NEW
Font size
Worksheetsಪ್ರಥಮ ಭಾಷೆ ಕನ್ನಡ, 8 & 9ನೇ ತರಗತಿಯ ಕನ್ನಡ ವ್ಯಾಕರಣ
Total questions: 10
Worksheet time: 5mins
1. ಬೇರೆ ಭಾಷೆಯಿಂದ ಬಂದ ಪದಗಳನ್ನು ---------- ಎನ್ನುವರು.
1. ದೇಶ್ಯ ಪದಗಳು
2. ಅನ್ಯರಾಜ್ಯದ ಭಾಷೆಯಿಂದ ಬಂದ ಪದಗಳು.
3. ಅನ್ಯದೇಶ್ಯ ಪದಗಳು
4. ಪದಗಳು
2. ------ ಭಾಷೆಯಿಂದ ಬಂದ ಪದಗಳನ್ನು ಅನ್ಯದೇಶ್ಯ ಪದಗಳೆಂದು ಕರೆಯುವ ವಾಡಿಕೆ ಇರದ ಕಾರಣ ಅವುಗಳನ್ನು 'ತತ್ಸಮ' ಎಂದು ಕರೆಯುವರು.
1. ಸಂಸ್ಕೃತ
2. ಹಿಂದೂಸ್ತಾನಿ
3. ಅರಬ್ಬೀ
4. ಪರ್ಷಿಯನ್
3. ಅರ್ಜಿ, ಕಛೇರಿ, ಕಾರ್ಖಾನೆ ಇವು ---------- ಭಾಷೆಯ ಪದಗಳು.
1. ಅರಬ್ಬೀ
2. ಹಿಂದೂಸ್ತಾನಿ
3. ಸಂಸ್ಕೃತ
4. ಪರ್ಷಿಯನ್
4. ಕೋರ್ಟ್ ಬ್ಯಾಂಕ್, ಹಾರ್ಮೋನಿಯಂ, ಹೋಟೆಲ್ - ಇವು ---------- ಭಾಷೆಯ ಪದಗಳು;
1. ಪಾರ್ಸಿ
2. ಅರಬ್ಬೀ
3. ಪರ್ಷಿಯನ್
4. ಇಂಗ್ಲಿಷ್
5. ಅಲಮಾರು, ಸಾಬೂನು, ಮೇಜು ಇವು -------- ಭಾಷೆಯಿಂದ ಬಂದ ಪದಗಳು.
1. ಪೋರ್ಚುಗೀಸ್
2. ಅರಬ್ಬೀ
3. ಉರ್ದು
4. ಪರ್ಷಿಯನ್
6. ಮಾಲೆ, ರಾಜ, ವಿಪತ್ತು, ದೇವತೆ ಇವು --------- ಭಾಷೆಯ ಪದಗಳು.
1. ಹಿಂದೂಸ್ತಾನಿ
2. ಸಂಸ್ಕೃತ
3. ಪರ್ಷಿಯನ್
4. ಕನ್ನಡ
7. ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಯಾವುದೇ ಬದಲಾವಣೆಯನ್ನು ಹೊಂದದೆ ಅಥವಾ 'ಆ' ಕಾರಾಂತ ಪದಗಳು 'ಎ' ಕಾರಾಂತವಾಗಿ ಕನ್ನಡಕ್ಕೆ ಬಂದು ಸೇರಿವೆ. ಇಂತಹ ಪದಗಳನ್ನು -------- ಎನ್ನುವರು.
1. ತದ್ಭವಗಳು
2.ಅನ್ಯದೇಶ್ಯ ಪದಗಳು
3. ದೇಶ್ಯಪದಗಳು
4. ತತ್ಸಮಗಳು
8. ರಾಮ, ಭೀಮ, ವಸಂತ, ಸೋಮ, ಚಂದ್ರ ಇತ್ಯಾದಿ ಪದಗಳು ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಬದಲಾವಣೆಗೊಳಪಡದೆ ಬಂದು ಸೇರಿವೆ. ಇವು ---------- ಪದಗಳು.
1. ತದ್ಭವಗಳು
2. ಅನ್ಯದೇಶ್ಯ ಪದಗಳು
3. ತತ್ಸಮಗಳು
4. ದೇಶ್ಯ ಪದಗಳು
9. ಮಾಲಾ, ಶಾಲಾ, ಆಶಾ, ನಿದ್ರಾ ಈ ಪದಗಳು ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಮಾಲೆ, ಶಾಲೆ, ಆಶೆ, ನಿದ್ರೆ ಎಂದಾಗಿವೆ . ಈ ಪದಗಳು ---------- ಪದಗಳು.
2. ತತ್ಸಮ
2. ತದ್ಭವ
3. ದೇಶ್ಯ
4. ಅನ್ಯದೇಶ್ಯ
10. ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಅಥವಾ ಪೂರ್ಣ ಬದಲಾವಣೆಗೊಳಪಟ್ಟು ಬಂದಿರುವ ಪದಗಳನ್ನು -------- ಪದಗಳು ಎನ್ನುವರು.
1. ತತ್ಸಮಗಳು
2. ದೇಶ್ಯಪದಗಳು
3. ಅನ್ಯದೇಶ್ಯ ಪದಗಳು
4. ತದ್ಭವಗಳು
