wayground logo

Free Printable Worksheets

NEW

Font size

S
M
L
XL
Worksheets

chemical equations

Total questions: 24

Worksheet time: 12mins

Name
Class
Date
1.

ಮೆಗ್ನೀಷಿಯಂ ಲೋಹದ ತಂತಿಯ ಸಣ್ಣ ತುಂಡನ್ನು ಗಾಳಿಯಲ್ಲಿ ದಹಿಸಿದಾಗ ‘X’ ಎಂಬ ಉತ್ಪನ್ನ ದೊರೆತಿದೆ. ಹಾಗಾದರೆ ‘X’ ಉತ್ಪನ್ನವು

a)

ಮೆಗ್ನೀಷಿಯಂ ಆಕ್ಸೈಡ್

b)

ಮೆಗ್ನೀಷಿಯಂ ಕಾರ್ಬೋನೇಟ್

c)

ಮೆಗ್ನೀಷಿಯಂ ಕ್ಲೋರೈಡ್

d)

ಮೆಗ್ನೀಷಿಯಂ ಬೈಕಾರ್ಬೋನೇಟ್

2.

ರಾಸಾಯನಿಕ ಕ್ರಿಯೆ ಜರುಗಿದೆ ಎಂಬುದನ್ನು ಕಂಡುಕೊಳ್ಳಲು ಸಹಾಯಕವಾಗಿರುವ ವೀಕ್ಷಣೆಗಳು

a)

ಆಕಾರದಲ್ಲಿ ಬದಲಾವಣೆ

b)

ತಾಪದಲ್ಲಿ ಬದಲಾವಣೆ

c)

ಬಣ್ಣದಲ್ಲಿ ಬದಲಾವಣೆ

d)

ಆಯ್ಕೆ ಎ ಮತ್ತು ಬಿ ಎರಡೂ ಸರಿ

3.

          A   +   B      MgOA\ \ \ +\ \ \ B\ \ \ \rightarrow\ \ \ MgO      ಈ ರಾಸಾಯನಿಕ ಸಮೀಕರಣವನ್ನು ಪೂರ್ಣಗೊಳಿಸಲು ಅವಶ್ಯಕವಾದ ಅಂಶಗಳು
   

a)

Mg ಮತ್ತು CO2

b)

Mgಮತ್ತು O2   

c)

Mg ಮತ್ತು O2    

d)

Mg ಮತ್ತು O3

4.

ಸರಿಯಾದ ಮತ್ತು ಸರಿದೂಗಿಸಿದ ಸಮೀಕರಣವನ್ನು ಗುರುತಿಸಿ.


a)

4Fe + 2H2O Fe3O4 + 2H24Fe\ \ +\ \ 2H_2O\ \ \ \rightarrow\ \ \ Fe_3O_4\ \ +\ \ 2H_2 4Fe + 2H2O Fe3O4 + 2H2

b)

3Fe + 4H2O Fe3O4 + 4H23Fe\ \ +\ \ 4H_2O\ \ \ \rightarrow\ \ Fe_3O_4\ \ \ +\ \ 4H_2 3Fe + 4H2O Fe3O4 + 4H2

c)

4Fe + 4H2O 4Fe3O4 + 4H24Fe\ \ \ +\ \ \ 4H_2O\ \ \ \rightarrow\ \ \ 4Fe_3O_4\ \ \ +\ \ \ 4H_2 4Fe + 4H2O 4Fe3O4 + 4H2

d)

3Fe + 4H2O 4Fe3O4 + 3H23Fe\ \ \ +\ \ \ 4H_2O\ \ \ \rightarrow\ \ \ \ 4Fe_3O_4\ \ \ +\ \ \ 3H_2

5.

ರಾಸಾಯನಿಕ ಸಂಯೋಗ ಕ್ರಿಯೆಯಲ್ಲಿ

a)

ಒಂದು ಪ್ರತಿವರ್ತಕವು ರಾಸಾಯನಿಕವಾಗಿ ವಿಭಜನೆ ಹೊಂದಿ ಎರಡು ಅಥವಾ ಎರಡಕ್ಕಿಂತ

ಹೆಚ್ಚು ಉತ್ಪನ್ನಗಳು ಉಂಟಾಗುತ್ತವೆ

b)

ಪ್ರತಿವರ್ತಕ ಹಾಗೂ ಉತ್ಪನ್ನಗಳಲ್ಲಿರುವ ಪರಮಾಣುಗಳಲ್ಲಿನ ಅಯಾನುಗಳು

ವಿನಿಮಯಗೊಳ್ಳುತ್ತವೆ

c)

ರಾಸಾಯನಿಕ ಕ್ರಿಯೆಯಲ್ಲಿ ಒಂದು ಧಾತುವನ್ನು ಮತ್ತೊಂದು ಧಾತುವು

ಸ್ಥಾನಪಲ್ಲಟಗೊಳಿಸುತ್ತದೆ

d)

ಎರಡು ಅಥವಾ ಎರಡಕ್ಕಿಂತ ಹೆಚ್ಚು ಪ್ರತಿವರ್ತಕಗಳು ರಾಸಾಯನಿಕವಾಗಿ ಸೇರಿ ಕೇವಲ

ಒಂದು ಉತ್ಪನ್ನ ದೊರೆಯುತ್ತದೆ

6.

ಗಾಳಿಯ ಉಪಸ್ಥಿತಿಯಲ್ಲಿ ಮೆಗ್ನೀಷಿಯಂ ತಂತಿಯನ್ನು ಉರಿಸುವುದು ಕೆಳಗಿನ ಒಂದು ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ.

a)

ರಾಸಾಯನಿಕ ಸಂಯೋಗ ಕ್ರಿಯೆ

b)

ರಾಸಾಯನಿಕ ವಿಭಜನೆ ಕ್ರಿಯೆ

c)

ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆ

d)

ರಾಸಾಯನಿಕ ದ್ವಿವಿಭಜನೆ ಕ್ರಿಯೆ

7.

‘’ಕ್ಯಾಲ್ಸಿಯಂ ಆಕ್ಸೈಡ್ ನೀರಿನೊಂದಿಗೆ ಕ್ಷಿಪ್ರವಾಗಿ ವರ್ತಿಸಿದಾಗ ಸುಟ್ಟ ಸುಣ್ಣ ಉಂಟಾಗುತ್ತದೆ’’ ಈ ಹೇಳಿಕೆಗೆ ಸೂಕ್ತವಾದ ರಾಸಾಯನಿಕ ಸಮೀಕರಣ
   ಡಿ) 2CaO + CO2               2CaCO3 + ಉಷ್ಣ ಹೀರಿಕೆ

a)

 CaCO3     CaO   +   CO2   +  CaCO_3\ \ \rightarrow\ \ \ CaO\ \ \ +\ \ \ CO_2\ \ \ +\ \   ಉಷ್ಣ ಬಿಡುಗಡೆ

b)

 C   +   O2      CO2   +C\ \ \ +\ \ \ O_2\ \ \ \rightarrow\ \ \ CO_2\ \ \ +   ಉಷ್ಣ ಹೀರಿಕೆ

c)

 CaO   +   H2O      Ca(OH)2   +  CaO\ \ \ +\ \ \ H_2O\ \ \ \rightarrow\ \ \ Ca\left(OH\right)_2\ \ \ +\ \   ಉಷ್ಣ ಬಿಡುಗಡೆ

d)

 2CaO   +   CO2      2CaCO3   +2CaO\ \ \ +\ \ \ CO_2\ \ \ \rightarrow\ \ \ 2CaCO_3\ \ \ +  ಉಷ್ಣ ಹೀರಿಕೆ

8.

ಕೆಳಗಿನವುಗಳಲ್ಲಿ ಬಹಿರುಷ್ಣಕ ರಾಸಾಯನಿಕ ಕ್ರಿಯೆ

i) ಕಲ್ಲಿದ್ದಿಲಿನ ದಹನ

ii) ಪ್ರಾಣಿಗಳಲ್ಲಿ ಉಸಿರಾಟ ಕ್ರಿಯೆ

iii) ಕ್ಯಾಲ್ಸಿಯಂ ಹಾಗೂ ನೀರಿನ ನಡುವಿನ ಪ್ರತಿಕ್ರಿಯೆ

iv) ಜೈವಿಕ ವಸ್ತುಗಳು ವಿಘಟನೆಗೊಂಡು ಕಾಂಪೋಸ್ಟ್

ತಯಾರಾಗುವುದು

a)

ii ಮತ್ತು iv ಮಾತ್ರ

b)

i, ii ಮತ್ತು iii ಮಾತ್ರ

c)

i, iii ಮತ್ತು iv ಮಾತ್ರ

d)

i, ii, iii ಮತ್ತು iv ಮಾತ್ರ

9.

ಸುಣ್ಣ ಅಥವಾ ಸುಟ್ಟ ಸುಣ್ಣದ ರಾಸಾಯನಿಕ ಹೆಸರು

a)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್

b)

ಕ್ಯಾಲ್ಸಿಯಂ ಆಕ್ಸೈಡ್

c)

ಕ್ಯಾಲ್ಸಿಯಂ ಕಾರ್ಬೊನೇಟ್

d)

ಕ್ಯಾಲ್ಸಿಯಂ ಬೈಕಾರ್ಬೊನೇಟ್

10.

ರಾಸಾಯನಿಕ ಸಂಯೋಗ ಕ್ರಿಯೆಯು ರಾಸಾಯನಿಕ ವಿಭಜನೆ ಕ್ರಿಯೆಯ ವಿರುದ್ಧ ಕ್ರಿಯೆಯಾಗಿದೆ. ಇದಕ್ಕೆ ಕಾರಣವೆಂದರೆ

a)

ಎರಡೂ ಕ್ರಿಯೆಗಳಲ್ಲಿ ಕೇವಲ ಒಂದು ಉತ್ಪನ್ನ ದೊರೆಯುತ್ತವೆ

b)

ಎರಡೂ ಕ್ರಿಯೆಗಳಲ್ಲಿ ಎರಡೆರಡು ಪ್ರತಿವರ್ತಕಗಳು ಭಾಗವಹಿಸುತ್ತವೆ

c)

ಸಂಯೋಗ ಕ್ರಿಯೆಯಲ್ಲಿ ಎರಡು ಪ್ರತಿವರ್ತಕಗಳು ಸೇರಿ ಕೇವಲ ಒಂದು ಉತ್ಪನ್ನ ಬರುತ್ತದೆ

d)

ವಿಭಜನೆ ಕ್ರಿಯೆಯಲ್ಲಿ ಎರಡು ಪ್ರತಿವರ್ತಕಗಳು ವಿಭಜನೆ ಹೊಂದಿ ಕೇವಲ ಒಂದು ಉತ್ಪನ್ನ

ದೊರೆಯುತ್ತದೆ

11.

 CaO   +   H2O        M    +    CaO\ \ \ +\ \ \ H_2O\ \ \ \ \rightarrow\ \ \ \ M\ \ \ \ +\ \ \ \   ಉಷ್ಣ  CaO + H2O                                       + ಉಷ್ಣ
   ಎ) CaCO3                              ಬಿ) Ca(OH)2                    ಸಿ) CaOH                    ಡಿ) CaCl2

a)

 CaCO3CaCO_3  

b)

 Ca(OH)2Ca\left(OH\right)_2  

c)

 CaOHCaOH  

d)

 CaCl2CaCl_2  

12.

ಫೆರಸ್ ಸಲ್ಫೇಟ್ ನ ಹರಳುಗಳನ್ನು ಕಾಸಿದಾಗ ಬಿಡುಗಡೆಯಾಗುವ ಅನಿಲಗಳು

a)

ಸಲ್ಫರ್ ಡೈಆಕ್ಸೈಡ್ ಮತ್ತು ಸಲ್ಫರ್ ಟ್ರೈಆಕ್ಸೈಡ್

b)

ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಡೈಆಕ್ಸೈಡ್

c)

ನೈಟ್ರೋಜನ್ ಡೈಆಕ್ಸೈಡ್ ಮತ್ತು ಸಲ್ಫರ್ ಟ್ರೈಆಕ್ಸೈಡ್

d)

ನೈಟ್ರೋಜನ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಟ್ರೈಆಕ್ಸೈಡ್

13.

ಸೀಸದ ನೈಟ್ರೇಟ್ ಅನ್ನು ಕಾಸಿದಾಗ ದೊರೆಯುವ ಉತ್ಪನ್ನಗಳು

a)

ಸೀಸದ ನೈಟ್ರೇಟ್, ನೈಟ್ರೋಜನ್ ಡೈಆಕ್ಸೈಡ್ ಮತ್ತು ಆಮ್ಲಜನಕ

b)

ಸೀಸದ ಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್

c)

ಸೀಸದ ಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಮತ್ತು ಆಕ್ಸಿಜನ್

d)

ಸೀಸದ ಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್ ಮತ್ತು ಆಕ್ಸಿಜನ್

14.

 Na2SO4    +    BaCl2          BaSO4    +   2NaClNa_2SO_4\ \ \ \ +\ \ \ \ BaCl_2\ \ \ \ \ \rightarrow\ \ \ \ \ BaSO_4\ \ \ \ +\ \ \ 2NaCl           Na2SO4 + BaCl2             \rightarrow        BaSO4 + 2NaCl ಈ ಕ್ರಿಯೆಯಲ್ಲಿರುವ ಪ್ರಕ್ಷೇಪ

a)

ಬೇರಿಯಂ ಕ್ಲೋರೈಡ್

b)

ಸೋಡಿಯಂ ಸಲ್ಫೇಟ್ 

c)

ಬೇರಿಯಂ ಸಲ್ಫೇಟ್   

d)

ಸೋಡಿಯಂ ಕ್ಲೋರೈಡ್

15.

 CuO   +   H2         Cu   +   H2OCuO\ \ \ +\ \ \ H_2\ \ \ \ \rightarrow\ \ \ \ \ Cu\ \ \ +\ \ \ H_2O   ಇದು
   ಎ)                                           ಬಿ) 
    ಸಿ)                                         ಡಿ) 

a)

ಉತ್ಕರ್ಷಣೆ ಕ್ರಿಯೆ 

b)

ರೆಡಾಕ್ಸ್ ಕ್ರಿಯೆ  

c)

ಅಪಕರ್ಷಣೆ ಕ್ರಿಯೆ 

d)

ಯಾವ ಆಯ್ಕೆಯೂ ಅಲ್ಲ

16.

ಬಹಿರುಷ್ಣಕ ಕ್ರಿಯೆಯಲ್ಲಿ

a)

ಉಷ್ಣ ಬಿಡುಗಡೆಗೊಳ್ಳುತ್ತದೆ

b)

ಉಷ್ಣ ಹೀರಿಕೆಯಾಗುತ್ತದೆ

c)

ಉಷ್ಣ ಸ್ರವಿಕೆಯಾಗುತ್ತದೆ

d)

ಆಯ್ಕೆ ಎ ಮತ್ತು ಬಿ

17.

ಒಂದು ರಾಸಾಯನಿಕ ಕ್ರಿಯೆಯಲ್ಲಿ ಪರಮಾಣುಗಳಲ್ಲಿನ ಅಯಾನುಗಳು ವಿನಿಮಯಗೊಂಡರೆ, ಆ ಕ್ರಿಯೆಯು

a)

ರಾಸಾಯನಿಕ ವಿಭಜನೆ ಕ್ರಿಯೆ

b)

ರಾಸಾಯನಿಕ ದ್ವಿಸ್ಥಾನಪಲ್ಲಟ ಕ್ರಿಯೆ

c)

ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆ

d)

ರಾಸಾಯನಿಕ ಸಂಯೋಗ ಕ್ರಿಯೆ

18.

ಒಂದು ಹೊಸ ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣವಿರುವ ಬೀಕರ್ ನಲ್ಲಿ ಕೆಲವು ನಿಮಿಷಗಳ ಕಾಲ ಮುಳುಗಿಸಿದಾಗ ಮೊಳೆಯ ಮೇಲ್ಮೈ ಕಂದು ಬಣ್ಣವನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಕಾರಣವೇನೆಂದರೆ

a)

ಕಬ್ಬಿಣವು ಕ್ರಿಯಾಶೀಲವಾಗಿಲ್ಲ ಆದರೆ ತಾಮ್ರವು ಕ್ರಿಯಾಶೀಲವಾಗಿದೆ

b)

ಕಬ್ಬಿಣ ಮತ್ತು ತಾಮ್ರ ಎರಡೂ ಸಹ ಸಮಪ್ರಮಾಣದ ಕ್ರಿಯಾಪಟುತ್ವ ಹೊಂದಿವೆ

c)

ಕಬ್ಬಿಣವು ತಾಮ್ರಕ್ಕಿಂತ ಕಡಿಮೆ ಕ್ರಿಯಾಪಟುತ್ವ ಹೊಂದಿದೆ

d)

ಕಬ್ಬಿಣವು ತಾಮ್ರಕ್ಕಿಂತ ಹೆಚ್ಚು ಕ್ರಿಯಾಪಟುತ್ವ ಹೊಂದಿದೆ

19.

ಚಿಪ್ಸ್ ತಯಾರಕರು ಚಿಪ್ಸ್ ತಯಾರಿಸುವ ಸಂದರ್ಭದಲ್ಲಿ ಚಿಪ್ಸ್ ಪೊಟ್ಟಣಗಳಿಗೆ ಒಂದು ಅನಿಲವನ್ನು ಹಾಯಿಸುತ್ತಾರೆ. ಆ ಅನಿಲವು

a)

ಫ್ಲೋರಿನ್

b)

ಕ್ಲೋರಿನ್

c)

ಆಕ್ಸಿಜನ್

d)

ನೈಟ್ರೋಜನ್

20.

ಗುಂಪಿಗೆ ಸೇರದಿರುವುದನ್ನು ಗುರುತಿಸಿ.

a)

ಅಂತರುಷ್ಣಕ ಕ್ರಿಯೆ – ರಾಸಾಯನಿಕ ಕ್ರಿಯೆಯಲ್ಲಿ ಉಷ್ಣ ಹೀರಿಕೆಯಾಗುತ್ತದೆ

b)

ಅಪಕರ್ಷಣೆ ಕ್ರಿಯೆ – ರಾಸಾಯನಿಕ ಕ್ರಿಯೆಯಲ್ಲಿ ಹೈಡ್ರೋಜನ್ ನಷ್ಟವಾಗುತ್ತದೆ

c)

ಉತ್ಕರ್ಷಣೆ ಕ್ರಿಯೆ – ರಾಸಾಯನಿಕ ಕ್ರಿಯೆಯಲ್ಲಿ ಆಕ್ಸಿಜನ್ ಗಳಿಕೆಯಾಗುತ್ತದೆ

d)

ಬಹಿರುಷ್ಣಕ ಕ್ರಿಯೆ – ರಾಸಾಯನಿಕ ಕ್ರಿಯೆಯಲ್ಲಿ ಉಷ್ಣ ಅಥವಾ ಶಕ್ತಿ ಸ್ರವಿಕೆಯಾಗುತ್ತದೆ

21.

ಸರಿಯಾದ ಆಯ್ಕೆಯನ್ನು ಆಯ್ಕೆಮಾಡಿ.

1. ಸಂಯೋಗ ಕ್ರಿಯೆ

a) ರಾಸಾಯನಿಕ ಕ್ರಿಯೆಯಲ್ಲಿ ಪ್ರತಿವರ್ತಕಗಳ ನಡುವೆ

ಅಯಾನುಗಳು ವಿನಿಮಯಗೊಳ್ಳುತ್ತವೆ

2. ವಿಭಜನೆ ಕ್ರಿಯೆ

b) ಎರಡು ಅಥವಾ ಎರಡಕ್ಕಿಂತ ಪ್ರತಿವರ್ತಕಗಳು ಸೇರಿ

ಕೇವಲ ಒಂದೇ ಒಂದು ಉತ್ಪನ್ನ ಉಂಟಾಗುತ್ತದೆ

3. ಸ್ಥಾನಪಲ್ಲಟ ಕ್ರಿಯೆ

c) ಒಂದೇ ಒಂದು ಪ್ರತಿವರ್ತಕವು ವಿಭಜನೆ ಹೊಂದಿ ಎರಡು

ಅಥವಾ ಎರಡಕ್ಕಿಂತ ಹೆಚ್ಚು ಉತ್ಪನ್ನಗಳು ಉಂಟಾಗುತ್ತವೆ

4. ದ್ವಿಸ್ಥಾನಪಲ್ಲಟ ಕ್ರಿಯೆ

d) ರಾಸಾಯನಿಕ ಕ್ರಿಯೆಯಲ್ಲಿ ಒಂದು ಧಾತುವು ಇನ್ನೊಂದು

ಧಾತುವಿನ ಸ್ಥಾನವನ್ನು ಬದಲಿಸುತ್ತದೆ

a)

1-a 2-c 3-b 4-d

b)

1-c 2-d 3-b 4-a

c)

1-d 2-b 3-c 4-a

d)

1-b 2-c 3-d 4-a

22.

ಪಕ್ಕದಲ್ಲಿ ನೀಡಿರುವ ಚಿತ್ರವು ಪ್ರತಿನಿಧಿಸುವುದು

a)

ದ್ವಿವಿಭಜನೆ ಕ್ರಿಯೆ

b)

ವಿದ್ಯುದ್ವಿಭಜನೆ ಕ್ರಿಯೆ

c)

ದ್ಯುತಿವಿಭಜನೆ ಕ್ರಿಯೆ

d)

ಉಷ್ಣವಿಭಜನೆ ಕ್ರಿಯೆ

23.

ಸತುವಿನ ಲೋಹದೊಡನೆ ಸಾರರಿಕ್ತ ಗಂಧಕಾಮ್ಲದ ಪ್ರತಿವರ್ತನೆಯು ಉತ್ಪತ್ತಿ ಮಾಡುವುದು

a)

ಹೈಡ್ರೋಜನ್ ಅನಿಲ

b)

ಆಕ್ಸಿಜನ್ ಅನಿಲ

c)

ನೈಟ್ರೋಜನ್ ಅನಿಲ

d)

ಕ್ಲೋರಿನ್ ಅನಿಲ

24.

ಬೆಳ್ಳಿಯ ಬ್ರೋಮೈಡ್, ಬೆಳ್ಳಿ ಮತ್ತು ಬ್ರೋಮಿನ್ ಗಳಾಗಿ ಪರಿವರ್ತನೆಯಾಗುವುದು

a)

ಅಪಕರ್ಷಣೆ ಕ್ರಿಯೆ

b)

ವಿಭಜನೆ ಕ್ರಿಯೆ

c)

ಉತ್ಕರ್ಷಣೆ ಕ್ರಿಯೆ

d)

ಸ್ಥಾನಪಲ್ಲಟ ಕ್ರಿಯೆ