wayground logo

Free Printable Worksheets

NEW

Font size

S
M
L
XL
Worksheets

Sources of Energy

Total questions: 21

Worksheet time: 11mins

Name
Class
Date
1.

ಶಕ್ತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ ಹಾಗೂ ಲಯ ಗೊಳಿಸಲು ಸಾಧ್ಯವಿಲ್ಲ ಆದರೆ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಯಿಸಬಹುದು ಇದು

a)

ರಾಶಿ ಸಂರಕ್ಷಣಾ ನಿಯಮ

b)

ಶಕ್ತಿ ಸಂರಕ್ಷಣಾ ನಿಯಮ

c)

ಸಂವೇಗದ ನಿಯಮ

d)

ಶಕ್ತಿಯನ್ನು ಸೂಚಿಸುವ ನಿಯಮ

2.

ಉತ್ತಮ ಇಂಧನದ ಲಕ್ಷಣಗಳೆಂದರೆ

a)

ಸುಲಭವಾಗಿ ದೊರೆಯಬೇಕು

b)

ಸುಲಭವಾಗಿ ಸಂಗ್ರಹಿಸಬೇಕು ಮತ್ತು ಸಾಗಿಸಬೇಕು

c)

ಹೆಚ್ಚು ದಕ್ಷತೆ ಹೊಂದಿರಬೇಕು

d)

ಮಾಲಿನ್ಯರಹಿತ ವಾಗಿರಬೇಕು

e)

ಮೇಲಿನ ಎಲ್ಲವೂ

3.

ಬೃಹತ್ ಅಣೆಕಟ್ಟುಗಳನ್ನು ಕಟ್ಟುವುದರಿಂದ

a)

ಹಸಿರುಮನೆ ಅನಿಲ ಬಿಡುಗಡೆಯಾಗುತ್ತದೆ

b)

ಪುನರ್ವಸತಿ ಸಮಸ್ಯೆ ಉಂಟಾಗುತ್ತದೆ

c)

ಸಸ್ಯರಾಶಿಯ ಮುಳುಗಡೆ

d)

ಪರಿಸರ ವ್ಯವಸ್ಥೆಯ ನಾಶ

e)

ಮೇಲಿನ ಎಲ್ಲವೂ

4.

ಗಾಳಿ ಯಂತ್ರವು ಕಾರ್ಯನಿರ್ವಹಿಸಲು ಬೇಕಾದ ಗಾಳಿಯ ಕನಿಷ್ಠ ವೇಗ ಗಂಟೆಗೆ

a)

20 ಕಿಲೋಮೀಟರ್

b)

5 ಕಿಲೋಮೀಟರ್

c)

8 ಕಿಲೋಮೀಟರ್

d)

ಮೇಲಿನ ಯಾವುದು ಅಲ್ಲ

5.

ಗಾಳಿ ಯಂತ್ರಗಳ ಸಹಾಯದಿಂದ ಒಂದು ಮಿಲಿಯನ್ ವ್ಯಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಬೇಕಾದ ಭೂಮಿ

a)

10 ಹೆಕ್ಟೇರ್

b)

5 ಹೆಕ್ಟೇರ್

c)

2 ಹೆಕ್ಟೇರ್

d)

100 ಹೆಕ್ಟೇರ್

6.

ಸೌರ ಶಕ್ತಿಯನ್ನು ಬಳಸಿ ಅಡುಗೆ ಮಾಡುವ ಸಾಧನ

a)

ಸೋಲಾರ್ ವಾಟರ್ ಹೀಟರ್

b)

ಸೋಲಾರ್ ಲ್ಯಾಂಪ್

c)

ಸೋಲಾರ್ ಪ್ಯಾನಲ್

d)

ಸೋಲಾರ್ ಕುಕರ್

7.

ಪವನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಮಾಡುವ ಸಾಧನ

a)

ಗಾಳಿಯಂತ್ರ

b)

ವಿದ್ಯುತ್ ಮೋಟಾರ್

c)

ಸೋಲಾರ್ ಪ್ಯಾನಲ್

d)

ಸೌರ ಕುಲುಮೆ

8.

ಸೌರ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಮಾಡುವ ಸಾಧನ

a)

ಸೌರಕೋಶ

b)

ಸೌರ ಜಲತಾಪಕ

c)

ಜೈವಿಕ ಅನಿಲ ಸ್ಥಾವರ

d)

ಗಾಳಿಯಂತ್ರ

9.

ಹೆಚ್ಚು ಶಕ್ತಿಯನ್ನು ಪಡೆಯಲು ಸೌರ ಕೋಶಗಳನ್ನು ಸರಣಿಯಲ್ಲಿ ಜೋಡಿಸುತ್ತಾರೆ ಈ ವ್ಯವಸ್ಥೆ

a)

ಸೌರಕೋಶ

b)

ಸೌರಜಲತಾಪಕ

c)

ಸೌರ ಪಟ್ಟಿ

d)

ಸೌರವಿದ್ಯುತ್

10.

1 ಸೌರ ಕೋಶವು ಉತ್ಪತ್ತಿ ಮಾಡಬಹುದಾದ ವೋಲ್ಟೇಜ್

a)

0.5 V

b)

1V

c)

2V

d)

5V

11.

1 ಸೌರ ಕೋಶವು ಉತ್ಪತ್ತಿ ಮಾಡಬಹುದಾದ ವಿದ್ಯುಚ್ಛಕ್ತಿಯ ಪ್ರಮಾಣ (ವಿದ್ಯುತ್ ಸಾಮರ್ಥ್ಯ)

a)

0.5 W

b)

1 W

c)

0.7 W

d)

5 W

12.

ಜೈವಿಕ ಅನಿಲ ದಲ್ಲಿರುವ ಮೀಥೇನ್ ನ ಪ್ರಮಾಣ ಶೇಕಡಾ

a)

70

b)

30

c)

75

d)

100

13.

ಸೋಲಾರ್ ಕುಕ್ಕರ್ ನ ಒಳಭಾಗದಲ್ಲಿ ಕಪ್ಪು ಬಣ್ಣವನ್ನು ಬಳಿದಿರುತ್ತಾರೆ ಏಕೆಂದರೆ ಅದು

a)

ಶಾಖವನ್ನು ಪ್ರತಿಫಲಿಸುತ್ತದೆ

b)

ಬೆಳಕನ್ನು ಪ್ರತಿಫಲಿಸುತ್ತದೆ

c)

ಶಾಖವನ್ನು ಹೀರಿಕೊಳ್ಳುತ್ತದೆ

d)

ಚಂದ ಕಾಣಿಸುತ್ತದೆ

14.

ಸೋಲಾರ್ ಕುಕ್ಕರನ್ನು ಮರದ ಹಲಗೆಗಳಿಂದ ಮಾಡಿರುತ್ತಾರೆ ಏಕೆಂದರೆ ಅದು

a)

ಉತ್ತಮ ಉಷ್ಣವಾಹಕ

b)

ಉತ್ತಮ ವಿದ್ಯುತ್ ವಾಹಕ

c)

ಉಷ್ಣವಾಹಕ ವಲ್ಲದ ವಸ್ತು

d)

ಹೆಚ್ಚು ಬೆಲೆ ಹೊಂದಿದೆ

15.

ಸೌರ ಕುಕ್ಕರ್ ನಲ್ಲಿರುವ ಕನ್ನಡಿ ಯ ಮುಖ್ಯ ಕಾರ್ಯವೆಂದರೆ

a)

ಸೌರ ಕಿರಣಗಳನ್ನು ಹೀರುತ್ತದೆ

b)

ಸೌರ ಕಿರಣಗಳನ್ನು ಸೌರ ಕುಕ್ಕರ್ ಒಳಗೆ ಕೇಂದ್ರೀಕರಿಸುತ್ತದೆ

c)

ಅಂದವಾಗಿ ಕಾಣಿಸುತ್ತದೆ

d)

ಪರಿಸರವನ್ನು ನೋಡಲು ಸಹಾಯಕ

16.

ಸಮುದ್ರ ಶಕ್ತಿಗೆ ಕಾರಣವಾದ ಅಂಶ

a)

ಸೂರ್ಯ ಮತ್ತು ಚಂದ್ರರ ಗುರುತ್ವಾಕರ್ಷಣೆ

b)

ಸಾಗರದ ಆಳ ದಲ್ಲಾಗುವ ನಿರಂತರ ಭೂಕಂಪನಗಳು

c)

ಶಿಲಾಪದರಗಳ ಚಲನೆ

d)

ಸಮುದ್ರದ ಮೇಲೆ ಗಾಳಿಯ ಚಲನೆ

17.

ಸೂರ್ಯನ ಶಕ್ತಿಗೆ ಕಾರಣವಾಗಿರುವ ಕ್ರಿಯೆ

a)

ರಾಸಾಯನಿಕ ಕ್ರಿಯೆ

b)

ಜೈವಿಕ ಕ್ರಿಯೆ

c)

ಬೈಜಿಕ ಸಮ್ಮಿಲನ

d)

ಬೈಜಿಕ ವಿದಳನ

18.

ಪರಮಾಣು ವಿದ್ಯುತ್ ಉತ್ಪಾದನೆಯ ಪ್ರಮುಖ ಅಪಾಯವೆಂದರೆ

a)

ಬಳಸಲಾದ ಇಂಧನಗಳ ಶೇಖರಣೆ ಮತ್ತು ವಿಲೇವಾರಿ

b)

ತಂತ್ರಜ್ಞಾನ ಗೊತ್ತಿಲ್ಲ

c)

ತಂತ್ರಜ್ಞಾನದ ಬೆಲೆ ಹೆಚ್ಚು

d)

ಪರಿಸರ ನಾಶ

19.

ಇವುಗಳಲ್ಲಿ ಯಾವುದು ಜೈವಿಕ ಅನಿಲ

a)

ಬೆಂಜಿನ್

b)

ಬ್ಯೂಟೇನ್

c)

ಮಿಥೇನ್

d)

ಜಲಜನಕ ಮತ್ತು ಹೀಲಿಯಂ

20.

ಇವುಗಳಲ್ಲಿ ಯಾವುದು ಪಳಿಯುಳಿಕೆ ಇಂಧನ ವಲ್ಲ

a)

ಕಲ್ಲಿದ್ದಲು

b)

ಪೆಟ್ರೋಲ್

c)

ಡೀಸೆಲ್

d)

ಜೈವಿಕ ಅನಿಲ

21.

ಈ ಕೆಳಗಿನವುಗಳಲ್ಲಿ ಯಾವ ಶಕ್ತಿಯ ಆಕರವು ಸೂರ್ಯನನ್ನು ಮೂಲವಾಗಿ ಹೊಂದಿಲ್ಲ

a)

ಜಲಶಕ್ತಿ

b)

ಪವನ ಶಕ್ತಿ

c)

ಪಳೆಯುಳಿಕೆ

d)

ಪರಮಾಣು ಶಕ್ತಿ