NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವೃಕ್ಷಸಾಕ್ಷಿ)
Total questions: 50
Worksheet time: 25mins
Name
Class
Date
1.
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯು ಹೊನ್ನನ್ನು ಎಲ್ಲಿ ಅವಿತಿಟ್ಟರು ?
a)
ಉದ್ಯಾನವನದೊಳಗಿನ ಆಲದ ಮರದ ಕೆಳಗೆ
b)
ಉದ್ಯಾನವನದಲ್ಲಿದ್ದ ಆಲದ ಮರದ ಮೇಲೆ
c)
ಉದ್ಯಾನವನದೊಳಗಿನ ಆಲದ ಮರದ ಪೊಟರೆಯೊಳಗೆ
d)
ಉದ್ಯಾನದೊಳಗಿನ ಕಲ್ಲು ಪೊಟರೆಯೊಳಗೆ
2.
ಧರ್ಮಬುದ್ಧಿಯನ್ನು ವಂಚಿಸಿದವರು
a)
ಧರ್ಮಾಧಿಕರಣರು
b)
ದುಷ್ಟಬುದ್ಧಿ
c)
ಪ್ರೇಮವತಿ
d)
ದ್ರುಪದ ರಾಜ
3.
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ತೋರಿಸಿದನು ?
a)
ಹೊನ್ನು ಹಂಚಿಕೊಂಡ ಆರೋಪ
b)
ಹೊನ್ನು ಬಚ್ಚಿಟ್ಟ ಆರೋಪ
c)
ಹೊನ್ನು ಕದ್ದ ಆರೋಪ
d)
ಹೊನ್ನು ಇಟ್ಟ ವಿಚಾರವನ್ನು ಬೇರೆಯವರಿಗೆ ಹೇಳಿದ ಆರೋಪ
4.
ಸುಳ್ಳು ತನ್ನ ಮೇಲೆ ಬರುವುದೆಂದು "ಹೊನ್ನನ್ನೆಲ್ಲ ನೀನೇ ಕೊಂಡೊಯ್ದೆ " ಎಂದು ಯಾರು ಯಾರಿಗೆ ಹೇಳಿದರು ?
a)
ಧರ್ಮಬುದ್ಧಿ -ದುಷ್ಟಬುದ್ಧಿಗೆ
b)
ಪ್ರೇಮಮತಿ - ಧರ್ಮಬುದ್ಧಿಗೆ
c)
ದುಷ್ಟಬುದ್ಧಿ - ಧರ್ಮಬುದ್ಧಿಗೆ
d)
ಧರ್ಮಾಧಿಕರಣರು - ದುಷ್ಟಬುದ್ದಿಗೆ
5.
ದುಷ್ಟಬುದ್ಧಿಯು ಹೇಗೆ ಸುಳ್ಳನ್ನು ಹೇಳಿದನು ?
a)
ಅತಿಯಾದ ಮೋಸದ ಮನಸ್ಸಿನಿಂದ
b)
ಧನದ ದುರಾಸೆಯಿಂದ, ಮತಿಗೆಟ್ಟು
c)
"ಕಳ್ಳನಿಗೆ ಸುಳ್ಳೆ ಬಲ" ಎನ್ನುವ ವಾಕ್ಯ ನೆನೆಯುತ್ತ
d)
ಎಲ್ಲಾ ರೀತಿಯಿಂದಲೂ
6.
ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಹೇಗೆ ಕಳ್ಳತನದ ಆರೋಪವನ್ನು ಹೊರಿಸಿದನು ?
a)
ಹಾ ಹಾ ಕೆಟ್ಟೆನೆಂದು
b)
ಬಾಯಿಯನ್ನು,ಹೊಟ್ಟೆಯನ್ನು ಬಡಿದುಕೊಳ್ಳುತ್ತ
c)
ಬೊಬ್ಬೆ ಹಾಕಿ, ಸ್ನೇಹ ಕೆಡುವಂತೆ ನುಡಿದು
d)
ಈ ಎಲ್ಲಾ ರೀತಿ ಮಾಡಿ
7.
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಯು ತಮ್ಮ ನ್ಯಾಯವನ್ನು ಬಗೆಹರಿಸಿಕೊಳ್ಳಲು ಎಲ್ಲಿಗೆ ಬಂದರು ?
a)
ಧರ್ಮಾಧಿಕರಣರ ಬಳಿಗೆ ಬಂದರು
b)
ಪ್ರೇಮಮತಿಯ ಬಳಿಗೆ ಬಂದರು
c)
ಮಧುರಾಪುರ ನಗರಕ್ಕೆ ಬಂದರು
d)
ದುರ್ಗಸಿಂಹನ ಬಳಿಗೆ ಬಂದರು
8.
"ಹೊನ್ನನ್ನೆಲ್ಲ ಈತನೇ ತೆಗೆದುಕೊಂಡಿರುವುದಕ್ಕೆ ನನ್ನ ಬಳಿ ಸಾಕ್ಷಿ ಉಂಟು" ಎಂದು ಯಾರು ಯಾರಿಗೆ ಹೇಳಿದರು ?
a)
ದುಷ್ಟಬುದ್ಧಿ - ಧರ್ಮಬುದ್ಧಿಗೆ ಹೇಳಿದನು.
b)
ಧರ್ಮಬುದ್ಧಿ - ದುಷ್ಟಬುದ್ಧಿಗೆ ಹೇಳಿದನು.
c)
ದುಷ್ಟಬುದ್ಧಿ ಧರ್ಮಾಧಿಕರಣರಿಗೆ ಹೇಳಿದನು.
d)
ದುಷ್ಟಬುದ್ಧಿ - ಪ್ರೇಮಮತಿಗೆ ಹೇಳಿದನು.
9.
ಧರ್ಮಾಧಿಕರಣರ ಮುಂದೆ ದುಷ್ಟಬುದ್ಧಿಯು ಹೇಳಿದ ಸಾಕ್ಷಿ ಯಾರು ?
a)
ಪ್ರೇಮಮತಿ
b)
ವಟವೃಕ್ಷ
c)
ದೇವರು
d)
ಪನ್ನಗ (ಹಾವು)
10.
ಧರ್ಮಾಧಿಕರಣರು ಏಕೆ ವಿಸ್ಮಯಂ ಬಟ್ಟರು ?
a)
ದುಷ್ಟಬುದ್ಧಿ ವಟವೃಕ್ಷವೇ ಸಾಕ್ಷಿ ಎಂದು ಕೇಳಿದ್ದಕ್ಕೆ
b)
ಧರ್ಮಬುದ್ಧಿ ವಟವೃಕ್ಷವೇ ಸಾಕ್ಷಿ ಎಂದು ಹೇಳಿದ್ದಕ್ಕೆ
c)
ಧರ್ಮಬುದ್ಧಿಯೇ ಹೊನ್ನನ್ನು ಕದ್ದನು ಎಂದು ಕೇಳಿದ್ದಕ್ಕೆ
d)
ದುಷ್ಟಬುದ್ಧಿ ಸುಳ್ಳು ಹೇಳಿದ್ದಕ್ಕೆ
11.
"ಈತನ ಮಾತು ಆಶ್ರುತಪೂರ್ವಮ್"ಎಂದು ಹೇಳಿದವರು
a)
ಪ್ರೇಮಮತಿ
b)
ಧರ್ಮಾಧಿಕರಣರು
c)
ಧರ್ಮಬುದ್ಧಿ
d)
ದುಷ್ಟಬುದ್ಧಿ
12.
"ವೃಕ್ಷವನ್ನು ಸಾಕ್ಷಿ ಎಂದು ಈ ಹಿಂದೆ ಹೇಳಿದವರು ಕೇಳಿದವರು ಇಲ್ಲ" ಎಂದು ಹೇಳಿದವರು ಯಾರು ?
a)
ಧರ್ಮಾಧಿಕರಣರು
b)
ದುಷ್ಟಬುದ್ಧಿ
c)
ಧರ್ಮಬುದ್ಧಿ
d)
ಪ್ರೇಮಮತಿ
13.
"ಮನುಷ್ಯರ ಸುಕೃತ ದುಷ್ಕೃತ್ಯಗಳನ್ನು ದೇವರೇ ತಿಳಿಯುತ್ತಾನೆ ಆದ್ದರಿಂದ ಈ ಸಾಕ್ಷಿ ಉಚಿತವಾದುದು" ಎಂದು ಯಾರು ಹೇಳಿದರು ?
a)
ಧರ್ಮಾಧಿಕರಣರು
b)
ದುಷ್ಟಬುದ್ಧಿ
c)
ಧರ್ಮಬುದ್ಧಿ
d)
ಪ್ರೇಮಮತಿ
14.
"ಮರವನ್ನು ಮಾತನಾಡಿಸುವುದು ನಿಗೂಢವಾದುದು ಈ ಸಾಕ್ಷಿಯನ್ನು ಒಪ್ಪಿಕೊಳ್ಳಬೇಕು" ಎಂದು ಯಾರು ಯಾರಿಗೆ ಹೇಳಿದರು ?
a)
ಧರ್ಮಾಧಿಕರಣರು - ದುಷ್ಟಬುದ್ದಿಗೆ
b)
ಧರ್ಮಾಧಿಕರಣರು - ಧರ್ಮಬುದ್ಧಿಗೆ
c)
ದುಷ್ಟಬುದ್ಧಿ - ಪ್ರೇಮಮತಿಗೆ
d)
ಪ್ರೇಮಮತಿ - ಧರ್ಮಾಧಿಕರಣರಿಗೆ
15.
"ವಟವೃಕ್ಷದ ಪೊಟರೆಯೊಳಗೆ ಅಡಗಿದ್ದು ಧರ್ಮಬುದ್ಧಿಯೆ ಹೊನ್ನನ್ನು ತೆಗೆದುಕೊಂಡು ಹೋದನು ಎಂದು ನುಡಿಯಬೇಕು" ಎಂಬ ಮಾತನ್ನು ಯಾರು ಯಾರಿಗೆ ಹೇಳಿದರು ?
a)
ಧರ್ಮಬುದ್ಧಿ - ದುಷ್ಟಬುದ್ಧಿಗೆ
b)
ದುಷ್ಟಬುದ್ಧಿ - ಪ್ರೇಮಮತಿಗೆ
c)
ಧರ್ಮಾಧಿಕರಣರು - ದುಷ್ಟ ಬುದ್ದಿಗೆ
d)
ದುಷ್ಟಬುದ್ಧಿ -ಧರ್ಮಬುದ್ಧಿಗೆ
16.
ಪ್ರೇಮಮತಿ ಸುಳ್ಳುಸಾಕ್ಷಿ ಹೇಳುವ ವಿಚಾರದಲ್ಲಿ ದುಷ್ಟಬುದ್ದಿಗೆ ಯಾವ ಹಿತನುಡಿಗಳನ್ನು ಹೇಳಿದನು ?
a)
ಪರರ ಧನವನ್ನು ಅಪಹರಿಸುವುದು ತಪ್ಪು.
b)
ವಿಶ್ವಾಸಘಾತುಕ ಮಾಡುವುದು ತಪ್ಪು.
c)
ಸ್ವಾಮಿದ್ರೋಹ ಮಾಡುವುದು ತಪ್ಪು
d)
ಈ ಎಲ್ಲ ಹಿತನುಡಿಗಳು
17.
"ನಿನ್ನ ಪಳುವಗೆ ನಮ್ಮ ಕುಲಮನೆಲ್ಲಮನಲಳಿವ ಬಗೆ" (ನಿನ್ನ ಕೆಟ್ಟ ಕಾರ್ಯಕ್ಕೆ ನಮ್ಮ ಕುಲವನ್ನೆಲ್ಲ ನಾಶ ಮಾಡುವ ಬಗೆ) ಸರಿಯಲ್ಲ ಎಂದು ಯಾರು ಯಾರಿಗೆ ಹೇಳಿದರು ?
a)
ಧರ್ಮಬುದ್ಧಿ - ದುಷ್ಟಬುದ್ಧಿಗೆ
b)
ದುಷ್ಟಬುದ್ಧಿ - ಧರ್ಮಬುದ್ಧಿಗೆ
c)
ಪ್ರೇಮಮತಿ - ದುಷ್ಟಬುದ್ದಿಗೆ
d)
ಧರ್ಮಾಧಿಕರಣರು - ದುಷ್ಟಬುದ್ಧಿಯ
18.
ದುಷ್ಟಬುದ್ಧಿಯು ತನ್ನ ತಂದೆ ಪ್ರೇಮಮತಿಯನ್ನು ಮರದ ಪೊಟರೆಯೊಳಗೆ ಹೇಗೆ ಹೊಕ್ಕಿಸಿದನು ?
a)
ಹರಕೆಯ ಕುರಿ ಪುಗಿಸುವಂತೆ
b)
ಪೂಜೆ ಮಾಡುವಂತೆ
c)
ಕತ್ತಲು ಬರುವಂತೆ
d)
ಗೆದ್ದು ಬಂದೆನೆಂದು
19.
ಧರ್ಮಬುದ್ಧಿಯು ಬೆಳಗಿನ ಹೊತ್ತನ್ನು ಹೇಗೆ ಕಳೆದನು ?
a)
ದೇವರನ್ನು ಪೂಜಿಸುತ್ತ
b)
ಗುರುಗಳನ್ನು ಪೂಜಿಸುತ್ತ
c)
ದ್ವಿಜಪೂಜೆಗಳನ್ನು ಮಾಡುತ್ತ
d)
ಈ ಎಲ್ಲಾ ರೀತಿ
20.
ದುಷ್ಟಬುದ್ಧಿ ಧರ್ಮಾಧಿಕರಣರಲ್ಲಿಗೆ ಹೇಗೆ ಬಂದನು ?
a)
ಮುಖವನ್ನು ತೊಳೆಯದೆ
b)
ಪೂಜೆ-ಪುನಸ್ಕಾರ ಮಾಡಿ
c)
ಮುಖವನ್ನು ತೊಳೆದುಕೊಂಡು
d)
ಪ್ರೇಮತಿಯೊಂದಿಗೆ
21.
ಧರ್ಮಾಧಿಕರಣರು ಯಾರಿಗೆ ಅಷ್ಟವಿಧಾರ್ಚನೆಯನ್ನು ಮಾಡಿದರು ?
a)
ಧರ್ಮಬುದ್ಧಿಗೆ
b)
ದುಷ್ಟಬುದ್ಧಿಗೆ
c)
ಪ್ರೇಮಮತಿಗೆ
d)
ವಟವೃಕ್ಷಕ್ಕೆ
22.
"ನಿನ್ನನ್ನು ಸಾಕ್ಷಿಮಾಡಿ ಕೇಳುತ್ತಿದ್ದೇವೆ ನೀನು ತಪ್ಪದೇ ನುಡಿ"ಎಂದು ಯಾರು ಯಾರಿಗೆ ಹೇಳಿದರು ?
a)
ಧರ್ಮಾಧಿಕರಣರು - ಪ್ರೇಮಮತಿಗೆ
b)
ಧರ್ಮಾಧಿಕರಣರು - ವಟವೃಕ್ಷಕ್ಕೆ
c)
ಧರ್ಮಾಧಿಕರಣರು - ದುಷ್ಟಬುದ್ಧಿಗೆ
d)
ಧರ್ಮಾಧಿಕರಣರು -ಧರ್ಮಬುದ್ಧಿಗೆ
23.
ದುಷ್ಟಬುದ್ಧಿಯ ತಂದೆಯ ಹೆಸರು
a)
ಪ್ರೇಮಮತಿ
b)
ಗುಣಮತಿ
c)
ಸೂರದತ್ತ
d)
ವೃಷಭಾಂಕ
24.
"ಧರ್ಮಬುದ್ಧಿಯೆ ಧನವನ್ನು ತೆಗೆದುಕೊಂಡನು" ಎಂದು ಸುಳ್ಳು ಸಾಕ್ಷಿ ನುಡಿದವರು
a)
ವಟವೃಕ್ಷ
b)
ಪ್ರೇಮಮತಿ
c)
ದುಷ್ಟಬುದ್ಧಿ
d)
ಧರ್ಮಾಧಿಕರಣರು
25.
"ಹುಸಿಯದ ಬೇಹಾರಿಯೇ ಇಲ್ಲ" ಎಂದು ಹೇಳಿದವರು
a)
ದುಷ್ಟಬುದ್ಧಿ
b)
ಪ್ರೇಮಮತಿ
c)
ಧರ್ಮಬುದ್ಧಿ
d)
ವಟವೃಕ್ಷ
26.
ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು ?
a)
ಧರ್ಮಬುದ್ಧಿ ದುಷ್ಟಬುದ್ಧಿಯ ನಡುವಿನ ವ್ಯಾಜ್ಯ ಬಗೆಹರಿಸಲು
b)
ವಟವೃಕ್ಷಕ್ಕೆ ಪೂಜೆ ಸಲ್ಲಿಸಲು
c)
ಪ್ರೇಮಮತಿಯನ್ನು ಕರೆದುಕೊಂಡು ಹೋಗಬೇಕು
d)
ಪ್ರೇಮಮತಿಯನ್ನು ಸಾಯಿಸಲು
27.
ಧರ್ಮಬುದ್ಧಿಯು ಮರದ ಪೊಟರೆಯೊಳಗೆ ಕಿಚ್ಚನ್ನು ಹೇಗೆ ಇಕ್ಕಿದನು ?
a)
ಮರವು ಸುಡದಂತೆ
b)
ಧರ್ಮಬುದ್ಧಿಯು ಮನೆಯೊಳ್ ಕಿಚ್ಚನಿಕ್ಕುವಂತೆ
c)
ಮರಕ್ಕೆ ಕಿಚ್ಚನಿಡುವಂತೆ
d)
ಧಗಧಗನೆ ಉಳರಿಯುವಂತೆ
28.
"ಪೊನ್ನನ್ನೊಂದು ಪನ್ನಗಂ ಸುತ್ತಿ ಪಟ್ಟಿಟ್ಟಿರ್ದೊಡೆ ಕೊಳಲಂಜಿ ಪೋದೆಂ" ಎಂದು ಧರ್ಮಾಧಿಕರಣರಿಗಗೆ ಹೇಳಿದವರು
a)
ಧರ್ಮಬುದ್ಧಿ
b)
ದುಷ್ಟಬುದ್ಧಿ
c)
ಪ್ರೇಮಮತಿ
d)
ದುರ್ಗಸಿಂಹ
29.
ವಟವೃಕ್ಷದ ಪೊಟರೆ ಯೊಳಗಿಂದ ಉರುಳಿ ಸುರುಳಿ ಕಂಠಗತ ಪ್ರಾಣನಾದವನು
a)
ಧರ್ಮಬುದ್ಧಿ
b)
ದುಷ್ಟಬುದ್ಧಿ
c)
ಪ್ರೇಮಮತಿ
d)
ದುರ್ಗಸಿಂಹ
30.
ಬವರ ಪದದ ಅರ್ಥ
a)
ಬಾಳು
b)
ಜಗಳ
c)
ಬಾವಲಿ
d)
ಬದುಕು
31.
ತಮಾಲ : ಕತ್ತಲೆ : : ಪನ್ನಗ :-------
a)
ಹಾವು
b)
ಹೊನ್ನು
c)
ಸಂಪತ್ತು
d)
ವಟವೃಕ್ಷ
32.
ಮರವನ್ನು ಒಂದು ಸುತ್ತುಹಾಕಿದ ಧರ್ಮಬುದ್ಧಿಗೆ ಕಂಡದ್ದೇನು?
a)
ಹಾವು
b)
ಹೊನ್ನು
c)
ಮನುಷ್ಯ ಸಂಚಾರ
d)
ಮನುಷ್ಯ
33.
ಮರದ ಪೊಟರೆಯನ್ನು ಪ್ರವೇಶಿಸಿದ ಪ್ರೇಮ ಮತಿಯನ್ನು ದುರ್ಗಸಿಹ ಕವಿ ಯಾವುದಕ್ಕೆ ಹೋಲಿಸಿದ್ದಾರೆ?
a)
ಹರಕೆಯ ಕುರಿ
b)
ಬಳಾರಿ
c)
ಮಾರಿ
d)
ವೃಕ್ಷದೇವತೆ
34.
ಕರ್ನಾಟಕ ಪಂಚತಂತ್ರಂ ಕೃತಿಯನ್ನು ಸಂಪಾದಿಸಿದವರು ಇವರು
a)
ಚಂದ್ರಶೇಖರ ಪಾಟೀಲರು
b)
ಚಂದ್ರಶೇಖರ ಕಂಬಾರರು
c)
ಚಂದ್ರಶೇಖರ ಹೊಳ್ಳ
d)
ಚಂದ್ರಶೇಖರ ಐತಾಳರು
35.
ಮನುಷ್ಯರ ಸುಕೃತ ದುಕೃತಗಳನ್ನು ಅರಿಯುವವರು
a)
ಸ್ನೇಹಿತರು
b)
ಬಂಧುಗಳು
c)
ದೈವಗಳು
d)
ದೆವ್ವಗಳು
36.
'ಪಂಚತಂತ್ರ' ಪಾಠವನ್ನು ಬರೆದ ಕವಿ
a)
ಲಕ್ಷ್ಮೀಶ
b)
ಪಂಪ
c)
ಕುಮಾರವ್ಯಾಸ
d)
ದುರ್ಗಸಿಂಹ
37.
ಕವಿ ದುರ್ಗಸಿಂಹನ ಜನ್ಮಸ್ಥಳ
a)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
b)
ವೆಂಗಿಮಂಡಲದ ವೆಂಗಿಪಳು
c)
ಗದಗ ಪ್ರಾಂತ್ಯದ ಕೋಳಿವಾಡ
d)
ಕಿಸುಕಾಡು ನಾಡಿನ ಸಯ್ಯಡಿ
38.
ಕವಿ ದುರ್ಗಸಿಂಹನ ಕಾಲ
a)
ಕ್ರಿ.ಶ.1550
b)
ಕ್ರಿ.ಶ.902
c)
ಕ್ರಿ.ಶ.1430
d)
ಕ್ರಿ.ಶ.1031
39.
ಕವಿ ದುರ್ಗಸಿಂಹ ಬರೆದ ಕೃತಿ
a)
ಜೈಮಿನಿ ಭಾರತ
b)
ವಿಕ್ರಮಾರ್ಜುನ ವಿಜಯ
c)
ಕರ್ಣಾಟ ಭಾರತ ಕಥಾಮಂಜರಿ
d)
ಕರ್ನಾಟಕ ಪಂಚತಂತ್ರ
40.
ದುರ್ಗಸಿಂಹ ಕವಿ ಯಾರ ಆಸ್ಥಾನದಲ್ಲಿ ದಂಡನಾಯಕ ಮತ್ತು ಸಂಧಿವಿಗ್ರಹಿ ಆಗಿದ್ದನು ?
a)
ಒಂದನೆಯ ಜಗದೇಕಮಲ್ಲ
b)
ಅರಿಕೇಸರಿ
c)
ಒಂದನೇ ತೈಲಪ
d)
ಇರಿವ ಬೆಡಂಗ
41.
ಪಂಚತಂತ್ರಗಳು ಯಾವ್ಯಾವು ?
a)
ಭೇದ,ಪರೀಕ್ಷಾ,ವಿಶ್ವಾಸ, ವಂಚನಾ,ಮತ್ತು ಮಿತ್ರ ಕಾರ್ಯ.
b)
ಧರ್ಮ,ಅರ್ಥ,ಕಾಮ, ಮೋಕ್ಷ, ಶಾಂತಿ.
c)
ಕಾಮ, ಕ್ರೋಧ,ಲೋಭ,ಮೋಹ, ಮದ
d)
ಆಚಾರ,ವಿಚಾರ,ಸತ್ಯ,ನ್ಯಾಯ,ಅಹಿಂಸೆ
42.
ಮತಧರ್ಮ ಸಮನ್ವಯಕಾರನಾದ ದುರ್ಗಸಿಂಹ ಸಯ್ಯಡಿಯಲ್ಲಿ ಯಾವ ಭವನಗಳನ್ನು ನಿರ್ಮಿಸಿದ್ದಾನೆ ?
a)
ಬಸವ ಭವನ
b)
ಕನಕ ಭವನ
c)
ಹರಿಹರ ಭವನ
d)
ಶಿವ-ಪಾರ್ವತಿ ಭವನ
43.
"ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ" ಎಂಬ ನೀತಿಯನ್ನು ಪ್ರತಿಪಾದಿಸುವ ಪಾಠ
a)
ಛಲಮನೆ ಮೆರೆವೆಂ
b)
ವ್ಯಾಘ್ರಗೀತೆ
c)
ಎದೆಗೆ ಬಿದ್ದ ಅಕ್ಷರ
d)
ವೃಕ್ಷಸಾಕ್ಷಿ
44.
"ಹಣಕ್ಕಿಂತ ಗುಣ ಮೇಲು" ಎಂಬ ಆಶಯವನ್ನು ಪ್ರತಿಪಾದಿಸುವ ಪಾಠ
a)
ಯುದ್ಧ
b)
ಕೆಮ್ಮನೆ ಮೀಸೆವೊತ್ತನೆ
c)
ವೃಕ್ಷಸಾಕ್ಷಿ
d)
ಸಂಕಲ್ಪ ಗೀತೆ
45.
ವೃಕ್ಷಸಾಕ್ಷಿ ಪಾಠದಲ್ಲಿ ಬರುವ ಎರಡು ಮುಖ್ಯ ಪಾತ್ರಗಳು
a)
ಸಿದ್ದಲಿಂಗಯ್ಯ - ಅಶೋಕ ಪೈ
b)
ಧರ್ಮಬುದ್ಧಿ - ದುಷ್ಟಬುದ್ಧಿ
c)
ಪರಶುರಾಮ - ದ್ರೋಣಾಚಾರ್ಯ
d)
ಕೃಷ್ಣ - ಕರ್ಣ
46.
ವೃಕ್ಷಸಾಕ್ಷಿ ಪಾಠದ ಆಕರ ಗ್ರಂಥ
a)
ಕರ್ನಾಟಕ ಪಂಚತಂತ್ರ
b)
ವಡ್ಡಾರಾಧನೆ
c)
ಆದಿಪುರಾಣ
d)
ಅಜಿತ ತೀರ್ಥಂಕರ ಪುರಾಣ
47.
ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಎಂಬ ಇಬ್ಬರು ವ್ಯಾಪಾರಿಗಳ ಮಕ್ಕಳು ಯಾವ ನಗರದಲ್ಲಿ ಇದ್ದರು ?
a)
ಛತ್ರಾವತಿ ನಗರದಲ್ಲಿ
b)
ಮಧುರಾ ನಗರದಲ್ಲಿ
c)
ಅಯೋದ್ಯಾ ನಗರದಲ್ಲಿ
d)
ಉಜ್ಜಯಿನಿ ನಗರದಲ್ಲಿ
48.
ವ್ಯಾಪಾರದಿಂದ ಹಿಂತಿರುಗಿ ಬಂದ ಧರ್ಮಬುದ್ಧಿ ದುಷ್ಟಬುದ್ಧಿ ಎಲ್ಲಿ ಬೀಡುಬಿಟ್ಟರು ?
a)
ಮಧುರಾಪುರ ನಗರದೊಳಗೆ
b)
ಮಧುರಾಪುರ ನಗರದ ಹೊರಗಿನ ಉದ್ಯಾನವನದೊಳಗೆ
c)
ಸಯ್ಯಡಿಯಲ್ಲಿ
d)
ಧರ್ಮಾಧಿಕರಣರ ಮನೆಯಲ್ಲಿ
49.
ಅರ್ಧರಾತ್ರಿಯಲ್ಲಿ ಎದ್ದು ಹೊನ್ನನ್ನು ಹಂಚಿಕೊಳ್ಳೋಣ ಎಂದು ಯಾರು ಯಾರಿಗೆ ಹೇಳಿದರು ?
a)
ದುಷ್ಟಬುದ್ಧಿ - ಧರ್ಮಬುದ್ಧಿಗೆ
b)
ಧರ್ಮಬುದ್ಧಿ - ದುಷ್ಟಬುದ್ಧಿಗೆ
c)
ದುಷ್ಟಬುದ್ಧಿ - ಪ್ರೇಮಮತಿಗೆ
d)
ದುಷ್ಟಬುದ್ಧಿ -ಧರ್ಮಾಧಿಕರಣರಿಗೆ
50.
ಧರ್ಮಬುದ್ಧಿ ಹೊನ್ನನ್ನು ಹಂಚಿಕೊಳ್ಳೋಣ ಎಂದಾಗ ದುಷ್ಟಬುದ್ಧಿಯು ನೀಡಿದ ಸಲಹೆ
a)
ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರುವವರಲ್ಲ.
b)
ಮತ್ತೆ ಹೊರಗಡೆ ವ್ಯಾಪಾರಕ್ಕೆ ಹೋಗಬೇಕು.
c)
ಖರ್ಚಿಗೆ ತಕ್ಕಷ್ಟು ಹೊನ್ನನ್ನು ಹಂಚಿಕೊಂಡು ಉಳಿದ ಹೊನ್ನನ್ನು ಇಲ್ಲಿಯೇ ಇಡೋಣ
d)
ಈ ಎಲ್ಲ ಸಲಹೆಗಳನ್ನು ನೀಡಿದನು.
Reset
