wayground logo

Free Printable Worksheets

Font size

S
M
L
XL
Worksheets

ಕಾಬ೯ನ್ ಮತ್ತು ಅದರ ಸಂಯುಕ್ತಗಳು ಭಾಗ - 3

Total questions: 15

Worksheet time: 11mins

Name
Class
Date
1.

L P G (gas stove) ಒಲೆಯಿಂದ ಬರುವ ಜ್ವಾಲೆಯು ನೀಲಿ ಬಣ್ಣದಾಗಿರುತ್ತದೆ ಆದರೆ ಸೀಮೆಎಣ್ಣೆ ಒಲೆಯಿಂದ ಬರುವ ಜ್ವಾಲೆಯು ಕೆಂಪು ಬಣ್ಣದಾಗಿರುತ್ತದೆ ಇದಕ್ಕೆ ಕಾರಣ

a)

ಏಕೆಂದರೆ L P G ಪಯಾ೯ಪ್ತ ಹೈಡ್ರೋಕಾಬ೯ನ್ ಆದರೆ ಸೀಮೆಎಣ್ಣೆ ಅಪಯಾ೯ಪ್ತ

b)

ಏಕೆಂದರೆ L P G ಅಪಯಾ೯ಪ್ತ ಹೈಡ್ರೋಕಾಬ೯ನ್ ಆದರೆ ಸೀಮೆಎಣ್ಣೆ ಪಯಾ೯ಪ್ತ

c)

ಏಕೆಂದರೆ L P G ಮತ್ತು ಸೀಮೆಎಣ್ಣೆ ಎರಡೂ ಪಯಾ೯ಪ್ತ ಹೈಡ್ರೋಕಾಬ೯ನ್

d)

ಏಕೆಂದರೆ L P G ಮತ್ತು ಸೀಮೆಎಣ್ಣೆ ಎರಡೂ ಅಪಯಾ೯ಪ್ತ ಹೈಡ್ರೋಕಾಬ೯ನ್

2.

ಸುಮಾ ತನ್ನ ಮನೆಯ ಗ್ಯಾಸ್ ಒಲೆಯ ಮೇಲೆ ಅಡುಗೆ ಮಾಡಿದ ಪಾತ್ರೆಗಳ ಹೊರ ಮೇಲ್ಮೈನ ತಳ ಕಪ್ಪಾಗಿರುವುದನ್ನು ಕಾಣುತ್ತಾಳೆ. ಈ ಸಮಸ್ಯೆಗೆ ಕಾರಣವೇನಾಗಿರಬಹುದು 🤔🤔🤔

a)

ಪಾತ್ರೆಯು ಕಡಿಮೆ ಗುಣಮಟ್ಟದ ಲೋಹದಿಂದ ತಯಾರಾಗಿರಬಹುದು

b)

ಒಲೆಯಲ್ಲಿ ಬಳಸುತ್ತಿರುವ L P G ಅನಿಲ ಕಡಿಮೆ ಗುಣಮಟ್ಟದಾಗಿರಬಹುದು

c)

ಇಂಧನ ಉರಿಯಲು ಅವಶ್ಯವಿರುವ ಗಾಳಿ, ಪ್ರವೇಶಿಸುವ ರಂಧ್ರಗಳಲ್ಲಿ ಗಾಳಿಯ ಚಲನೆಗೆ ಅಡಚಣೆ ಉಂಟಾಗಿರಬಹುದು.

d)

ಮೇಲಿನ ಎಲ್ಲವೂ

3.

ಈ ರಾಸಾಯನಿಕ ಸಮೀಕರಣದಲ್ಲಿ ಬಳಸಿರುವ ಕ್ಷಾರೀಯ KMnO4 ಅಥವಾ ಆಮ್ಲೀಯ K2 Cr2 O7 ಗಳ ಕಾಯ೯

a)

ಅಪಕಷ೯ಣಾಕಾರಿಯಾಗಿ

b)

ಉತ್ಕಷ೯ಣಾಕಾರಿಯಾಗಿ

c)

ಉತ್ಕಷ೯ಣಾ - ಅಪಕಷ೯ಣಾಕಾರಿಯಾಗಿ

d)

ಅಪಕಷ೯ಣಾ - ಉತ್ಕಷ೯ಣಾಕಾರಿಯಾಗಿ

4.
a)

ಕೋಬಾಲ್ಟ್ ಮತ್ತು ನಿಕ್ಕಲ್

b)

ನಿಕ್ಕಲ್ ಮತ್ತು ಪೆಲ್ಲಾಡಿಯಂ

c)

ಪೆಲ್ಲಾಡಿಯಂ ಮತ್ತು ಕ್ರೋಮಿಯಂ

d)

ಕ್ರೋಮಿಯಂ ಮತ್ತು ಕೋಬಾಲ್ಟ್

5.
a)

ಪ್ರಾಣಿಜನ್ಯಕೊಬ್ಬು ಪಯಾ೯ಪ್ತ ಕೊಬ್ಬಿನಿಂದಾದ ಕಾರಣ ಸುಲಭವಾಗಿ ಜೀಣ೯ವಾಗುವುದಿಲ್ಲ

b)

ಪ್ರಾಣಿಜನ್ಯಕೊಬ್ಬು ಅಪಯಾ೯ಪ್ತ ಕೊಬ್ಬಿನಿಂದಾದ ಕಾರಣ ಸುಲಭವಾಗಿ ಜೀಣ೯ವಾಗುವುದಿಲ್ಲ

c)

ಸಸ್ಯಜನ್ಯ ಕೊಬ್ಬು ಪಯಾ೯ಪ್ತ ಕೊಬ್ಬಿನಿಂದಾದ ಕಾರಣ ಸುಲಭವಾಗಿ ಜೀಣ೯ವಾಗುವುದಿಲ್ಲ

d)

ಸಸ್ಯಜನ್ಯ ಕೊಬ್ಬು ಅಪಯಾ೯ಪ್ತ ಕೊಬ್ಬಿನಿಂದಾದ ಕಾರಣ ಸುಲಭವಾಗಿ ಜೀಣ೯ವಾಗುವುದಿಲ್ಲ

6.

CH4 + Cl2 -----> CH3 Cl + HCl

CH3 Cl + Cl2 -----> CH2 Cl2 + HCl ಸೂಯ೯ನ ಬೆಳಕಿನ ಸಮ್ಮುಖದಲ್ಲಿ ನಡೆಯುವ ಈ ಕ್ರಿಯೆಗಳ ವಿಧ

a)

ಸಂಕಲನ ಕ್ರಿಯೆ

b)

ಉತ್ಕಷ೯ಣ ಕ್ರಿಯೆ

c)

ಅಪಕಷ೯ಷ ಕ್ರಿಯೆ

d)

ಆದೇಶನ ಕ್ರಿಯೆ

7.

ಎಲ್ಲಾ ಆಲ್ಕೋಹಾಲ್ ಯುಕ್ತ ಪಾನೀಯಗಳ ಸಕ್ರಿಯ ಘಟಕ ____________

a)

ಮಿಥೆನಾಲ್

b)

ಮಿಥೈಲ್ ಆಲ್ಕೋಹಾಲ್

c)

ಎಥನಾಲ್

d)

ಪ್ರೊಪೆನಾಲ್

8.

ಎಥನಾಲ್, ಸೋಡಿಯಂ ನೊಂದಿಗೆ ವತಿ೯ಸಿದಾಗ ಬಿಡುಗಡೆಯಾಗುವ ಅನಿಲ

a)

ಆಕ್ಸಿಜನ್

b)

ನೈಟ್ರೋಜನ್

c)

ಹೈಡ್ರೋಜನ್

d)

ಹ್ಯಾಲೋಜನ್

9.

ಕೆಲವು ದೇಶಗಳು ಪೆಟ್ರೋಲ್ ನೊಂದಿಗೆ ಆಲ್ಕೋಹಾಲ್ ನ್ನು ಮಿಶ್ರಣಮಾಡಿ ಇಂಧನವಾಗಿ ಬಳಸಲು ಕಾರಣ

a)

ಆಲ್ಕೋಹಾಲ್ ಶುದ್ಧ ಇಂಧನವಾಗಿದ್ದು ದಹಿಸಿದಾಗ ಕೇವಲ CO2 ಮತ್ತು ನೀರನ್ನು ಉತ್ಪತ್ತಿಮಾಡುತ್ತದೆ

b)

ಆಲ್ಕೋಹಾಲ್ ಅಶುದ್ಧ ಇಂಧನವಾಗಿದ್ದು ದಹಿಸಿದಾಗ ಕೇವಲ CO2 ಮತ್ತು ನೀರನ್ನು ಉತ್ಪತ್ತಿಮಾಡುತ್ತದೆ

c)

ಪೆಟ್ರೋಲ್ ಶುದ್ಧ ಇಂಧನವಾಗಿದ್ದು ದಹಿಸಿದಾಗ ಕೇವಲ CO2 ಮತ್ತು ನೀರನ್ನು ಉತ್ಪತ್ತಿಮಾಡುತ್ತದೆ

d)

ಪೆಟ್ರೋಲ್ ಅಶುದ್ಧ ಇಂಧನವಾಗಿದ್ದು ದಹಿಸಿದಾಗ ಕೇವಲ CO2 ಮತ್ತು ನೀರನ್ನು ಉತ್ಪತ್ತಿಮಾಡುತ್ತದೆ

10.

ಉಪ್ಪಿನಕಾಯಿಯ ಸಂರಕ್ಷಕವಾಗಿ ಬಳಸುವ ವಿನೇಗರ್ ರಾಸಾಯನಿಕವಾಗಿ -------- ಆಗಿರುತ್ತದೆ.

(ಸೂಚನೆ : ಒಂದಕ್ಕಿಂತ ಹೆಚ್ಚು ಆಯ್ಕೆಗಳು ಸರಿಯಾಗಿವೆ.)

a)

ಎಥನೋಯಿಕ್ ಆಮ್ಲ

b)

ಅಸಿಟಿಕ್ ಆಮ್ಲ

c)

ಮೆಥೆನೋಯಿಕ್ ಆಮ್ಲ

d)

ಪ್ರೊಪೆನೋಯಿಕ್ ಆಮ್ಲ

11.

ಆಮ್ಲ , ಆಲ್ಕೋಹಾಲ್ ನೊಂದಿಗೆ ವತಿ೯ಸಿದಾಗ ಉಂಟಾಗುವ ಮಧುರ ಪರಿಮಳವುಳ್ಳ ವಸ್ತುಗಳು

a)

ಎಸ್ಟರ್ ಗಳು

b)

ಈಥರ್ ಗಳು

12.

ಎಥನೋಯಿಕ್ ಆಮ್ಲವು ಸೋಡಿಯಂ ಕಾಬೋ೯ನೇಟ್ ನೊಂದಿಗೆ ವತಿ೯ಸಿದಾಗ ಬಿಡುಗಡೆಯಾಗುವ ಅನಿಲವನ್ನು ಸುಣ್ಣದ ತಿಳಿ ನೀರಿನ ಮೂಲಕ ಹಾಯಿಸುವುದರಿಂದ ಪತ್ತೆ ಹಚ್ಚಬಹುದು ಹಾಗಾದರೆ ಆ ಅನಿಲ ಯಾವುದು ?

a)

ಹೈಡ್ರೋಜನ್

b)

ಕಾಬ೯ನ್ ಡೈ ಆಕ್ಸೈಡ್

c)

ಕಾಬ೯ನ್ ಮೊನಾಕ್ಸೈಡ್

d)

ನೈಟ್ರೋಜನ್

13.

ಸೋಡಿಯಂಹೈಡ್ರಾಕ್ಸೈಡ್,ಎಸ್ಟರ್ ಗಳೊಂದಿಗೆ ವತಿ೯ಸಿದಾಗ ಉಂಟಾಗುವ ಉತ್ಪನ್ನವೇ ------------

a)

ಸಾಬೂನು

b)

ಮಾಜ೯ಕ

c)

ಸೋಡಿಯಂ ಕಾಬೋ೯ನೇಟ್

d)

ಸೋಡಿಯಂ ಹೈಡ್ರೋಜನ್ ಕಾಬೋ೯ನೇಟ್

14.

ಚಿತ್ರದಲ್ಲಿರುವ ಸಾಬೂನಿನ ಅಣುವಿನ ಜಲಾಕಷ೯ಕ ಮತ್ತು ಜಲ ವಿಕಷ೯ಕ ತುದಿಗಳಾವುವು ?

a)

ಅಯಾನಿಕ ತುದಿ ಜಲ ವಿಕಷ೯ಕ ಹೈಡ್ರೋಕಾಬ೯ನ್ ತುದಿ ಜಲಾಕಷ೯ಕ

b)

ಅಯಾನಿಕ ತುದಿ ಜಲಾಕಷ೯ಕ ಹೈಡ್ರೋ~ಕಾಬ೯ನ್ ತುದಿ ಜಲ ವಿಕಷ೯ಕ

c)

ಅಯಾನಿಕ ತುದಿ ಮತ್ತು ಹೈಡ್ರೋಕಾಬ೯ನ್ ತುದಿ ಜಲಾಕಷ೯ಕ

d)

ಅಯಾನಿಕ ತುದಿ ಮತ್ತು ಹೈಡ್ರೋಕಾಬ೯ನ್ ತುದಿ ಜಲವಿಕಷ೯ಕ

15.

ಕೆಂಪು ಅಥವಾ ನೀಲಿ ಲಿಟ್ಮಸ್ ಕಾಗದವನ್ನು ಸಾಬೂನಿನ ದ್ರಾವಣದಲ್ಲಿ ಅದ್ದಿದಾಗ ಯಾವ ಬದಲಾವಣೆಯನ್ನು ಗಮನಿಸುವಿರಿ

a)

ಕೆಂಪು ಲಿಟ್ಮಸ್ ಕಾಗದ ನೀಲಿಯಾಗುತ್ತದೆ ಮತ್ತು ನೀಲಿ ಲಿಟ್ಮಸ್ ಕಾಗದ ಕೆಂಪಾಗುತ್ತದೆ.

b)


ಕೆಂಪು ಲಿಟ್ಮಸ್ ಮತ್ತು ನೀಲಿ ಲಿಟ್ಮಸ್ ಕಾಗದ ಎರಡೂ ಕೆಂಪಾಗುತ್ತದೆ.

c)

ಕೆಂಪು ಲಿಟ್ಮಸ್ ಕಾಗದ ಮತ್ತು ನೀಲಿ ಲಿಟ್ಮಸ್ ಕಾಗದ ಎರಡೂ ನೀಲಿಯಾಗುತ್ತವೆ .

d)

ಕೆಂಪು ಲಿಟ್ಮಸ್ ಕಾಗದ ನೀಲಿಯಾಗುತ್ತದೆ ಮತ್ತು ನೀಲಿ ಲಿಟ್ಮಸ್ ಕಾಗದ ನೀಲಿಯಾಗಿಯೇ ಇರುತ್ತದೆ.