wayground logo

Free Printable Worksheets

NEW

Font size

S
M
L
XL
Worksheets

10th Science ವಿದ್ಯುಚ್ಛಕ್ತಿ

Total questions: 26

Worksheet time: 13mins

Name
Class
Date
1.

ವಿದ್ಯುತ್ ಮಂಡಲದಲ್ಲಿನ ಎರಡು ಬಿಂದುಗಳ ನಡುವೆ ಏಕಮಾನ ಆವೇಶವನ್ನು ಚಲಿಸುವಲ್ಲಿ ನಡೆದ ಕೆಲಸದ ಅಳತಯೇ

a)

ವಿದ್ಯುತ್ ಪ್ರವಾಹ

b)

ವಿಭವಾಂತರ

c)

ರೋಧ

d)

ಸಾಮರ್ಥ್ಯ

2.

ಒಂದು ಕೂಲಮ್ ಆವೇಶಕ್ಕೆ ಸಮಾನವಾದ ಟ್ಟು ಇಲೆಕ್ಟ್ರಾನ್ ಆವೇಶಗಳ ಸಂಖ್ಯೆಯು

a)

2.6 x 10¹⁹ ಇಲೆಕ್ಟ್ರಾನ್ ಗಳು

b)

6.2 x 10¹⁹ ಇಲೆಕ್ಟ್ರಾನ್ ಗಳು

c)

2.65 x 10¹⁸ ಇಲೆಕ್ಟ್ರಾನ್ ಗಳು

d)

6.25 x 10¹⁸ ಇಲೆಕ್ಟ್ರಾನ್ ಗಳು

3.

ವಿಭವಾಂತರವನ್ನು ಅಳೆಯುವ ಏಕಮಾನ

a)

ವ್ಯಾಟ್

b)

ಓಮ್

c)

ವೋಲ್ಟ್

d)

ಕಿ ವ್ಯಾ ಗಂ

4.

ಈ ಸಮಯದಲ್ಲಿ ರೋಧಶೀಲತೆಯು ಬದಲಾಗುವುದಿಲ್ಲ

a)

ವಸ್ತುವನ್ನು ಬದಲಿಸಿದಾಗ

b)

ತಾಪವನ್ನು ಬದಲಿಸಿದಾಗ

c)

ವಸ್ತು ಮತ್ತು ತಾಪ ಎರಡನ್ನೂ ಬದಲಿಸಿದಾಗ

d)

ರೋಧದ ಆಕಾರವನ್ನು ಬದಲಿಸಿದಾಗ

5.

12V ಕಾರಿನ ಬ್ಯಾಟರಿಯಿಂದ ಕಾರ್ಯನಿರ್ವಹಿಸುವ ಕಾರಿನ ಹೆಡ್ ಲೈಟ್ 0.5A ವಿದ್ಯುತ್ ಅನ್ನು ಬಳಸುತ್ತದೆ. ಬಲ್ಬ್ ನ ರೋಧವು

a)

0.5 Ω

b)

6 Ω

c)

12 Ω

d)

24 Ω

6.

ಒಂದು ನಿಮಿಷದಲ್ಲಿ 100W ನ ವಿದ್ಯುತ್ ದೀಪವು ಪ್ರಸರಿಸುವ ಒಟ್ಟು ಶಕ್ತಿ

a)

100 J

b)

600 J

c)

3600 J

d)

6000 J

7.

ವಿದ್ಯುತ್ ಪ್ರವಾಹವನ್ನು ಅಳೆಯಲು ಬಳಸುವ ಏಕಮಾನ

a)

ವ್ಯಾಟ್

b)

ಕೂಲಮ್

c)

ವೋಲ್ಟ್

d)

ಆಂಪೀರ್

8.

ತಂತಿಯ ವ್ಯಾಸವನ್ನು ದ್ವಿಗುಣಗೊಳಿಸಿದಾಗ. ಅದರ ರೋಧವು

a)

ದ್ವಿಗುಣಗೊಳ್ಳುತ್ತದೆ

b)

ನಾಲ್ಕರಷ್ಟಾಗುತ್ತದೆ

c)

ಎರಡನೇ ಒಂದರಷ್ಟಾಗುತ್ತದೆ

d)

ನಾಲ್ಕನೇ ಒಂದರಷ್ಟಾಗುತ್ತದೆ

9.

3 Ω ರೋಧಕದ ನಡುವಿನ ವಿಭವಾಂತರವು 6V. ರೋಧಕದಲ್ಲಿ ಹರಿಯುವ ವಿದ್ಯುತ್ ಪ್ರವಾಹವು

a)

½ A

b)

1 A

c)

2 A

d)

6 A

10.

15 V ವಿಭವಾಂತರ ಹೊಂದಿರುವ ಎರಡು ಬಿಂದುಗಳ ನಡುವೆ 2 C ಆವೇಶಗಳು ಚಲಿಸಿದಾಗ ಆಗುವ ಕೆಲಸ ಎಷ್ಟು?

a)

17 J

b)

30 J

c)

24 J

d)

13 J

11.

400 W ದರದ ರೆಫ್ರಿಜಿರೇಟರ್ ದಿನಕ್ಕೆ 8 ಗಂಟೆಗಳ ಕಾಲ ಬಳಕೆಯಾಗುತ್ತದೆ. 1 kWh ಗೆ ರೂ 4 ರಂತೆ 30 ದಿನಗಳವರೆಗೆ ಕರ‍್ಯನಿರ್ವಹಿಸುವ ಶಕ್ತಿಯ ಮೌಲ್ಯವೇನು?

a)

288

b)

400

c)

384

d)

520

12.

220V ಜನರೇಟರ್‌ಗೆ ಒಂದು ವಿದ್ಯುತ್ ಬಲ್ಬ್ನ್ನು ಸಂಪರ್ಕಿಸಲಾಗಿದೆ. ಆ ಬಲ್ಬ್ ನಲ್ಲಿ 2 A. ವಿದ್ಯುತ್‌ಪ್ರವಾಹ ಪ್ರವಹಿಸುತ್ತದೆ. ಆಗ ಬಲ್ಬ್ ನ ಸಾಮರ್ಥ್ಯ ಎಷ್ಟು?

a)

110 W

b)

440 W

c)

400 W

d)

500 W

13.

ವಾಹಕದ ಮೂಲಕ 10 ನಿಮಿಷಗಳಲ್ಲಿ ಪ್ರವಹಿಸುವ ಒಟ್ಟು ವಿದ್ಯುತ್ ಆವೇಶಗಳ ಪ್ರಮಾಣವು 300 C ಆದರೆ, ವಾಹಕದಲ್ಲಿ ಹರಿಯುವ ವಿದ್ಯುತ್ ಪ್ರವಾಹವು

a)

30 A

b)

0.3 A

c)

0.5 A

d)

5 A

14.

ದೀಪದಲ್ಲಿನ ವಿದ್ಯುತ್ ಪ್ರವಾಹವು 5 A ಆದರೆ, 10 ಸೆಕೆಂಡುಗಳಲ್ಲಿ ಹರಿಯುವ ವಿದ್ಯುತ್ ಆವೇಶಗಳು

a)

0.5 C

b)

2 C

c)

5 C

d)

50 C

15.

ರೋಧದ SI ಮಾನವು -----

a)

ಓಮ್

b)

ವ್ಯಾಟ್

c)

ವೋಲ್ಟ್

d)

ಕೂಲಮ್

16.

ವಿದ್ಯುತ್ ದೀಪಗಳ ತಂತುಗಳಲ್ಲಿ ಟಂಗ್ ಸ್ಟನ್ ನನ್ನು ಹೆಚ್ಚಾಗಿ ಬಳಸಲು ಕಾರಣ

a)

ಟಂಗ್ ಸ್ಟನ್ ಕಡಿಮೆ ದ್ರವನ ಬಿಂದು ಹೊಂದಿದೆ

b)

ಟಂಗ್ ಸ್ಟನ್ ಹೆಚ್ಚಿನ ದ್ರವನ ಬಿಂದು ಹೊಂದಿದೆ

c)

ಉತ್ತಮ ವಿದ್ಯುತ್ ವಾಹಕ

d)

ಮೇಲಿನ ಎಲ್ಲವೂ

17.

ವಿದ್ಯುತ್ ಶಕ್ತಿಯ ವ್ಯವಹಾರಿಕ ಏಕಮಾನ

a)

ವ್ಯಾಟ್

b)

ಕಿಲೋವ್ಯಾಟ್ ಘಂಟೆ

c)

ಕಿಲೋವ್ಯಾಟ್ ನಿಮಿಷ

d)

ಕಿಲೋವ್ಯಾಟ್ ನಿಮಿಷ

18.

ವಿದ್ಯುತ್ ಸಾಮರ್ಥ್ಯದ SI ಏಕಮಾನ

a)

ವೋಲ್ಟ್

b)

ಓಮ್

c)

ವ್ಯಾಟ್

d)

ಆಂಪೀರ್

19.

ಮಿಶ್ರಲೋಹಗಳ ರೋಧ ಶೀಲತೆಯು ಅದರ ಘಟಕ ಲೋಹಗಳಿಗಿಂತ ಹೆಚ್ಚಾಗಿರುತ್ತದೆ

a)

ಸರಿ

b)

ತಪ್ಪು

20.

ವಿಭವಾಂತರವನ್ನು ಅಳೆಯುವ ಉಪಕರಣ

a)

ಆಮ್ಮೀಟರ್

b)

ಬ್ಯಾರೋಮೀಟರ್

c)

ಗ್ಯಾಲ್ವನೋಮೀಟರ್

d)

ವೋಲ್ಟ್ ಮೀಟರ್

21.

ವಿದ್ಯುತ್ ಆವೇಶದ SI ಮಾನ

a)

ಕೂಲಮ್

b)

ವ್ಯಾಟ್

c)

ವೋಲ್ಟ್

d)

ಆಂಪೀರ್

22.

ವಿದ್ಯುತ್ ಪ್ರವಾಹದ ನಿರಂತರ ಮತ್ತು ಆವೃತ ಮಾರ್ಗವನ್ನು ------- ಎನ್ನತ್ತಾರೆ

a)

ವಿದ್ಯುತ್ ಪ್ರವಾಹ

b)

ವಿದ್ಯುತ್ ಮಂಡಲ

c)

ವಿದ್ಯುತ್‌ ಮಾರ್ಗ

d)

ಮೇಲಿನ ಯಾವುದೂ ಅಲ್ಲ

23.

ವಾಹಕದಲ್ಲಿ ವಿಭವಾಂತರವಿದ್ದಾಗ ಮಾತ್ರ -------ಗಳು ಚಲಿಸುತ್ತವೆ

a)

ಪ್ರೋಟಾನ್

b)

ಪಾಸಿಟ್ರಾನ್

c)

ಇಲೆಕ್ಟ್ರಾನ್

d)

ನ್ಯೂಟ್ರಾನ್

24.

ವಿದ್ಯುತ್ ಪ್ರವಾಹದ ಏಕಮಾನ

a)

ಕೂಲಮ್

b)

ಆಂಪೀರ್

c)

ವ್ಯಾಟ್

d)

ವೋಲ್ಟ್

25.

ವಿದ್ಯುತ್ ಸಾಧನಗಳೊಂದಿಗೆ ವಿದ್ಯುತ್ ಫ್ಯೂಸನ್ನು ಯಾವ ಕ್ರಮದಲ್ಲಿ ಜೋಡಿಸಿರುತ್ತಾರೆ?

a)

ಸಮನಾಂತರ ಕ್ರಮ

b)

ಸರಣಿ ಕ್ರಮ

c)

1 ಮತ್ತು 2

d)

ಮೇಲಿನ ಯಾವುದೂ ಅಲ್ಲ

26.

ವಿದ್ಯುತ್ ಪ್ರವಾಹದ ದರವನ್ನು ಅಳೆಯಲು ಉಪಯೋಗಿಸುವ ಉಪಕರಣ

a)

ವೋಲ್ಟ್‌ ಮೀಟರ್

b)

ಥರ್ಮೋಮೀಟರ್

c)

ಬ್ಯಾರೋಮೀಟರ್

d)

ಆಮ್ಮೀಟರ್