wayground logo

Free Printable Worksheets

NEW

Font size

S
M
L
XL
Worksheets

2022 ವಾರ್ಷಿಕ, ಪೂರಕ, ಮಾದರಿ, ಪೂರ್ವಸಿದ್ಧತೆ ಆಧಾರಿತ ರಸಪ್ರಶ್ನೆ

Total questions: 54

Worksheet time: 27mins

Name
Class
Date
1.

ಭಾರತ ಮತ್ತು ಯುರೋಪಿನ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿದವರು

a)

ವಾಸ್ಕೋಡಿಗಾಮ

b)

ಕೊಲಂಬಸ್

c)

ಅಲ್ಬುಕರ್ಕ್

d)

ಅಲ್ಮೇಡ

2.

ಅಲಿ ಸಹೋದರರು ಮುನ್ನಡೆಸಿದ ಚಳುವಳಿ

a)

ಅಸಹಕಾರ

b)

ಖಿಲಾಪತ್

c)

ಕ್ವಿಟ್ ಇಂಡಿಯಾ

d)

ಕಾನೂನು ಭಂಗ

3.

ವಿಶ್ವದ ಯಾವುದೇ ಶಕ್ತಿ ಬಣಕ್ಕೂ ಸೇರದೆ ಇರುವ ನೀತಿ

a)

ವಸಾಹತುಶಾಹಿತ್ವ ನೀತ

b)

ಸಾಮ್ರಾಜ್ಯಶಾಹಿತ್ವ ನೀತಿ

c)

ಅಲಿಪ್ತ ನೀತಿ

d)

ವರ್ಣಭೇದ ನೀತಿ

4.

ಇವುಗಳಲ್ಲಿ ಸಂಭಾವನೆ ರಹಿತ ದುಡಿಮೆಗೆ ಉತ್ತಮ ಉದಾಹರಣೆ

a)

ದಾದಿ

b)

ಶಿಕ್ಷಕ

c)

ಗೃಹಿಣಿ

d)

ಪೊಲೀಸ್

5.

ಡಾ ಬಿ ಆರ್ ಅಂಬೇಡ್ಕರ್ ಅವರು ಆರಂಭಿಸಿದ ಪತ್ರಿಕೆ

a)

ಬಾಂಬೆ ಸಮಾಚಾರ

b)

ಮಂಗಳೂರು ಸಮಾಚಾರ

c)

ಮರಾಠ

d)

ಮೂಕನಾಯಕ

6.

ನಾಗಾರ್ಜುನ ಸಾಗರ ವನ್ಯಜೀವಿಧಾಮವಿರುವ ರಾಜ್ಯ

a)

ಉತ್ತರ ಪ್ರದೇಶ

b)

ತಮಿಳುನಾಡು

c)

ತೆಲಂಗಾಣ

d)

ಆಂಧ್ರ ಪ್ರದೇಶ

7.

ಪ್ರತಿ ವರ್ಷ ಮಾನವ ಹಕ್ಕುಗಳ ದಿನವನ್ನು ಆಚರಿಸುವ ದಿನ

a)

ಡಿಸೆಂಬರ್ 10

b)

ಮಾರ್ಚ್ 15

c)

ಅಕ್ಟೋಬರ್ 24

d)

ನವೆಂಬರ್ 15

8.

ಯಾವುದೇ ಪೂರ್ವ ಯೋಜನೆ ಇಲ್ಲದೆ ಒಂದು ಆಸಕ್ತಿಯ ಸುತ್ತ ನೆರೆದಿರುವ ಜನರಾಶಿಯನ್ನು ಹೀಗೆ ಕರೆಯುತ್ತಾರೆ

a)

ಗಲಭೆ

b)

ಗಲಾಟೆ

c)

ದೊಂಬಿ

d)

ಜನಮಂದೆ

9.

ಪೂರ್ವ ಘಟ್ಟ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ

a)

ಅರಾವಳಿ ಬೆಟ್ಟಗಳು

b)

ವಿಂಧ್ಯ ಸರಣಿ

c)

ನೀಲಗಿರಿ ಬೆಟ್ಟಗಳು

d)

ಸಾತ್ಪುರ ಬೆಟ್ಟಗಳು

10.

ನದಿ ಮುಖಜ ಭೂಮಿಗಳಲ್ಲಿ ಕಂಡುಬರುವ ಅರಣ್ಯಗಳ ವಿಧ

a)

ನಿತ್ಯ ಹರಿದ್ವರ್ಣ ಕಾಡುಗಳು

b)

ಪರ್ವತ ಕಾಡುಗಳು

c)

ಮ್ಯಾಂಗ್ರೋವ್ ಅರಣ್ಯಗಳು

d)

ಮರುಭೂಮಿ ಸಸ್ಯವರ್ಗ

11.

ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ರಾಷ್ಟ್ರಗಳು

a)

ಭಾರತ ಮತ್ತು ರಷ್ಯಾ

b)

ಭಾರತ ಮತ್ತು ಪಾಕಿಸ್ತಾನ

c)

ಭಾರತ ಮತ್ತು ಚೀನಾ

d)

ಭಾರತ ಮತ್ತು ಅಮೇರಿಕಾ

12.

ವಸತಿ ಹೀನರಿಗಾಗಿ ವಸತಿ ಕಲ್ಪಿಸಲು ಜಾರಿಗೆ ತಂದ ಯೋಜನೆ

a)

ಸ್ತ್ರಿ ಶಕ್ತಿ ಯೋಜನೆ

b)

ಆಶ್ರಯ ಯೋಜನೆ

c)

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ

d)

ಕೂಲಿಗಾಗಿ ಕಾಳು ಯೋಜನೆ

13.

ಮೊದಲನೇ ಆಂಗ್ಲೋ ಮರಾಠ ಯುದ್ಧದ ನಂತರ ಪೇಶ್ವೆಯಾಗಿ ನೇಮಕಗೊಂಡವರು

a)

ನಾರಾಯಣರಾವ್

b)

ಎರಡನೇ ಮಾಧವರಾವ್

c)

ನಾನಾ ಪಡ್ನವೀಸ್

d)

ರಘುನಾಥರಾವ್

14.

ಸಂಪತ್ತಿನ ಸೋರುವಿಕೆ ಸಿದ್ದಾಂತವನ್ನು ವಿವರಿಸಿದವರು

a)

ದಾದಾಬಾಯಿ ನವರೋಜಿ

b)

ಮಹಾತ್ಮ ಗಾಂಧೀಜಿ

c)

ಗೋಪಾಲಕೃಷ್ಣ ಗೋಖಲೆ

d)

ಬಾಲ ಗಂಗಾಧರ್ ತಿಲಕ್

15.

ಅಲಿಪ್ತ ನೀತಿಯನ್ನು ತನ್ನ ವಿದೇಶಾಂಗ ನೀತಿಯಲ್ಲಿ ಅನುಸರಿಸಿಕೊಂಡ ರಾಷ್ಟ್ರ

a)

ಚೀನಾ

b)

ಭಾರತ

c)

ಅಮೇರಿಕಾ

d)

ಪಾಕಿಸ್ತಾನ

16.

ಅಣ್ಣಾಮಲೈ ವನ್ಯಜೀವಿಧಾಮವಿರುವ ರಾಜ್ಯ

a)

ಕೇರಳ

b)

ತಮಿಳುನಾಡು

c)

ತೆಲಂಗಾಣ

d)

ಆಂಧ್ರಪ್ರದೇಶ

17.

ಭಾರತದಲ್ಲಿ ಗ್ರಾಹಕ ರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ

a)

1962

b)

1968

c)

1976

d)

1986

18.

ಸಂಭಾವನೆ ರಹಿತ ದುಡಿಮೆಗೆ ಒಂದು ಉತ್ತಮ ಉದಾಹರಣೆ

a)

ಬೀದಿ ಬದಿಯ ವ್ಯಾಪಾರ

b)

ಆತ್ಮ ಸಂತೋಷಕ್ಕಾಗಿ ಚಿತ್ರ ಬಿಡಿಸುವುದು

c)

ಕೈಗಾರಿಕೆಗಳಲ್ಲಿ ದುಡಿಮೆ

d)

ಶಾಲೆಗಳಲ್ಲಿ ಶಿಕ್ಷಕರ ದುಡಿಮೆ

19.

ವಿಶ್ವಗ್ರಾಹಕ ಆಂದೋಲನ ಚರಿತ್ರೆಯಲ್ಲಿ ಮಾರ್ಚ್ 15 ಪ್ರಮುಖ ದಿನವಾಗಿದೆ. ಏಕೆಂದರೆ

a)

ಅಮೆರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿಯವರು ಅಲ್ಲಿನ ಪ್ರಜೆಗಳಿಗೆ ಸಂರಕ್ಷತೆ, ಮಾಹಿತಿ, ನಿವೇದನೆ ಮತ್ತು ಪರಿಹಾರ ಹಕ್ಕುಗಳನ್ನು ನೀಡಿದರು

b)

ವಿಶ್ವಸಂಸ್ಥೆಯು ವಿಶ್ವ ಗ್ರಾಹಕ ಹಕ್ಕುಗಳನ್ನು ಘೋಷಿಸಿದ ದಿನವಾಗಿದೆ

c)

ಇಂಗ್ಲೆಂಡಿನ ಪ್ರಜೆಗಳಿಗೆ ರಾಜನು ಗ್ರಾಹಕ ಹಕ್ಕುಗಳನ್ನು ನೀಡಿದ ದಿನವಾಗಿದೆ

d)

ಭಾರತದ ಅರ್ಥವ್ಯವಸ್ಥೆಯನ್ನು ವಿಶ್ವದ ಅರ್ಥವ್ಯವಸ್ಥೆಯೊಂದಿಗೆ ಒಗ್ಗೂಡಿಸಿದ ದಿನವಾಗಿದೆ

20.

ಉಷ್ಣವಲಯದ ಎಲೆ ಉದುರಿಸುವ ಕಾಡುಗಳನ್ನು ಮಾನ್ಸೂನ್ ಕಾಡುಗಳೆಂದು ಕರೆಯುತ್ತಾರೆ. ಏಕೆಂದರೆ

a)

ಭಾರತದಲ್ಲಿ ಅತಿ ವಿಸ್ತಾರವಾಗಿ ಹರಡಿರುವುದರಿಂದ ಕರೆಯುತ್ತಾರೆ

b)

ಇವು ನೈರುತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ಉತ್ತಮವಾಗಿ ಬೆಳೆಯುವುದರಿಂದ ಕರೆಯುತ್ತಾರೆ

c)

ವರ್ಷದ ನಿರ್ದಿಷ್ಟ ಒಣಹವೆಯ ಋತುವಿನಲ್ಲಿ ಎಲೆ ಉದುರಿಸುವುದನ್ನು ರೂಢಿಸಿಕೊಂಡಿರುವುದರಿಂದ ಕರೆಯುತ್ತಾರೆ

d)

ಇವು ಋತುಗಳಿಗನುಗುಣವಾಗಿ ವೇಗವಾಗಿ ಬೆಳೆಯುವುದರಿಂದ ಕರೆಯುತ್ತಾರೆ

21.

ಚಿಪ್ಕೋ ಚಳುವಳಿಯ ಪ್ರಮುಖ ಪರಿಣಾಮ

a)

ಮರಗಳನ್ನು ಕಡಿಯಲು ಸರ್ಕಾರ ನೀಡಿದ ಅನುಮತಿ ರದ್ದಾಯಿತು

b)

ಸಾಮಾನ್ಯ ಜನರಿಗೆ ಪರಿಸರದ ಮಹತ್ವದ ಅರಿವು ಮೂಡಿಸುವುದು

c)

ಅಣೆಕಟ್ಟು ನಿರ್ಮಾಣ ಕಾರ್ಯ ಸ್ಥಗಿತವಾಯಿತು

d)

ಜೀವ ಸಂಕುಲಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು

22.

ಬೇಸಿಗೆಯಲ್ಲಿ ಭಾರತದ ಉಷ್ಣಾಂಶ ಹೆಚ್ಚಾಗಿರಲು ಕಾರಣ

a)

ಸಮಭಾಜಕ ವೃತ್ತಕ್ಕೆ ದೂರದಲ್ಲಿದೆ

b)

ಉತ್ತರ ಭಾರತವು ಸಮುದ್ರದಿಂದ ದೂರದಲ್ಲಿದೆ

c)

ಸೂರ್ಯನ ಲಂಬ ಕಿರಣಗಳು ಉತ್ತರಾರ್ಧಗೋಳದ ಮೇಲೆ ಬೀಳುವುದರಿಂದ ಅಧಿಕವಾಗಿರುತ್ತದೆ

d)

ಉತ್ತರ ಭಾರತದಲ್ಲಿ ಥಾರ್ ಮರುಭೂಮಿ ಇದೆ

23.

ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು

a)

ಡಾಲ್ ಹೌಸಿ

b)

ವಿಲಿಯಂ ಬೆಂಟಿಂಕ್

c)

ಲಾರ್ಡ್ ವೆಲ್ಲೆಸ್ಲಿ

d)

ಕಾರನ್ ವಾಲೀಸ್

24.

ಎರಡನೇ ಆಂಗ್ಲೋ-ಮೈಸೂರು ಯುದ್ಧವನ್ನು ಕೊನೆಗಾಣಿಸಿದ ಒಪ್ಪಂದ

a)

ಮದ್ರಾಸ್

b)

ಮಂಗಳೂರು

c)

ಶ್ರೀರಂಗಪಟ್ಟಣ

d)

ಮುಂಬೈ

25.

1962 ರಲ್ಲಿ ಭಾರತದ ಮೇಲೆ ಅಕ್ರಮಣ ಮಾಡಿದ ನೆರೆಯ ದೇಶ

a)

ಪಾಕಿಸ್ತಾನ

b)

ಚೀನಾ

c)

ಭೂತಾನ್

d)

ಅಫ್ಘಾನಿಸ್ತಾನ್

26.

ಭಾರತದ ನೈಜ ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು

a)

ವಿವೇಕಾನಂದರು

b)

ಜ್ಯೋತಿಬಾ ಪುಲೆ

c)

ಅಂಬೇಡ್ಕರ್

d)

ಗಾಂಧೀಜಿ

27.

ಈ ನಕ್ಷೆಯಲ್ಲಿರುವ ಸ್ಥಳಗಳ ಸರಿಯಾದ ಆಯ್ಕೆಯನ್ನು ಗುರುತಿಸಿ

a)

ಎ) ಭಾಕ್ರಾನಂಗಲ್ ಬಿ) 82 1/2 ಪೂರ್ವ ರೇಖಾಂಶ ಸಿ) ಕೊಲ್ಕತ್ತಾ ಬಂದರು ಡಿ) ನರ್ಮದಾ ನದಿ

b)

ಎ) ಭಾಕ್ರಾನಂಗಲ್ ಬಿ) 23 1/2 ಪೂರ್ವ ರೇಖಾಂಶ ಸಿ) ಮಂಗಳೂರು ಬಂದರು ಡಿ) ನರ್ಮದಾ ನದಿ

c)

ಎ) ಭಾಕ್ರಾನಂಗಲ್ ಬಿ) 82 1/2 ಪೂರ್ವ ಅಕ್ಷಾಂಶ ಸಿ) ಮಂಗಳೂರು ಬಂದರು ಡಿ) ನರ್ಮದಾ ನದಿ

d)

ಎ) ಭಾಕ್ರಾನಂಗಲ್ ಬಿ) 82 1/2 ಪೂರ್ವ ರೇಖಾಂಶ ಸಿ) ಮಂಗಳೂರು ಬಂದರು ಡಿ) ನರ್ಮದಾ ನದಿ

28.

ಈ ಕೆಳಗಿನ ಸರಿಯಾದ ಅನುಕ್ರಮವನ್ನು ಗುರುತಿಸಿ

a)

ಎ) 23 1/2 ಉತ್ತರ ಅಕ್ಷಾಂಶ ಬಿ) ಕಾವೇರಿ ನದಿ ಸಿ) ಕೋಸಿ ಯೋಜನೆ ಡಿ) ಮುಂಬೈ

b)

ಎ) 23 1/2 ದಕ್ಷಿಣ ಅಕ್ಷಾಂಶ ಬಿ) ಕಾವೇರಿ ನದಿ ಸಿ) ಕೋಸಿ ಯೋಜನೆ ಡಿ) ಮುಂಬೈ

c)

ಎ) 23 1/2 ಉತ್ತರ ಅಕ್ಷಾಂಶ ಬಿ) ಕಾವೇರಿ ನದಿ ಸಿ) ಗೋವಿಂದ ಸಾಗರ ಯೋಜನೆ ಡಿ) ಮುಂಬೈ

d)

ಎ) 23 1/2 ಉತ್ತರ ಅಕ್ಷಾಂಶ ಬಿ) ಗಂಗಾ ನದಿ ಸಿ) ಕೋಸಿ ಯೋಜನೆ ಡಿ) ಮುಂಬೈ

29.

ಭಾರತದಲ್ಲಿದ್ದ ಫ್ರೆಂಚರ ಪ್ರಮುಖ ವ್ಯಾಪಾರ ಕೇಂದ್ರ

a)

ಸೂರತ್

b)

ಮುಂಬೈ

c)

ಪಾಂಡಿಚೇರಿ

d)

ಕೊಚ್ಚಿನ್

30.

ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು

a)

1950

b)

1973

c)

1953

d)

1956

31.

ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿರುವ ಸಂವಿಧಾನದ ವಿಧಿಗಳು

a)

14 ರಿಂದ 35

b)

12 ರಿಂದ 35

c)

19 ರಿಂದ 35

d)

21 ರಿಂದ 35

32.

ಕರ್ನಾಟಕದಲ್ಲಿ ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿಯ ನಾಯಕತ್ವ ವಹಿಸಿದ್ದವರು

a)

ಮೆಧಾಪಾಟ್ಕರ್

b)

ಶಿವರಾಮ ಕಾರಂತ

c)

ಸುಂದರ್ ಲಾಲ್ ಬಹುಗುಣ

d)

ಚಂಡಿಪ್ರಸಾದ್ ಭಟ್

33.

ಭಾರತದಲ್ಲಿ ಮೂರು ಹಂತದ ಪಂಚಾಯತ್ ರಾಜ್ಯ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದ ಸಂವಿಧಾನದ ತಿದ್ದುಪಡಿ

a)

73

b)

42

c)

24

d)

17

34.

ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ

a)

ಉಳಿತಾಯ ಖಾತೆ

b)

ಚಾಲ್ತಿ ಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

35.

ವೆಲ್ಲೆಸ್ಲಿಯು ತನ್ನ ಹುದ್ದೆಗೆ ರಾಜೀನಾಮೆ ನೀಡಿ ಇಂಗ್ಲೆಂಡಿಗೆ ಮರಳಿದನು. ಏಕೆಂದರೆ

a)

ಇಂಗ್ಲೆಂಡ್ ಸರ್ಕಾರ ಅವನನ್ನು ಹಿಂದಕ್ಕೆ ಕರೆಸಿಕೊಂಡಿತು

b)

ಅವನ ಯುದ್ಧ ಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಾಗಿದ್ದರಿಂದ ರಾಜೀನಾಮೆ ನೀಡಿ ಇಂಗ್ಲೆಂಡಿಗೆ ಮರಳಿದನು

c)

ಇಂಗ್ಲೆಂಡಿನ ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡಿ ಹಿಂದಕ್ಕೆ ಕರೆಸಿಕೊಂಡಿತು

d)

ಭಾರತದಲ್ಲಿ ಅವನ ವಿರುದ್ಧ ಕ್ರಾಂತಿ ಜರುಗಿತು ಆದ್ದರಿಂದ ಇಂಗ್ಲೆಂಡಿಗೆ ತೆರಳಿದನು

36.

ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷರು

a)

ಜವಾಹರಲಾಲ್ ನೆಹರು

b)

ಡಾ. ರಾಜೇಂದ್ರ ಪ್ರಸಾದ್

c)

ಡಾ. ಬಿ ಆರ್ ಅಂಬೇಡ್ಕರ್

d)

ಡಾ. ಸರ್ವಪಲ್ಲಿ ರಾಧಾಕೃಷ್ಣನ್

37.

ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವವರು

a)

ಬ್ಯಾಂಕು

b)

ಅಂಚೆ ಕಚೇರಿ

c)

ವಿಮೆ ಇಲಾಖೆ

d)

ಕೃಷಿ ಇಲಾಖೆ

38.

ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು

a)

ಅಂಬೇಡ್ಕರ್

b)

ನೆಹರು

c)

ಗಾಂಧೀಜಿ

d)

ಸ್ವಾಮಿ ವಿವೇಕಾನಂದರು

39.

ಭಾರತದಲ್ಲಿ ಮೊದಲು ಭಾಷಾವಾರು ರಾಜ್ಯವಾಗಿ ರಚನೆಗೊಂಡ ರಾಜ್ಯ

a)

ತಮಿಳುನಾಡು

b)

ಕೇರಳ

c)

ಆಂಧ್ರಪ್ರದೇಶ

d)

ಕರ್ನಾಟಕ

40.

ಮೊದಲನೇ ಮಹಾಯುದ್ಧಕ್ಕೆ ತತಕ್ಷಣದ ಕಾರಣ

a)

ಕದನ ಬಾಂಧವ್ಯತ್ರಯ ಮತ್ತು ಕದನ ಸೌಹಾರ್ದತ್ರಯ ರಚನೆ

b)

ಅಮೇರಿಕಾದ ತಟಸ್ಥ ನೀತಿ

c)

ಅವಮಾನಕರ ವರ್ಸೇಲ್ಸ್ ಒಪ್ಪಂದ

d)

ಆರ್ಕ್ಹಡ್ಯೂಕ್ ಫರ್ಡಿನಾಂಡನ ಹತ್ಯೆ

41.

ಸಂವಿಧಾನದ 21 ಎ ವಿಧಿ ಸೂಚಿಸುವುದು

a)

ಧಾರ್ಮಿಕ ಮೂಲಭೂತ ಹಕ್ಕು

b)

ಶೋಷಣೆಯ ವಿರುದ್ಧದ ಹಕ್ಕು

c)

ಶೈಕ್ಷಣಿಕ ಮೂಲಭೂತ ಹಕ್ಕು

d)

ಸಂವಿಧಾನಾತ್ಮಕ ಪರಿಹಾರದ ಹಕ್ಕು

42.

ಕೂಲಿರಹಿತ ದುಡಿಮೆಗೆ ಉತ್ತಮ ಉದಾಹರಣೆ

a)

ಜೀತದಾಳು

b)

ಗೃಹಿಣಿ

c)

ಕೃಷಿ ಕಾರ್ಮಿಕ

d)

ಕೈತೋಟಗಾರ

43.

ಸಾಂಪ್ರದಾಯಿಕ ಶಕ್ತಿಸಂಪನ್ಮೂಲಕ್ಕೆ ಒಂದು ಉದಾಹರಣೆ

a)

ಪವನ ಶಕ್ತಿ

b)

ಸೌರಶಕ್ತಿ

c)

ಜಲವಿದ್ಯುತ್ ಶಕ್ತಿ

d)

ಸ್ವಾಭಾವಿಕ ಅನಿಲ

44.

ಭಾರತದ ಚಹದ ಬಂದರು

a)

ಮುಂಬೈ

b)

ಕೊಲ್ಕತ್ತಾ

c)

ಚೆನ್ನೈ

d)

ಕೊಚ್ಚಿ

45.

ಜಿಲ್ಲಾ ಕೈಗಾರಿಕಾ ಕೇಂದ್ರ ಸ್ಥಾಪನೆಯಾದ ವರ್ಷ

a)

1975

b)

1972

c)

1978

d)

1971

46.

ಭಾರತದ ಹಸಿರು ಕ್ರಾಂತಿಯ ಪಿತಾಮಹ

a)

ಸರ್ ಎಂ ವಿಶ್ವೇಶ್ವರಯ್ಯ

b)

ವರ್ಗೀಸ್ ಕುರಿಯನ್

c)

ಎಂ ಎಸ್ ಸ್ವಾಮಿನಾಥನ್

d)

ನಾರ್ಮನ್ ಬೋರಲಾಗ

47.

ಸರ್ದಾರ್ ವಲ್ಲಭಭಾಯ್ ಪಟೇಲ್ ರವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ. ಏಕೆಂದರೆ

a)

ದೇಶೀಯ ಸಂಸ್ಥಾನಗಳ ವಿಲಿನೀಕರಣ ಕಾರ್ಯಭಾರವನ್ನು ಯಶಸ್ವಿಗೊಳಿಸಿದ್ದರಿಂದ

b)

ಭಾರತದ ಗೃಹಮಂತ್ರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರಿಂದ

c)

ಪಾಕಿಸ್ತಾನಕ್ಕೆ ಸೋಲು ಉಂಟು ಮಾಡಿದ್ದರಿಂದ

d)

ಚೀನಾವನ್ನು ಸೋಲಿಸಿದ್ದರಿಂದ

48.

ದೆಹಲಿಯ ತೀನ್ ಮೂರ್ತಿ ಭವನದ ಪ್ರಾಮುಖ್ಯತೆ ಏನೆಂದರೆ

a)

ಮೈಸೂರು, ಹೈದರಾಬಾದ್, ಜೋಧಪುರಗಳ ಲ್ಯಾನ್ಸರಗಳ ಸ್ಮರಣೆಗಾಗಿ ನಿರ್ಮಿಸಲಾಗಿದೆ

b)

ಮೊದಲ ಮಹಾಯುದ್ಧದಲ್ಲಿ ಇಂಗ್ಲೆಂಡ್ ವಿಜಯಶಾಲಿಯಾದುದರಿಂದ ನಿರ್ಮಿಸಲಾಗಿದೆ

c)

ಭಾರತೀಯ ಸೈನಿಕರ ಸ್ಮರಣೆಗಾಗಿ ನಿರ್ಮಿಸಲಾಗಿದೆ

d)

ಇಂಗ್ಲೆಂಡಿನ ಸೈನಿಕರ ಸ್ಮರಣೆಗಾಗಿ ನಿರ್ಮಿಸಲಾಗಿದೆ

49.

ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ದೊರೆಯಬೇಕೆಂದು ಪ್ರತಿಪಾದಿಸುತ್ತಿರುವ ದೇಶ

a)

ಅಮೇರಿಕಾ

b)

ಚೀನಾ

c)

ರಷ್ಯಾ

d)

ಇಂಗ್ಲೆಂಡ್

50.

ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕ ಕಾಯಿದೆ ಜಾರಿಗೆ ತರಲಾಗಿದೆ. ಏಕೆಂದರೆ

a)

ಹೆಣ್ಣು ಭ್ರೂಣಹತ್ಯೆಗೆ ಕಾರಣವಾಗಿದೆ

b)

ಗಂಡು ಮಗುವಿನ ಹತ್ಯೆಗೆ ಕಾರಣವಾಗಬಹುದು

c)

ಹೆಣ್ಣು ಮಗುವಿನ ರಕ್ಷಣೆ

d)

ಲಿಂಗ ತಾರತಮ್ಯ ಕಡಿಮೆ ಮಾಡುವುದು

51.

ವರದಕ್ಷಿಣೆ ಎಂದರೆ

a)

ವಧುವಿನ ಕಡೆಯವರು ವರನಿಗೆ ನೀಡುವ ಉಡುಗೊರೆ

b)

ವರನ ಕಡೆಯವರು ವಧುವಿಗೆ ನೀಡುವ ಉಡುಗೊರೆ

c)

ವಧುವಿಗೆ ನೀಡುವ ಆಸ್ತಿ, ಸಂಪತ್ತು, ಹಣ ನಗ ನಾಣ್ಯ ಇತರೆ

d)

ವರನ ತಾಯಿಗೆ ನೀಡುವ ಹಣ, ಆಸ್ತಿ, ಸಂಪತ್ತು

52.

ಕಡಲ ತೀರದುದ್ದಕ್ಕೂ ಮ್ಯಾಂಗ್ರೋವ್ ಅರಣ್ಯಗಳನ್ನು ಬೆಳೆಸಬೇಕು. ಏಕೆಂದರೆ

a)

ಅರಣ್ಯ ನಾಶ ತಡೆಯಲು

b)

ಕಡಲ ಕೊರೆತ ತಡೆಯಲು

c)

ಅಧಿಕ ಮಳೆ ಬರಲು

d)

ಸಮುದ್ರ ಸ್ವಚ್ಛವಾಗಿರಲು

53.

ಸರ್ಕಾರದ ಒಂದು ವರ್ಷದ ಆದಾಯ ವೆಚ್ಚದ ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಹೀಗೆ ಕರೆಯುತ್ತಾರೆ

a)

ಆಯವ್ಯಯ

b)

ಹಣಕಾಸು

c)

ತೆರಿಗೆ

d)

ಸಾರ್ವಜನಿಕ ವೆಚ್ಚ

54.

ಮಾರುತಿಯು ವಿದೇಶಿ ಪ್ರವಾಸವನ್ನು ಕೈಗೊಳ್ಳಲು ಬಯಸುತ್ತಾನೆ. ಅವನ ಅನುಪಸ್ಥಿತಿಯಲ್ಲಿ ತನ್ನ ಎಲ್ಲಾ ಒಡವೆಗಳನ್ನು ಸಂರಕ್ಷಿಸಲು ಬ್ಯಾಂಕಿನಿಂದ ಪಡೆಯುವ ಸೇವೆ

a)

ಉಳಿತಾಯ ಖಾತೆ ತೆರೆಯುವುದು

b)

ಉಳಿತಾಯ ಪತ್ರ ಪಡೆಯುವುದು

c)

ಭದ್ರತಾ ಕಪಾಟು ಸೇವೆಯನ್ನು ಪಡೆದುಕೊಳ್ಳುವುದು

d)

ಕಿಸಾನ್ ವಿಕಾಸ್ ಪತ್ರಗಳನ್ನು ಪಡೆಯುವುದು