wayground logo

Free Printable Worksheets

NEW

Font size

S
M
L
XL
Worksheets

3.ದ್ವಿತೀಯ ಭಾಷೆ ರಸಪ್ರಶ್ನೆ : ಜ್ಞಾನಯೋಗಿ ಪುಟ್ಟರಾಜ ಗವಾಯಿಗಳು

Total questions: 50

Worksheet time: 25mins

Name
Class
Date
1.
'ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳು' ಪಾಠದ ಲೇಖಕರು
a)
ಬಸವರಾಜ ಸಬರದ
b)
ರಮೇಶಗೌಡ .ಎಂ. ಕೆ
c)
ಗೋಪಾಲಕೃಷ್ಣ ಅಡಿಗ
d)
ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು
2.
ಕೆ.ಎಂ. ರಮೇಶಗೌಡ ಅವರ ಜನ್ಮಸ್ಥಳ
a)
ಕೊಪ್ಪಳ ಜಿಲ್ಲೆಯ ಕುಕನೂರು
b)
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಿತ್ತೂರು
c)
ಉಡುಪಿ ಜಿಲ್ಲೆಯ ಕುಂದಾಪುರ
d)
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೆಡಿಯಾಲ
3.
ಕೆ.ಎಂ. ರಮೇಶಗೌಡ ರವರು ಎಷ್ಟರಲ್ಲಿ ಜನಿಸಿದರು ?
a)
1954
b)
1975
c)
1918
d)
1951
4.
ಕೆ.ಎಂ. ರಮೇಶಗೌಡ ಅವರು ರಚಿಸಿದ ಕೃತಿಗಳು ರಚಿಸಿದ ಕೃತಿಗಳು
a)
ಅಮೃತಕ್ಕೆ ಹಾರಿದ ಗರುಡ
b)
ರೂಪ ಬಯಲು
c)
ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು
d)
ಇಲ್ಲಿ ಹೇಳಿರುವ ಎಲ್ಲವೂ
5.
ಕೆ.ಎಂ. ಸುರೇಶ್ ಗೌಡ ಅವರಿಗೆ ದೊರೆತ ಪ್ರಶಸ್ತಿಗಳು
a)
ರತ್ನಾಕರವರ್ಣಿ ಮುದ್ದಣ ದತ್ತಿ ಪ್ರಶಸ್ತಿ
b)
ಕರ್ನಾಟಕ ರತ್ನ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
d)
ಇಲ್ಲಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ
6.
ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಹುಟ್ಟೂರು ಯಾವುದು ?
a)
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ದೇವರ ಹೊಸಪೇಟೆ
b)
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಿತ್ತೂರು
c)
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೆಡಿಯಾಲ
d)
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೆಟ್ಟದೂರು
7.
ಪುಟ್ಟರಾಜ ಗವಾಯಿಗಳ ಜನನ
a)
ಕ್ರಿ.ಶ.1914
b)
ಕ್ರಿ.ಶ.1915
c)
ಕ್ರಿ.ಶ.1916
d)
ಕ್ರಿ.ಶ.1917
8.
ಪುಟ್ಟರಾಜ ಗವಾಯಿಗಳ ತಂದೆತಾಯಿಗಳು ಯಾರು ?
a)
ಚಂದ್ರಶೇಖರಯ್ಯ ಮತ್ತು ರೇವಮ್ಮ
b)
ರೇವಣಯ್ಯ ಮತ್ತು ಸಿದ್ದಮ್ಮ
c)
ಸಿದ್ದಯ್ಯ ಮತ್ತು ರೇವಮ್ಮ
d)
ಪಂಚಾಕ್ಷರಿ ಮತ್ತು ರೇವಮ್ಮ
9.
"ನಾನು ನಾನು ಹುಟ್ಟಿದ ಆರು ತಿಂಗಳಿಗೆ ದೃಷ್ಟಿ ಹೋಗ್ಯಾವ" ಎಂದು ಹೇಳಿದವರು ಯಾರು ?
a)
ಪಂಚಾಕ್ಷರಿ ಗವಾಯಿಗಳು
b)
ರೇವಣಯ್ಯ
c)
ಸಿದ್ದಮ್ಮ
d)
ಪುಟ್ಟರಾಜ ಗವಾಯಿಗಳು
10.
ಪುಟ್ಟರಾಜ ಗವಾಯಿಗಳ ಕಣ್ಣು ಹೋಗಲು ಕಾರಣ
a)
ತೊನಸಿ ಕಣ್ಣೊಳಗೆ ಬಿದ್ದು ಕಣ್ಣಿನ ಗುಡ್ಡೆ ಹರಿದು ಹೋಗಿದ್ದರಿಂದ
b)
ಕಣ್ಣಿನೊಳಗೆ ನೀರು ಹೋಗಿದ್ದರಿಂದ
c)
ಕಣ್ಣಿಗೆ ಕಟ್ಟಿಗೆ ಬಡಿದಿದ್ದರಿಂದ
d)
ಇಂದ್ರನ ಶಾಪದಿಂದ
11.
ಬಾಲಕ ಪುಟ್ಟಯ್ಯನಿಗೆ ಯಾವ ಆಸೆ ಇದ್ದಿತು ?
a)
ಶಾಸ್ತ್ರ ಕಲಿಯುವ ಆಸೆ
b)
ಹಕ್ಕಿಗಳನ್ನು ಹಿಡಿಯುವ ಆಸೆ
c)
ಏಣಿಯನ್ನು ಏರುವ ಆಸೆ
d)
ಹಾರ್ಮೋನಿಯಂ ನುಡಿಸುವ ಆಸೆ
12.
ಬಾಲಕ ಪುಟ್ಟಯ್ಯ ಯಾವ ಸಮಯದಲ್ಲಿ ಮಾವನ ಹಾರ್ಮೋನಿಯಂ ನುಡಿಸಲಾರಂಭಿಸಿದನು ?
a)
ಮಾವ ಮನೆಯಲ್ಲಿ ಇಲ್ಲದ ಸಮಯದಲ್ಲಿ
b)
ಮಾವ ಮನೆಯಲ್ಲಿ ಇರುವ ಸಮಯದಲ್ಲಿ
c)
ಮಾವ ನಿದ್ದೆ ಮಾಡುತ್ತಿದ್ದ ಸಮಯದಲ್ಲಿ
d)
ಮಾವ ಮಠಕ್ಕೆ ಹೋದ ಸಮಯದಲ್ಲಿ
13.
ಜನರು ಜನರು ಪುಟ್ಟಯ್ಯರ ಮನೆಯ ಒಳಗೆ ಬಂದು ಕುಳಿತು ಕೊಳ್ಳಲು ಕಾರಣ
a)
ಪುಟ್ಟಯ್ಯನ ಆರ್ತನಾದ
b)
ಪುಟ್ಟಯ್ಯನ ಸಂಗೀತದ ನಾದಮಾಧುರ್ಯ
c)
ಪುಟ್ಟಯ್ಯನ ಕಣ್ಣು ಕಳೆದುಕೊಂಡಿದ್ದಕ್ಕೆ
d)
ಪುಟ್ಟಯ್ಯ ಅಳಲು ಆರಂಭಿಸಿದ್ದರಿಂದ
14.
ಪುಟ್ಟಯ್ಯನ ಮಾವ ಆಶ್ಚರ್ಯಚಕಿತನಾದನು ಏಕೆ ?
a)
ಮನೆಯ ಒಳಗೆ-ಹೊರಗೆ ಜನರ ಗುಂಪು ಕಂಡು
b)
ಪುಟ್ಟಯ್ಯ ಪಂಚಾಕ್ಷರಿ ಗವಾಯಿಗಳ ಹತ್ತಿರ ಹೋದದ್ದು
c)
ಪುಟ್ಟಯ್ಯ ನಿಗೆ ಕಣ್ಣು ಹೋದದ್ದು ಕಂಡು
d)
ಪುಟ್ಟಯ್ಯ ಮನೆ ಬಿಟ್ಟು ಹೋಗಿದ್ದು
15.
ಪುಟ್ಟಯ್ಯನ ಮಾವ ನಿಬ್ಬೆರಗಾದದ್ದು ಏಕೆ ?
a)
ಪುಟ್ಟಯ್ಯ ಹಾರ್ಮೋನಿಯಂ ತೆಗೆದುಕೊಂಡು ಹೋಗಿದ್ದು
b)
ಪುಟ್ಟಯ್ಯ ಹಾರ್ಮೋನಿಯಂ ಎತ್ತಿ ಹಾಕಿದ್ದರಿಂದ
c)
ಪುಟ್ಟ ಬಾಲಕ ಪುಟ್ಟಯ್ಯ ಹಾರ್ಮೋನಿಯಂ ನುಡಿಸುತ್ತಿದ್ದರು ಕಂಡು
d)
ಪುಟ್ಟಯ್ಯ ಹಾರ್ಮೋನಿಯಮ್ ಅನ್ನು ಸರಿಯಾಗಿ ನುಡಿಸಲಿಲ್ಲ ವಾದ್ದರಿಂದ
16.
"ಮಗು ಇಂದಿನಿಂದ ಇದು ನನ್ನ ಹಾರ್ಮೋನಿಯಮ್ ಅಲ್ಲ ನಿನ್ನದು " ಎಂದು ಹೇಳಿದವರು
a)
ಪುಟ್ಟಯ್ಯನ ತಾಯಿ
b)
ಪುಟ್ಟಯ್ಯನ ಗುರುಗಳು
c)
ಪುಟ್ಟಯ್ಯನ ಮಾವ
d)
ಪುಟ್ಟಯ್ಯನ ತಂದೆ
17.
ಪುಟ್ಟಯ್ಯನ ಮಾವನ ಹೆಸರು
a)
ಪಂಚಾಕ್ಷರಿ
b)
ಚಂದ್ರಶೇಖರಯ್ಯ
c)
ರೇವಣಯ್ಯ
d)
ರೇವಣಸಿದ್ದಯ್ಯ
18.
ಸಂಗೀತ ಲೋಕದಲ್ಲಿ ದೃವತಾರೆಯಂತೆ ಬೆಳೆಗುತ್ತಿದ್ದವರು
a)
ಪಂಡಿತ ಪಂಚಾಕ್ಷರಿ ಗವಾಯಿಗಳು
b)
ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳು
c)
ಮಾವ ಚಂದ್ರಶೇಖರಯ್ಯ
d)
ತಂದೆ ರೇವಣಯ್ಯ
19.
ಸಂಗೀತ ಲೋಕದ ಜಗದ್ಗುರು ಎನಿಸಿಕೊಂಡವರು
a)
ಪಂಡಿತ ಪಂಚಾಕ್ಷರಿ ಗವಾಯಿಗಳು
b)
ಪಂಡಿತ ಪುಟ್ಟರಾಜ ಗವಾಯಿಗಳು
c)
ಪುಟ್ಟರಾಜರ ಮಾವ ಚಂದ್ರಶೇಖರಯ್ಯ
d)
ಪುಟ್ಟರಾಜರ ತಂದೆ ರೇವಣಯ್ಯ
20.
ಪಂಡಿತ ಪಂಚಾಕ್ಷರ ಗವಾಯಿಗಳ 'ಸಂಚಾರಿ ಸಂಗೀತ ಪಾಠಶಾಲೆ' ಇಲ್ಲಿ ಕ್ಯಾಂಪ್ ಮಾಡಿತ್ತು ?
a)
ಮೂರು ಸಾವಿರಮಠದಲ್ಲಿ
b)
ಹಾನಗಲ್ಲಿನಲ್ಲಿ
c)
ಹೊಸಪೇಟೆಯಲ್ಲಿ
d)
ಗವಿ ಮಠದಲ್ಲಿ
21.
ಪುಟ್ಟರಾಜ ಗವಾಯಿಗಳ ಗುರುಗಳು
a)
ಮಾವ ಚಂದ್ರಶೇಖರಯ್ಯ
b)
ತಂದೆ ರೇವಣಯ್ಯ
c)
ಪಂಚಾಕ್ಷರಿ ಗವಾಯಿಗಳು
d)
ಸಪ್ತಾಕ್ಷರಿ ಗವಾಯಿಗಳು
22.
"ಜಗತ್ತನ್ನು ನೋಡದ ನನಗೆ ಜಗತ್ತಿಗೆ ಏನು ಕೊಡಲು ಸಾಧ್ಯ ? ಎಂಬ ವಿಷಣ್ಣ ಭಾವ ಯಾರಲ್ಲಿ ಇರಲಿಲ್ಲ ?
a)
ಪುಟ್ಟರಾಜ ಗವಾಯಿಗಳಲ್ಲಿ
b)
ಪಂಚಾಕ್ಷರ ಗವಾಯಿಗಳಲ್ಲಿ
c)
ಮಾವ ಚಂದ್ರಶೇಖರಯ್ಯನವರಲ್ಲಿ
d)
ತಾಯಿ ಸಿದ್ದಮ್ಮನವರಲ್ಲಿ
23.
ಪುಟ್ಟರಾಜ ಗವಾಯಿಗಳ ನಿರ್ಧಾರ ಏನಾಗಿತ್ತು ?
a)
ಪಂಚಾಕ್ಷರ ಗುರುಗಳನ್ನು ಅನುಸರಿಸಬೇಕು.
b)
ಪಂಚಾಕ್ಷರ ಗುರುಗಳ ನುಡಿಯೆ ನನಗೆ ಮಂತ್ರ
c)
ಪಂಚಾಕ್ಷರ ಗುರುಗಳ ನಡೆಯೇ ನನಗೆ ಹಾಚರಾಗಬೇಕು.
d)
ಈ ಎಲ್ಲಾ ನಿರ್ಧಾರಗಳು
24.
ಗುರುಶಿಷ್ಯರೀರ್ವರ ಬಾಹ್ಯ ಕಣ್ಣು ಅಳಿಸಿದ್ದರು ಯಾವ ಕಣ್ಣು ತೆರೆದಿತ್ತು ?
a)
ಮೂರನೆಯ ಕಣ್ಣು
b)
ಅಂತರಂಗದ ಕಣ್ಣು
c)
ಹೊರಗಿನ ಕಣ್ಣು
d)
ಒಂದನೇ ಕಣ್ಣು
25.
ಶಿಷ್ಯರ ಮನಸ್ಸನ್ನು ಓದಬಲ್ಲವರು ಯಾರು ?
a)
ಶ್ರೇಷ್ಠ ಗುರು
b)
ಶ್ರೇಷ್ಠ ದೇವರು
c)
ಶ್ರೇಷ್ಠ ಮಿತ್ರ
d)
ಇವರೆಲ್ಲರೂ
26.
ಶಿಷ್ಯರ ಅಭಿಲಾಷೆಗೆ ತಕ್ಕಂತೆ ಜ್ಞಾನ ಕೊಡುವ ಶಕ್ತಿ ಯಾರಿಗೆ ಸಿದ್ಧಿಸಿರುತ್ತದೆ ?
a)
ಮಾವನವರಿಗೆ
b)
ತಂದೆಯವರಿಗೆ
c)
ಶ್ರೇಷ್ಠ ಗುರುವಿಗೆ
d)
ಜನರಿಗೆ
27.
ಪುಟ್ಟಯ್ಯರ ಸಂಗೀತ ಜ್ಞಾನದೊಂದಿಗೆ ಸಾಹಿತ್ಯ ಜ್ಞಾನ ಬೆರೆತರೆ ಅದು :
a)
ಶಿವ-ಪಾರ್ವತಿಯರು ಒಂದಾದಂತೆ
b)
ಗುರು - ಶಿಷ್ಯರು ಒಂದಾದಂತೆ
c)
ಗಂಗೆ - ಯಮುನೆಯರು ಒಂದಾದಂತೆ
d)
ತಂದೆ-ತಾಯಿಗಳು ಒಂದಾದಂತೆ
28.
ಇವುಗಳಲ್ಲಿ ಸರಿಯಾದ ಜೋಡಿ
a)
ಪಾಣಿನಿ - ಅಷ್ಟಾಧ್ಯಾಯಿ
b)
ಕೇಶಿರಾಜ - ಶಬ್ದಮಣಿದರ್ಪಣ
c)
ನಿಜಗುಣ - ಕೈವಲ್ಯ ಪದ್ಧತಿ
d)
ಈ ಎಲ್ಲವೂ ಸರಿಯಾಗಿವೆ.
29.
ಪುಟ್ಟಯ್ಯನವರ ಕಲಿತ ಶಾಸ್ತ್ರ
a)
ತರ್ಕಶಾಸ್ತ್ರ ಮತ್ತು ನ್ಯಾಯಶಾಸ್ತ್ರ
b)
ಶಬ್ದಾನುಶಾಸ್ತ್ರ
c)
ಛಂದಶ್ಯಾಸ್ತ್ರ
d)
ಈ ಎಲ್ಲ ಶಾಸ್ತ್ರಗಳು
30.
ಪುಟ್ಟರಾಜ ಗವಾಯಿಗಳವರಿಗೆ ಕಣ್ಣು ಕಾಣದಿದ್ದರೂ ಹೇಗೆ ಓದುತ್ತಿದ್ದರು
a)
ಬ್ರೈಲ್ ಲಿಪಿಯ ಮೂಲಕ
b)
ಅಂತರಂಗದ ಕಣ್ಣಿನ ಮೂಲಕ
c)
ಕಂಪ್ಯೂಟರ್ ಮೂಲಕ
d)
ಗುರುಗಳ ಮೂಲಕ
31.
ಪಂಚಾಕ್ಷರ ಗವಾಯಿಗಳ ಸಂಚಾರಿ ಸಂಗೀತ ಪಾಠಶಾಲೆ ಹೊಳೆಆಲೂರಿನಲ್ಲಿ ಕ್ಯಾಂಪ್ ಹಾಕಿದಾಗ ಪುಟ್ಟರಾಜನನ್ನು ನೋಡಲು ಬಂದವರು
a)
ಮಾವ ಚಂದ್ರಶೇಖರಯ್ಯ
b)
ತಂದೆ ರೇವಣಯ್ಯ
c)
ತಾಯಿ ಸಿದ್ದಮ್ಮ
d)
ಊರಿನ ಜನರು
32.
ಪಂಚಾಕ್ಷರ ಗವಾಯಿಗಳ ಪಾದಕ್ಕೆರಗಿ ಪುಟ್ಟರಾಜರ ತಾಯಿ ಸಿದ್ದಮ್ಮ ಏನು ಬೇಡಿಕೊಂಡರು ?
a)
ಪುಟ್ಟಯ್ಯಗೆ ಸಂಗೀತ ಕಲಿಸುವಂತೆ
b)
ಪುಟ್ಟಯ್ಯಗೆ ಕಣ್ಣು ಹಾಕಿಸುವಂತೆ
c)
ಪುಟ್ಟಯ್ಯಗೆ ವಿದ್ಯೆ ಕಲಿಸುವಂತೆ
d)
ಪುಟ್ಟಯ್ಯನನ್ನು ಮನೆಗೆ ಕಳುಹಿಸುವಂತೆ
33.
ಸಿದ್ದಮ್ಮ ಮಗನನ್ನು ಮನೆಗೆ ಕಳುಹಿಸುವಂತೆ ಪಂಚಾಕ್ಷರ ಗವಾಯಿಗಳಲ್ಲಿ ಬೇಡಿಕೊಂಡಾಗ ಅವರು ಏನು ಹೇಳಿದರು ?
a)
ಅವನು ಬರುವುದಿಲ್ಲ
b)
ಅವನು ಬಂದರೆ ಕರೆದುಕೊಂಡು ಹೋಗು ತಾಯಿ
c)
ಅವನು ಬರುತ್ತಾನೆ ಕರೆದುಕೊಂಡು ಹೋಗು ತಾಯಿ
d)
ಅವನು ಬರುವುದಿಲ್ಲ ಕರೆದುಕೊಂಡು ಹೋಗಬೇಡ ತಾಯಿ
34.
ಸಿದ್ದಮ್ಮ ಪುಟ್ಟಯ್ಯನನ್ನು ಮನೆಗೆ ಬರುವಂತೆ ಕೇಳಿಕೊಂಡಾಗ ಪುಟ್ಟಯ್ಯ ಹೇಳಿದ್ದು
a)
ಗುರು ಪಂಚಾಕ್ಷರರೆ ನನ್ನ ಸರ್ವಸ್ವ, ಅವರ ಆಜ್ಞಾಧಾರಕ ನಾನು
b)
ನನ್ನ ಮಗನೆಂಬ ಭಾವವನ್ನು ತೊಡೆದುಹಾಕಿ ನನ್ನನ್ನು ಸಮಾಜಕ್ಕೆ ಅರ್ಪಿಸು ತಾಯಿ
c)
ಸಮಾಜದ ಋಣವನ್ನು ತೀರಿಸದೆ ಅದು ಹೇಗೆ ಮನೆಗೆ ಬರಲಿ ತಾಯಿ
d)
ಎಲ್ಲಾ ರೀತಿಯಲ್ಲಿ ಹೇಳಿದರು
35.
"ಗುರು ಪಂಚಾಕ್ಷರರು ತೋರುವ ಮಾರ್ಗದಲ್ಲಿ ನೀನು ನಡೆದು ಅಮರನಾಗು" ಎಂದು ಪುಟ್ಟಯ್ಯಗೆ ಹೇಳಿದವರು
a)
ತಂದೆ ರೇವಣಯ್ಯ
b)
ಮಾವ ಚಂದ್ರಶೇಖರಯ್ಯ
c)
ತಾಯಿ ಸಿದ್ದಮ್ಮ
d)
ಗುರು ಪಂಚಾಕ್ಷರರು
36.
ಪಂಚಾಕ್ಷರರು ಯಾರ ತತ್ವಾನುಯಾಯಿಗಳಾಗಿದ್ದರು ?
a)
ಪುಟ್ಟರಾಜರ ತತ್ವಾನುಯಾಯಿಗಳು
b)
ಗಾಂಧೀಜಿಯವರ ತತ್ವಾನುಯಾಯಿಗಳು
c)
ಸ್ವಾಮಿ ವಿವೇಕಾನಂದರ ತತ್ವಾನುಯಾಯಿಗಳು
d)
ಇವರೆಲ್ಲರ ತತ್ವಾನುಯಾಯಿಗಳು
37.
ಪುಟ್ಟರಾಜರ ಬಾಹ್ಯ ವ್ಯಕ್ತಿತ್ವದ ಗುರುತುಗಳು
a)
ಶುಭ್ರವಾದ ಬಿಳಿ ಅಂಗಿ, ಪಂಚೆ
b)
ತಲೆಗೆ ಕೆಂಪು ಪಟ್ಟಗ, ನೊಸಲಲ್ಲಿ ತ್ರಿಪುಂಡ ಭಸ್ಮ
c)
ಕೊರಳಲ್ಲಿ ರುದ್ರಾಕ್ಷಿ, ಕೈಯಲ್ಲಿ ಉದ್ದನೆಯ ಬೆತ್ತ
d)
ಇವೆಲ್ಲವೂ ಹೌದು
38.
ಪುಟ್ಟರಾಜರು ಯಾವ ಯಾವ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು
a)
ಕನ್ನಡ
b)
ಹಿಂದಿ
c)
ಸಂಸ್ಕೃತ
d)
ಈ ಎಲ್ಲಾ ಭಾಷೆಗಳಲ್ಲಿ
39.
ಪುಟ್ಟರಾಜರಿಗೆ ದೊರೆತ ಪ್ರಶಸ್ತಿ
a)
ಬಸವಶ್ರೀ ಪ್ರಶಸ್ತಿ
b)
ನಾಡೋಜ ಪುರಸ್ಕಾರ
c)
ಪದ್ಮಭೂಷಣ ಪ್ರಶಸ್ತಿ
d)
ಈ ಎಲ್ಲಾ ಪ್ರಶಸ್ತಿಗಳು ದೊರೆತಿವೆ
40.
ಗಾನಯೋಗಿ, ಜ್ಞಾನಯೋಗಿ ಎಂದು ಪ್ರಸಿದ್ಧರಾದವರು
a)
ಪುಟ್ಟರಾಜ ಗವಾಯಿಗಳು
b)
ಗವಿಮಠದ ಶ್ರೀಗಳು
c)
ಚಂದ್ರಶೇಖರಯ್ಯನವರು
d)
ಇವರೆಲ್ಲರೂ
41.
ಪಂಚಾಕ್ಷರಿ ಗವಾಯಿಗಳು ಖಾದಿಬಟ್ಟೆ ತೊಡಲು ನಿರ್ಧರಿಸಿದ್ದು
a)
ಸ್ವದೇಶಿ ಆಂದೋಲನಕ್ಕೆ ಕೈಜೋಡಿಸಲು
b)
ಸ್ವಾಮಿಗಳಾದವರು ಅವುಗಳನ್ನು ತೊಡಬೇಕೆಂದು
c)
ತಾಯಿಯವರ ಆಜ್ಞೆಯಂತೆ
d)
ಗಾಂಧೀಜಿಯವರ ಆಜ್ಞೆಯಂತೆ
42.
ಪುಟ್ಟರಾಜರು ಸಂಗೀತವನ್ನು ಕಲಿತರು - ಈ ವಾಕ್ಯವು ಯಾವ ಕಾಲದಲ್ಲಿದೆ ?
a)
ಭೂತಕಾಲ
b)
ವರ್ತಮಾನ ಕಾಲ
c)
ಭವಿಷ್ಯತ್ಕಾಲ
d)
ವಿದ್ಯಾರ್ಥಕ ಕಾಲ
43.
ಪುಟ್ಟರಾಜ ಗವಾಯಿಗಳು ಸಂಗೀತ ಕಲಿಯಲು ಹೋಗುತ್ತಾರೆ -ಈ ವಾಕ್ಯವು
a)
ಭೂತಕಾಲದಲ್ಲಿದೆ
b)
ವರ್ತಮಾನ ಕಾಲದಲ್ಲಿದೆ
c)
ಭವಿಷ್ಯತ್ಕಾಲದಲ್ಲಿದೆ
d)
ನಿಷೇಧಾರ್ಥಕ ಕಾಲದಲ್ಲಿದೆ
44.
ಇವುಗಳಲ್ಲಿ ಭವಿಷ್ಯತ್ ಕಾಲದಲ್ಲಿರುವ ವಾಕ್ಯ
a)
ಪುಟ್ಟರಾಜರು ಸಂಗೀತವನ್ನು ಕಲಿತರು.
b)
ಪುಟ್ಟರಾಜರು ಸಂಗೀತ ಕಲಿಯಲು ಹೋಗುತ್ತಾರೆ.
c)
ಪುಟ್ಟರಾಜರು ಸಂಗೀತ ಕಲಿಯಲು ಹೋಗುವರು.
d)
ಪುಟ್ಟರಾಜರು ಸಂಗೀತ ಕಲಿಯರು.
45.
ಪ್ರಥಮ ವಿಭಕ್ತಿ ಕಾರಕ
a)
ಅಪದಾನ ಕಾರಕ
b)
ಸಂಪ್ರದಾನ ಕಾರಕ
c)
ಕರ್ತ ಕಾರಕ
d)
ಕರಣ ಕಾರಕ
46.
ಸಂಗೀತವನ್ನು - ಈ ಪದದಲ್ಲಿನ ವಿಭಕ್ತಿಯ ಹೆಸರು
a)
ಪ್ರಥಮ ವಿಭಕ್ತಿ
b)
ದ್ವಿತೀಯಾ ವಿಭಕ್ತಿ
c)
ತೃತೀಯಾ ವಿಭಕ್ತಿ
d)
ಚತುರ್ಥೀ ವಿಭಕ್ತಿ
47.
ಸಪ್ತಮಿ ವಿಭಕ್ತಿ ಪ್ರತ್ಯಯ ಹೊಂದಿರುವ ಪದ
a)
ಗೂಡಿನಲ್ಲಿ
b)
ಸಂಗೀತದಿಂದ
c)
ಮನೆಗೆ
d)
ಗವಾಯಿಗಳನ್ನು
48.
ಹಕ್ಕಿಗೆ ಎಂಬ ಪದಕ್ಕೆ ಯಾವ ಕಾರಕ ಹತ್ತುತ್ತದೆ ?
a)
ಸಂಪ್ರದಾನ
b)
ಅಪದಾನ
c)
ಸಂಬಂಧ
d)
ಅಧಿಕರಣ
49.
ಸಪ್ತಮಿ ವಿಭಕ್ತಿ ಕಾರಕ
a)
ಸಂಪ್ರದಾನ
b)
ಅಪದಾನ
c)
ಸಂಬಂಧ
d)
ಅಧಿಕರಣ
50.
ಪಂಚಮಿ ವಿಭಕ್ತಿ ಪ್ರತ್ಯಯ
a)
ಅನ್ನು
b)
ಇಂದ
c)
ದೆಸೆಯಿಂದ
d)
ಅಲ್ಲಿ