wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)

Total questions: 50

Worksheet time: 25mins

Name
Class
Date
1.
ವ್ಯಾಘ್ರಗೀತೆ ಪಾಠವನ್ನು ಬರೆದವರು
a)
ಎ. ಎನ್. ಮೂರ್ತಿರಾವ್
b)
ದೇವನೂರ ಮಹಾದೇವ
c)
ವೇದವ್ಯಾಸರು
d)
ಜಿ.ಎಸ್. ಶಿವರುದ್ರಪ್ಪ
2.
ಎ.ಎನ್.ಮೂರ್ತಿರಾವ್ ಅವರ ಪೂರ್ಣ ಹೆಸರು
a)
ಅರಕಲಗೂಡು ನರಸಿಂಹರಾವ್ ಮೂರ್ತಿರಾವ್
b)
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್
c)
ಅಕ್ಕಿ ನಾರಾಯಣ ಮೂರ್ತಿರಾವ್
d)
ಅಕ್ಕಿ ನಾಗರಾಜಮೂರ್ತಿ ರಾವ್
3.
ಎ.ಎನ್.ಮೂರ್ತಿರಾವ್ ಅವರು ಜನಿಸಿದ ವರ್ಷ
a)
ಕ್ರಿ.ಶ. 1900
b)
ಕ್ರಿ.ಶ. 1904
c)
ಕ್ರಿ.ಶ. 1905
d)
ಕ್ರಿ.ಶ. 1926
4.
ಎ.ಎನ್.ಮೂರ್ತಿರಾವ್ ಅವರ ಹುಟ್ಟಿದ ಸ್ಥಳ
a)
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
b)
ಹಾವೇರಿ ಜಿಲ್ಲೆಯ ಸವಣೂರು
c)
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
d)
ಮಂಡ್ಯ ಜಿಲ್ಲೆಯ ಮೇಲುಕೋಟೆ
5.
ಎ.ಎನ್.ಮೂರ್ತಿರಾವ್ ಅವರ ಕೃತಿಗಳು
a)
ಹಗಲುಗನಸುಗಳು, ಅಲೆಯುವ ಮನ,
b)
ಅಪರವಯಸ್ಕನ ಅಮೆರಿಕ ಯಾತ್ರೆ, ಮಿನುಗು ಮಿಂಚು
c)
ಚಂಡಮಾರುತ, ಚಿತ್ರಗಳು ಪತ್ರಗಳು, ದೇವರು
d)
ಇಲ್ಲಿ ಹೇಳಿರುವ ಎಲ್ಲವೂ
6.
ಎ.ಎನ್. ಮೂರ್ತಿರಾವ್ ಅವರಿಗೆ ದೊರೆತ ಪ್ರಶಸ್ತಿಗಳು/ಪದವಿಗಳು
a)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
b)
ಪಂಪ ಪ್ರಶಸ್ತಿ
c)
ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ಪದವಿ
d)
ಇಲ್ಲಿ ಹೇಳಿರುವ ಎಲ್ಲವೂ
7.
ಎ.ಎನ್.ಮೂರ್ತಿರಾವರವರ ಪಂಪ ಪ್ರಶಸ್ತಿ ಪಡೆದ ಕೃತಿ
a)
ದೇವರು
b)
ಚಿತ್ರಗಳು
c)
ಪತ್ರಗಳು
d)
ಹಗಲುಗನಸುಗಳು
8.
ವ್ಯಾಘ್ರಗೀತೆ' ಇದೊಂದು---
a)
ಕಥೆ
b)
ಪ್ರಬಂಧ
c)
ಲಲಿತ ಪ್ರಬಂಧ
d)
ಭಾವಗೀತೆ
9.
ಈ ವಾಕ್ಯವನ್ನು ಪೂರ್ಣಗೊಳಿಸಿ : ಎಲೆ ಬೆಕ್ಕೆ ರೂಪಿನಿಂದಲೆ........................
a)
ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ
b)
ಇಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ
c)
ಹುಲಿಯನ್ನು ಹಿಡಿದೆನೆಂದು ಗರ್ವಿಸಬೇಡ
d)
ಹುಲಿಯ ಮರಿಗೆ ಜನ್ಮ ನೀಡಿದೆ ಎಂದು ಗರ್ವಿಸಬೇಡ
10.
ಬೆಕ್ಕು ಯಾವ ಜಾತಿಗೆ ಸೇರಿರುವುದು ಹೆಮ್ಮೆಯ ವಿಷಯವಾಗಿದೆ.
a)
ಸಿಂಹ
b)
ಇಲಿ
c)
ಹುಲಿ
d)
ಚಿರತೆ
11.
ಬೆಕ್ಕಿನ ಶೌರ್ಯ ಕಳೆದುಹೋದದ್ದು…
a)
ಇಲಿ ಹಿಡಿಯುವುದರಲ್ಲಿ
b)
ಹಾಲು ಕುಡಿಯುವುದರಲ್ಲಿ
c)
ಜಿರಳೆ ತಿನ್ನುವುದರಲ್ಲಿ
d)
ಮಲಗುವುದರಲ್ಲಿ
12.
ಭಗವದ್ಗೀತೆಯನ್ನು ರಚಿಸಿದವರು..
a)
ವಾಲ್ಮೀಕಿ
b)
ಪಂಪ
c)
ವೇದವ್ಯಾಸರು
d)
ಶ್ರೀಕೃಷ್ಣ
13.
ಭರತಖಂಡದ ಹುಲಿಗಳು ಏನನ್ನು ಅನುಸರಿಸಿ ಬೇಟೆಯಾಡುತ್ತವೆ?
a)
ಪ್ರಾಣಿಗಳನ್ನು
b)
ಬೇಟೆಯನ್ನು
c)
ಧರ್ಮಶ್ರದ್ಧೆಯನ್ನು
d)
ಅಧರ್ಮವನ್ನು
14.
ಮೂರ್ತಿರಾವ್ ರವರಿಗೆ ಹುಲಿಯ ಧರ್ಮಶ್ರದ್ಧೆಯ ಅರಿವಾದುದು
a)
ಕೃಷ್ಣಮೂರ್ತಿಯವರು ಹೇಳಿದ ಕಥೆಯಿಂದ
b)
ಶಾನುಭೋಗರು ಹೇಳಿದ ಕಥೆಯಿಂದ
c)
ಪುಣ್ಯಕೋಟಿಯ ಕಥೆಯಿಂದ
d)
ಹುಲಿ ಬೇಟೆಯಾಡಿದ್ದರಿಂದ
15.
ಇದು ಕಂದಾಯ ವಿವರಗಳನ್ನೊಳಗೊಂಡ ಪುಸ್ತಕ
a)
ಕಥೆ ಪುಸ್ತಕ
b)
ಖಿರ್ದಿ ಪುಸ್ತಕ
c)
ಹಣಕಾಸು ಪುಸ್ತಕ
d)
ಚಿತ್ರಗಳು - ಪತ್ರಗಳು
16.
ಶಾನುಭೋಗರ ರಾಜಭಕ್ತಿಯ ಲಾಂಛನ
a)
ಕಿರೀಟ
b)
ಸಿಂಹಾಸನ
c)
ಖಿರ್ದಿ ಪುಸ್ತಕ
d)
ಶಾನುಭೋಗಿಕೆ
17.
ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಹೋದದ್ದು..
a)
ಸ್ನೇಹಿತನಿಗಾಗಿ
b)
ಇರಸಾಲಿಗಾಗಿ
c)
ಹಣಕ್ಕಾಗಿ
d)
ಹುಲಿ ನೋಡಲು
18.
ಶಾನುಭೋಗರು ಚಿಕ್ಕನಾಯಕನಹಳ್ಳಿಯಿಂದ ವಾಪಸ್ಸಾಗುವಾಗ ಸಮಯ ಎಷ್ಟಾಗಿತ್ತು?
a)
ಸಂಜೆ 6 ಗಂಟೆ
b)
ಮುಂಜಾನೆ 6 ಗಂಟೆ
c)
ಸಂಜೆ 7 ಗಂಟೆ
d)
ಸಂಜೆ 5 ಗಂಟೆ
19.
ಶಾನುಭೋಗರು ಯಾವ ಕಣಿವೆಯನ್ನು ದಾಟಿ ತಮ್ಮ ಹಳ್ಳಿಗೆ ಹೋಗಬೇಕಿತ್ತು.
a)
ಚಿಕ್ಕನಾಯಕನ ಕಣಿವೆ
b)
ಗುರುಲಿಂಗನ ಕಣಿವೆ
c)
ಬೆಟ್ಟದ ಕಣಿವೆ
d)
ಮದಲಿಂಗನ ಕಣಿವೆ
20.
ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದೆಂದು ಯೋಚಿಸಿದವರು..
a)
ಕೃಷ್ಣಮೂರ್ತಿ
b)
ಶಾನುಭೋಗರು
c)
ಮೂರ್ತಿರಾಯರು
d)
ಅಶೋಕ್ ಪೈ
21.
ಹುಲಿ ಮಲಗಿದ್ದು….
a)
ಕಣಿವೆಯಲ್ಲಿ
b)
ಚಿಕ್ಕನಾಯಕನ ಹಳ್ಳಿಯಲ್ಲಿ
c)
ಗುಹೆಯಲ್ಲಿ
d)
ದಾರಿಯಲ್ಲಿ
22.
"ವಿಧಿ ಆಹಾರಕ್ಕೆ ಏನನ್ನು ಒದಗಿಸುವದೋ" ಎಂದು ಯೋಚಿಸಿದವರು
a)
ಹುಲಿ
b)
ಶಾನುಭೋಗರು
c)
ಬೆಕ್ಕು
d)
ರೈತರು
23.
ಹುಲಿಯ ಘ್ರಾಣೇಂದ್ರಿಯವನ್ನು ಆಕ್ರಮಿಸಿದ್ದು…
a)
ಮಧುರವಾದ ಗಂಧ
b)
ಮಲ್ಲಿಗೆಯ ಗಂಧ
c)
ಚಂದನದ ಗಂಧ
d)
ಮನುಷ್ಯನ ವಾಸನೆ
24.
ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡ ಹುಲಿ ಶಾನುಭೋಗರ ಹತ್ತಿರ ಹೇಗೆ ಸರಿಯಿತು?
a)
ಸುಮ್ಮಸುಮ್ಮನೆ
b)
ಮೆಲ್ಲಮೆಲ್ಲನೆ
c)
ಸರಸರನೆ
d)
ಗಿರಗಿರನೆ
25.
ಶಾನುಭೋಗರಿಗೆ ಹುಲಿ ಬಂದುದರ ಅರಿವಾದುದು ಈ ಇಂದ್ರಿಯದಿಂದ..
a)
ಕಣ್ಣು
b)
ಮೂಗು
c)
ಆರನೆಯ ಇಂದ್ರಿಯ
d)
ಚರ್ಮ
26.
ಹುಲಿ ಕತ್ತೆತ್ತಿ ನೋಡಿದಾಗ ಕಂಡದ್ದು..
a)
ಶಾನುಭೋಗರ ಮುಖ
b)
ಶಾನುಭೋಗರ ಬೆನ್ನು
c)
ಶಾನುಭೋಗರ ಖಿರ್ದಿಪುಸ್ತಕ
d)
ಶಾನುಭೋಗರ ಹೊಟ್ಟೆ
27.
ಶಾನುಭೋಗರ ವಿಷಯದಲ್ಲಿ ಮೆಚ್ಚಿಕೆ ವ್ಯಕ್ತಪಡಿಸಿದ್ದು…
a)
ಲೇಖಕರು
b)
ವಿದ್ಯಾರ್ಥಿಗಳು
c)
ಹುಲಿ
d)
ರೈತರು
28.
"ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೇಕೊ"ಎಂದು ಹುಲಿಗೆ ಆಹ್ವಾನ ಕೊಟ್ಟವರು
a)
ಶಾನುಭೋಗರು
b)
ಪುಣ್ಯಕೋಟಿ ಹಸು
c)
ಕೃಷ್ಣಮೂರ್ತಿಯವರು
d)
ಬೆಕ್ಕು
29.
"ಸ್ವಧರ್ಮೇ ನಿಧನಂ ಶ್ರೇಯಃ " ಈ ವಾಕ್ಯ
a)
ಭಗವದ್ಗೀತೆಯಲ್ಲಿದೆ
b)
ಕುರಾನ್ ನಲ್ಲಿದೆ
c)
ಖಿರ್ದಿಪುಸ್ತಕದಲ್ಲಿದೆ
d)
ಬೈಬಲ್ ನಲ್ಲಿದೆ
30.
"ಸೈತಾನ್ ಹಿಂದಿರುಗು" ಎಂಬ ಮಾತು ಯಾವ ಗ್ರಂಥದಲ್ಲಿದೆ?
a)
ಬೈಬಲ್
b)
ಭಗವದ್ಗೀತೆ
c)
ಕುರಾನ್
d)
ಖಿರ್ದಿ ಪುಸ್ತಕ
31.
ಶಾನುಭೋಗರು ನಿಂತಲ್ಲೆ ಹೇಗೆ ತಿರುಗುತ್ತಿದ್ದರು ?
a)
ಬೈಸಿಕಲ್ ಚಕ್ರದಂತೆ
b)
ಕುಲಾಲ ಚಕ್ರದಂತೆ
c)
ಸುದರ್ಶನ ಚಕ್ರದಂತೆ
d)
ಅಶೋಕ ಚಕ್ರದಂತೆ
32.
ವಿಪ್ಪತ್ತಿನ ಸನ್ನಿವೇಶದಲ್ಲಿ ಶಾನುಭೋಗರ ಯೋಚನೆಗೆ ಬಂದದ್ದು...
a)
ಹುಲಿ
b)
ಇರಸಾಲು
c)
ಖಿರ್ದಿ ಪುಸ್ತಕ
d)
ಹಸಿವು
33.
"ಮಡಿಯಬೇಕಾದರೆ ಮಾಡಿಯೇ ಮಡಿಯುತ್ತೇನೆ ಎಂದು ನಿರ್ಧರಿಸಿದವರು...
a)
ಶಾನುಭೋಗರು
b)
ಕೃಷ್ಣಮೂರ್ತಿ
c)
ಲೇಖಕರು
d)
ಹುಲಿ
34.
ಶಾನುಭೋಗರ ಹತ್ತಿರವಿದ್ದ ಬ್ರಹ್ಮಾಸ್ತ್ರ ಯಾವುದು?
a)
ಖಜಾನೆಯ ಹಣ
b)
ಮಸಿಯ ಕಾಣಿಕೆ
c)
ಕುಲಾಲ ಚಕ್ರ
d)
ಖಿರ್ದಿ ಪುಸ್ತಕ
35.
ಖಿರ್ದಿ ಪುಸ್ತಕ ಮುಖಕ್ಕೆ ಬಡಿದಾಗ ಹುಲಿಗೆ ಆದದ್ದು..
a)
ಪೆಟ್ಟು
b)
ಆಶ್ಚರ್ಯ
c)
ಆಯಾಸ
d)
ಗೊಂದಲ
36.
"ದೇವರೆ ಮರ ಹತ್ತುವಷ್ಟು ಅವಕಾಶ ಕರುಣಿಸು" ಹೀಗೆಂದವರು..
a)
ಕೃಷ್ಣಮೂರ್ತಿ
b)
ಮೂರ್ತಿರಾಯರು
c)
ಶಾನುಭೋಗರು
d)
ಹುಲಿ
37.
ಕೃಷ್ಣಮೂರ್ತಿಯ ಅಜ್ಜಂದಿರು ಯಾವ ಜಿಲ್ಲೆಯವರು
a)
ತುಮಕೂರು
b)
ಮಂಡ್ಯ
c)
ಚಿಕ್ಕನಾಯಕನಹಳ್ಳಿ
d)
ಮೈಸೂರು
38.
ಚಿಕ್ಕನಾಯಕನ ಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋದವರು…
a)
ಶಾನುಭೋಗರು
b)
ಖಜಾನೆಯವರು
c)
ರೈತರು
d)
ಕೃಷ್ಣಮೂರ್ತಿ
39.
ಹುಲಿ ನಿರಾಶೆಯಿಂದ ಪಲಾಯನ ಮಾಡಲು ಕಾರಣ
a)
ರೈತರು
b)
ಎತ್ತುಗಳು
c)
ಕೋವಿ
d)
ಪಂಜು
40.
ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡ ರೈತರು ಏನು ಮಾಡಿದರು?
a)
ಕೂಗಿ ಎಚ್ಚರಿಸಿದರು
b)
ಬಡಿದು ಎಚ್ಚರಿಸಿದರು
c)
ನೀರೆರಚಿ ಎಚ್ಚರಿಸಿದರು
d)
ಗಲಭೆಮಾಡಿ ಎಚ್ಚರಿಸಿದರು
41.
"ನಾನು ಮುಖ ಮೇಲಾಗಿ ಬಿದ್ದಿದ್ದೆನೆ?" ಎಂದು ಯಾರು ಯಾರನ್ನು ಕೇಳಿದರು?
a)
ರೈತರು - ಶಾನುಭೋಗರನ್ನು
b)
ಶಾನುಭೋಗರು - ಗಾಡಿಯವರನ್ನು
c)
ಶಾನುಭೋಗರು - ಹುಲಿಯನ್ನು
d)
ಹುಲಿ - ಗಾಡಿಯವರನ್ನು
42.
ಕೃಷ್ಣಮೂರ್ತಿಯ ಅಜ್ಜಂದಿರು ಯಾವುದಕ್ಕಾಗಿ ಹೆಸರು ಪಡೆದಿದ್ದರು
a)
ಶಾನುಭೋಗಿಕೆಗೆ
b)
ರಾಜ ಭಕ್ತಿಗೆ
c)
ಮಂತ್ರಿಯಾಗುವುದಕ್ಕೆ
d)
ಹುಲಿಯನ್ನು ಕೊಲ್ಲುವುದಕ್ಕೆ
43.
ಹುಲಿ ಕೊನೆಯವರೆಗೂ ಪಾಲಿಸಿಕೊಂಡು ಬಂದಿದ್ದು..
a)
ತನ್ನ ಕುಲಧರ್ಮವನ್ನು
b)
ಬೇಟೆಯಾಡುವುದನ್ನು
c)
ಗರ್ಜಿಸುವುದನ್ನು
d)
ಖಿರ್ದಿ ಪುಸ್ತಕವನ್ನು
44.

ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರು ಕಾರಣ

a)

ಶತ್ರುಗಳು ಬೆನ್ನುತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ

b)

ಹುಲಿಗಳು ಅನುಸರಿಸುವ ಧರ್ಮ ಶ್ರದ್ಧೆ

c)

ಭರತಖಂಡದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳದೆ ಇರುವುದು

d)

ಇವೆಲ್ಲವೂ ಕಾರಣವಾಗಿವೆ.

45.
ಶಾನುಭೋಗರು ಅನಂತವಾತ್ಸಲ್ಯದಿಂದ, ಕೃತಜ್ಞತೆಯಿಂದ ಏನನ್ನು ನೋಡಿದರು?
a)
ಹುಲಿಯನ್ನು
b)
ಖಿರ್ದಿ ಪುಸ್ತಕವನ್ನು
c)
ಗಾಡಿಯವರನ್ನು
d)
ಊಟವನ್ನು
46.
ಲೇಖಕರ ಪ್ರಕಾರ ಶಾನುಭೋಗರು ಉಳಿದದ್ದು…
a)
ಹುಲಿಯ ಧರ್ಮಶ್ರದ್ಧೆಯಿಂದ
b)
ಖಿರ್ದಿ ಪುಸ್ತಕದಿಂದ
c)
ಗಾಡಿಯವರಿಂದ
d)
ಎತ್ತುಗಳಿಂದ
47.
ಶಾನುಭೋಗರು ಯಾವುದಕ್ಕಾಗಿ ರೈತರನ್ನು ಪೀಡಿಸುತ್ತಿರಲಿಲ್ಲ
a)
ಮಸಿಯ ಕಾಣಿಕೆಗಾಗಿ
b)
ಕಂದಾಯ ವಸೂಲಿಗಾಗಿ
c)
ಖಿರ್ದಿ ಪುಸ್ತಕಕ್ಕಾಗಿ
d)
ಹಣಕ್ಕಾಗಿ
48.
ಹುಲಿಗೆ ಪರಮಾನಂದ ವಾಗಲು ಕಾರಣ
a)
ಶಾನುಭೋಗರ ದುಂಡು ದುಂಡಾದ ದೇಹವನ್ನು ನೋಡಿ
b)
ಶಾನುಭೋಗರ ಬಡಕಲಾದ ದೇಹವನ್ನು ನೋಡಿ
c)
ರೈತರು ತನ್ನ ಕಡೆ ಬರುತ್ತಿರುವುದನ್ನು ನೋಡಿ
d)
ಶಾನುಭೋಗರು ಖಿರ್ದಿ ಪುಸ್ತಕವನ್ನು ಎಸೆದಿದ್ದು ನೋಡಿ
49.
ಶ್ಯಾನುಭೋಗರಿಗೆ ತಲೆ ಸುತ್ತಲು ಕಾರಣ
a)
ಹುಲಿಯ ವೇಗಕ್ಕೆ ಸರಿಯಾಗಿ ಚಾಚುತಪ್ಪದೆ ಕುಲಾಲಚಕ್ರದಂತೆ ತಿರುಗಿದ್ದು
b)
ಹುಲಿಯ ಹಿಂದೆ ಹಿಂದೆ ಓಡಿ ಹೋಗಿದ್ದು
c)
ಹುಲಿಯನ್ನು ನೋಡಿ ಹೌಹಾರಿದಾಗ
d)
ಕೃಷ್ಣಮೂರ್ತಿಯವರ ಕಥೆಯನ್ನು ಕೇಳಿ
50.
ಹುಲಿಯ ಆನಂದಕ್ಕೆ ಕೊರತೆಯಾಗಿದ್ದು
a)
ಶಾನುಭೋಗರು ಬೆನ್ನು ತಿರುಗಿಸಿ ನಡೆಯುತ್ತಿದ್ದುದು
b)
ಶಾನುಭೋಗರು ಹುಲಿಗೆ ಅಭಿಮುಖವಾಗಿ ಬರುತ್ತಿದ್ದು ದು
c)
ಶಾನುಭೋಗರು ಓಡಿ ಹೋಗುತ್ತಿದ್ದುದು
d)
ಹುಲಿಗೆ ಆಯಾಸವಾಗಿದ್ದುದು