wayground logo

Free Printable Worksheets

NEW

Font size

S
M
L
XL
Worksheets

ನೂತನ ಪರೀಕ್ಷಾ ವಿಧಾನದಂತೆ ಅಭ್ಯಾಸ ಪ್ರಶ್ನೆ ಪತ್ರಿಕೆ ಸರಣಿ 2

Total questions: 40

Worksheet time: 20mins

Name
Class
Date
1.

ಕೆಳಗಿನವುಗಳಲ್ಲಿ ಒಂದು ಪ್ರತ್ಯಾಮ್ಲ ಇದಾಗಿದೆ

a)

ಸೋಡಿಯಂ ಹೈಡ್ರಾಕ್ಸೈಡ್

b)

ಹೈಡ್ರೋಕ್ಲೋರಿಕ್ ಆಮ್ಲ

c)

ಅಸಿಟಿಕ್ ಆಮ್ಲ

d)

ನೈಟ್ರಿಕ್ ಆಮ್ಲ

2.

ಆಮ್ಲ ಮತ್ತು ಪ್ರತ್ಯಾಮ್ಲಗಳು ವರ್ತಿಸಿದಾಗ ------- ಮತ್ತು-------- ಉಂಟಾಗುತ್ತವೆ

a)

ಆಮ್ಲ ಮತ್ತು ನೀರು

b)

ಪ್ರತ್ಯಾಮ್ಲ ಮತ್ತು ನೀರು

c)

ಲವಣ & ನೀರು

d)

ಯಾವುದು ಅಲ್ಲ

3.

ಮೊಸರಿನಲ್ಲಿರುವ ಆಮ್ಲ---------------

a)

ಸಿಟ್ರಿಕ್ ಆಮ್ಲ

b)

ಲ್ಯಾಕ್ಟಿಕ್ ಆಮ್ಲ

c)

ಅಸಿಟಿಕ್ ಆಮ್ಲ

d)

ಟಾರ್ಟಾರಿಕ್ ಆಮ್ಲ

4.

ಈ ಚಟುವಟಿಕೆಯಿಂದ ಲೋಹದ ಈ ಗುಣ ತಿಳಿಯುತ್ತದೆ

a)

ವಿದ್ಯುತ್ತಿನ ಉತ್ತಮ ವಾಹಕ

b)

ಉಷ್ಣದ ಉತ್ತಮ ವಾಹಕ

c)

ಬೆಳಕಿನ ಉತ್ತಮ ವಾಹಕ

d)

ಯಾವುದು ಅಲ್ಲ

5.

ಕೆಳಗಿನವುಗಳಲ್ಲಿ ಚಾಕುವಿನಿಂದ ಕತ್ತರಿಸಬಹುದಾದ ಲೋಹ

a)

ಕಬ್ಬಿಣ

b)

ಬೆಳ್ಳಿ

c)

ತಾಮ್ರ

d)

ಸೋಡಿಯಂ

6.

ಅತ್ಯಂತ ಕಡಿಮೆ ಕ್ರಿಯಾಪಟುತ್ವ ಲೋಹ

a)

ಚಿನ್ನ

b)

ಕಬ್ಬಿಣ

c)

ಮೆಗ್ನೀಷಿಯಂ

d)

ಪಾದರಸ

7.

ಸಲ್ಫೈಡ್ ಲೋಹದ ಅದಿರುಗಳನ್ನು ಈ ವಿಧಾನದಿಂದ ಉದ್ದರಿಸಲಾಗುತ್ತದೆ

a)

ಕಾಸುವಿಕೆ

b)

ವಿದ್ಯುದ್ವಿಭಜನೆ

c)

ಹುರಿಯುವಿಕೆ

d)

ಯಾವುದು ಅಲ್ಲ

8.

ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳನ್ನು ಈ ಕ್ರಿಯಾವರ್ಧಕ ವನ್ನು ಬಳಸಿ ಹೈಡ್ರೋಜನೀಕರಿಸಿಲಾಗುತ್ತದೆ

a)

ನಿಕ್ಕಲ್

b)

ಕಾಪರ್

c)

ಸತು

d)

ಕಬ್ಬಿಣ

9.

ಕಾರ್ಬನ್ ಆಕ್ಸಿಜನ್ ಜೊತೆಗೆ ವರ್ತಿಸಿ ನೀಡುವ ಉತ್ಪನ್ನ

a)

ಕಾರ್ಬನ್ ಡೈಯಾಕ್ಸೈಡ್

b)

ಶಾಖ

c)

ಬೆಳಕು

d)

ಮೇಲಿನ ಎಲ್ಲವೂ

10.

ಈ ಕ್ರಿಯಾ ಗುಂಪಿನ ಹೆಸರು

a)

ಕೀಟೋನ್

b)

ಆಲ್ಡಿಹೈಡ್

c)

ಕಾರ್ಬಾಕ್ಸಿಲಿಕ್ ಆಮ್ಲ

d)

ಆಲ್ಕೋಹಾಲ್

11.

ಆಧುನಿಕ ಆವರ್ತಕ ಕೋಷ್ಟಕದಲ್ಲಿ ವರ್ಗಗಳಲ್ಲಿ ಮೇಲಿಂದ ಕೆಳಗೆ ಸಾಗಿದಂತೆ ಲೋಹೀಯ ಗುಣವು

a)

ಕಡಿಮೆಯಾಗುತ್ತದೆ

b)

ಹೆಚ್ಚಾಗುತ್ತದೆ

c)

ಬದಲಾಗುವುದಿಲ್ಲ

d)

ಮೇಲಿನ ಯಾವುದೂ ಅಲ್ಲ

12.

ಜೈವಿಕ ವಿಘಟನೀಯ ವಲ್ಲದ ತ್ಯಾಜ್ಯವಸ್ತು

a)

ಚರ್ಮದ ಚಪ್ಪಲಿ

b)

ಬಾಳೆಎಲೆ

c)

ಗಾಜಿನ ಬಾಟಲಿ

d)

ಕಾಗದ

13.

ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಕೈಚೀಲಗಳನ್ನು

a)

ಬಳಸಬೇಕು

b)

ಪುನರ್ ಬಳಸಬೇಕು

c)

ಎಲ್ಲೆಂದರಲ್ಲಿ ಬಳಸಿ ಬಿಸಾಡಬೇಕು

d)

ನಿರಾಕರಿಸಬೇಕು

14.

A, B & C ಎಂಬ ಧಾತುಗಳನ್ನು ಅನುಕ್ರಮವಾಗಿ ಜೋಡಿಸಲಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ತ್ರಿವಳಿಗಳ ನಿಯಮದ ಸೂತ್ರ ಬರೆದಾಗ

a)

A= B+C /2

b)

C=A+B /2

c)

B=A+C /2

d)

ಯಾವುದು ಅಲ್ಲ

15.

ಇವುಗಳಲ್ಲಿ ಯಾವುದು ನವೀಕರಿಸಬಹುದಾದ ಶಕ್ತಿಯ ಸಂಪನ್ಮೂಲವಾಗಿದೆ

a)

ಕಲ್ಲಿದ್ದಲು ಶಕ್ತಿ

b)

ಸೌರಶಕ್ತಿ

c)

ಡೀಸೆಲ್

d)

ಸೀಮೆಎಣ್ಣೆ

16.

ಇವುಗಳಲ್ಲಿ ಪರಿಸರಸ್ನೇಹಿ ಶಕ್ತಿಯ ಆಕರ ಅಥವಾ ಸಾಧನ

a)

ಪವನ ಶಕ್ತಿ

b)

ಸೌರ ಕುಕ್ಕರ್

c)

ಸೌರಕೋಶ ಫಲಕ

d)

ಮೇಲಿನ ಎಲ್ಲವೂ

17.

ಸಜೀವ ತಂತಿಯ ವಿಭವ

a)

ಸೊನ್ನೆ

b)

5A

c)

220 V

d)

1V

18.

ಸಜೀವ ತಂತಿಯ ಮೇಲಿನ ಹೊದಿಕೆಯ ಬಣ್ಣ

a)

ಕೆಂಪು

b)

ಕಪ್ಪು

c)

ಹಸಿರು

d)

ನೀಲಿ

19.

ತಂತಿಯ ಸುರುಳಿಗಳಲ್ಲಿ ವಿದ್ಯುತ್ ಪ್ರವಹಿಸಿದಾಗ ಸುರುಳಿಯ ಮಧ್ಯಭಾಗದಲ್ಲಿನ ಕಾಂತೀಯ ಬಲರೇಖೆಗಳ ಆಕಾರವು

a)

ಸಮಾಂತರ

b)

ಛೇದನ

c)

ಕೇಂದ್ರೀಕರಣ

d)

ವಿಕೇಂದ್ರೀಕರಣ

20.

ಫ್ಲೆಮಿಂಗನ ಬಲಗೈ ನಿಯಮ ದಲ್ಲಿ ತೋರುಬೆರಳು ಪ್ರತಿನಿಧಿಸುವುದು

a)

ಕಾಂತಕ್ಷೇತ್ರ

b)

ಪ್ರೇರಿತ ವಿದ್ಯುತ್

c)

ವಾಹಕದ ಚಲನೆ

d)

ಮೇಲಿನ ಯಾವುದೂ ಅಲ್ಲ

21.

ಓಮನ ನಿಯಮದ ಸೂತ್ರ

a)

V=I/R

b)

I=VR

c)

R=VI

d)

V=IR

22.

ವಿದ್ಯುದಾವೇಶಗಳ ಪ್ರವಾಹವನ್ನು ಹೀಗೆನ್ನುವರು

a)

ವಿದ್ಯುತ್ ಪ್ರವಾಹ

b)

ವಿದ್ಯುತ್ ರೋಧ

c)

ವಿಭವಾಂತರ

d)

ವಿದ್ಯುತ್ ಸಾಮರ್ಥ್ಯ

23.

ವಿದ್ಯುದಾವೇಶಗಳ ಮೂಲಮಾನ

a)

ಕೂಲಮ್

b)

ವ್ಯಾಟ್

c)

ವೋಲ್ಟ್

d)

ಓಮ್

24.

ವಿದ್ಯುತ್ ಪ್ರವಾಹವನ್ನು ಕಂಡುಹಿಡಿಯಲು ಬಳಸುವ ಸೂತ್ರ

a)

I=t/Q

b)

I=Q/t

c)

t=IQ

d)

I=Qt

25.

ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಓರೆಯಾಗಿ ಚಲಿಸುವಾಗ ಎರಡನೇ ಮಾಧ್ಯಮದಲ್ಲಿ ತನ್ನ ದಿಕ್ಕು ಬದಲಾಗುವ ವಿದ್ಯಮಾನವನ್ನು ಹೀಗೆನ್ನುವರು

a)

ಬೆಳಕಿನ ಪ್ರತಿಫಲನ

b)

ಬೆಳಕಿನ ವಕ್ರೀಭವನ

c)

ಬೆಳಕಿನ ಚದುರುವಿಕೆ

d)

ಬೆಳಕಿನ ವ್ಯತಿಕರಣ

26.

ನಕ್ಷತ್ರಗಳ ಮಿನುಗುವಿಕೆ ಗೆ ಕಾರಣ

a)

ವಾಯುಮಂಡಲದಲ್ಲಿ ಬೆಳಕಿನ ವಕ್ರೀಭವನ

b)

ವಾಯುಮಂಡಲದಲ್ಲಿ ಬೆಳಕಿನ ವ್ಯತೀಕರಣ

c)

ಬೆಳಕಿನ ಪ್ರತಿಫಲನ

d)

ಬೆಳಕಿನ ವಿವರ್ತನೆ

27.

ಈ ಕೆಳಗಿನ ಯಾವುದರಲ್ಲಿ ಬೆಳಕು ಅತ್ಯಂತ ವೇಗವಾಗಿ ಚಲಿಸುತ್ತದೆ

a)

ಗಾಳಿ

b)

ನೀರು

c)

ಟರ್ಪಂಟೈನ್ ಎಣ್ಣೆ

d)

ಸೀಮೆಎಣ್ಣೆ

28.

ಮಸೂರದ ಕೇಂದ್ರ ಬಿಂದುವನ್ನು ಹೀಗೆನ್ನುವರು

a)

ಸಂಗಮ ಬಿಂದು

b)

ಮಸೂರದ ದ್ರುವ

c)

ದೃಕ್ ಕೇಂದ್ರ

d)

ಯಾವುದು ಅಲ್ಲ

29.

ಇವುಗಳಲ್ಲಿ ರಚನಾನುರೂಪಿ ಅಂಗಗಳಿಗೆ ಉದಾಹರಣೆ ಎಂದರೆ

a)

ಜಿರಳೆಯ ಕಾಲು & ನಾಯಿಯ ಕಾಲು

b)

ಮಾನವನ ಹಳ್ಳಿ ಮತ್ತು ನಾಯಿಯ ಕಿವಿ

c)

ಪಕ್ಷಿಯ ರೆಕ್ಕೆ ಮತ್ತು ಮನುಷ್ಯನ ಕೈ

d)

ಹಸುವಿನ ಬಾಲ & ನಾಯಿಯ ಮುಂಗಾಲು

30.

ಜೀವಿಗಳು ಸತ್ತ ನಂತರ ಕೊಳೆಯದೆ ಸಂರಕ್ಷಿಸಲ್ಪಟ್ಟ ಅವಶೇಷಗಳನ್ನು ಹೀಗೆನ್ನುವರು

a)

ಕೆಳಗಿನ ಯಾವುದು ಅಲ್ಲ

b)

ಕಾರ್ಯಾನುರೂಪಿ ಅಂಗಗಳು

c)

ರಚನಾನುರೂಪಿ ಅಂಗಗಳು

d)

ಪಳೆಯುಳಿಕೆ

31.

ಪ್ರಭೇದೀಕರಣ ವು ಯಾವಾಗ ಉಂಟಾಗುತ್ತದೆ

a)

ಜೀವಿಗಳು ಭೌಗೋಳಿಕವಾಗಿ ಪ್ರತ್ಯೇಕ ಗೊಂಡಾಗ

b)

ಜೀವಿಗಳು ನಿಸರ್ಗದ ಆಯ್ಕೆಗೆ ಒಳಪಟ್ಟಾಗ

c)

ಜೀವಿಗಳ DNA ಯಲ್ಲಿ ಬದಲಾವಣೆಯಾದಾಗ

d)

ಮೇಲಿನ ಎಲ್ಲಾ ಸಂದರ್ಭದಲ್ಲಿಯೂ

32.

ಮಾನವರಲ್ಲಿ ಕಂಡುಬರುವ ವರ್ಣತಂತುಗಳ ಸಂಖ್ಯೆ

a)

12 ಜೊತೆ ಅಥವಾ 24 ವರ್ಣತಂತುಗಳು

b)

21 ಜೊತೆ ಅಥವಾ 44 ವರ್ಣತಂತುಗಳು

c)

13 ಜೊತೆ ಅಥವಾ 26 ವರ್ಣತಂತುಗಳು

d)

23 ಜೊತೆ ಅಥವಾ 46 ವರ್ಣತಂತುಗಳು

33.

ಇವುಗಳಲ್ಲಿ ಗರ್ಭಧಾರಣೆಯನ್ನು ತಡೆಯುವ ವಿಧಾನಗಳೆಂದರೆ

a)

ಕಾಂಡಮ್ ಬಳಕೆ

b)

ಮಾತ್ರೆ ಗಳನ್ನು ಬಳಸುವುದು

c)

ವಂಕಿ ಅಥವಾ ಕಾಪರ್-ಟಿ ಬಳಕೆ

d)

ಮೇಲಿನ ಎಲ್ಲವೂ

34.

ಪ್ರೌಢ ಗಂಡುಮಕ್ಕಳಲ್ಲಾಗುವ ಬದಲಾವಣೆಗಳಿಗೆ ಕಾರಣವಾದ ಹಾರ್ಮೋನು

a)

ಅಡ್ರಿನಲಿನ್

b)

ಪ್ರೋಜೆಸ್ಟಿರಾನ್

c)

ಥೈರಾಕ್ಸಿನ್

d)

ಟೆಸ್ಟೋಸ್ಟೆರಾನ್

35.

ಕೆಳಗಿನವುಗಳಲ್ಲಿ ದ್ವಿಲಿಂಗಿ ಸಸ್ಯ

a)

ಪಪ್ಪಾಯ

b)

ದಾಸವಾಳ

c)

ಸೇಬು

d)

ಕಲ್ಲಂಗಡಿ

36.

ಗೌಪ್ಯತೆ ಮತ್ತು ಕೊರತೆಗಳು ಈ ಗ್ರಂಥಿಯ ಅಸಂತುಲಿತ ಸ್ರವಿಕೆಯಿಂದ ಉಂಟಾಗುವ ವೈಪರಿತ್ಯಗಳು

a)

ಪಿಟ್ಯೂಟರಿ

b)

ಥೈರಾಯಿಡ್

c)

ಅಡ್ರಿನಲ್

d)

ವೃಷಣ

37.

ಸಸ್ಯಗಳಲ್ಲಿ ಬೆಳವಣಿಗೆಯನ್ನು ನಿರ್ಬಂಧಿಸುವ ಹಾರ್ಮೋನು

a)

ಸೈಟೋಕೈನಿನ್

b)

ಜಿಬ್ಬರ್ಲಿನ್

c)

ಸೈಟೋಕೈನಿನ್

d)

ಅಬ್ಸಿಸಿಕ್ ಆಮ್ಲ

38.

ಇವುಗಳಿಂದ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿದೆ

a)

ಬಿಳಿ ರಕ್ತಕಣಗಳು

b)

ಕಿರುತಟ್ಟೆಗಳು

c)

ಹಿಮೋಗ್ಲೋಬಿನ್

d)

ಮೈಟೋಕಾಂಡ್ರಿಯಾ

39.

ಶ್ವಾಸಕೋಶದಿಂದ ಬಂದ ಆಕ್ಸಿಜನ್ ಯುಕ್ತ ರಕ್ತವು ಹೃದಯದ ಭಾಗವನ್ನು ಪ್ರವೇಶಿಸುತ್ತದೆ

a)

ಎಡ ಹೃತ್ಕರ್ಣ

b)

ಬಲ ಹೃತ್ಕರ್ಣ

c)

ಎಡ ಹೃತ್ಕುಕ್ಷಿ

d)

ಬಲ ಹೃತ್ಕುಕ್ಷಿ

40.

ಕಶೇರುಕಗಳಲ್ಲಿ ರಕ್ತವು ಒಂದು ಸಂಪೂರ್ಣ ಪರಿಚಲನೆಗೆ ಹೃದಯದ ಮೂಲಕ ಎರಡು ಬಾರಿ ಹಾದು ಹೋಗುತ್ತದೆ ಈ ಪ್ರಕ್ರಿಯೆಯನ್ನು ಹೀಗೆನ್ನುವರು

a)

ಪುಪ್ಪುಸಕ ಪರಿಚಲನೆ

b)

ದ್ವಿ ರಕ್ತಪರಿಚಲನೆ

c)

ಇಮ್ಮಡಿ ಪರಿಚಲನೆ

d)

ಕ್ರಿಯಾತ್ಮಕ ಚಲನೆ