Worksheetsಗದ್ಯ ಭಾಗದ ಒಂದು ಅಂಕದ ಪ್ರಶ್ನೆಗಳು
Total questions: 50
Worksheet time: 26mins
1. ಗಡಿಪ್ರದೇಶಗಳಲ್ಲಿ "ಬ್ಲಾಕ್ಔಟ್" ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?
a. ಸೈನಿಕರ ದಾಳಿಯಿಂದ ರಕ್ಷಿಸಿಕೊಳ್ಳಲು
b. ಶತ್ರುಗಳ ದಾಳಿಯಿಂದ ರಕ್ಷಿಸಿಕೊಳ್ಳಲು
c. ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು
d. ಜನರ ದಾಳಿಯಿಂದ ರಕ್ಷಿಸಿಕೊಳ್ಳಲು
2. ರಾಹಿಲನು ಯಾರು ?
a. ರಾಹಿಲನು ಓರ್ವ ಸೈನಿಕ
b. ರಾಹಿಲನು ಓರ್ವ ಕಂಡಕ್ಟರ್
c. ರಾಹಿಲನು ಓರ್ವ ಪೇದೆ
d. ರಾಹಿಲನು ಓರ್ವ ಡಾಕ್ಟರ್
3. ಶ್ರೀರಾಮನ ತಂದೆಯ ಹೆಸರೇನು?
a. ಮತಂಗ
b. ದಶರಥ
c. ದೃತರಾಷ್ಟ್ರ
d. ಧನು
4. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
a. ಸೀತೆ
b. ಕೈಕೆ
c. ಮಂಥರೆ
d. ಶಬರಿ
5. ಶಬರಿ ಗೀತ ನಾಟಕದ ಕರ್ತೃ ಯಾರು?
a. ಪು.ತಿ. ನರಸಿಂಹಾಚಾರ್
b. ವಿ.ಕೃ. ಗೋಕಾಕ್
c. ದೇವನೂರು ಮಹಾದೇವ
d. ಡಿ. ಎಸ್. ಜಯಪ್ಪಗೌಡ
6. ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತದೆ ?
a. ಶಿಕ್ಷಕರ ದಿನಾಚರಣೆ
b. ಎಂಜಿನಿಯರ್ ದಿನಾಚರಣೆ
c. ಮಕ್ಕಳ ದಿನಾಚರಣೆ
d. ಸ್ವಾತಂತ್ರ್ಯ ದಿನಾಚರಣೆ
7. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು ?
a.1896
b.1892
c.1895
d.1897
8. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು ?
a. ಲೀಡರ್ ಪದವಿ
b. ಡಾಕ್ಟರೇಟ್ ಪದವಿ
c. ದಿವಾನ್ ಪದವಿ
d. ಸರ್ ಪದವಿ
9. ಅಶೋಕ್ ಪೈ ಅವರ ವೃತ್ತಿ ಯಾವುದು?
a. ಮನೋವೈದ್ಯರು
b. ಮಕ್ಕಳ ತಜ್ಞರು
c. ಸಮಾಜಸೇವಕರು
d. ಶಿಕ್ಷಕರು
10. ವಚನಕಾರರಿಗೆ ಯಾವುದು ದೇವರಾಗಿತ್ತು?
a. ಅರಿವು
b. ಪ್ರಜ್ಞೆ
c.ಕಾಯಕ
d. ವೇಳೆ
11. ಮನೆ ಮಂಚಮ್ಮನ ಕಥೆ ಹೇಳಿದ ಕವಿ ಯಾರು ?
a. ಡಿ.ಎಸ್. ಜಯಪ್ಪಗೌಡ
b. ಕವಿ ಸಿದ್ದಲಿಂಗಯ್ಯ
c. ಫ.ಗು.ಹಳಕಟ್ಟಿ
d. ಜಿ.ಎಸ್. ಶಿವರುದ್ರಪ್ಪ
12. ಭಗವದ್ಗೀತೆಯನ್ನು ರಚಿಸಿದವರು ಯಾರು ?
a. ಮಹರ್ಷಿ ವಾಲ್ಮೀಕಿ
b. ಮಹರ್ಷಿ ವೇದವ್ಯಾಸರು
c. ಕನಕದಾಸರು
d. ಪುರಂದರದಾಸರು
13. ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?
a. ಕಂದಾಯ ಪುಸ್ತಕ
b. ಲೆಕ್ಕಪುಸ್ತಕ
c. ಖಿರ್ದಿ ಪುಸ್ತಕ
d. ಓದುವ ಪುಸ್ತಕ
14. ದುಷ್ಟಬುದ್ಧಿಯು ಧರ್ಮ ಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು ?
a.ಬೆಳ್ಳಿಯ ಕಳ್ಳತನದ ಆರೋಪ
b. ಹೊನ್ನಿನ ಕಳ್ಳತನದ ಆರೋಪ
c. ಹಣದ ಕಳ್ಳತನದ ಆರೋಪ
d. ಮೇಲಿನ ಎಲ್ಲವೂ
15. ವೃಕ್ಷಸಾಕ್ಷಿ ಕಥೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ ?
a. ಭಾರತ ಪಂಚತಂತ್ರ ಕೃತಿ
b. ಕರ್ನಾಟಕ ಪಂಚತಂತ್ರ ಕೃತಿ
c. ವಂಚನಾ ಮತ್ತು ಮಿತ್ರಕಾರ್ಯ
d. ಭೇದ, ಪರೀಕ್ಷಾ
16. ದುಷ್ಟಬುದ್ಧಿಯ ತಂದೆಯ ಹೆಸರೇನು?
a. ಪ್ರೇಮ ಬುದ್ಧಿ
b. ಧರ್ಮಬುದ್ಧಿ
c. ವೃಕ್ಷ ಬುದ್ಧಿ
d. ಯಾವುದು ಅಲ್ಲ
17. ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು ?
a. ಮನಸ್ಸಿಗೂ ದೇಹಕ್ಕೂ ಗಾಯ ಮಾಡುವುದೇ ಯುದ್ಧ
b. ಈ ಯುದ್ಧ ನನ್ನ ಮೊಮ್ಮಗುವನ್ನು ಉಳಿಸಲಿಲ್ಲ ವಲ್ಲ ?
c. ಯಾರಿಗಾಗಿ ಯಾತಕ್ಕಾಗಿ ಯುದ್ಧ ಅದನ್ನಾದರೂ ಹೇಳಿರಲ್ಲ?
d.b ಮತ್ತು c
18. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
a. ದುಷ್ಟಬುದ್ಧಿ ಮತ್ತು ಧರ್ಮ ಬುದ್ಧಿಯ ನಡುವಿನ ವ್ಯಾಜ್ಯವನ್ನು ಪರಿಹರಿಸಲು
b. ವಟವೃಕ್ಷದ ಪೂಜೆಗೆ
c. ವೃಕ್ಷ ಸಾಕ್ಷಿಯನ್ನು ಕೇಳಲು ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಬಂದರು
d. A ಮತ್ತು C
19. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು ?
a. ವಿಧಿ ಆಹಾರಕ್ಕಾಗಿ ಏನನ್ನು ಒದಗಿಸುವುದು
b. ಮಾಂಸಾಹಾರ ಸಿಗುವುದೆಂದು
c. ಮನುಷ್ಯ ಸಿಗುವನೆಂದು
d. ಯಾವುದು ಅಲ್ಲ
20. ಇಂದಲ್ಲ ನಾಳೆ ಫಲ ಕೊಡುವ ಅಂಶಗಳು ಯಾವುವು ?
a. ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ
b. ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ
c. ಭೂಮಿಗೆ ಬಿದ್ದ ಕಾಳು ಎದೆಗೆ ಬಿದ್ದ ಅಕ್ಷರ
d. ಮೇಲಿನ ಎಲ್ಲವೂ
21. ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸುವವರು ಯಾರ ?
a. ಸರ್. ಕೆ . ಶೇಷಾದ್ರಿ ಅಯ್ಯರ್ ರವರು
b. ಮಹಾರಾಣಿ ವಾಣಿವಿಲಾಸ ರವರು
c. ನಾಲ್ವಡಿ ಕೃಷ್ಣರಾಜ ಒಡೆಯರು
d. ಪಂಡಿತ್ ಜವಾಹರಲಾಲ್ ನೆಹರು
22. ಹುಲಿಗೆ ಪರಮಾನಂದವಾಗಲು ಕಾರಣವೇನು ?
a. ಮಾಂಸಾಹಾರವನ್ನು ನೋಡಿ
b. ಮನುಷ್ಯರನ್ನು ನೋಡಿ
c. ಯಾವುದು ಅಲ್ಲ
d. ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ
23. ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಯಾರು ?
a. ಹಳಕಟ್ಟಿಯವರು
b. ಕಟ್ಟೀಮನಿಯವರು
c. ಸಿದ್ದಲಿಂಗಯ್ಯನವರು
d. ಯಾವುದು ಅಲ್ಲ
24. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣ ಬದ್ಧರಾದರು ?
a. ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ
b. ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ
c. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ
d. ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ
25. ರಾಮ ಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಹೋಗಲು ಸೂಚಿಸಿದವರು ಯಾರು?
a. ಮತಂಗ ಋಷಿಗಳು
b. ಧನು
c. ಜಾನಕಿ
d. ಶಬರಿ
26. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದಳು?
a. ಹಾಲು ತುಪ್ಪ
b. ರುಚಿಕರ ಹಣ್ಣುಹಂಪಲುಗಳನ್ನು
c. ಪರಿಮಳದ ಹೂವು ಮಧುಪರ್ಕ
d.b ಮತ್ತುc.
27. ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು?
a. "ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ.
b. ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು"
c . ನಾನು ಶತ್ರು ದೇಶದವನು
d.a ಮತ್ತು b.
28. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು?
a. ವಾಣಿವಿಲಾಸ ಸಾಗರ
b. ಶಿವನಸಮುದ್ರದ ಬಳಿ ಕಾವೇರಿ ನದಿಗೆ
c. ಮಾರಿಕಣಿವೆ ಜಲಪಾತ
d. ಯಾವುದು ಅಲ್ಲ
29. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
a. ಊಟ ಮಾಡದೇ ಇರುವುದರಿಂದ
b. ಹುಲಿಯಿಂದ ತಪ್ಪಿಸಿಕೊಳ್ಳಲು
c. ಹುಲಿಗಿ ತಮ್ಮ ಮುಖದರ್ಶನ ವಾಗದಂತೆ ತಪ್ಪಿಸಿಕೊಳ್ಳುವ ದೊಂಬರಾಟದಲ್ಲಿ
d. ಮೇಲಿನ ಎಲ್ಲವೂ
30. ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು?
a. ಬಟ್ಟೆ ಮತ್ತು ಊಟದ ಸಾಮಗ್ರಿ ಪೆಟ್ಟಿಗೆ
b. ಯುದ್ಧದ ಸಾಮಗ್ರಿಗಳ ಪೆಟ್ಟಿಗೆ
c. ಔಷಧ ಮತ್ತು ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ
d. ದಿನಸಿ ಸಾಮಾನುಗಳು ಪೆಟ್ಟಿಗೆ
31. ಆರ್ತನಾದ ಪದದ ಅರ್ಥವೇನು?
a. ಅಳುವಿಕೆ
b. ಕಷ್ಟಕ್ಕೆ ಸಿಕ್ಕಿದವರ ಕೂಗು
c. ಹಂಬಲ
d. ನಿರಾಸೆ
32. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ಯಾರು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು?
a. ತಾಯಿಯು
b. ಮುದುಕಿಯು
c. ಸೊಸೆಯು
d. ಮಗನು
33. ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿಯ ಹೆಸರೇನು
a. ಮಹಾರಾಣಿ ವಾಣಿ ವಿಲಾಸ
b. ಮಹಾರಾಣಿ ಪ್ರತಾಪ ಕುಮಾರಿ
c. ಮಹಾರಾಣಿ ತ್ರಿಷಿಕಾ ಕುಮಾರಿ ದೇವಿ
d. ರಾಣಿ ಪ್ರಮೋದ ದೇವಿ ಅಂಬಿಕೆ
34. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು ?
a. ದೇವರು, ಗುರುಗಳು
b. ವೇದಾಧ್ಯಯನ ನಿರತರನ್ನು ಪೂಜೆ ಮಾಡುತ್ತಾ
c. ಕಳ್ಳತನವನ್ನು ಮಾಡುತ್ತಾ
d. A ಮತ್ತು B ಮಾತ್ರ
35. ದೇವನೂರರ 'ನನ್ನ ದೇವರು' ಯಾರೆಂಬುದನ್ನ ಸ್ಪಷ್ಟೀಕರಿಸಿ?
a. ಛಾವಣಿಯಿಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ
b. ಛಾವಣಿಯಿಲ್ಲದ ಗುಡಿಯಲ್ಲಿ ಗ್ರಾಮದೇವತೆಯನ್ನು ಇಟ್ಟರೆ
c. ಛಾವಣಿಯಿಲ್ಲದ ಗುಡಿಯಲ್ಲಿ ದೇವರನ್ನು ಇಟ್ಟರೆ
d. ಯಾವುದು ಅಲ್ಲ
36. ಸಾರಾ ಅಬೂಬಕ್ಕರ್ ಅವರ ಜನ್ಮಸ್ಥಳ ಯಾವುದು?
a. ಕೇರಳದ ಕಾಸರಗೋಡು
b. ಹಾವೇರಿ ಸವಣೂರು
c. ಶಿವಮೊಗ್ಗದ ತೀರ್ಥಹಳ್ಳಿ
d. ಮಂಡ್ಯದ ಮೇಲುಕೋಟೆ
37. ಮಸಿಕಾಣಿಕೆ ಎಂದರೇನು?
a. ಕಂದಾಯ ವಸೂಲಿ ಸಂರ್ಭದಲ್ಲಿ ಶಾನುಭೋಗರು ರೈತರಿಂದ ಪಡೆಯುತ್ತಿದ್ದ ಕಿರು ಕಾಣಿಕೆ
b. ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಸಲ್ಲಿಸುವುದು
c ಮಡಿಕೆ ಮಾಡಲು ಕುಂಬಾರರು ಬಳಸುವ ಸಾಧನ.
d. ಮೇಲಿನವು ಎಲ್ಲವು
38. ಎ ಎನ್ ಮೂರ್ತಿರಾವ್ ರವರ ಕೃತಿಗಳು
a. ಮಿನುಗುಮಿಂಚು
b. ಪೂರ್ವಸೂರಿಗಳೊಡನೆ
c. ಹಗಲುಗನಸುಗಳು
d. ಮೇಲಿನ ಎಲ್ಲವೂ
39. ವಚನಕಾರರ ನಡೆನುಡಿಗಳ ಸಮನ್ವಯವೇ
a. ಪ್ರಜ್ಞೆ
b. ಬದುಕು
c. ಅರಿವು
d. ಜ್ಞಾನ
40. ಈ ಚಿತ್ರದಲ್ಲಿರುವ ಲೇಖಕರನ್ನು ಗುರುತಿಸಿ
a. ಡಿ.ಎಸ್. ಜಯಪ್ಪಗೌಡ
b. ಪೂ.ತಿ. ನರಸಿಂಹಾಚಾರ್
c. ಎ.ಎನ್. ಮೂರ್ತಿರಾವ್
d. ದೇವನೂರು ಮಹಾದೇವ
41. ಈ ಕೆಳಗಿನ ಭಾವಚಿತ್ರದಲ್ಲಿರುವ ಯಾವ ಲೇಖಕರಿಗೆ ಶ್ರೀಹರಿಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ ದೊರೆತಿದೆ
42. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿನ ಸ್ವಯಂ ಆಡಳಿತ ಕ್ಷೇತ್ರಗಳು
a. ವೈದ್ಯಕೀಯ ಸಹಾಯ
b. ವಿದ್ಯಾ ಪ್ರಚಾರ
c. ಗ್ರಾಮ ನೈರ್ಮಲೀಕರಣ
d. ಮೇಲಿನ ಎಲ್ಲವೂ
43. ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ನಂಬಿಕೊಂಡು ಹೋಗಿದ್ದ ರೈತರಿಗೆ ಯಾವ ಗರ್ಜನೆ ಕೇಳಿಸಿತು ?
a. ಆನೆಯ ಗರ್ಜನೆ
b. ಹುಲಿಯ ಗರ್ಜನೆ
c. ಸಿಂಹದ ಗರ್ಜನೆ
d. ಯಾವುದು ಅಲ್ಲ .
44. ಭೂಮಿಜಾತೆ ಎಂದರು ಯಾರು
a. ಶಬರಿ
b. ಕೌಸಲ್ಯ
c. ಸೀತೆ
d. ಮೇಲಿನ ಎಲ್ಲವೂ
45. ಚಿತ್ರಕೂಟ ಪರ್ವತದಲ್ಲಿ ಶ್ರೀರಾಮನನ್ನು ಭೇಟಿಯಾಗಿ ಆತನ ಪಾದುಕೆಗಳನ್ನು ಯಾರು ಪಡೆದರು
a. ಶತ್ರುಜ್ಞ
b. ಭರತ
c. ಲಕ್ಷ್ಮಣ
d. ದಶರಥ
46. ಸಾರಾ ಅಬೂಬಕ್ಕರ್ ರವರ ಕಾಲ .
a.೨೮ ಜೂನ್ ೧೯೩೭
b.೩೦ ಜೂನ್ ೧೯೩೫
c.೨೯ ಜೂನ್ ೧೯೩೮
d.೩೦ ಜೂನ್ ೧೯೩೬
47. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?
a. ಧರ್ಮ ಬುದ್ಧಿಯ ಮೇಲೆ ಕಳ್ಳತನದ ಆರೋಪ ಮಾಡಿದ್ದರಿಂದ
b. ನಾನು ಅಲ್ಲದೆ ಬೇರೆ ಯಾರು ಮನುಷ್ಯರು ಇರಲಿಲ್ಲ ಆ ಸ್ಥಳದಲ್ಲಿ ಆಲದ ಮರವೇ ಸಾಕ್ಷಿ ಎಂದು ಹೇಳಿದ್ದನ್ನು ಕೇಳಿ
c. ದುಷ್ಟಬುದ್ಧಿ ಮತ್ತು ಧರ್ಮ ಬುದ್ಧಿಯ ನಡುವಿನ ವ್ಯಾಜ್ಯವನ್ನು ಪರಿಹರಿಸಲು ಸಾಧ್ಯವಾಗದೆ ಇರುವುದರಿಂದ
d. ಪ್ರೇಮಬುದ್ಧಿಯನ್ನು ವೃಕ್ಷದ ಪೊಟರೆಯೊಳಗೆ ಕೂರಿಸಿದ್ದರಿಂದ
48. ವಿಶ್ವೇಶ್ವರಯ್ಯನವರು ಯಾವಾಗ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು?
a.೧೮೮೫
b.೧೮೮೪
c.೧೮೮೯
d.೧೮೮೬
49. ಅಶೋಕ್ ಪೈ ರವರ ಸ್ಥಳ ಯಾವುದು?
a. ಮೈಸೂರು
b. ದಾವಣಗೆರೆ
c. ಶಿವಮೊಗ್ಗ
d. ಹಾವೇರಿ .
50.ಸೌಮಿತ್ರಿ ಎಂದು ಯಾರನ್ನು ಕರೆಯುತ್ತಾರೆ
a. ರಾಮ
b. ಭರತ
c. ಲಕ್ಷ್ಮಣ
d. ಶತ್ರುಘ್ನ
