wayground logo

Free Printable Worksheets

NEW

Font size

S
M
L
XL
Worksheets

10th science ಲೋಹಗಳು ಮತ್ತು ಅಲೋಹಗಳು ರಸಪ್ರಶ್ನೆ

Total questions: 29

Worksheet time: 15mins

Name
Class
Date
1.

Praveen Eshwar, GHS Dharmapura

a)

Right Answer

b)

Wrong Answer

2.

ಇವುಗಳಲ್ಲಿ ತಪ್ಪಾದ ಹೇಳಿಕೆ

a)

ಲೋಹಗಳು ಆಕ್ಸಿಜನ್ ಜೊತೆ ವರ್ತಿಸಿ ಪ್ರತ್ಯಾಮ್ಲೀಯ ಆಕ್ಸೈಡ್ ಉಂಟಾಗುತ್ತದೆ

b)

ಅಲೋಹಗಳು ಆಕ್ಸಿಜನ್ ಜೊತೆ ವರ್ತಿಸಿ ಆಮ್ಲೀಯ ಆಕ್ಸೈಡ್ ಉಂಟಾಗುತ್ತದೆ

c)

ಅಲೋಹಗಳು ತನ್ಯ ಮತ್ತು ಕುಟ್ಯ ಗುಣ ಹೊಂದಿವೆ

d)

ಲೋಹಗಳು ಉತ್ತಮ ವಾಹಕಗಳು

3.

ಸುಲಭವಾಗಿ ನಶಿಸುವಿಕೆಗೆ ಒಳಗಾಗದ ಲೋಹ

a)

ತಾಮ್ರ

b)

ಬೆಳ್ಳಿ

c)

ಸತು

d)

ಕಬ್ಬಿಣ

4.

ತಾಮ್ರದ ಪಾತ್ರೆಗಳನ್ನು ಗಾಳಿಗೆ ತೆರೆದಿಟ್ಟಾಗ ಅದರ ಮೇಲೆ ಉಂಟಾಗುವ ಹಸಿರು ಲೇಪನ

a)

CuCO₃

b)

CuO

c)

CuH₂

d)

Cu(OH)₂

5.

ಇಲೆಕ್ಟ್ರಾನ್ ಗಳು ಲೋಹದಿಂದ ಅಲೋಹಕ್ಕೆ ವರ್ಗಾವಣೆಯಾಗುವುದರ ಮೂಲಕ ಉಂಟಾಗುವ ಸಂಯುಕ್ತ

a)

HCl

b)

MgCl₂

c)

CCl₄

d)

H₂S

6.

ವಿದ್ಯುತ್ ತಂತಿಗಳನ್ನು ಬೆಸೆಯಲು ಉಪಯೋಗಿಸುವ ಮಿಶ್ರಲೋಹದ ಘಟಕಗಳು

a)

ಕಬ್ಬಿಣ ಮತ್ತು ಕೋಬಾಲ್ಟ್

b)

ತಾಮ್ರ ಮತ್ತು ತವರ

c)

ಕಬ್ಬಿಣ ಮತ್ತು ನಿಕ್ಕಲ್

d)

ಸೀಸ ಮತ್ತು ತವರ

7.

ಕಾಸುವಿಕೆ ವಿಧಾನದಿಂದ ಉದ್ದರಿಸಬಹುದಾದ ಅದಿರು

a)

ಸತುವಿನ ಸಲ್ಫೈಡ್

b)

ತಾಮ್ರದ ಸಲ್ಫೈಡ್

c)

ಸತುವಿನ ಕಾರ್ಬೋನೇಟ್

d)

ಸಿನ್ನಬಾರ್

8.

ಅತಿ ಹೆಚ್ಚಿನ ತನ್ಯತೆ ಗುಣ ಹೊಂದಿರುವ ಲೋಹ

a)

ತಾಮ್ರ

b)

ಕಬ್ಬಿಣ

c)

ಚಿನ್ನ

d)

ಅಲ್ಯೂಮಿನಿಯಂ

9.

ಮೆಗ್ನೀಸಿಯಂ ಮತ್ತು ಮ್ಯಾಂಗನೀಸ್ ಲೋಹಗಳು ಅತಿ ಸಾರರಿಕ್ತ ನೈಟ್ರಿಕ್ ಆಮ್ಲದೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ

a)

ಹೈಡ್ರೋಜನ್

b)

ನೈಟ್ರೋಜನ್ ಡೈ ಆಕ್ಸೈಡ್

c)

ಆಕ್ಸಿಜನ್

d)

ಕಾರ್ಬನ್ ಡೈ ಆಕ್ಸೈಡ್

10.

ಈ ಕೆಳಗಿನವುಗಳಲ್ಲಿ ಉಷ್ಣದ ದುರ್ಬಲ ವಾಹಕಗಳಾಗಿರುವ ಜೋಡಿ

a)

ಬೆಳ್ಳಿ ಮತ್ತು ತಾಮ್ರ

b)

ಕಬ್ಬಿಣ ಮತ್ತು ಅಲ್ಯೂಮಿನಿಯಂ

c)

ಚಿನ್ನ ಮತ್ತು ಬೆಳ್ಳಿ

d)

ಸೀಸ ಮತ್ತು ಪಾದರಸ

11.

ಹಿತ್ತಾಳೆಯ ಘಟಕ ಲೋಹಗಳು

a)

ತಾಮ್ರ ಮತ್ತು ತವರ

b)

ತಾಮ್ರ ಮತ್ತು ಸತು

c)

ಸೀಸ ಮತ್ತು ತವರ

d)

ಸೀಸ ಮತ್ತು ಸತು

12.

Na₂O + H₂O → 2NaOH ಈ ರಾಸಾಯನಿಕ ಕ್ರಿಯೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

a)

ಇದು ಸ್ಥಾನಪಲ್ಲಟ ಕ್ರಿಯೆಯಾಗಿದೆ

b)

ಇದು ವಿಭಜನೆ ಕ್ರಿಯೆಯಾಗಿದೆ

c)

ಇಲ್ಲಿ ನೀರಿನೊಂದಿಗೆ ಲೋಹೀಯ ಆಕ್ಸೈಡ್ ವರ್ತಿಸಿ ಕ್ಷಾರಗಳನ್ನು ಮಾಡುತ್ತವೆ.

d)

ಲೋಹೀಯ ಆಕ್ಸೈಡ್ ನೀರಿನೊಂದಿಗೆ ವರ್ತಿಸಿ ಆಮ್ಲವನ್ನುಂಟು ಮಾಡುತ್ತದೆ

13.

ಶುದ್ಧ ಕಬ್ಬಿಣ ಮೃದುವಾಗಿರುತ್ತದೆ. ಇದಕ್ಕೆ ಯಾವ ಧಾತುವನ್ನು ಸೇರಿಸುವುದರ ಮೂಲಕ ಗಟ್ಟಿ ಹಾಗೂ ಬಲಯುತವಾಗಿಸಬಹುದು

a)

ತಾಮ್ರ

b)

ಆಕ್ಸಿಜನ್

c)

ಸೋಡಿಯಂ

d)

ಕಾರ್ಬನ್

14.

ಆಹಾರ ಪದಾರ್ಥಗಳ ಡಬ್ಬಿಗಳನ್ನು ತವರದಿಂದ ಲೇಪನ ಮಾಡಲಾಗಿರುತ್ತದೆಯೇ ಹೊರತು ಸತುವಿನಿಂದಲ್ಲ. ಏಕೆಂದರೆ

a)

ಸತು ತವರಕ್ಕಿಂತ ದುಬಾರಿ

b)

ಸತುವಿನ ಕರಗುವ ಬಿಂದು ತವರಕ್ಕಿಂತ ಹೆಚ್ಚು

c)

ಸತುವು ತವರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ

d)

ಸತುವು ತವರಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ

15.

ಬೆಳ್ಳಿಯ ಪಾತ್ರೆಗಳನ್ನು ಗಾಳಿಗೆ ತೆರೆದಿಟ್ಟಾಗ ಸ್ವಲ್ಪ ಕಾಲದ ನಂತರ ಕಪ್ಪಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬೆಳ್ಳಿ ಪಾತ್ರೆಯೊಂದಿಗೆ ವರ್ತಿಸುವ ಗಾಳಿಯ ಘಟಕ

a)

ಆಕ್ಸಿಜನ್

b)

ಸಲ್ಫರ್

c)

ಕಾರ್ಬನ್ ಡೈಆಕ್ಸೈಡ್

d)

ಕಾರ್ಬನ್ ಮಾನಾಕ್ಸೈಡ್

16.

ಹೆಚ್ಚಿನ ಕ್ರಿಯಾಶೀಲತೆ ಹೊಂದಿರುವ ಧಾತು

a)

ಕಬ್ಬಿಣ

b)

ತಾಮ್ರ

c)

ಬೆಳ್ಳಿ

d)

ಸೋಡಿಯಂ

17.

ಈ ಕೆಳಗಿನವುಗಳಲ್ಲಿ ಕಡಿಮೆ ಸಾಂದ್ರತೆ ಮತ್ತು ಕಡಿಮೆ ಕರಗುವ ಬಿಂದುಗಳನ್ನು ಹೊಂದಿರುವ ಕ್ಷಾರ ಲೋಹಗಳು

a)

ತಾಮ್ರ ಮತ್ತು ಕಬ್ಬಿಣ

b)

ಚಿನ್ನ ಮತ್ತು ಬೆಳ್ಳಿ

c)

ಅಲ್ಯೂಮಿನಿಯಂ ಮತ್ತು ಸೀಸ

d)

ಲೀಥಿಯಂ ಮತ್ತು ಸೋಡಿಯಂ

18.

ತಾಮ್ರ ಮತ್ತು ತವರಗಳನ್ನು ಘಟಕ ಲೋಹಗಳಾಗಿ ಹೊಂದಿರುವ, ಪದಕಗಳ ತಯಾರಿಕೆಗೆ ಬಳಸುವ ಲೋಹ

a)

ಕಂಚು

b)

ಬೆಸುಗೆ ಲೋಹ

c)

ಹಿತ್ತಾಳೆ

d)

ಆಲ್ನಿಕೋ

19.

ಅತಿ ಹೆಚ್ಚಿನ ಕರಗುವ ಬಿಂದು ಮತ್ತು ಕುದಿಬಿಂದುವನ್ನು ಹೊಂದಿರುವ ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತು

a)

ವಜ್ರ

b)

ಗ್ರಾಫೈಟ್

c)

ಪಾದರಸ

d)

ಬ್ರೋಮಿನ್

20.

ಈ ಕೆಳಗಿನವುಗಳಲ್ಲಿ ಯಾವ ಜೋಡಿಯು ಸ್ಥಾನಪಲ್ಲಟ ಕ್ರಿಯೆಯನ್ನು ಉಂಟುಮಾಡುತ್ತದೆ?

a)

ಸೋಡಿಯಂ ಕ್ಲೋರೈಡ್ ದ್ರಾವಣ ಮತ್ತು ತಾಮ್ರದ ಲೋಹ

b)

ಮೆಗ್ನೀಸಿಯಂ ಕ್ಲೋರೈಡ್ ದ್ರಾವಣ ಮತ್ತು ಅಲ್ಯೂಮಿನಿಯಂ ಲೋಹ

c)

ಫೆರಸ್ ಸಲ್ಫೇಟ್ ದ್ರಾವಣ ಮತ್ತು ಬೆಳ್ಳಿಯ ಲೋಹ

d)

ಬೆಳ್ಳಿಯ ನೈಟ್ರೇಟ್ ದ್ರಾವಣ ಮತ್ತು ತಾಮ್ರದ ಲೋಹ

21.

ಲೋಹಗಳ ಕ್ರಿಯಾಶೀಲತೆಯ ಸರಿಯಾದ ಇಳಿಕೆ ಕ್ರಮ

a)

Fe > Zn > Al > Mg

b)

Mg > Al > Zn > Fe

c)

Zn > Fe > Al > Mg

d)

Al > Mg > Fe > Zn

22.

ಉಭಯಧರ್ಮಿ ಆಕ್ಸೈಡ್ ಗೆ ಒಂದು ಉದಾಹರಣೆ

a)

Na₂O

b)

Al₂O₃

c)

K₂O

d)

CuO

23.

ಲೋಹವು ನೈಟ್ರಿಕ್ ಆಮ್ಲದ ಜೊತೆ ಪ್ರತಿವರ್ತಿಸಿದಾಗ ಹೈಡ್ರೋಜನ್ ಅನಿಲ ಬಿಡುಗಡೆಯಾಗುವುದಿಲ್ಲ. ಏಕೆಂದರೆ

a)

ನೈಟ್ರಿಕ್ ಆಮ್ಲ ಪ್ರಬಲ ಅಪಕರ್ಷಕ

b)

ನೈಟ್ರಿಕ್ ಆಮ್ಲ ಪ್ರಬಲ ಉತ್ಕರ್ಷಕ

c)

ನೈಟ್ರಿಕ್ ಆಮ್ಲ ಪ್ರತ್ಯಾಮ್ಲೀಯ ಗುಣ ಹೊಂದಿದೆ

d)

ನೈಟ್ರಿಕ್ ಆಮ್ಲ ದುರ್ಬಲ ಅಪಕರ್ಷಕ

24.

ಮನೆಗಳಲ್ಲಿ ವಿದ್ಯುತ್ ಸಾಗಿಸುವ ತಂತಿಗಳು ಪಾಲಿವಿನೈಲ್ ಕ್ಲೋರೈಡ್ ನಿಂದ ಆವೃತವಾಗಿದೆ. ಕಾರಣ

a)

ತಂತಿಗಳು ಅವಾಹಕ ಮತ್ತು ಪಾಲಿವಿನೈಲ್ ಕ್ಲೋರೈಡ್ ವಾಹಕವಾಗಿದೆ.

b)

ತಂತಿಗಳು ಹಾಳಾಗದಂತೆ ರಕ್ಷಿಸಲು

c)

ತಂತಿಗಳು ವಾಹಕ ಮತ್ತು ಪಾಲಿವಿನೈಲ್ ಕ್ಲೋರೈಡ್ ಅವಾಹಕವಾಗಿದೆ.

d)

ತಂತಿಗಳು ವ್ಯಾಕೋಚಿಸುವುದನ್ನು ತಪ್ಪಿಸಲು

25.

ಪೂರ್ಣವಾಗಿ ತುಂಬಿರುವ ವೇಲೆನ್ಸಿ ಕವಚಗಳನ್ನು ಹೊಂದಿರುವ ಧಾತುಗಳು

a)

ಸೋಡಿಯಂ ಮತ್ತು ಮೆಗ್ನೀಸಿಯಂ

b)

ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ

c)

ನಿಯಾನ್ ಮತ್ತು ಆರ್ಗಾನ್

d)

ಸಲ್ಫರ್ ಮತ್ತು ಕ್ಲೋರಿನ್

26.

ಲೋಹೀಯ ಆಕ್ಸೈಡ್ ಗಳಿಂದ ಲೋಹಗಳನ್ನು ಆಕರ್ಷಿಸಲು ಬಳಸುವ ಧಾತು

a)

ಕಾರ್ಬನ್

b)

ಸತು

c)

ಕ್ಯಾಲ್ಸಿಯಂ

d)

ಆಕ್ಸಿಜನ್

27.

ಕಡಿಮೆ ಕರಗುವ ಬಿಂದುಗಳನ್ನು ಹೊಂದಿರುವ ಲೋಹಗಳು

a)

ಚಿನ್ನ ಮತ್ತು ಬೆಳ್ಳಿ

b)

ತಾಮ್ರ ಮತ್ತು ತವರ

c)

ಕಬ್ಬಿಣ ಮತ್ತು ಅಲ್ಯೂಮಿನಿಯಂ

d)

ಗ್ಯಾಲಿಯಂ ಮತ್ತು ಸೀಸಿಯಂ

28.

ವಿದ್ಯುದ್ವಿಭಜನೀಯ ಶುದ್ಧೀಕರಣದಲ್ಲಿ ಧನಾಗ್ರದ ಕೆಳಭಾಗದಲ್ಲಿ ಸಂಗ್ರಹಗೊಳ್ಳುವ ವಸ್ತು

a)

ಕರಗುವ ಕಶ್ಮಲಗಳು

b)

ಅಶುದ್ಧ ಲೋಹ

c)

ಶುದ್ಧ ಲೋಹ

d)

ಕರಗದ ಕಶ್ಮಲಗಳು

29.

ಕ್ಲೋರೈಡ್ ಅಯಾನಿನ ಇಲೆಕ್ಟ್ರಾನ್ ವಿನ್ಯಾಸ

a)

1s² 2s² 2p⁶ 3s² 3p⁵

b)

1s² 2s² 2p⁶ 3s² 3p⁶

c)

1s² 2s² 2p⁶ 3s² 3p⁴

d)

1s² 2s² 2p⁶ 3s² 3p³