NEW
Font size
WorksheetsScience
Total questions: 40
Worksheet time: 20mins
ವಿದ್ಯುತ್ಪ್ರವಾಹ ಅಳೆಯಲು ಬಳಸುವ ಸಾಧನ
ರಿಯೋಸ್ಟ್ಯಾಟ್
ಅಮೀಟರ
ಗ್ಯಾಲ್ವನೋಮೀಟರ್
ವೋಲ್ಟ್ ಮೀಟರ್
ಫ್ಲೆಮಿಂಗನ ಬಲಗೈ ನಿಯಮವನ್ನು ಈ ಸಾಧನಕ್ಕೆ ಅನ್ವಯಿಸಲಾಗುವುದು
ವಿದ್ಯುತ್ ಮೋಟಾರ್
ವಿದ್ಯುತ್ ಫ್ಯೂಸ್
ವಿದ್ಯುತ್ ಜನಕ
ಸೋಲೆನಾಯ್ಡ್
ರವಿಯು ಧರಿಸಿದ ಕನ್ನಡಕದ ಮಸೂರದ ಸಂಗಮ ದೂರ + ಆದರೆ ಕನ್ನಡಕದ ಮಸೂರದ ಸಾಮರ್ಥ್ಯ ಮತ್ತು ಮಸೂರದ
+ 0.25D ಪೀನ
-0.25D ಪೀನ
+0.25D ನಿಮ್ನ
-0.25D ನಿಮ್ನ
ಪೀನ ಮಸೂರದ ಪ್ರತಿಬಿಂಬವು ಸತ್ಯ, ಸಂಗಮಬಿಂದುವಿನಲ್ಲಿ ಬಿಂದು ಗಾತ್ರದ ಬಿಂಬ ಉಂಟಾದರೆ ವಸ್ತುವನ್ನು ಇರಿಸಿದ ಸ್ಥಾನ
ಸಂಗಮಬಿಂದುವಿನಲ್ಲಿ
F & 2F ಗಳ ನಡುವೆ
ಅನಂತ ದೂರದಲ್ಲಿ
2 F ನಲ್ಲಿ
ಇದು ಬೆಳಕಿನ ವಕ್ರೀಭವನದ ಒಂದು ಪರಿಣಾಮ
ಕನ್ನಡಿಯಲ್ಲಿ ಪ್ರತಿಬಿಂಬ ಉಂಟಾಗುವುದು
ಹೂವುಗಳು ವಿವಿಧ ಬಣ್ಣಗಳಲ್ಲಿ ಗೋಚರಿಸುವುದು
ಆಕಾಶ ನೀಲಿಯಾಗಿ ಕಾಣುವುದು
ನೀರಿನಲ್ಲಿ ಮುಳುಗಿದ ನಾಣ್ಯದ ಮೇಲೆ ಬಂದಂತೆ ಕಾಣುವುದು
ಸಾಗರ ಉಷ್ಣಶಕ್ತಿ ಪರಿವರ್ತನ ಸ್ಥಾವರಗಳು ಕಾರ್ಯ ನಿರ್ವಹಿಸಲು ಹೊಂದಿರಬೇಕಾದ ಸಮುದ್ರ ಮೇಲ್ಮೈನ ಎತ್ತರ ಮತ್ತು ತಾಪ
4 km & 273 K
2 km & 293 K
5 km & 311 K
7 km & 323K
ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ
ವಿದ್ಯುತ್ ಮೋಟಾರ್
ಇಸ್ತ್ರೀ ಪೆಟ್ಟಿಗೆ
ವಿದ್ಯುತ್ ಜನಕ
ಶುಷ್ಕ ಕೋಶ
ವಾಹಕದ ಉದ್ದವನ್ನು ಹೆಚ್ಚಿಸಿದಾಗ ರೋಧವು
ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಅಧಿಕವಾಗುತ್ತದೆ
ಕಡಿಮೆಯಾಗಿ ನಂತರ ಹೆಚ್ಚುತ್ತದೆ
ಡಿ.ಸಿ. ವಿದ್ಯುತ್ ಜನಕವು ಕಾರ್ಯನಿರ್ವಹಿಸುವ ತತ್ತ್ವ
ವಿದ್ಯುತ್ ಕಾಂತೀಯ ಪ್ರೇರಣೆ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
ವಿದ್ಯುತ್ ಪ್ರವಾಹದ ಉಷ್ಣೋತ್ಪನ್ನ ಪರಿಣಾಮ
ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ
ಓಮ್ ಎಂಬುದು ಇದರ SI ಏಕಮಾನವಾಗಿದೆ
ವಿದ್ಯುತ್ ಪ್ರವಾಹ
ವಿದ್ಯುತ್ ವಿಭವ
ವಿದ್ಯುತ್ ರೋಧ
ವಿದ್ಯುತ್ ಸಾಮರ್ಥ್ಯ
2 cm ಎತ್ತರದ ವರ್ಧನೆಯು +3 ಆದರೆ ಪ್ರತಿಬಿಂಬದ ಎತ್ತರ
3 cm
6 cm
5 cm
1.5 cm
ಕೊಟ್ಟಿರುವ ನಕ್ಷೆಯನ್ನು ಗಮನಿಸಿ ಕೆಳಗಿನ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ
R2>R1>R3
R1=R2=R3
R1>R2>R3
R3>R2>R1
A, B,C & D ಎಂಬ 4 ಮಾಧ್ಯಮಗಳ ವಕ್ರೀಭವನ ಸೂಚ್ಯಂಕವು ಕ್ರಮವಾಗಿ 1.31, 1.65, 1.44 & 1.50 ಆಗಿವೆ ಇವುಗಳಲ್ಲಿ ಬೆಳಕಿನ ವೇಗವು ಗರಿಷ್ಠವಾಗಿರುವ ಮಾಧ್ಯಮ
ಮಾಧ್ಯಮ B
ಮಾಧ್ಯಮ D
ಮಾಧ್ಯಮ C
ಮಾಧ್ಯಮ A
ಜಲವಿದ್ಯುತ್ ಸ್ಥಾವರಗಳಲ್ಲಿ ಆಗುವ ಶಕ್ತಿಯ ಪರಿವರ್ತನೆ
ಚಲನಶಕ್ತಿ ----->ವಿದ್ಯುಚ್ಛಕ್ತಿ------> ಪ್ರಚ್ಚನ್ನ ಶಕ್ತಿಯ------> ಯಾಂತ್ರಿಕ ಶಕ್ತಿ
ಪ್ರಚ್ಛನ್ನ ಶಕ್ತಿ ------>ಚಲನಶಕ್ತಿ ------>ಯಾಂತ್ರಿಕ ಶಕ್ತಿ--------> ವಿದ್ಯುತ್ ಶಕ್ತಿ
ಚಲನಶಕ್ತಿ-----> ಪ್ರಚ್ಛನ್ನ ಶಕ್ತಿ ---->ಯಾಂತ್ರಿಕ ಶಕ್ತಿ -------->ವಿದ್ಯುತ್ ಶಕ್ತಿ
ವಿದ್ಯುತ್ ಶಕ್ತಿ------> ಚಲನಶಕ್ತಿ-----> ಯಾಂತ್ರಿಕಶಕ್ತಿ ----->ಪ್ರಚ್ಛನ್ನ ಶಕ್ತಿ
ಅತಿ ಹೆಚ್ಚಿನ ತನ್ಯತೆ ಹೊಂದಿರುವ ಲೋಹ
ಚಿನ್ನ
ತಾಮ್ರ
ಕಬ್ಬಿಣ
ಸತು
ರಚನಾ ಸಮಾಂಗಿಗಳು
ಒಂದೇ ಅಣುಸೂತ್ರ ಆದರೆ ಭಿನ್ನ ರಚನೆ ಹೊಂದಿರುತ್ತವೆ
ಒಂದೇ ಅಣುಸೂತ್ರ ಹಾಗೂ ರಚನೆ ಹೊಂದಿರುತ್ತವೆ
ಭಿನ್ನ ಅಣುಸೂತ್ರ ಆದರೆ ಒಂದೇ ರಚನೆ ಹೊಂದಿರುತ್ತವೆ
ಭಿನ್ನ ಅಣುಸೂತ್ರ ಮತ್ತು ಭಿನ್ನ ರಚನೆ ಹೊಂದಿರುತ್ತವೆ
ಗ್ಯಾಲ್ವನೀಕರಣದಲ್ಲಿ ಉಕ್ಕು ಮತ್ತು ಕಬ್ಬಿಣವನ್ನು ತುಕ್ಕಿನಿಂದ ಸಂರಕ್ಷಿಸಲು ಲೇಪನ ಮಾಡುವ ವಸ್ತು
ಸತು
ತಾಮ್ರ
ಸೀಸ
ಬೆಳ್ಳಿ
ನಮ್ಮ ದೇಹ ಉತ್ತಮವಾಗಿ ಕಾರ್ಯನಿರ್ವಹಿಸುವ pH ನ ವ್ಯಾಪ್ತಿ
7.0 - 7.8
7.0 - 8.7
7.0 - 8.0
7.0 - 8.8
ಕೆಳಗಿನವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ ಗೆ ಉದಾಹರಣೆಯೆಂದರೆ
C2H6
C2H4
C2H2
C2H5
ಆಧುನಿಕ ಆವರ್ತಕೋಷ್ಟಕದಲ್ಲಿ ನಾವು ಒಂದು ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ಲೋಹೀಯ ಗುಣ
ಅಧಿಕವಾಗುತ್ತದೆ
ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಮೇಲಿನ ಯಾವುದೂ ಅಲ್ಲ
ಈ ಕಾರ್ಬನ್ ಸಂಯುಕ್ತದಲ್ಲಿರುವ ಕ್ರಿಯಾ ಗುಂಪು
ಕೀಟೋನ್
ಅಲ್ಡಿಹೈಡ್
ಅಲ್ಕೋಹಾಲ್
ಅಮೈನೋ
ಆಧುನಿಕ ಆವರ್ತ ಕೋಷ್ಟಕದಲ್ಲಿರುವ ಆವರ್ತಗಳು ಮತ್ತು ಗುಂಪುಗಳ ಸಂಖ್ಯೆ ಕ್ರಮವಾಗಿ
18 & 7
7 & 18
9 & 7
7 & 9
ತಾಮ್ರದ ಶುದ್ಧೀಕರಣದಲ್ಲಿ ಬಳಸುವ ವಿದ್ಯುದ್ವಿಭಜನೆಯ ದ್ರಾವಣ
ತಾಮ್ರದ ಸಲ್ಫೇಟ್
ಕಬ್ಬಿಣದ ಸಲ್ಫೇಟ್
ಆಮ್ಲೀಕರಿಸಲ್ಪಟ್ಟ ಕಬ್ಬಿಣದ ಸಲ್ಫೇಟ್
ಆಮ್ಲೀಕರಿಸಲ್ಪಟ್ಟ ತಾಮ್ರದ ಸಲ್ಫೇಟ್
ಕೆಳಗಿನವುಗಳಲ್ಲಿ ಒಂದು ನೈಸರ್ಗಿಕ ಸೂಚಕ
ಮಿಥೈಲ್ ಆರೆಂಜ್
ಫಿನಾಫ್ತಲೀನ್
ಬದಲಾಗುವುದಿಲ್ಲ
ಯಾವುದೂ ಅಲ್ಲ
ಪ್ರತ್ಯಾಮ್ಲವನ್ನು ನೀರಿನೊಂದಿಗೆ ಮಿಶ್ರಣ
OH- ಅಯಾನುಗಳ ಸಾರತೆ ಅಧಿಕವಾಗುತ್ತದೆ
OH- ಅಯಾನುಗಳ ಸಾರತೆ ಕಡಿಮೆಯಾಗುತ್ತದೆ
OH+ ಅಯಾನುಗಳ ಸಾರತೆ ಅಧಿಕವಾಗುತ್ತದೆ
OH+ ಅಯಾನುಗಳ ಸಾರತೆ ಕಡಿಮೆಯಾಗುತ್ತದೆ
ಸಹವೇಲೆನ್ಸೀಯ ಸಂಯುಕ್ತಗಳು ಸಾಮಾನ್ಯವಾಗಿ ವಿದ್ಯುತ್ತಿನ ದುರ್ಬಲ ವಾಹಕಗಳು ಏಕೆಂದರೆ
ಈ ಸಂಯುಕ್ತಗಳ ದ್ರವನಬಿಂದು ಕಡಿಮೆ ಇರುತ್ತದೆ
ಈ ಸಂಯುಕ್ತಗಳ ಅಂತರಾಣ್ವಿಕ ಬಲ ತುಂಬಾ ಕಡಿಮೆ
ಈ ಸಂಯುಕ್ತಗಳು ರಾಸಾಯನಿಕವಾಗಿ ತಟಸ್ಥವಾಗಿದೆ
ಯಾವುದೇ ವಿದ್ಯುದಾವೇಶ ಯುಕ್ತ ಕಣಗಳು ಉಂಟಾಗುವುದಿಲ್ಲ
ವಿಲೀನಗೊಳ್ಳುವ ಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ಹೀಗೆಂದು ಕರೆಯಲಾಗುವುದು
ಚೋಷಣ
ವಿಸರಣ
ಅಭಿಸರಣೆ
ವಸ್ತು ಸ್ಥಾನಾಂತರಣ
ಈ ಕೆಳಗಿನ ಚಿತ್ರದಲ್ಲಿ ಗುರುತಿಸಲಾದ ಮೂತ್ರಜನಕಾಂಗವ್ಯೂಹದ ಭಾಗ ಮತ್ತು ಕಾರ್ಯ
ಮೂತ್ರಪಿಂಡ--->ಮೂತ್ರದ ಉತ್ಪತ್ತಿ
ಮೂತ್ರಕೋಶ ----->ಮೂತ್ರದ ಸಂಗ್ರಹ
ಮೂತ್ರನಾಳ------> ಮೂತ್ರದ ಸಾಗಾಣಿಕೆ
ಮೂತ್ರದ್ವಾರ------> ಮೂತ್ರ ವಿಸರ್ಜನೆ
ಐಚ್ಛಿಕ ಕ್ರಿಯೆಗಳ ನಿಖರತೆ ಮತ್ತು ದೇಹದ ಭಂಗಿ ಹಾಗೂ ಸಮತೋಲನವನ್ನು ಕಾಪಾಡಲು ನೆರವಾಗುವ ಮಿದುಳಿನ ಭಾಗ
ಮಹಾಮಸ್ತಿಷ್ಕ
ಅನುಮಸ್ತಿಷ್ಕ
ಪಾನ್ಸ್
ಮೆಡುಲ್ಲಾ
ಹಾರ್ಮೋನು ಮತ್ತು ಅವುಗಳ ಕಾರ್ಯದ ಜೋಡಣೆಯ ಸರಿಯಾದ ಕ್ರಮ
a) ಆಕ್ಸಿನ್ i.ಕೋಶ ವಿಭಜನೆಯ
ಉತ್ತೇಜನ
b) ಸೈಟೋಕೈನಿನ್ ii.ಎಲೆಗಳ ಬಾಡುವಿಕೆ
c) ಅಭ್ಸಿಸಿಕ ಆಮ್ಲ iii.ಸಸ್ಯದ ಬೆಳವಣಿಗೆ
iv.ಹಣ್ಣುಗಳ ಮಾಗುವಿಕೆ
a-iii, b-iv, c-i
a-i ,b-iii, c-iv
a-iii, b-i, c-iv
a-iii, b-i, c-ii
ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನು
ಇನ್ಸುಲಿನ್
ಅಡ್ರಿನಲಿನ್
ಥೈರಾಕ್ಸಿನ್
ಟೆಸ್ಟೋಸ್ಟೆರಾನ್
ನಿಷೇಚನ ನಡೆಯುವ ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಭಾಗ
ಗರ್ಭಕೋಶ
ಅಂಡಾಶಯ
ಅಂಡನಾಳ
ಯೋನಿ
ಹದಿಹರೆಯದವರಲ್ಲಿ ಕಾಣಿಸಿಕೊಳ್ಳುವಂತಹ ಬದಲಾವಣೆಗಳು
ದೇಹದ ಗಾತ್ರದಲ್ಲಿ ಹೆಚ್ಚಳ
ಹೊಸ ಲಕ್ಷಣಗಳು ಕಾಣಿಸಿಕೊಳ್ಳುವಿಕೆ
ಸoವೇದಗಳಲ್ಲಿ ಸೂಕ್ಷ್ಮತೆ
ಈ ಎಲ್ಲವೂ
ಪುರುಷರು ಆದ್ಯತೆ ನೀಡುವ ತಾತ್ಕಾಲಿಕ ಗರ್ಭನಿರೋಧಕ ವಿಧಾನ
ಕಾಪರ್ ಟಿ ಯ ಬಳಕೆ
ಹಾರ್ಮೋನುಗಳ ಸಮತೋಲನ
ಕಾಂಡೋಮ್ ಗಳ ಅಳವಡಿಕೆ
ಶಸ್ತ್ರಚಿಕಿತ್ಸೆ
ಈ ಕೆಳಗಿನವುಗಳಲ್ಲಿ ಕಾರ್ಯ ಅನುರೂಪಿ ಅಂಕಗಳ ಸರಿಯಾದ ಜೋಡಣೆಯನ್ನು ಗುರುತಿಸಿ
ಮನುಷ್ಯನ ಮುಂಗಾಲು ಮತ್ತು ಕಪ್ಪೆಯ ಮುಂಗಾಲು
ಚಿಟ್ಟೆಯ ರೆಕ್ಕೆ ಮತ್ತು ಬಾವಲಿಯ ರೆಕ್ಕೆ
ಪಕ್ಷಿಯ ರೆಕ್ಕೆ ಮತ್ತು ಬಾವಲಿಯ ರೆಕ್ಕೆ
ಹಲ್ಲಿಯ ಮುಂಗಾಲು ಮತ್ತು ಕಪ್ಪೆಯ ಮುಂಗಾಲು
ಮಾನವರಲ್ಲಿ ಲಿಂಗ ನಿರ್ಧರಿಸುವ ವರ್ಣತಂತುಗಳ ಜೊತೆ XX & XY ಕ್ರಮವಾಗಿ ನಿರ್ಧರಿಸುವ ಲಿಂಗಗಳು
ಹುಡುಗ ಮತ್ತು ಹುಡುಗಿ
ಹುಡುಗಿ ಮತ್ತು ಹುಡುಗಿ
ಹುಡುಗಿ ಮತ್ತು ಹುಡುಗ
ಹುಡುಗ ಮತ್ತು ಹುಡುಗಿ
ದುಂಡನೆ(R)ಯ ಹಸಿರು(g) ಬೀಜವನ್ನು ಹೊಂದಿರುವ ಬಟಾಣಿ ಸಸ್ಯವನ್ನು ಸುಕ್ಕಾದ(r) ಹಳದಿ(Y)ಬೀಜವನ್ನು ಹೊಂದಿರುವ ಸಸ್ಯದೊಂದಿಗೆ ಸಂಕರಣ ಮಾಡಲಾಗಿದೆ ಸುಕ್ಕಾದ ಹಳದಿ ಬೀಜವನ್ನು ಹೊಂದಿರುವ ತಳಿ ಗುಣದ ಸೂಚಕವೆಂದರೆ
RRYY
RrYy
rryy
rrYy
ಓಝೋನ್ ಅಣುವಿನ ಸೂತ್ರ
CO2
O
O3
O2
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಒಂದು ಸಾಂಪ್ರದಾಯಿಕ ವಿಧಾನವೆಂದರೆ
ನೀರಿನ ಕೊಯ್ಲು ವಿಧಾನ ಅನುಸರಿಸುವುದು
ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸುವುದನ್ನು ನಿಲ್ಲಿಸುವುದು
ಕೈಗಾರಿಕೆಗಳ ಸ್ಥಾಪನೆ ಕಡಿತಗೊಳಿಸುವುದು
ಪಳೆಯುಳಿಕೆ ಇಂಧನಗಳನ್ನು ಯಥೇಚ್ಚವಾಗಿ ಬಳಸುವುದು
ಕೆಳಗಿನವುಗಳಲ್ಲಿ ಯಾವ ಜೋಡಿಯು ಪರಿಸರಸ್ನೇಹಿ ಅಲ್ಲ
ಮಿತ ಬಳಕೆ - ವಿದ್ಯುಚ್ಛಕ್ತಿ
ಅತಿ ಬಳಕೆ - ಫಾಸಿಲ್ ಇಂಧನ
ನಿರಾಕರಣೆ - ಪ್ಲಾಸ್ಟಿಕ್
ಮರುಬಳಕೆ - ಮಳೆನೀರು
