುವ 32 ಜನ ಹೆಂಡತಿಯರನ್ನು ಉಳ್ಳವನಾಗಿ 32 ನಾಟಕಗಳನ್ನು ಕಲಿತವನಾಗಿ, 32 ಕೋಟಿ ಚಿನ್ನದ ಒಡೆಯನಾಗಿ ಪಂಚರತ್ನ ಗಳನ್ನು ಹೊಂದಿ, ಬಹುವಾಗಿ ಭೋಗಗಳನ್ನು ಅನುಭವಿಸುತ್ತಿದ್ದರು ಯಾರು?
ಸುಕುಮಾರ ಸ್ವಾಮಿ
ಸುಭದ್ರ
ಯಶೋಭದ್ರೆ
ಸೂರದತ್ತ
ವ್ಯಾಪಾರಿಯು ತನ್ನ ರತ್ನಗಂಬಳಿ ಗಳಿಗೆ ಎಷ್ಟು ಬೆಲೆಯನ್ನು ಕೇಳಿದನು?
ಕೋಟಿ ದಿನಾರ
ಲಕ್ಷದೀನಾರ
ಸಾವಿರ ದೀನಾರ
10,000 ದೀನಾರ
ವ್ಯಾಪಾರಿಯು ತನ್ನ ರತ್ನಗಂಬಳಿ ಗಳಿಗೆ ಎಷ್ಟು ಬೆಲೆಯನ್ನು ಕೇಳಿದನು?
ಕೋಟಿ ದಿನಾರ
ಲಕ್ಷದೀನಾರ
ಸಾವಿರ ದೀನಾರ
10,000 ದೀನಾರ
ಯಶೋಭದ್ರೆಯ ಸೊಸೆಯಂದಿರು ರತ್ನಗಂಬಳಿಗಳನ್ನು ಏನು ಮಾಡಿದರು?
ಹಾಸಿಗೆಯ ಮೇಲೆ ಹಾಕಿದರು
ಎಕ್ಕಡ ಗಳಲ್ಲಿ ಸಿಲುಕಿಕೊಂಡರು
ಬಾಗಿಲಿಗೆ ಹಾಕಿದರು
ದಾನ ಮಾಡಿದರು
ವೃಷಭಾಂಕನಿಗೆ ಆಶ್ಚರ್ಯವಾಗಲು ಕಾರಣವೇನು?
ಯಶೋಭದ್ರೆಯ ಸೊಸೆಯಂದಿರು ಲಕ್ಷದೀನಾರದ ರತ್ನಗಂಬಳಿಯನ್ನು ಹರಿದರು ಎಂದು ತಿಳಿದು
ಸುಭದ್ರೆಯ ಸೊಸೆಯಂದಿರು ರತ್ನಗಂಬಳಿಯನ್ನು ತಮ್ಮ ಎಕ್ಕಡಗಳಲ್ಲಿ ಸಿಲುಕಿಕೊಂಡರು ಎಂದು ತಿಳಿದು
ಯಶೋಭದ್ರೆ ಯ ಸೊಸೆಯಂದಿರು ರತ್ನಗಂಬಳಿಯನ್ನು ದಾನಮಾಡಿದರು ಎಂದು ತಿಳಿದು
ವೃಷಭಾಂಕ ಬಡವನಾಗಿದ್ದ ನು
ವೃಷಭಾಂಕನು ಸುಕುಮಾರಸ್ವಾಮಿಯ ಅರಮನೆಗೆ ಬರಲು ಕಾರಣವೇನು?
ಸುಕುಮಾರಸ್ವಾಮಿಯ ಹೆಂಡತಿಯರನ್ನು ನೋಡಲು
ಸುಕುಮಾರಸ್ವಾಮಿಯ ಐಶ್ವರ್ಯವನ್ನು ನೋಡಲು
ಯಶೋಭದ್ರೆ ಯನ್ನು ಮದುವೆಯಾಗಲು
ಕುಮಾರಸ್ವಾಮಿಯನ್ನು ಸೋಲಿಸಲು
ವೃಷಭಾಂಕನ ಮಹಾದೇವಿಯ ಹೆಸರೇನು?
ಗುಣಮತಿ
ಯಶೋಭದ್ರೆ
ಜ್ಯೋತಿರ್ಮಾಲೆ
ಸರ್ವಯಶಿ
ಯಶೋಭದ್ರೆಯು ವೃಷಭಾಂಕನು ಬರುವನೆಂದು ಯಾವುದರಿಂದ ತೋರಣವನ್ನು ಕಟ್ಟಿಸಿದಳು?
ಬಾಳೆ ಎಲೆಗಳಿಂದ
ಹೇಮ ಮುಕ್ತಾಹಾರಗಳಿಂದ
ದುಕೂಲಗಳಿಂದ
ಮಾವಿನ ಎಲೆಗಳಿಂದ
ನೆೇತ್ರ , ಪಟ್ಟು , ಗೋಕುಲ , ಚೀನಾ ಇವು ಒಂದು ಬಗೆಯ._______
ನಾಡಿನ ಬಟ್ಟೆಗಳು
ರೇಷ್ಮೆಯ ಬಟ್ಟೆಗಳು
ಹತ್ತಿಯ ಬಟ್ಟೆಗಳು
ಕುಸುರಿ ಬಟ್ಟೆಗಳು
ಕುಮಾರಸ್ವಾಮಿಯು ಆಸನದಲ್ಲಿ ಕುಳಿತಾಗ ತನ್ನ ಸೊಂಟವನ್ನು ಅಲುಗಾಡಿಸಲು ಕಾರಣವೇನು?
ಬೆಳಕನ್ನು ನೋಡಿ
ಸಿದ್ಧಾರ್ಥಗಳು ಒತ್ತಿದಾಗ
ಊಟ ಕೆಳಗೆ ಬಿದ್ದಾಗ
ಸ್ನಾನ ಮಾಡಲು ಎದ್ದಾಗ
ವೃಷಭಾಂಕನು ಸುಕುಮಾರಸ್ವಾಮಿಗೆ ಯಾವ ಹೆಸರನ್ನು ಇಟ್ಟನು?
ಉಜ್ಜಯಿನಿ ಸುಕುಮಾರ
ಕಾಮದೇವ
ಜಗತ್ತಿನ ನರೇಂದ್ರ
ಆವಂತಿ ಸುಕುಮಾರ
ಇವುಗಳಲ್ಲಿ ಅನ್ವರ್ಥನಾಮ ವಲ್ಲದ ನ್ನು ಗುರುತಿಸಿ?
ವ್ಯಾಪಾರಿ
ಪೂಜಾರಿ
ವಿಜ್ಞಾನಿ
ಮನುಷ್ಯ
ಟ, ವಿಕೆ, ಇಕೆ, ಗೆ, ಉದು - ಇವು ಯಾವ ಪ್ರತ್ಯಯಗಳಾಗಿವೆ?
ತದ್ದಿತಾಂತ ಅವ್ಯಯ
ಕೃದಂತಾವ್ಯಯ
ಕೃದಂತ ಭಾವನಾಮ
ತದ್ದಿತಾಂತ ಭಾವನಾಮ
ವಡ್ಡಾರಾಧನೆ ಕೃತಿಯಲ್ಲಿ ಎಷ್ಟು ಕಥೆಗಳಿವೆ?
15
18
17
19
ವಡ್ಡಾರಾಧನೆ ಕೃತಿಯನ್ನು ಸಂಪಾದಿಸಿದವರು ಯಾರು?
ಎಸ್ ಎಸ್ ಬಸವನಾಳ
ಎಂ ಎಂ ಕಲಬುರ್ಗಿ
ಡಿ ಎಲ್ ನರಸಿಂಹಾಚಾರ್
ಬಿ ಎಸ್ ಗದ್ದಗಿಮಠ
ಇವುಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ.
ಕಸವರ = ಚಿನ್ನ
ಬಟ್ಟೆ = ದಾರಿ
ವಿಭೂತಿ = ಐಶ್ವರ್ಯ
ಸಿದ್ಧಾರ್ಥ = ರಾಗಿ
ಎ.ಎನ್.ಮೂರ್ತಿರಾವ್ ರ ಈ ಕೄತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತ್ಯಿ ಲಭಿಸಿದೆ?
ಹಗಲುಗನಸುಗಳು
ಅಲೆಯುವ ಮನ
ದೇವರು
ಚಿತ್ರಗಳು-ಪತ್ರಗಳು
ಜಿ.ಎಸ್.ಎಸ್. ರವರ ಈ ಕೄತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲ ಭಿಸಿದೆ?
ಅರಳು-ಮರಳು
ದ್ಯಾವಾ ಪೄಥವೀ
ಕಾವ್ಯಾರ್ಥ ಚಿಂತನ
ಹಂಸದಮಯಂತಿ ಮತ್ತು ಇತರ ರೂಪಕಗಳು
ಬೇಂದ್ರೆಯವರ ಕೄತಿಗಳನ್ನು ಗುರುತಿಸಿ.
ಚಂಡಮಾರುತ, ಮಿನುಗು ಮಿಂಚು
ಚಪ್ಪಲಿಗಳು
ಗರಿ, ನಾದಲೀಲೆ
ಸಾಮಗಾನ, ಚೆಲುವು ಒಲವು
ದೇವನೂರರ ಯಾವ ಕೄತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
ಒಡಲಾಳ
ಕುಸುಮಬಾಲೆ
ಉಗಮ
ಗೋಕುಲ ನಿರ್ಗಮನ
ಜಿ .ಎಸ್. ಶಿವರುದ್ರಪ್ಪನವರ ಬರೆದ ಕೄತಿಗಳಾವುವು?
ಅಹಲ್ಯೆ, ವಿಕಟಕವಿ ವಿಜಯ
ಇಜ್ಜೋಡು, ಸಮರಸವೇ ಜೀವನ
ದೇವಶಿಲ್ಪ , ಅನಾವರಣ
ಬೆರಳ್ಗೆ ಕೊರಳ್, ಯಮನ ಸೋಲು
ಪುತಿನರ ಕಾಲ ಯಾವುದು?
1905
1906
1904
1920
ಇಜ್ಜೋಡು ಕೃತಿಯನ್ನು ಬರೆದವರು ಯಾರು?
ವಿನಾಯಕ ಕೃಷ್ಣ ಗೋಕಾಕ್
ಕುವೆಂಪು
ಮೂರ್ತಿರಾವ್
ಕುಮಾರವ್ಯಾಸ
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ ಯಾರ ಜನ್ಮ ಸ್ಥಳ?
ಡಿ.ಎಸ್. ಜಯಪ್ಪಗೌಡ
ದೇವನೂರು ಮಹಾದೇವ
ಲಕ಼್ಮೀಶ
ರನ್ನ
