wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-118

Total questions: 41

Worksheet time: 21mins

Name
Class
Date
1.
ಮಲೆಗಳಲ್ಲಿ ಮದುಮಗಳು ಈ ಕೃತಿಯನ್ನು ಬರೆದವರು.
a)
ಕುವೆಂಪು
b)
ಬೇಂದ್ರೆ
c)
ಪು.ತಿ.ನ
d)
ಯಾವುದು ಅಲ್ಲ
2.
ಬ್ರಹ್ಮ , ವಿಷ್ಣು , ರುದ್ರ _ ಈ ಅಂಶ ಗಣಗಳನ್ನು ಕ್ರಮವಾಗಿ ಸೂರ್ಯ , ಇಂದ್ರ , ಚಂದ್ರ _ ಎಂದು ಹೇಳಿದವರು ಇವರು_
a)
ಬಿ. ಎಂ.ಶ್ರೀ
b)
ನಾಗವರ್ಮ
c)
ಭೀಮಕವಿ
d)
ಜಯಕೀರ್ತಿ
3.
ಪದ್ದಳಿ, ಪಜ್ಝಟಿಕ ಎಂದೂ ಈ ರಗಳೆಯನ್ನು ಕರೆಯುವರು
a)
ಉತ್ಸಾಹ
b)
ಮಂದಾನಿಲ
c)
ಲಲಿತ
d)
ಮದನಾವತಾರ
4.
ಭೀಭತ್ಸ ರಸದ ಸ್ಥಾಯಿ ಭಾವ ಇದು
a)
ಜಿಗುಪ್ಸೆ
b)
ಉತ್ಸಾಹ
c)
ವಿಸ್ಮಯ
d)
ಕ್ರೋಧ
5.
ಶೋಕಗೀತೆ'_ ಇದರ ಇಂಗ್ಲೀಷ್ ಸಂವಾದಿ ಪದ
a)
ಓಡ್
b)
ಸಾನೆಟ್
c)
ಲಿರಿಕ್
d)
ಎಲಿಜಿ
6.
"ಕೊಕ್ಕೊ ಕೋ ಕೋಳಿಯಾಟ"_ ಈ ಮಕ್ಕಳ ಕೃತಿಯ ಕರ್ತೃ.
a)
ಶಿಶು ಸಂಗಮೇಶ
b)
ಗೋವಿಂದ ಪೈ
c)
ಪಂಜೆ ಮಂಗೇಶರಾಯರು
d)
ಮಾಸ್ತಿ
7.
"ದಿ ಹಿಸ್ಟರಿ ಆಫ್ ಕನ್ನಡ ಲಾಂಗ್ವೇಜ್"_ ಇಂಗ್ಲೀಷ್ ಕೃತಿಯ ಲೇಖಕರು
a)
ಎಸ್.ಜಿ. ನರಸಿಂಹಾಚಾರ್
b)
ಆರ್. ನರಸಿಂಹಾಚಾರ್
c)
ಪು.ತಿ. ನರಸಿಂಹಾಚಾರ್
d)
ಡಿ.ಎಲ್. ನರಸಿಂಹಾಚಾರ್
8.
ಟಿಂಗರ ಬುಡ್ಡಣ್ಣ'_ ಕೃತಿಯ ಕರ್ತೃ
a)
ಚಂದ್ರಶೇಖರ ಕಂಬಾರ
b)
ಚಂದ್ರಶೇಖರ ಪಾಟೀಲ್
c)
ಟಿ.ಪಿ. ಕೈಲಾಸಂ
d)
ಬೀಚಿ
9.
"ಮತ್ತೊಬ್ಬ ಏಕಲವ್ಯ"_ಕೃತಿಯನ್ನು ಬರೆದವರು
a)
ಸತ್ಯಾನಂದ ಪಾತ್ರೋಟ
b)
ಸಿದ್ದಲಿಂಗಯ್ಯ
c)
ಅರವಿಂದ ಮಾಲಗತ್ತಿ
d)
ಚನ್ನಣ್ಣ ವಾಲೀಕಾರ
10.
ಸಂಜೆಗಣ್ಣಿನ ಹಿನ್ನೋಟ'_ ಇದು ಇವರ ಆತ್ಮಕಥೆ
a)
ಅ.ನ.ಕೃ
b)
ತ.ರಾ.ಸು
c)
ವಿ.ಕೃ.ಗೋಕಾಕ್
d)
ಎ.ಎನ್.ಮೂರ್ತಿರಾಯರು
11.
ಕನ್ನಡ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರು
a)
ಕುವೆಂಪು
b)
ಗಿರೀಶ್ ಕಾರ್ನಾಡ್
c)
ದ.ರಾ.ಬೇಂದ್ರೆ
d)
ಎಸ್.ಆರ್. ಕಂಠಿ
12.
ಜಡಭರತ'_ ಇದು ಇವರ ಕಾವ್ಯನಾಮ
a)
ದೇ.ಜವರೇಗೌಡ
b)
ಕುಳಕುಂದ ಶಿವರಾಮ
c)
ಅಜ್ಜಂಪುರ ಸೀತಾರಾಮ್
d)
ಜಿ.ಬಿ.ಜೋಶಿ
13.
ತಿರುಳ್ಗನ್ನಡ ತಿರುಕ'_ ಇದು ಇವರ ಕಾವ್ಯನಾಮವಾಗಿದೆ
a)
ಉತ್ತಂಗಿ ಚನ್ನಪ್ಪ
b)
ಬಸವಪ್ಪ ಶಾಸ್ತ್ರಿ
c)
ಎಲ್.ಬಸವರಾಜ
d)
ಡೆಪ್ಯೂಟಿ ಚನ್ನಬಸಪ್ಪ
14.
ವೈದಿಕ ಮಾರ್ಗ ಪ್ರವರ್ತಕ' ಎಂದು ಬಿರುದಾಂಕಿತನಾದ ರಾಜ.
a)
ಸಾಯಣಾಚಾರ್ಯ
b)
ಮಾಧವಾಚಾರ್ಯ
c)
ಬುಕ್ಕರಾಯ
d)
ಎರಡನೆಯ ಹರಿಹರ
15.
ವಿಚಿತ್ರಕವಿ' _ಎಂಬ ಬಿರುದಾಂಕಿತನಾದವನು.
a)
ಸುಮನೋಬಾಣ
b)
ಕೀರ್ತಿವರ್ಮ
c)
ಜಗದ್ದಳ ಸೋಮನಾಥ
d)
ಚಂದ್ರರಾಜ
16.
ಜಲರಾವಣ' ಎಂಬ ಹೊಸ ವಿಚಾರ ಪ್ರತಿಪಾದಿತವಾಗಿರುವ ಕೃತಿ ಇದು.
a)
ವ್ಯಾಸಭಾರತ
b)
ಪಂಪಭಾರತ
c)
ವಾಲ್ಮೀಕಿ ರಾಮಾಯಣ
d)
ರಾಮಚಂದ್ರ ಚರಿತೆ
17.
ನಾಣ್ನುಡಿಗಳಿಗೆ ಹೆಸರಾದ ಕೃತಿ ಇದು
a)
ಧರ್ಮಾಮೃತ
b)
ರಾಮಾಶ್ವಮೇಧ
c)
ವಿರೇಶ ಚರಿತೆ
d)
ಸಮಯ ಪರೀಕ್ಷೆ
18.
ಪುಟ್ಟಪ್ಪನವರ ಇಂಗ್ಲೀಷ್ ವ್ಯಾಮೋಹವನ್ನು ಬಿಡಿಸಿದವರು ಇವರು.
a)
ಜೇಮ್ಸ್ ಹ್ಯಾಡಿ
b)
ಜೇಮ್ಸ್ ಕಸಿನ್ಸ್
c)
ವಿಲಿಯಂ ಹ್ಯಾಡಿ
d)
ವಿಲಿಯಂ ಕಸಿನ್ಸ್
19.
ಆತಕೂರು ಶಾಸನ' ಈ ಜಿಲ್ಲೆಯಲ್ಲಿದೆ.
a)
ಧಾರವಾಡ
b)
ಹಾಸನ
c)
ಕರೀಂ ನಗರ
d)
ಮಂಡ್ಯ
20.
"ನನ್ನ ಹರಣ ನಿನಗೆ ಶರಣ ಸಕಲ ಕಾರ್ಯಕಾರಣ" ಎನ್ನುವುದು ಈ ಅಲಂಕಾರಕ್ಕೆ ಉದಾಹರಣೆಯಾಗಿದೆ.
a)
ಯಮಕ
b)
ಚಿತ್ರಕವಿತ್ವ
c)
ಅನುಪ್ರಾಸ
d)
ಅರ್ಥಾಲಂಕಾರ
21.
"ಕಾವೇರಿಯಿಂದಮಾ ಗೋದಾವರಿವರಮಿರ್ದ" ಪದ್ಯವು ಈ ಛಮದಸ್ಸಿನಲ್ಲಿದೆ.
a)
ಷಟ್ಪದಿ
b)
ತ್ರಿಪದಿ
c)
ಸಾಂಗತ್ಯ
d)
ಕಂದ
22.
ಕನ್ನಡದ ಸೇನಾನಿ'_ ಎಂದು ಖ್ಯಾತರಾದವರು
a)
ಡಿ.ವಿ.ಜಿ
b)
ಬಿ.ಎಂ.ಶ್ರೀ
c)
ಮಾಸ್ತಿ
d)
ಎ.ಆರ್.ಕೃಷ್ಣಶಾಸ್ತ್ರಿ
23.
"ಸದುತ್ತರ"_ ಇದು ಈ ಸಂಧಿಗೆ ಉದಾಹರಣೆಯಾಗಿದೆ.
a)
ಶ್ಚುತ್ತ್ವ
b)
ಜಶ್ತ್ವ
c)
ಆದೇಶ
d)
ಸಂಧಿಪದವಲ್ಲ
24.
ಅನುಸ್ವಾರ (೦) '_ ಉಚ್ಚರಿಸುವಾಗ ಅದು ಹುಟ್ಟುವ ಆಧಾರದಿಂದ ಹೀಗೆನ್ನುವರು.
a)
ತಾಲವ್ಯಾಕ್ಷರ
b)
ಕಂಠೋಷ್ಠ್ಯ
c)
ಕಂಠನಾಸಿಕ
d)
ಓಷ್ಠ್ಯನಾಸಿಕ
25.
"ಬದಲಾವಣೆ"_ ಶಬ್ದವು ಈ ಭಾಷೆಯಿಂದ ಬಂದಿದೆ.
a)
ಸಂಸ್ಕೃತ
b)
ಹಿಂದೂಸ್ತಾನಿ
c)
ಕನ್ನಡ
d)
ಪಾರ್ಸಿ
26.
ದೇವಕುಲ:ದೇಗುಲ : : ಸರ್ವ: ......................
a)
ಶರ್ವ
b)
ಸಾವಿರ
c)
ಸಬ್ಬ
d)
ತುಂಬಾ
27.
ಈ ಕೆಳಗಿನವುಗಳಲ್ಲಿ ಸಂಖ್ಯೇಯವಾಚಕ ಪದ ಇದು.
a)
ಮೂರು
b)
ಆರು
c)
ಸಾವಿರ
d)
ಐವರು
28.
"ಹಗಲುಗನಸು" ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ.
a)
ಕರ್ಮಧಾರಯ ಸಮಾಸ
b)
ಗಮಕ ಸಮಾಸ
c)
ತತ್ಪುರುಷ ಸಮಾಸ
d)
ಅಂಶಿ ಸಮಾಸ
29.
ಈ ಕೆಳಗಿನವುಗಳಲ್ಲಿ ದ್ವಿರುಕ್ತಿ ಪದವನ್ನು ಗುರುತಿಸಿ.
a)
ಅಕ್ಕಟಕ್ಕಟಾ!
b)
ಮನೆಮಠ
c)
ಚುರುಚುರು
d)
ಕಲ ಕಲ
30.
ವಾಕ್ಯದಲ್ಲಿ ಬಿಟ್ಟು ಹೋಗಿರುವ ಪದಗಳನ್ನು ವಾಕ್ಯಾರ್ಥದ ಪೂರ್ತಿಗಾಗಿ ಇರುವ ಪದಗಳ ಆಧಾರದಿಂದ ಊಹಿಸಿಕೊಂಡು ಸೇರಿಸುವುದನ್ನು ಹೀಗೆನ್ನುವರು.
a)
ಸಂಭವನಾರ್ಥಕ
b)
ಭವಿಷತ್ ವಾಕ್ಯ
c)
ಅಧ್ಯಾಹಾರ
d)
ಕಲ್ಪಿತವಾಕ್ಯ
31.
"ಶಂಕರನಿಗೆ ವಿದ್ಯಾರ್ಥಿ ವೇತನ ಸಿಕ್ಕತೆಂಬುದನ್ನು ಅವನಿಂದಲೇ ಕೇಳಿದೆನು". _ ಈ ವಾಕ್ಯ ಇದಕ್ಕೆ ಉದಾಹರಣೆ
a)
ಸಾಮಾನ್ಯವಾಕ್ಯ
b)
ಮಿಶ್ರವಾಕ್ಯ
c)
ಸಂಯೋಜಿತ ವಾಕ್ಯ
d)
ವೇದವಾಕ್ಯ
32.
"ಬಾಲಕರಿಲ್ಲದ ಬಾಲಿಯದ್ಯಾತರ ಜನ್ಮ| ಬಾಡಿಗೆಯೆತ್ತು ದುಡಿದಂಗ" _ ಇಲ್ಲಿರುವ ಅಲಂಕಾರ.
a)
ರೂಪಕ
b)
ಉಪಮಾಲಂಕಾರ
c)
ಅರ್ಥಾಂತರನ್ಯಾಸಾಲಂಕಾರ
d)
ಶ್ಲೇಷೆ
33.
ಬಸವರಾಜ ಕಟ್ಟೀಮನಿ ಇವರ ಆತ್ಮಕಥೆ ಇದು.
a)
ಜ್ವಾಲಾಮುಖಿಯ ಮೇಲೆ
b)
ಮಾಡಿ ಮಡಿದವರು
c)
ಕಾದಂಬರಿಕಾರನ ಬದುಕು
d)
ನೀ ನನ್ನ ಮುಟ್ಟಬೇಡ
34.
ಭಾರತದ ಹೊರಗೆ ಮಾತ್ರ ಪ್ರಚಲಿತವಿದ್ದ ದ್ರಾವಿಡ ವರ್ಗದ ಭಾಷೆ ಇದು.
a)
ಬ್ರಾಹುಈ
b)
ಮಾಲ್ತೋ
c)
ಕುರುಖ್
d)
ನಾಯ್ಕಿ
35.
ಥೂ'_ ವರ್ಣವನ್ನು ಜಿಗುಪ್ಸೆಯ ಶಬ್ದದಂತೆ ಉಪಯೋಗಿಸಿದ್ದನ್ನು ಇವರ ಕೀರ್ತನೆಗಳಲ್ಲಿ ಕಾಣುತ್ತೇವೆ.
a)
ಕನಕದಾಸ
b)
ಪುರಂದರದಾಸ
c)
ಜಗನ್ನಾಥ ದಾಸರು
d)
ವಾದಿರಾಜ
36.
"ಹರಿ ಹರ ಹಜರತ್" ತ್ರಿವೇಣಿ ಸಂಗಮದ ಅನುಭಾವ ಕವಿ.
a)
ಇಮಾಮ್ ಸಾಹೇಬ್ರು
b)
ಇಬ್ರಾಹಿಂ ಸುತಾರ್
c)
ಸಂತ ಶಿಶುನಾಳ ಶರೀಫ
d)
ನಿಸಾರ್ ಅಹ್ಮದ್
37.
"ಅಯ್ಯಾ ಪಾಷಾಣಕ್ಕೆ ಗಿರಿ ಸವೆದವು, ಪತ್ರೆಗೆ ತರು ಸವೆದವು"_ ಈ ಸಾಲುಗಳ ವಚನಕಾರ.
a)
ಜೇಡರ ದಾಸಿಮಯ್ಯ
b)
ಬಸವಣ್ಣ
c)
ಸಿದ್ಧರಾಮ
d)
ಅಂಬಿಗರ ಚೌಡಯ್ಯ
38.
"ಗುರು ನಾಲ್ಕಾಗಿರಲಂತು"_ ಈ ವೃತ್ತವಾಗಿದೆ.
a)
ಸ್ರಗ್ಧರೆ
b)
ಮಹಾಸ್ರಗ್ಧರೆ
c)
ಮತ್ತೇಭ ವಿಕ್ರೀಡಿತ
d)
ಶಾರ್ದೂಲ ವಿಕ್ರೀಡಿತ
39.
ಭಾಗವತ ಸಂಪ್ರದಾಯದ ಪಂಡಿತ ಮಾನ್ಯವಾದ ಸಂಸ್ಕೃತ ಶಾಖೆಗೆ ಹೀಗೆಂದು ಕರೆಯುವರು.
a)
ದಾಸಕೂಟ
b)
ವ್ಯಾಸಕೂಟ
c)
ಭಾಗವತ ಕೂಟ
d)
ಭಾಗವಂತಿಕೆ ಮೇಳ
40.
ಸಹೃದಯನಿಗೆ ಅವಶ್ಯವಾಗಿರಬೇಕಾದ ಪ್ರತಿಭೆ ಇದು
a)
ಕಾರಯಿತ್ರಿ
b)
ಔಪಾದಿಕ
c)
ಸಹಜ
d)
ಭಾವಯಿತ್ರಿ
41.
ಸಿರಿಗನ್ನಡ ನುಡಿ ಬಳಗ ಕರ್ನಾಟಕ ರಾಜ್ಯ ಸಮರ್ಪಿಸಿದ "ಯುದ್ಧ" ಪಠ್ಯದ ನಾಟಕ ರೂಪಾಂತರ ಮಾಡಿದವರು ಇವರು.
a)
ನಾರಾಯಣ ಭಾಗ್ವತ
b)
ವಿಷ್ಣು ಪಟಗಾರ
c)
ಹೆಚ್. ಆರ್. ಮುರಳೀಧರ
d)
ರವೀಶ್ ಕುಮಾರ್