Font size
Worksheetsಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
Total questions: 10
Worksheet time: 5mins
1. ಮೊದಲನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣಗಳನ್ನು ತಿಳಿಸಿ.
ಮೋಘಲ್ ಚಕ್ರವತಿಯು ಕೋರ್ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ಕೊಟ್ಟದ್ದು
ಪೇಶ್ವೆ ಹುದ್ದೆಗಾಗಿ ಮರಾಠರ ಆಂತರಿಕ ಕಚ್ಚಾಟ
ರಘೋಬನು ಬ್ರಿಟಿಷರ ಸಹಾಯ ಕೋರಿದ್ದು
ಈ ಮೇಲಿನ ಎಲ್ಲವೂ
2. ಸಹಾಯಕ ಸೈನ್ಯ ಪದ್ಧತಿಯು ಬ್ರಿಟಿಷರ ಸಾಮ್ರಾಜ್ಯ ವಿಸ್ತರಣೆಗೆ ಹೇಗೆ ಸಹಾಯಕವಾಯಿತು? ಅಥವಾ ಸಹಾಯಕ ಸೈನ್ಯ ಪದ್ಧತಿಯ ಪರಿಣಾಮಗಳೇನು?
ಬ್ರಿಟಿಷರ ಸೈನ್ಯದ ನಿವಹಣೆ ಸುಲಭವಾಯಿತು.
ಭಾರತೀಯ ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು.
ಭಾರತೀಯ ರಾಜ್ಯಗಳನ್ನು ಆಥಿಕವಾಗಿ ತೀವ್ರ ಶೋಷಣೆಗೆ ಗುರಿಪಡಿಸಲಾಯಿತು.
ಈ ಮೇಲಿನ ಎಲ್ಲವೂ
3. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಗೆ ಲಾಡ್ ವೆಲ್ಲೆಸ್ಲಿಯು ಅನುಸರಿಸಿದ ವಿಧಾನಗಳಾವುವು?
ಸಹಾಯಕ ಸೈನ್ಯ ಪದ್ಧತಿ
ಹೊಸ ರಾಜ್ಯಗಳ ಮೇಲೆ ಯುದ್ಧಗಳು
ಈಗಾಗಲೇ ಕಂಪನಿ ಅಧೀನಕ್ಕೆ ಒಳಪಟ್ಟಿರುವ ರಾಜ್ಯಗಳ ನೇರ ನಿಯಂತ್ರಣ
ಮೇಲಿನ ಎಲ್ಲವೂ
4. ಮೂರನೇ ಆಂಗ್ಲೋ ಮರಾಠ ಯುದ್ಧವನ್ನು ವಿವರಿಸಿ.
ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದವು.
1817ರಲ್ಲಿ ಪೇಶ್ವೆಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.
ಹೋಳ್ಕರರು ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು
ಪೇಶ್ವೆ ಸಹ ಕೋರೆಗಾವ್ ಮತ್ತು ಅಷ್ಟಿ ಯುದ್ಧಗಳಲ್ಲಿ ಸೋತನು.
5. ಸಹಾಯಕ ಸೈನ್ಯ ಪದ್ಧತಿ ಒಳಪಟ್ಟ ದೇಶೀಯ ಸಂಸ್ಥಾನಗಳಾವುವು?
ಹೈದರಾಬಾದ್,
ಮೈಸೂರು,
ತಂಜಾವೂರು,
ಮರಾಠ,
6. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾವುವು?
ಸತಾರ
ಜೈಪುರ
ಸಂಬಲಪುರ
ಉದಯಪುರ
7. ಬ್ರಿಟಿಷರ ಅಧಿಕಾರ ವಿಸ್ತರಣೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯು ಹೇಗೆ ಸಹಕಾರಿಯಾಯಿತು?
ಲಾರ್ಡ್ ವೆಲ್ಲೆಸ್ಲಿಯು ಈ ನೀತಿಯನ್ನು ಜಾರಿಗೆ ತಂದನು.
ಈ ನೀತಿಯ ಪ್ರಕಾರ ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ.
ಅಂತಹ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಲಾಗುತ್ತಿತ್ತು.
ಈ ನೀತಿಗೆ ಒಳಪಟ್ಟ ರಾಜ್ಯಗಳೆಂದರೆ ಸತಾರ, ಜೈಪುರ, ಸಂಬಲಪುರ, ಉದಯಪುರ, ಝಾನ್ಸಿ
1. ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಗಳಾವುವು?
ಭಾರತೀಯ ರಾಜನು ಬ್ರಿಟಿಷ್ ಸೈನಿಕ ತುಕಡಿಯನ್ನು ತನ್ನ ರಾಜ್ಯದಲ್ಲಿ ಇರಿಸಿಕೊಳ್ಳಬೇಕು.
ಸೇನೆಯ ವೆಚ್ಚವನ್ನು ಸಂಬಂಧಪಟ್ಟ ರಾಜ್ಯವೇ ಭರಿಸಬೇಕು.
ಆಸ್ಥಾನದಲ್ಲಿ ಬ್ರಿಟಿಷ್ ರೆಸಿಡೆಂಟ್ ನನ್ನು ನೇಮಿಸಿಕೊಳ್ಳಬೇಕು.
ಬ್ರಿಟಿಷರ ಅನುಮತಿ ಇಲ್ಲದೇ ಆಸ್ಥಾನದಲ್ಲಿ ಯಾವುದೇ ಯುರೋಪಿಯನ್ನರನ್ನು ನೇಮಿಸಿಕೊಳ್ಳುವಂತಿಲ್ಲ.
ಯುದ್ಧ ಅಥವಾ ಸಂಧಾನ ಮಾಡಿಕೊಳ್ಳಬೇಕಾದರೆ ಗವರ್ನರ್ ಜನರಲ್ ನ ಸಮ್ಮತಿ ಬೇಕು.
ಕಂಪನಿಯು ರಾಜ್ಯಕ್ಕೆ ಆಂತರಿಕ ಮತ್ತು ಬಾಹ್ಯ ರಕ್ಷಣೆಯನ್ನು ಒದಗಿಸುವುದು.
. ಸಹಾಯಕ ಸೈನ್ಯ ಪದ್ಧತಿ ಎಂದರೇನು?
ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದವಾಗಿದೆ.
ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಡಚ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದವಾಗಿದೆ.
ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದವಾಗಿದೆ.
ಭಾರತೀಯ ರಾಜ್ಯಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ವೆಸ್ಟ್ ಇಂಡಿಯಾ ಕಂಪನಿ ಮತ್ತು ಭಾರತೀಯ ರಾಜ್ಯಗಳ ನಡುವಿನ ಒಂದು ಸೈನಿಕ ಒಪ್ಪಂದವಾಗಿದೆ.
15. ಲಾರ್ಡ್ ವೆಲ್ಲೆಸ್ಲಿಯು ತೀವ್ರ ಟೀಕೆಗೆ ಒಳಗಾಗಿ ತನ್ನ ಹುದ್ದೆಗೆ ರಾಜಿನಾಮೆ ನೀಡಲು ಕಾರಣವೇನು?
ಅವನ ಶಾಂತಿ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು.
ಅವನ ಯುದ್ಧಪ್ರೀಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು.
ಅವನ ಅಹಿಂಸಾತ್ಮಕ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು.
ಅವನ ಹಿಂಸಾತ್ಮಕ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಿತು.
