wayground logo

Free Printable Worksheets

NEW

Font size

S
M
L
XL
Worksheets

SSLC ವಿಜ್ಞಾನ ರಸ ಪ್ರಶ್ನೆ by ಶ್ರೀನಿವಾಸ್ ವಿ.ತುಮಕೂರು.

Total questions: 20

Worksheet time: 10mins

Name
Class
Date
1.

ವಿದ್ಯುತ್ ಉಷ್ನೋತ್ಪಾದನಾ ಸಾಧನಗಳ ಘಟಕಗಳು ಮಿಷ್ರಲೋಹಗಳಿಂದ ಮಾಡಲ್ಪಟ್ಟಿರುತ್ತವೆ.ಏಕೆಂದರೆ

a)

ಅವುಗಳ ದ್ರವನ ಬಿಂದು ಹೆಚ್ಚು.

b)

ಅವುಗಳ ರೋಧಶೀಲತೆ ಹೆಚ್ಚು.

c)

ಅವುಗಳು ಸುಲಭವಾಗಿ ದಹಿಸುವುದಿಲ್ಲ.

d)

ಮೇಲಿನ ಎಲ್ಲವೂ.

2.

ಕೆಳಗಿನ ಯಾವ ಹೇಳಿಕೆಯು ಸೋಲೆನಾಯ್ಡ್ ಗೆ ಸಂಬಂಧಿಸಿದಂತೆ ತಪ್ಪಾಗಿದೆ ?

a)

ಸೋಲೆ ನಾಯ್ಡ್ ನ ತುದಿಗಳು ಕಾಂತದ ಧ್ರುವಗಳಂತೆ ವರ್ತಿಸುತ್ತವೆ.

b)

ಸೊಲೆ ನೈಡ್ ನ ಒಳಭಾಗದಲ್ಲಿರುವ ಕಾಂತಿಯ ಬಲ ರೇಖೆಗಳು ಪರಸ್ಪರ ಸಮಾಂತರ ವಾಗಿರುತ್ತವೆ.

c)

ಸೊಲೆನಾಯ್ಡ್ ನ ಒಳಭಾಗದಲ್ಲಿ ಉಂಟಾಗುವ ಕಾಂತಕ್ಷೇತ್ರ ಮೆದು ಕಬ್ಬಿಣವನ್ನು ಕಾಂತವನ್ನಾಗಿಸುತ್ತದೆ.

d)

ವಿದ್ಯುತ್ ಪ್ರವಾಹವಿರುವ ಸೊಲೆನಾಯ್ಡ್ ದಂಡ ಕಾಂತದಂತೆ ವರ್ತಿಸುವುದಿಲ್ಲ

3.

ಎಣ್ಣೆ ಮತ್ತು ಕೊಬ್ಬಿನಿಂದ ತಯಾರಿಸಿರುವ ಆಹಾರವು ಕಮಟುವಿಕೆಗೆ ಒಳಪಡುವ ಕ್ರಿಯೆ.

a)

ಸಂಕ್ಷಾರಣ

b)

ಉತ್ಕರ್ಷಣ

c)

ಅಪಕರ್ಷಣ

d)

ಹೈಡ್ರೋಜನಿಕರಣ.

4.

ಕಾರ್ಬೋನೇಟ್ ಅದಿರನ್ನು ಉದ್ದರಿಸುವ ಹಂತಗಳು

a)

ಉರಿಯುವಿಕೆ, ಉತ್ಕರ್ಷಣ,ಅಪಕರ್ಷಣ & ಶುದ್ಧೀಕರಣ

b)

ಕಾಸುವಿಕೆ, ಉತ್ಕರ್ಷಣ, ಅಪಕರ್ಷಣ & ಶುದ್ಧೀಕರಣ.

c)

ವಿದ್ಯುತ್ ವಿಭಜನೆ, ಉತ್ಕರ್ಷಣ, ಅಪಕರ್ಷಣ & ಶುದ್ಧೀಕರಣ

d)

ಉರಿಯುವಿಕೆ,ಕಾಸುವಿಕೆ , ವಿದ್ಯುತ್ ವಿಭಜನೆ & ಶುದ್ಧೀಕರಣ

5.

CH4 + Cl2 ----CH3 Cl + HCl ಈ ರಾಸಾಯನಿಕ ಕ್ರಿಯೆಯು

a)

ತಟಸ್ಥೀಕರಣ.

b)

ಉತ್ಕರ್ಷಣ ಕ್ರಿಯೆ.

c)

ಆದೇಶನ ಕ್ರಿಯೆ.

d)

ಸ್ಥಾನಪಲ್ಲಟ ಕ್ರಿಯೆ.

6.

ಅಮ್ಮೀಟರ್ : ವಿದ್ಯುತ್ಪ್ರವಾಹದ ಅಳತೆ :: ವೋಲ್ಟ್ ಮೀಟರ್ : ______

a)

ವಿದ್ಯುತ್ ರೋಧ

b)

ವಿದ್ಯುತ್ ಪ್ರವಾಹ

c)

ವಿಭವಾಂತರ

d)

ವಿದ್ಯುತ್ ಸಾಮರ್ಥ್ಯ

7.

ಕೆಳಗಿನ ಯಾವ ವಸ್ತುಗಳನ್ನು ಮರುಚಕ್ರೀಕರಣದಲ್ಲಿ ಬಳಸಬಹುದು

a)

ಪ್ಲಾಸ್ಟಿಕ್

b)

ಕಾಗದ

c)

ಗಾಜು

d)

ಮೇಲಿನ ಎಲ್ಲವೂ

8.

ಕಾಂತಕ್ಷೇತ್ರದ ಪರಿಮಾಣವು ಈ ಕೆಳಗಿನವುಗಳಲ್ಲಿ ಯಾವುದನ್ನು ಅವಲಂಬಿಸಿದೆ ?

a)

ಕಾಂತದ ಪ್ರಬಲತೆ

b)

ಬಲ ರೇಖೆಗಳ ಸಾಂದ್ರತೆ

c)

ಕಾಂತೀಯ ಬಲರೇಖೆಗಳ ಉದ್ದ

d)

ವಿದ್ಯುತ್ ಪ್ರವಾಹ

9.

ಒಬ್ಬ ವ್ಯಕ್ತಿಯು ರಸ್ತೆಯಲ್ಲಿ ಹೋಗುವಾಗ ತಟ್ಟನೆ ನಾಗರಹಾವು ನೋಡಿ ಹೆದರುತ್ತಾನೆ ಆಗ ಅವನ ದೇಹದಲ್ಲಿ ಬಿಡುಗಡೆಯಾದ ಹಾರ್ಮೋನ್ ಯಾವುದು ?

a)

ಥೈರಾಕ್ಸಿನ್.

b)

ಬೆಳವಣಿಗೆಯ ಹಾರ್ಮೋನ್.

c)

ಅಡ್ರಿನಲಿನ್

d)

ಟೆಸ್ಟೋಸ್ಟಿರಾನ್

10.

ಜೈವಿಕ ವಿಘಟನೆಗೆ ಒಳಪಡದ ತ್ಯಾಜ್ಯಗಳ ನಿರ್ವಹಣೆಗೆ ಈ ವಿಧಾನ ಉತ್ತಮ ಪರಿಹಾರವಾಗಿದೆ.

a)

ದಹಿಸುವುದು

b)

ಹೂತುಹಾಕುವುದು.

c)

ರಾಶಿ ಹಾಕುವುದು.

d)

ಮರುಚಕ್ರೀಕರಣ ಕ್ರಿಯೆಗೆ ಒಳಪಡಿಸುವುದು

11.

ಗ್ಲುಕೋಸ್ ಪೈರುವೇಟ್ ಆಗಿ ಪರಿವರ್ತನೆಗೊಳ್ಳುವ ಸ್ಥಳ

a)

ಮೈಟೋಕಾಂಡ್ರಿಯ

b)

ಕೋಶರಸ/ಸೈಟೋಪ್ಲಾಸಂ

c)

ನ್ಯೂಕ್ಲಿಯಸ್

d)

ಕ್ಲೋರೋಪ್ಲಾಸ್ಟ್.

12.

ಸೀಸದ ನೈಟ್ರೇಟ್ ಅನ್ನು ಕಾಸಿದಾಗ ಬಿಡುಗಡೆಯಾಗುವ ಕಂದು ಬಣ್ಣದ ಅನಿಲ.

a)

ಹೈಡ್ರೋಜನ್

b)

ನೈಟ್ರೋಜನ್ ಡೈ ಆಕ್ಸೈಡ್

c)

ಕಾರ್ಬನ್ ಡೈಯಾಕ್ಸೈಡ್

d)

ಸಲ್ಫರ್ ಟ್ರೈ ಆಕ್ಸೈಡ್

13.

ವಿದ್ಯುನ್ಮoಡಲ ದಲ್ಲಿ ಅನೇಕ ಬಾರಿ ರೋಧವನ್ನು ಬದಲಾಯಿಸಲು ಬಳಸುವ ಉಪಕರಣ.

a)

ರೋಧಕ

b)

ಅಮ್ಮೀಟರ್

c)

ವೋಲ್ಟ್ ಮೀಟರ್

d)

ರಿಯೋಸ್ಟಾಟ್

14.

ಸಲ್ಫೇಟ್ ಹರಳುಗಳನ್ನು ಕಾಯಿಸಿದಾಗ ಅದು ರಾಸಾಯನಿಕ ಬದಲಾವಣೆ ಹೊಂದಿದೆ ಎಂಬುದನ್ನು ಗುರುತಿಸಲು ಸಹಾಯಕವಾದ ವೀಕ್ಷಣೆಗಳು

a)

ಬಣ್ಣದಲ್ಲಿ ಬದಲಾವಣೆ ಮತ್ತು ಅನಿಲದ ಬಿಡುಗಡೆ

b)

ಬಣ್ಣದಲ್ಲಿ ಬದಲಾವಣೆ ಮತ್ತು ತಾಪದ ಉತ್ಪಾದನೆ

c)

ಸ್ಥಿತಿ ಬದಲಾವಣೆ ಮತ್ತು ತಾಪದ ಉತ್ಪಾದನೆ

d)

ಬಣ್ಣದಲ್ಲಿ ಬದಲಾವಣೆ ಮತ್ತು ಸ್ಥಿತಿ ಬದಲಾವಣೆ.

15.

ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ.

a)

ಹೈಡ್ರೋಕ್ಲೋರಿಕ್ ಆಮ್ಲ

b)

ಅಸಿಟಿಕ್ ಆಮ್ಲ

c)

ಸಲ್ಫ್ಯೂರಿಕ್ ಆಮ್ಲ

d)

ಹೈಡ್ರೋಕ್ಲೋರಿಕ್ ಆಮ್ಲ

16.

ಪ್ರಾಣಿ ಹಾರ್ಮೋನ್ ಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ.

a)

ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

b)

ಅಡ್ರಿನಲಿನ್ ಚಯಾಪಚಯ ಕ್ರಿಯೆಯ ವೇಗ ನಿಯಂತ್ರಿಸುತ್ತದೆ.

c)

ಥೈರಾಕ್ಸಿನ್ ಆಘಾತದ ಸಂದರ್ಭದಲ್ಲಿ ದೇಹವನ್ನು ನಿಯಂತ್ರಿಸುತ್ತದೆ.

d)

ಟೆಸ್ಟೋಸ್ಟೀರಾನ್ ಹೆಣ್ಣು ಮಕ್ಕಳಲ್ಲಿ ಹದಿಹರಯ ಲಕ್ಷಣಗಳಿಗೆ ಕಾರಣವಾಗಿದೆ.

17.

ಈ ಕೆಳಗಿನವುಗಳಲ್ಲಿ ಓಮನ ನಿಯಮ ಪ್ರತಿಪಾದಿಸುವುದು.

a)

I = V/R

b)

V = IR

c)

I = R/V

d)

V = R/I

18.

ಒಬ್ಬ ಮಹಿಳೆ ಅಂಗಡಿಯಿಂದ ತಂದಿರುವ ಉಪ್ಪಿನಕಾಯಿಯ ಪ್ಲಾಸ್ಟಿಕ್ ಬಾಟಲಿಯನ್ನು ಖಾಲಿಯಾದ ನಂತರ ಅಡುಗೆ ಮನೆಯಲ್ಲಿ

ಸಾಸಿವೆಯನ್ನು ತುಂಬಿಡಲು ಬಳಸುತ್ತಾರೆ, ಪರಿಸರ ಸಂರಕ್ಷಣಾ ವಿಚಾರವಾಗಿ ಈ ನಿರ್ಧಾರ ದ ಹಿಂದಿರುವ ಉದ್ದೇಶ.

a)

ನಿರಾಕರಣೆ.

b)

ಮರುಬಳಕೆ

c)

ಮಿತಬಳಕೆ

d)

ಮರುಚಕ್ರೀಕರಣ

19.

ಈ ಕೆಳಗಿನ ರಾಸಾಯನಿಕ ಕ್ರಿಯೆಯಲ್ಲಿ ಉತ್ಕರ್ಷಣೆಗೊಳ್ಳುವ ವಸ್ತು

CuO+ H2 ----- Cu + H2O

a)

CuO

b)

H2

c)

Cu

d)

H2O

20.

ಹಲ್ಲು ಹುಳುಕಾಗುವುದನ್ನು ತಡೆಯಲು ನಿಯಮಿತವಾಗಿ ಹಲ್ಲುಜ್ಜುವುದು ಸೂಕ್ತವಾಗಿದೆ ಇಲ್ಲಿ ಬಳಸುವ ಟೂಥ್ ಪೇಸ್ಟ್ ನ ಸ್ವಭಾವ.

a)

ಆಮ್ಲೀಯ

b)

ಪ್ರತ್ಯಾಮ್ಲೀಯ

c)

ತಟಸ್ಥ

d)

ಮೇಲಿನ ಯಾವುದು ಅಲ್ಲ.