wayground logo

Free Printable Worksheets

Font size

S
M
L
XL
Worksheets

ಭಾಗ್ಯಶಿಲ್ಪಿಗಳು ಭಾಗ 2

Total questions: 51

Worksheet time: 26mins

Name
Class
Date
1.

ವಿಶ್ವೇಶ್ವರಯ್ಯನವರನ್ನು ದಿವಾನರಾಗಿ ನೇಮಿಸಿದವರು ಯಾರು?

a)

ಮುಮ್ಮಡಿ ಕೃಷ್ಣರಾಜ ಒಡೆಯರು

b)

ಚಿಕ್ಕದೇವರಾಜ ಒಡೆಯರು

c)

ನಾಲ್ವಡಿ ಕೃಷ್ಣರಾಜ ಒಡೆಯರು

d)

ಕಂಠೀರವ ನರಸಿಂಹರಾಜ ಒಡೆಯರ್

2.

ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನ ಆಚರಣೆ ಮಾಡಲಾಗುತ್ತಿದೆ?

a)

ಇಂಜಿನಿಯರ್ ದಿನಾಚರಣೆ

b)

ದಿವಾನ್ ದಿನಾಚರಣೆ

c)

ಶಿಕ್ಷಕರ ದಿನಾಚರಣೆ

d)

ವೈದ್ಯರ ದಿನಾಚರಣೆ

3.

ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಯಾರು ಭಾಗವಹಿಸಿದ್ದರು!

a)

ಲಾಲ್ ಬಹದ್ದೂರ್ ಶಾಸ್ತ್ರಿ

b)

ಅಂಬೇಡ್ಕರ್

c)

ಜವಾಹರಲಾಲ್ ನೆಹರು

d)

ಮಹಾತ್ಮ ಗಾಂಧೀಜಿ

4.

ಸರ್ ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ವಿಶ್ವೇಶ್ವರಯ್ಯನವರ ಬಗ್ಗೆ ನೆಹರು ನುಡಿದ ಮಾತುಗಳಲ್ಲಿ ಯಾವುವು ಸರಿಯಾಗಿವೆ?

a)

A. ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ.

b)

C. "ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ"

c)

B. "ತಾವು ಹೆಚ್ಚು ಮಾತನಾಡಿದ್ದೀರಿ, ಸ್ವಲ್ಪ ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯಲು ಸಾಧ್ಯವಿಲ್ಲ"

d)

A ಮತ್ತು C ಸರಿ

e)

A ಮತ್ತು B ಸರಿ

5.

ವಿಶ್ವೇಶ್ವರಯ್ಯನವರ ಜನ್ಮಶತಮಾನೋತ್ಸವ ಎಲ್ಲಿ ನಡೆಯಿತು

a)

ಬೆಂಗಳೂರು

b)

ಮೈಸೂರು

c)

ಕೊಡಗು

d)

ಮಂಡ್ಯ

6.

ಭಾರತದ ಆಧುನಿಕತೆಯ ಹರಿಕಾರರು ಯಾರು?

a)

ಮೋಕ್ಷಗುಂಡಂ ವಿಶ್ವೇಶ್ವರಯ್ಯ

b)

ಚಿಕ್ಕದೇವರಾಜ ಒಡೆಯರು

c)

ದಿವಾನ್ ಪೂರ್ಣಯ್ಯ

d)

ಕೆ ಶೇಷಾದ್ರಿ ಅಯ್ಯರ್

7.

ವಿಶ್ವೇಶ್ವರಯ್ಯನವರು ಯಾವ ತಳಹದಿಯ ಮೇಲೆ ಹೊಸ ರಾಷ್ಟ್ರ ನಿರ್ಮಿಸಲು ಮುಂದಾಗಿದ್ದರು?

a)

A. ವಾಸ್ತವ ಚಿಂತನೆ, ನಿಸ್ವಾರ್ಥ ನಡತೆ

b)

B. ಖಾಸಗೀಕರಣ, ನಿರಂಕುಶ ಪ್ರಭುತ್ವ

c)

C. ಸುಸಂಗತ ವೈಜ್ಞಾನಿಕ ದೃಷ್ಟಿ , ಯೋಜನೆ ಮತ್ತು ದಕ್ಷ ಆಡಳಿತ

d)

A ಮತ್ತು B ಸರಿ

e)

A ಮತ್ತು C ಸರಿ

8.

ವಿಶ್ವೇಶ್ವರಯ್ಯನವರು ಎಷ್ಟರಲ್ಲಿ ಜನಿಸಿದರು?

a)

ಕ್ರಿಸ್ತಶಕ 1860 ಸೆಪ್ಟೆಂಬರ್ 15

b)

ಕ್ರಿಸ್ತಶಕ 1960 ಸೆಪ್ಟೆಂಬರ್ 15

c)

ಕ್ರಿಸ್ತಶಕ 1870 ನವೆಂಬರ್ 30

d)

ಕ್ರಿಸ್ತಶಕ 1970 ನವೆಂಬರ್ 30

9.

ಶ್ರೀನಿವಾಸಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ನವರಿಗೆ ವಿಶ್ವೇಶ್ವರಯ್ಯನವರು ಎಷ್ಟನೇ ಮಗನಾಗಿ ಜನಿಸಿದರು

a)

ಒಂದನೇ ಮಗನಾಗಿ

b)

ಎರಡನೇ ಮಗನಾಗಿ

c)

ಮೂರನೇ ಮಗನಾಗಿ

d)

ನಾಲ್ಕನೇ ಮಗನಾಗಿ

10.

ವಿಶ್ವೇಶ್ವರಯ್ಯ ನವರ ತಂದೆ-ತಾಯಿಗಳ ಹೆಸರೇನು?

a)

ಶ್ರೀನಿವಾಸಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ

b)

ಸುರೇಶ ಶಾಸ್ತ್ರಿ ಮತ್ತು ಮುದ್ದು ಲಕ್ಷ್ಮಮ್ಮ

c)

ಶ್ರೀನಿವಾಸಶಾಸ್ತ್ರಿ ಮತ್ತು ಪದ್ಮಮ್ಮ

d)

ಶ್ರೀನಂದ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ

11.

ವಿಶ್ವೇಶ್ವರಯ್ಯನವರ ಪೂರ್ವಜರು ಮೂಲತಃ ಎಲ್ಲಿಯವರು?

a)

ಕರ್ನೂಲು ಜಿಲ್ಲೆ ಗಿಡ್ಡಲೂರು ತಾಲೂಕು ಮೋಕ್ಷಗೊಂಡಂ

b)

ಕರೀಂನಗರ ಜಿಲ್ಲೆ ಮದನಪಲ್ಲಿ ತಾಲ್ಲೂಕು ಅನಂತಪುರ

c)

ಚಿಕ್ಕಬಳ್ಳಾಪುರ ತಾಲೂಕ್ ಮುದ್ದೇನಹಳ್ಳಿ

d)

ದೊಡ್ಡಬಳ್ಳಾಪುರ ತಾಲೂಕು ಮದನಹಳ್ಳಿ

12.

ವಿಶ್ವೇಶ್ವರಯ್ಯನವರ ಪೂರ್ವಜರು ಆಂಧ್ರದಿಂದ ವಲಸೆ ಬಂದು ಕರ್ನಾಟಕದಲ್ಲಿ ಎಲ್ಲಿ ನೆಲೆಸಿದ್ದರು?

a)

ಚಿಕ್ಕಬಳ್ಳಾಪುರ ಸಮೀಪ ಮುದ್ದೇನಹಳ್ಳಿ

b)

ಚಿಕ್ಕಬಳ್ಳಾಪುರ ಸಮೀಪ ನಂದಿ

c)

ದೊಡ್ಡಬಳ್ಳಾಪುರ ಸಮೀಪ ದಾಬಸ್ ಪೇಟೆ

d)

ಮೈಸೂರು ಸಮೀಪ ಶ್ರೀರಂಗಪಟ್ಟಣ

13.

ವಿಶ್ವೇಶ್ವರಯ್ಯನವರ ತಾಯಿಗೆ ಮಕ್ಕಳು ಏನಾಗಬೇಕೆಂಬ ಹಂಬಲವಿತ್ತು?

a)

ವೈದ್ಯರು

b)

ಇಂಜಿನಿಯರ್

c)

ದೊಡ್ಡ ವ್ಯಕ್ತಿಗಳು

d)

ದಿವಾನರು

14.

ವಿಶ್ವೇಶ್ವರಯ್ಯನವರ ಸಾಯಿಯವರು ಚಿಕ್ಕಬಳ್ಳಾಪುರಕ್ಕೆ ತಮ್ಮ ಸಂಸಾರವನ್ನು ಏಕೆ ಸ್ಥಳಾಂತರಿಸಿದರು?

a)

ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾಗಬೇಕು ಎಂದು

b)

ಮಕ್ಕಳು ಸಿನಿಮಾ ನಟರು ಆಗಬೇಕೆಂದು

c)

ಮಕ್ಕಳು ವೈದ್ಯರು ಆಗಬೇಕೆಂದು

d)

ಮಕ್ಕಳು ಇಂಜಿನಿಯರ್ ಆಗಬೇಕೆಂದು

15.

ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಎಲ್ಲಿ ನಡೆಯಿತು

a)

ಚಿಕ್ಕಬಳ್ಳಾಪುರ

b)

ನಂದಿ

c)

ದೊಡ್ಡಬಳ್ಳಾಪುರ

d)

ಬೆಂಗಳೂರು

16.

ವಿಶ್ವೇಶ್ವರಯ್ಯನವರು ಪ್ರೌಢ ಶಿಕ್ಷಣವನ್ನು ಎಲ್ಲಿ ಮುಗಿಸಿದರು

a)

ಬೆಂಗಳೂರಿನ ವೆಸ್ಲಿಯನ್ ಪ್ರೌಢಶಾಲೆ

b)

ಚಿಕ್ಕಬಳ್ಳಾಪುರದ ಇಂಡಿಯನ್ ಶಾಲೆ

c)

ಮಂಗಳೂರಿನ ಜೈನ್ ಶಾಲೆ

d)

ಮೈಸೂರಿನ ಶಾಂತಿನಿಕೇತನ ಶಾಲೆ

17.

ವಿಶ್ವೇಶ್ವರಯ್ಯನವರು ಇಂಟರ್ ಮೀಡಿಯಟ್ ಮತ್ತು ಬಿ.ಎ ಪದವಿ ಶಿಕ್ಷಣವನ್ನು ಎಲ್ಲಿ ಪಡೆದರು?

a)

ಸೆಂಟ್ರಲ್ ಕಾಲೇಜು ಬೆಂಗಳೂರು

b)

ಸೆಂಟ್ರಲ್ ಕಾಲೇಜು ಮಂಗಳೂರು

c)

ಮಹಾರಾಜ ಕಾಲೇಜು ಬೆಂಗಳೂರು

d)

ಸರ್ಕಾರಿ ಪದವಿ ಕಾಲೇಜು ಚಿಕ್ಕಬಳ್ಳಾಪುರ

18.

ವಿಶ್ವೇಶ್ವರಯ್ಯನವರು ಬೆಂಗಳೂರಿನಲ್ಲಿ ಪಡೆದುಕೊಂಡ ಇಂಟರ್ ಮೀಡಿಯಟ್ ಶಿಕ್ಷಣ ಎಷ್ಟು ವರ್ಷಗಳ ದಾಗಿತ್ತು

a)

ಎರಡು ವರ್ಷಗಳು

b)

ಮೂರು ವರ್ಷಗಳು

c)

ನಾಲ್ಕು ವರ್ಷಗಳು

d)

ಒಂದು ವರ್ಷ

19.

ವ್ಯಾಸಂಗದಲ್ಲಿ ಕ್ರಮ ನಿಷ್ಠರಾಗಿದ್ದ ವಿಶ್ವೇಶ್ವರಯ್ಯನವರು ಜೀವನದಲ್ಲಿ ಯಾವುದನ್ನು ಸಾಧಿಸಬೇಕೆಂಬ ದೃಢನಿರ್ಧಾರವನ್ನು ಹೊಂದಿದ್ದರು

a)

ಉನ್ನತವಾದುದನ್ನು

b)

ಉದ್ಯೋಗವನ್ನು

c)

ಇಂಜಿನಿಯರ್ ನೌಕರಿಯನ್ನು

d)

ಸರ್ಕಾರಿ ನೌಕರಿಯನ್ನು

20.

ವಿಶ್ವೇಶ್ವರಯ್ಯನವರು ಇಂಜಿನಿಯರಿಂಗ್ ಶಿಕ್ಷಣ ಪಡೆಯುವಾಗ ಯಾವ ವಿದ್ಯಾರ್ಥಿ ವೇತನ ಸೌಲಭ್ಯವನ್ನು ಪಡೆದು ಶಿಕ್ಷಣ ಪೂರೈಸಿದರು?

a)

ದಿವಾನ್ ಸಿ ರಂಗಾಚಾರ್ಲು ವಿದ್ಯಾರ್ಥಿವೇತನ

b)

ದಿವಾನ್ ಪೂರ್ಣಯ್ಯ ವಿದ್ಯಾರ್ಥಿವೇತನ

c)

ದಿವಾನ್ ಶೇಷಾದ್ರಿ ಅಯ್ಯರ್ ವಿದ್ಯಾರ್ಥಿವೇತನ

d)

ದಿವಾನ್ ರಂಗಯ್ಯ ವಿದ್ಯಾರ್ಥಿವೇತನ

21.

ವಿಶ್ವೇಶ್ವರಯ್ಯನವರು ಎಂಜಿನಿಯರಿಂಗ್ ಸಿಕ್ಷಣವನ್ನು ಎಲ್ಲಿ ಪಡೆದರು

a)

ಪೂನಾ

b)

ಧಾರವಾಡ

c)

ಬೆಳಗಾವಿ

d)

ಬೆಂಗಳೂರು

22.

ವಿಶ್ವೇಶ್ವರಯ್ಯನವರು ಇಂಜಿನಿಯರಿಂಗ್ ದಿಪ್ಲೋಮ ಶಿಕ್ಷಣವನ್ನು ಯಾವ ಸ್ಥಾನದಲ್ಲಿ ಉತ್ತೀರ್ಣರಾದರು

a)

ಪ್ರಥಮ

b)

ಅತ್ಯುನ್ನತ

c)

ದ್ವಿತೀಯ

d)

ತೃತೀಯ

23.

ವಿಶ್ವೇಶ್ವರಯ್ಯನವರು ಇಂಜಿನಿಯರಿಂಗ್ ಡಿಪ್ಲೋಮೋ ಶಿಕ್ಷಣವನ್ನು ಪೂರೈಸಿದಾಗ ಯಾವ ಬಹುಮಾನಕ್ಕೆ ಪಾತ್ರರಾದರು?

a)

ಜೇಮ್ಸ್ ಬರ್ಕ್ಲಿ ಬಹುಮಾನ

b)

ಲಾರ್ಡ್ ಸಂಡ್ ಹರ್ಸ್ಟ್ ಬಹುಮಾನ

c)

ನಾಲ್ವಡಿ ಕೃಷ್ಣರಾಜ ಒಡೆಯರ ಬಹುಮಾನ

d)

ಮುಮ್ಮಡಿ ಕೃಷ್ಣರಾಜ ಒಡೆಯರ ಬಹುಮಾನ

24.

ವಿಶ್ವೇಶ್ವರಯ್ಯನವರು 1884 ರಲ್ಲಿ ಯಾವ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು

a)

ಲೋಕೋಪಯೋಗಿ ಇಲಾಖೆ

b)

ಶಿಕ್ಷಣ ಇಲಾಖೆ

c)

ಆರೋಗ್ಯ ಇಲಾಖೆ

d)

ಕೃಷಿ ಇಲಾಖೆ

25.

ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದಲ್ಲಿ ಯಾವ ಸೇವೆಯನ್ನು ಪ್ರಾರಂಭಿಸಿದರು

a)

ಸಹಾಯಕ ಇಂಜಿನಿಯರ್

b)

ಮುಖ್ಯ ಇಂಜಿನಿಯರ್

c)

ಡೆಪ್ಯೂಟಿ ಇಂಜಿನಿಯರ್

d)

ಎಕ್ಸಿಕ್ಯೂಟಿವ್ ಇಂಜಿನಿಯರ್

26.

ಮುಂಬೈ ಖಾನದೇಶ ಮತ್ತು ನಾಸಿಕ ಜಿಲ್ಲೆಗಳಲ್ಲಿ ಹರಿಯುವ ನದಿ ಯಾವುದು?

a)

ಪಂಜ್ರಾ

b)

ಅಘನಾಶಿನಿ

c)

ಕೃಷ್ಣ

d)

ಕಾವೇರಿ

27.

ವಿಶ್ವೇಶ್ವರಯ್ಯನವರು ಯಾವ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆ ಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ಸು ಗಳಿಸಿದರು

a)

ಪಂಜ್ರಾ ನದಿ

b)

ಘಟಪ್ರಭಾ ನದಿ

c)

ಮಲಪ್ರಭಾ ನದಿ

d)

ಪಯೋಷ್ಣಿ ನದಿ

28.

ವಿಶ್ವೇಶ್ವರಯ್ಯನವರು ಯಾವ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು

a)

ಮೈಸೂರು ಪಟ್ಟಣ

b)

ಸುಕ್ಕೂರು ಪಟ್ಟಣ

c)

ಸತ್ತೂರು ಪಟ್ಟಣ

d)

ಶ್ರೀರಂಗಪಟ್ಟಣ

29.

ವಿಶ್ವೇಶ್ವರಯ್ಯನವರನ್ನು ಮುಕ್ತಕಂಠದಿಂದ ಹಾಡಿಹೊಗಳಿದ ಮುಂಬೈ ಪ್ರಾಂತ್ಯದ ಅಂದಿನ ಗವರ್ನರ್ ಯಾರು?

a)

ಲಾರ್ಡ್ ಸಂಡ್ ಹರ್ಸ್ಟ್

b)

ಲಾರ್ಡ್ ಕರ್ಜನ್

c)

ಲಾರ್ಡ್ ಕಬ್ಬನ್

d)

ಲಾರ್ಡ್ ಜೇಮ್ಸ್

30.

ವಿಶ್ವೇಶ್ವರಯ್ಯನವರು ಮೊದಲಿಗೆ ಯಾವ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲು ಗಳನ್ನು ಅಳವಡಿಸಿದರು

a)

ಪೀಪ್ ಜಲಾಶಯ

b)

ಕೆ ಆರ್ ಎಸ್ ಜಲಾಶಯ

c)

ನಾಗಾರ್ಜುನ ಜಲಾಶಯ

d)

ಕಬಿನಿ ಜಲಾಶಯ

31.

ವಿಶ್ವೇಶ್ವರಯ್ಯನವರು ಸ್ವಯಂಚಾಲಿತ ಬಾಗಿಲು ಗಳನ್ನು ಈ ಕೆಳಗಿನ ಯಾವ ಯಾವ ಅಣೆಕಟ್ಟುಗಳಿಗೆ ನಿರ್ಮಿಸಿದ್ದಾರೆ?

a)

ಕರ್ನಾಟಕದ ಷ್ಣರಾಜಸಾಗರ

b)

ಗ್ವಾಲಿಯರ್ ನ ತಿಗ್ರಾ ಜಲಾಶಯ

c)

ಪೂನಾದ ಪಿ ಜಲಾಶಯ

d)

ಎಲ್ಲವೂ ಸರಿ

32.

ಕೃಷ್ಣರಾಜಸಾಗರ [ಕನ್ನಂಬಾಡಿ ] ಅಣೆಕಟ್ಟು ಈಗಿನ ಯಾವ ಜಿಲ್ಲೆಯಲ್ಲಿದೆ?

a)

ಮಂಡ್ಯ ಜಿಲ್ಲೆ

b)

ಮೈಸೂರು ಜಿಲ್ಲೆ

c)

ಕೊಡಗು ಜಿಲ್ಲೆ

d)

ದಕ್ಷಿಣ ಕನ್ನಡ ಜಿಲ್ಲೆ

33.

ವಿಶ್ವೇಶ್ವರಯ್ಯನವರು ನಾಲ್ಕು ವರ್ಷಗಳ ಕಾಲ ಮುಂಬೈ ಪ್ರಾಂತ್ಯದಲ್ಲಿ ಯಾವ ಸೇವೆಯನ್ನು ಸಲ್ಲಿಸಿದರು?

a)

ಸ್ಯಾನಿಟರಿ ಇಂಜಿನಿಯರ್

b)

ಸಿವಿಲ್ ಇಂಜಿನಿಯರ್

c)

ಮೆಕ್ಯಾನಿಕಲ್ ಇಂಜಿನಿಯರ್

d)

ಎಲೆಕ್ಟ್ರಿಕಲ್ ಇಂಜಿನಿಯರ್

34.

ಬ್ರಿಟಿಷರ ಕಾಲದಲ್ಲಿ ಮುಂಬೈ ಪ್ರಾಂತ್ಯದ ಸ್ಯಾನಿಟರಿ ಇಂಜಿನಿಯರ್ ಹುದ್ದೆಗೆ ನೇಮಕವಾದ ಪ್ರಥಮ ಭಾರತೀಯ ಯಾರು?

a)

ಸರ್ ಎಂ ವಿಶ್ವೇಶ್ವರಯ್ಯನವರು

b)

ಕೆ ರಂಗಚಾರ್ಲು ರವರು

c)

ದಿವಾನ್ ಪಿ ಮಾಧವರಾಯರು

d)

ದಿವಾನ್ ಪೂರ್ಣಯ್ಯನವರು

35.

ವಿಶ್ವೇಶ್ವರಯ್ಯನವರ ತುಡಿತ ಯಾವುದಾಗಿತ್ತು

a)

ನಾಳೆ ಮಾಡುವುದನ್ನು ಇಂದೇ ಮಾಡು ಇಂದು ಮಾಡುವುದನ್ನು ಈಗಲೇ ಮಾಡು

b)

ನಾಳೆ ಮಾಡುವುದನ್ನು ನಾಳೆ ಮಾಡು ಇಂದು ಮಾಡುವುದನ್ನು ಈ ದಿನವೇ ಮಾಡು

c)

ನಾಳೆ ಮಾಡುವುದನ್ನು ನಾಡಿದ್ದು ಮಾಡು ಇಂದು ಮಾಡುವುದನ್ನು ಬಿಟ್ಟು ಬಿಡು

d)

ನಾಳೆ ಮಾಡುವುದನ್ನು ಮಾಡಲೇ ಬೇಡ ಇಂದು ಮಾಡುವುದನ್ನು ಮಾತ್ರ ಮಾಡು

36.

ಸರ್ ಎಂ.ವಿ. ಯಾವ ನಗರವನ್ನು ಭಾರತದ ಸುಯೋಜಿತ ನಗರಗಳ ಸಾಲಿಗೆ ಸೇರ್ಪಡೆಯಾಗುವಂತೆ ಮಾಡಿದರು?

a)

ಹೈದರಾಬಾದ್

b)

ಜಕ್ಕೂರು

c)

ಕರ್ನೂಲು

d)

ಅನಂತಪುರ

37.

ಹೈದರಾಬಾದ್ ನಗರಕ್ಕೆ ಯಾವ ನದಿಗಳು ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು

a)

ಈಸಿ ಮತ್ತು ಮೂಸಿ ನದಿ

b)

ಮಲಪ್ರಭಾ ಮತ್ತು ಮೂಸಿ ನದಿ

c)

ಕೃಷ್ಣ ಮತ್ತು ಈಸಿ ನದಿ

d)

ಕೃಷ್ಣ ಮತ್ತು ತುಂಗಭದ್ರ ನದಿ

38.

ಹೈದರಾಬಾದ್ ನಗರಕ್ಕೆ ನದಿಗಳ ಪ್ರವಾಹದ ತೊಂದರೆಯನ್ನು ತಡೆಗಟ್ಟಲು ವಿಶ್ವೇಶ್ವರಯ್ಯನವರು ಏನು ಮಾಡಿದರು?

a)

ಎರಡು ನದಿಗಳಿಗೆ ಪ್ರತ್ಯೇಕ ಜಲಾಶಯ ನಿರ್ಮಿಸಿದರು

b)

ಎರಡು ನದಿಗಳನ್ನು ಬೇರ್ಪಡಿಸಿದರು

c)

ಎರಡು ನದಿಗಳ ಹರಿಯುವ ದಿಕ್ಕು ಬದಲಾಯಿಸಿದರು

d)

ಎರಡು ನದಿಗಳನ್ನು ಕೂಡಿಸಿದರು

39.

ವಿಶ್ವೇಶ್ವರಯ್ಯನವರು ಮೂರು ವರ್ಷಗಳ ಕಾಲ ಮೈಸೂರು ಸಂಸ್ಥಾನದಲ್ಲಿ ಯಾವ ವೃತ್ತಿಯಲ್ಲಿ ಕಾರ್ಯ ನಿರ್ವಹಿಸಿದರು?

a)

ಸಹಾಯಕ ಇಂಜಿನಿಯರ್

b)

ಮುಖ್ಯ ಇಂಜಿನಿಯರ್

c)

ಡೆಪ್ಯೂಟಿ ಇಂಜಿನಿಯರ್

d)

ಯಾವುದು ಅಲ್ಲ

40.

ಕನ್ನಂಬಾಡಿ ಜಲಾಶಯವನ್ನು ಯಾವ ನದಿಗೆ ಕಟ್ಟಲಾಗಿದೆ

a)

ಕಾವೇರಿ

b)

ನೇತ್ರಾವತಿ

c)

ಹೇಮಾವತಿ

d)

ವೇದಾವತಿ

41.

ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದವರು ಯಾರು?

a)

ಮಹಾತ್ಮ ಗಾಂಧೀಜಿ

b)

ಲಾರ್ಡ್ ಸಂಡ್ ಹರ್ಸ್ಟ್

c)

ಜವಾಹರಲಾಲ್ ನೆಹರು

d)

ಸರ್ ಎಂ ವಿಶ್ವೇಶ್ವರಯ್ಯ

42.

ವಿಶ್ವೇಶ್ವರಯ್ಯನವರು ದಿವಾನರನ್ನಾಗಿ ನೇಮಕವಾದಾಗ ಮೊದಲು ಮಾಡಿದ ಆಡಳಿತದ ಯೋಜನೆ ಯಾವುದು?

a)

ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಗಳ ಅಧಿಕಾರ ಪ್ರತ್ಯೇಕ

b)

ಕೃಷಿ ಕಾರ್ಮಿಕರಿಗೆ ಸಾಲ ಸೌಲಭ್ಯ

c)

ರೈತರಿಗೆ ಭೂಮಿ ದತ್ತು ಯೋಜನೆ

d)

ಅಸಹಾಯಕರಿಗೆ ಉಚಿತ ವೇತನ

43.

ಯಾರ ಆಡಳಿತ ಕಾಲದಲ್ಲಿ 'ಮೈಸೂರು ಮಾದರಿ' ಎಂಬ ಹೊಸ ಆಡಳಿತ ಮಾದರಿ ಜನ್ಮತಾಳಿತು?

a)

ನಾಲ್ವಡಿ ಕೃಷ್ಣರಾಜ ಒಡೆಯರು

b)

ಚಿಕ್ಕದೇವರಾಜ ಒಡೆಯರು

c)

ದೊಡ್ಡ ದೇವರಾಜ ಒಡೆಯರು

d)

ಜಯಚಾಮರಾಜೇಂದ್ರ ಒಡೆಯರ್

44.

ವಿಶ್ವೇಶ್ವರಯ್ಯನವರು ಎಲ್ಲಾ ಸಮಸ್ಯೆಗಳಿಗೆ ಪರಮೋಚ್ಛ ಪರಿಹಾರ ಎಂದು ಯಾವುದನ್ನು ನಂಬಿದ್ದರು

a)

ಆಧುನಿಕ ಶಿಕ್ಷಣ

b)

ಪ್ರಾಚೀನ ಶಿಕ್ಷಣ

c)

ಬ್ರಿಟಿಷ್ ಅಕ್ಷಣ

d)

ಗುರುಕುಲ ಶಿಕ್ಷಣ

45.

ವಿಶ್ವೇಶ್ವರಯ್ಯನವರು ಎಷ್ಟರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆ ಜಾರಿಗೆ ತಂದರು?

a)

1913

b)

1923

c)

1916

d)

1915

46.

ವಿಶ್ವೇಶ್ವರಯ್ಯನವರು ದಿವಾನರಾದ ಪ್ರಥಮದಲ್ಲಿ ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ಯಾರು ನಡೆಸುತ್ತಿದ್ದರು?

a)

ಮೈಸೂರು ವಿಶ್ವವಿದ್ಯಾನಿಲಯ

b)

ಮದ್ರಾಸ್ ವಿಶ್ವವಿದ್ಯಾನಿಲಯ

c)

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು

d)

ಮೈಸೂರು ಒಡೆಯರು

47.

ಈ ಚಿತ್ರದಲ್ಲಿ ಕಾಣುತ್ತಿರುವುದು ಏನು?

a)

ಮೈಸೂರು ಮೆಡಿಕಲ್ ಕಾಲೇಜ್

b)

ಮೈಸೂರು ವಿಶ್ವವಿದ್ಯಾನಿಲಯ

c)

ಮೈಸೂರು ವಿದ್ಯುತ್ ಕಾರ್ಖಾನೆ

d)

ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ

48.

ಈ ಚಿತ್ರದಲ್ಲಿ ಕಾಣುವ ಕಟ್ಟಡ ಕನ್ನಡ ಸಾಹಿತ್ಯ ಅಭಿವೃದ್ಧಿಗೆ ರಚನೆಯಾಗಿದೆ ಹಾಗಾದರೆ ಇದು ಎಲ್ಲಿದೆ?

a)

ಬೆಂಗಳೂರು

b)

ಚಿಕ್ಕಬಳ್ಳಾಪುರ

c)

ತುಮಕೂರು

d)

ಮೈಸೂರು

49.

ಈ ಚಿತ್ರದಲ್ಲಿ ಕಾಣುತ್ತಿರುವ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಖಾನೆ ವಿಶ್ವೇಶ್ವರಯ್ಯನವರ ಕೊಡುಗೆ. ಇದು ಎಲ್ಲಿ ಸ್ಥಾಪಿತವಾಗಿದೆ?

a)

ಭದ್ರಾವತಿ

b)

ತರೀಕೆರೆ

c)

ದಾಂಡೇಲಿ

d)

ಮೈಸೂರು

50.

ಈ ಚಿತ್ರದಲ್ಲಿ ಕಾಣುತ್ತಿರುವ ಪ್ರತಿಮೆ ವಿಶ್ವೇಶ್ವರಯ್ಯನವರದು. ಇದು ಎಲ್ಲಿದೆ

a)

ಮುದ್ದೇನಹಳ್ಳಿ

b)

ಮಳವಳ್ಳಿ

c)

ಮೈಸೂರು

d)

ಮುಂಡ್ಯ

51.

ವ್ಯಾಸಂಗದಲ್ಲಿ ಕ್ರಮ ನಿಷ್ಠರಾಗಿದ್ದ ವಿಶ್ವೇಶ್ವರಯ್ಯನವರು ಜೀವನದಲ್ಲಿ ಯಾವುದನ್ನು ಸಾಧಿಸಬೇಕೆಂಬ ದೃಢನಿರ್ಧಾರವನ್ನು ಹೊಂದಿದ್ದರು

a)

ಉನ್ನತವಾದುದನ್ನು

b)

ಉದ್ಯೋಗವನ್ನು

c)

ಇಂಜಿನಿಯರ್ ನೌಕರಿಯನ್ನು

d)

ಸರ್ಕಾರಿ ನೌಕರಿಯನ್ನು