Worksheets10ನೇ ಸವಿ:ಇತಿಹಾಸ:ಅಧ್ಯಾಯ:03(ಭಾಗ 03)-By Nataraj &Bhagwat
Total questions: 10
Worksheet time: 5mins
ರೈತವಾರಿ ಈ ಪದ್ಧತಿಯನ್ನು ಮದರಾಸು ಮತ್ತು ಮೈಸೂರು ಪ್ರಾಂತ್ಯಗಳಲ್ಲಿ 1801ರ ನಂತರ ಜಾರಿಗೊಳಿಸಿದನು
ಥಾಮಸ್ ಮನ್ರೊ
ಅಲೆಕ್ಸಾಂಡರ್ ರೀಡ್
ಆರ್.ಎಂ. ಬರ್ಡ್ ಮತ್ತು ಜೇಮ್ಸ್ ಥಾಮ್ಸನ್
ಕೊಟ್ಟಿರುವ ಯಾರೂ ಅಲ್ಲ
ಈ ಪದ್ಧತಿಯ ಪ್ರಕಾರ ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕವನ್ನು ಕಲ್ಪಿಸಲಾಯಿತು.
ಜಮೀನ್ಧಾರಿ
ಮಹಲ್ವಾರಿ
ರೈತವಾರಿ
ಕೊಟ್ಟಿರುವ ಯಾವುದೂ ಅಲ್ಲ
ರೈತವಾರಿ ಪದ್ಧತಿಯ ಗುಣಗಳು
ಭೂಮಿ ಉಳುಮೆ ಮಾಡುತ್ತಿದ್ದವನನ್ನು ಅದರ ಮಾಲೀಕನೆಂದು ಸರ್ಕಾರ ಮಾನ್ಯಮಾಡಿತು.
ರೈತನೇ ನೇರವಾಗಿ ತಾನು ಕೃಷಿ ಭೂಮಿಯಲ್ಲಿ ಪಡೆದ ಉತ್ಪನ್ನದ ಶೇಕಡ 50ರಷ್ಟು ಭಾಗವನ್ನು ಕಂದಾಯದ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಯಿತು.
ಕಂದಾಯವನ್ನು 30 ವರ್ಷಗಳ ಅವಧಿಗೆ ಎಂದು ನಿರ್ಧರಿಸಲಾಯಿತು.
ನಂತರ ಅದನ್ನು ಪರಾಮರ್ಶೆಗೂ ಒಳಪಡಿಸಬಹುದಾಗಿತ್ತು.
ಕೊಟ್ಟಿರುವ ಎಲ್ಲವೂ
ರೈತವಾರಿ ಪದ್ಧತಿಯ ದೋಷಗಳು ಯಾವುವು?
ಸಣ್ಣ ರೈತರಿಗೆ ತಮ್ಮ ಅಧೀನದಲ್ಲಿದ್ದ ಭೂಮಿ ಮೇಲಿನ ಹಕ್ಕನ್ನು ನೀಡಿತ್ತಾದರೂ, ಭೂಕಂದಾಯವನ್ನು ಈ ಪದ್ಧತಿಯು ಹೆಚ್ಚಿನ ವಾರ್ಷಿಕ ಮೊತ್ತಕ್ಕೆ ನಿಗದಿಪಡಿಸಿದ್ದರಿಂದ ರೈತರು ಸಂಕಷ್ಟಗಳಿಗೆ ಒಳಗಾದರು.
ಕಂದಾಯ ವಸೂಲು ಮಾಡುವ ಅಧಿಕಾರಿಗಳು ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸುತ್ತಿದ್ದರು.
ಬೆಳೆಗಳು ಸರಿಯಾಗಿ ಫಸಲು ನೀಡದ ಸಂದರ್ಭದಲ್ಲಿ ರೈತರು ಹಣದ ಲೇವಾದೇವಿಗಾರರಿಂದ ಸಾಲ ತೆಗೆದುಕೊಂಡು, ಮರುಪಾವತಿಸಲಾಗದೆ ಅವರಿಗಿದ್ದ ಸಣ್ಣ ಪುಟ್ಟ ಜಮೀನನ್ನು ಮಾರಾಟಮಾಡುವಂತಾಯಿತು.
ಕೊಟ್ಟಿರುವ ಎಲ್ಲಾ
ರೈತರ ಒಳಿತಿಗಾಗಿ ಈ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದು ಬ್ರಿಟಿಷ್ ಸರಕಾರ ಹೇಳಿದರೂ, ಗರಿಷ್ಠ ಪ್ರಮಾಣದ ರೈತರು ಸಾಲದ ಸುಳಿಗೆ ಸಿಲುಕಿದ್ದು ಈ ಪದ್ಧತಿಯಿಂದಲೇ ಎನ್ನುವುದು ವಿಪರ್ಯಾಸ.ಹಾಗಾದರೆ ಯಾವುದು ಆ ಕಂದಾಯ ಪದ್ಧತಿ?
ಮಹಲ್ವಾರಿ
ಜಮೀನ್ಧಾರಿ
ರೈತವಾರಿ
ಕೊಟ್ಟಿರುವ ಯಾವುದೂ ಅಲ್ಲ
ಕೊಟ್ಟಿರುವ ಯಾವುದು ಬ್ರಿಟೀಷರ ಕಂದಾಯ ನೀತಿಯ ಪರಿಣಾಮವಾಗಿದೆ?
ನಿಜವಾದ ರೈತರನ್ನು ಶೋಷಿಸುವ ಹೊಸ ಸಾಮಾಜಿಕ ವರ್ಗವಾದ ಜಮೀನ್ದಾರಿ ಸಮುದಾಯ ಸೃಷ್ಟಿಯಾಯಿತು.
ಜಮೀನ್ದಾರರ ಶೋಷಣೆಗೆ ಒಳಗಾದ ರೈತರು ವಿವಿಧ ಬಗೆಯ ಸಂಕಷ್ಟಗಳಿಗೆ ಒಳಗಾದರು. ಕ್ರಮೇಣ ನಿರ್ಗತಿಕರಾದರು.
ಭೂಮಿ ಮಾರಾಟದ ವಸ್ತುವಾಯಿತು. ಇದನ್ನು ಪರಭಾರೆ (ಒoಡಿಣgಚಿge) ಮಾಡಿ ಹಣವನ್ನು ಸಾಲವಾಗಿ ಪಡೆಯಬಹುದಾಗಿತ್ತು.
ಕೊಟ್ಟಿರುವ ಎಲ್ಲವೂ ಬ್ರಿಟೀಷರ ಕಂದಾಯ ನೀತಿಯ ಪರಿಣಾಮವಾಗಿದೆ
ಕೆಳಗಿನ ಯಾವುದು ಬ್ರಿಟೀಷರ ಕಂದಾಯ ನೀತಿಯ ದುಷ್ಪರಿಣಾಮವಾಗಿದೆ?
ಅನೇಕ ಜಮೀನ್ದಾರರೂ ಕೂಡ ಕಂದಾಯವನ್ನು ಸಲ್ಲಿಸುವ ಸಲುವಾಗಿ ತಮ್ಮ ಜಮೀನನ್ನು ಪರಭಾರೆ ಮಾಡಿದರು.
ಕೃಷಿ ಕ್ಷೇತ್ರವು ವಾಣಿಜ್ಯೀಕರಣಗೊಂಡು, ಇಂಗ್ಲೆಂಡಿನಲ್ಲಾದ ಕೈಗಾರಿಕಾಕರಣದಿಂದ ಅಲ್ಲಿನ ಕೈಗಾರಿಕೆಗಳಿಗೆ ಬೇಡಿದ ಕಚ್ಚಾವಸ್ತುಗಳನ್ನೇ ಬೆಳೆಯಬೇಕಾಯಿತು.
ಹಣದ ಲೇವಾದೇವಿಗಾರರು ಬಲಿಷ್ಠರಾಗತೊಡಗಿದರು.
ಕೊಟ್ಟಿರುವ ಎಲ್ಲವೂ
ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನಕೊಟ್ಟ ಮೊದಲ ಬ್ರಿಟಿಷ ಅಧಿಕಾರಿಯೆಂದರೆ
ವಾರನ್ ಹೇಸ್ಟಿಂಗ್ಸ್.
ಕಾರ್ನವಾಲೀಸ್
ವಿಲಿಯಂ ಬೆಂಟಿಕ್
ಮೆಕಾಲೆ
1792ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃ ತ ಕಾಲೇಜನ್ನು ಪ್ರಾರಂಭಿಸಿದನು
ಮೆಕಾಲೆ
ಜೊನಾಥನ್ ಡಂಕನ್
ವಾರನ್ ಹೇಸ್ಟಿಂಗ್ಸ್
ಚಾರ್ಲಸ್ ಗ್ರಾಂಟ್
ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು
ಚಾಲ್ರ್ಸ್ ಗ್ರಾಂಟ್.
ವಾರನ್ ಹೇಸ್ಟಿಂಗ್ಸ್
ಡಾಲ್ ಹೌಸಿ
ವಿಲಿಯಂ ಬೆಂಟಿಂಕ್
