wayground logo

Free Printable Worksheets

NEW

Font size

S
M
L
XL
Worksheets

ಧಾತುಗಳ ಆವರ್ತನೀಯ ವರ್ಗೀಕರಣ

Total questions: 21

Worksheet time: 8mins

Name
Class
Date
1.

ತ್ರಿವಳಿಗಳ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ

a)

ದೊಬರೈನರ್

b)

ಮೆಂಡಲ್

c)

ಮಾಸ್ಲೆ

d)

ನ್ಯುಲ್ಯಾಂಡ್

2.

A, B ಮತ್ತು C ಗಳೆಂಬ ಧಾತುಗಳನ್ನು ಅನುಕ್ರಮವಾಗಿ ಜೋಡಿಸಲಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ತ್ರಿವಳಿ ನಿಯಮವನ್ನು ಅನ್ವಯಿಸಿ ಸೂತ್ರ ಬರೆದಾಗ

a)

A=B+C+2

b)

B= A+C/2

c)

A=B+C/2

d)

C=A+B/2

3.

ಅಷ್ಟಕಗಳ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ

a)

ದೊಬರೈನರ್

b)

ಮೆಂಡಲ್

c)

ಮಾಸ್ಲೆ

d)

ನ್ಯುಲ್ಯಾಂಡ್

4.

ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ ಯಾವುದಾದರೊಂದು ಧಾತುವಿನಿಂದ ಪ್ರಾರಂಭಿಸಿದಾಗ ಅದರ ರಾಸಾಯನಿಕ ಗುಣಲಕ್ಷಣಗಳು ಎಂಟನೇ ಧಾತುವಿಗೆ ಹೋಲಿಕೆಯಾಗುತ್ತದೆ. ಈ ನಿಯಮವನ್ನು ಹೀಗೆಂದು ಕರೆಯುವರು

a)

ತ್ರಿವಳಿಗಳ ನಿಯಮ

b)

ಅಷ್ಟಕ ಗಳ ನಿಯಮ

c)

ಆಧುನಿಕ ಆವರ್ತಕ ನಿಯಮ

d)

ಜಡ ಅನಿಲಗಳ ನಿಯಮ

5.

ರಸಾಯನಶಾಸ್ತ್ರವನ್ನು ಸಂಗೀತಕ್ಕೆ ಹೋಲಿಕೆ ಮಾಡಿದ್ದಕ್ಕಾಗಿ ಈ ವಿಜ್ಞಾನಿಯನ್ನು ಅಪಹಾಸ್ಯ ಮಾಡಲಾಯಿತು

a)

ದೊಬರೈನರ್

b)

ಮೆಂಡಲ್

c)

ಮಾಸ್ಲೆ

d)

ನ್ಯುಲ್ಯಾಂಡ್

6.

ಧಾತುಗಳ ಗುಣಗಳು ಅವುಗಳ ಪರಮಾಣು ರಾಶಿಗಳ ಆವರ್ತನೀಯ ಪುನರಾವರ್ತನೆಗಳು ಎಂಬ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ

a)

ದೊಬರೈನರ್

b)

ಮೆಂಡಲೀವ್

c)

ಮಾಸ್ಲೆ

d)

ನ್ಯುಲ್ಯಾಂಡ್

7.

ಧಾತುಗಳನ್ನು ಆವರ್ತ ಮತ್ತು ಗುಂಪುಗಳಲ್ಲಿ ವರ್ಗೀಕರಿಸಿದ ವಿಜ್ಞಾನಿ

a)

ದೊಬರೈನರ್

b)

ಮೆಂಡಲೀವ್

c)

ಮಾಸ್ಲೆ

d)

ನ್ಯುಲ್ಯಾಂಡ್

8.

ಧಾತುಗಳ ವರ್ಗೀಕರಣದ ಪರಿಕಲ್ಪನೆಯ ಜನಕ ಎಂದು ಈ ವಿಜ್ಞಾನಿಗೆ ಕರೆಯುತ್ತಾರೆ

a)

ದೊಬರೈನರ್

b)

ಮೆಂಡಲೀವ್

c)

ಮಾಸ್ಲೆ

d)

ನ್ಯುಲ್ಯಾಂಡ್

9.

ಧಾತುಗಳ ಗುಣಗಳು ಅವುಗಳ ಪರಮಾಣು ಸಂಖ್ಯೆಯ ಆವರ್ತನೆಯ ಪುನರಾವರ್ತನೆಗಳು ಎಂಬ ನಿಯಮವನ್ನು ಪ್ರತಿಪಾದಿಸಿದ ವಿಜ್ಞಾನಿ

a)

ದೊಬರೈನರ್

b)

ಮೆಂಡಲೀವ್

c)

ಹೆನ್ರಿ ಮಾಸ್ಲೆ

d)

ನ್ಯುಲ್ಯಾಂಡ್

10.

ಆವರ್ತ ಕೋಷ್ಟಕದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಾನಿಕ್ ವಿನ್ಯಾಸದ ಪರಿಕಲ್ಪನೆಯನ್ನು ನೀಡಿದ ವಿಜ್ಞಾನಿ

a)

ದೊಬರೈನರ್

b)

ಮೆಂಡಲೀವ್

c)

ಹೆನ್ರಿ ಮಾಸ್ಲೆ

d)

ನ್ಯುಲ್ಯಾಂಡ್

11.

ಆಧುನಿಕ ಆವರ್ತಕ ಕೋಷ್ಟಕದಲ್ಲಿ ಆವರ್ತ ಮತ್ತು ಗುಂಪುಗಳ ಸಂಖ್ಯೆ

a)

9 ಆವರ್ತ ಹಾಗೂ 28 ಗುಂಪುಗಳು

b)

7 ಆವರ್ತ ಹಾಗೂ 22 ಗುಂಪುಗಳು

c)

7 ಆವರ್ತ ಹಾಗೂ 18 ಗುಂಪುಗಳು

d)

11 ಆವರ್ತ ಹಾಗೂ 16 ಗುಂಪುಗಳು

12.

ಈ ಕಾರಣದಿಂದಾಗಿ ಧಾತುಗಳ ಜೋಡಣೆಯಲ್ಲಿ ಪರಮಾಣು ರಾಶಿಯ ಬದಲಾಗಿ ಪರಮಾಣು ಸಂಖ್ಯೆ ಯನ್ನು ಪರಿಗಣಿಸುವುದು ಸೂಕ್ತ

a)

ಜಡಾನಿಲಗಳ ಗುಣಲಕ್ಷಣ

b)

ಲೋಹಾಭಗಳ ಗುಣಲಕ್ಷಣ

c)

ಮಿಶ್ರಲೋಹಗಳ ಗುಣಲಕ್ಷಣ

d)

ಸಮಸ್ಥಾನಿಗಳ ಗುಣಲಕ್ಷಣ

13.

ಧಾತುವಿನ ಒಂದು ಕವಚಕ್ಕೆ ಸೇರ್ಪಡೆಯಾಗ ಬಹುದಾದ ಗರಿಷ್ಠ ಎಲೆಕ್ಟ್ರಾನ್ ಗಳ ಸಂಖ್ಯೆಯನ್ನು ಈ ಸೂತ್ರದಿಂದ ಲೆಕ್ಕಹಾಕಬಹುದು

a)

3n+1

b)

2n2

c)

2n-2

d)

A+C/2

14.

ಈ ವರ್ಗದ ಧಾತುಗಳನ್ನು ಸೊನ್ನೆ ವರ್ಗದ ಧಾತುಗಳು, ರಾಜಾನಿಲಗಳು, ಶ್ರೇಷ್ಠ ಅನಿಲಗಳು ಎಂದು ಕರೆಯುತ್ತಾರೆ

a)

18 ನೇ ವರ್ಗದ ಧಾತುಗಳು

b)

1 ನೇ ವರ್ಗದ ಧಾತುಗಳು

c)

16 ನೇ ವರ್ಗದ ಧಾತುಗಳು

d)

8 ನೇ ವರ್ಗದ ಧಾತುಗಳು

15.

18 ನೇ ವರ್ಗದ ಧಾತುಗಳನ್ನು ಸೊನ್ನೆ ವರ್ಗದ ಧಾತುಗಳು ಎಂದು ಕರೆಯಲು ಕಾರಣ

a)

ಈ ಧಾತುಗಳ ಅತ್ಯಂತ ಹೊರ ಕವಚವು ಅಷ್ಟಕ ರಚನೆಯನ್ನು ಹೊಂದಿದೆ

b)

ಈ ಧಾತುಗಳು ಇತರೆ ಧಾತುಗಳಲ್ಲಿ ಗೆ ವರ್ತಿಸುವುದಿಲ್ಲ

c)

ಈ ಧಾತುಗಳ ಅತ್ಯಂತ ಹೊರ ಕವಚವು ಗರಿಷ್ಠ ಎಲೆಕ್ಟ್ರಾನ್ ಗಳಿಂದ ಭರ್ತಿಯಾಗಿದೆ

d)

ಮೇಲಿನ ಎಲ್ಲವೂ ಸರಿ

16.

ಒಂದು ಧಾತುವಿನ ಎಲೆಕ್ಟ್ರಾನಿಕ್ ವಿನ್ಯಾಸವನ್ನು ಬರೆದಾಗ ಅದರ ಅತ್ಯಂತ ಹೊರಕವಚದಲ್ಲಿ 2p3 ಅನ್ನು ಹೊಂದಿದ್ದರೆ ಆ ಧಾತುವಿನ ಆವರ್ತ ಸಂಖ್ಯೆ

a)

2

b)

3

c)

p

d)

ಮೇಲಿನ ಎಲ್ಲವೂ ಸರಿ

17.

ಆವರ್ತ ಕೋಷ್ಟಕದಲ್ಲಿ ಎಡದಿಂದ ಬಲಕ್ಕೆ ಸಾಗಿದಾಗ ಪರಮಾಣು ಗಾತ್ರವು

a)

ಹೆಚ್ಚಾಗುತ್ತದೆ

b)

ಕಡಿಮೆಯಾಗುತ್ತದೆ

c)

ಬದಲಾವಣೆ ಆಗುವುದಿಲ್ಲ

d)

ಯಾವುದು ಅಲ್ಲ

18.

ವಿದ್ಯುತ್ ಧನೀಯ ಧಾತುಗಳು ಎಂದರೆ

a)

ಎಲೆಕ್ಟ್ರಾನುಗಳನ್ನು ಬಿಟ್ಟುಕೊಡುವ ಧಾತುಗಳು

b)

ಎಲೆಕ್ಟ್ರಾನುಗಳನ್ನು ಸ್ವೀಕರಿಸುವ ಧಾತುಗಳು

c)

ಯಾವುದೇ ಬದಲಾವಣೆಗೆ ಒಳಗಾಗದ ಧಾತುಗಳು

d)

ಮೇಲಿನ ಯಾವುದೂ ಅಲ್ಲ

19.

ಆವರ್ತ ಕೋಷ್ಟಕದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ವಿದ್ಯುತ್ ಋಣಿಯತೆ ಯು

a)

ಹೆಚ್ಚಾಗುತ್ತದೆ

b)

ಕಡಿಮೆಯಾಗುತ್ತದೆ

c)

ಬದಲಾವಣೆ ಆಗುವುದಿಲ್ಲ

d)

ಯಾವುದು ಅಲ್ಲ

20.

ಒಂದು ಧಾತುವಿನ ಅತ್ಯಂತ ಹೊರಕವಚದಲ್ಲಿ ಕಂಡುಬರುವ ಎಲೆಕ್ಟ್ರಾನು ಗಳಿಗೆ ಹೀಗೆಂದು ಕರೆಯುವರು

a)

ಹೆಚ್ಚುವರಿ ಎಲೆಕ್ಟ್ರಾನುಗಳು

b)

ವಿಸ್ಥಾಪಿತ ಎಲೆಕ್ಟ್ರಾನುಗಳು

c)

ವೇಲೆನ್ಸ್ ಎಲೆಕ್ಟ್ರಾನುಗಳು

d)

ಸ್ಥಾನಿಕ ಎಲೆಕ್ಟ್ರಾನುಗಳು

21.

ಈ ನಿಯಮದ ಆಧಾರದ ಮೇಲೆ ಆವರ್ತ ಕೋಷ್ಟಕವನ್ನು ಕ್ಯಾಲ್ಸಿಯಂ ಧಾತುವಿನ ನಂತರ ವಿಸ್ತರಿಸಲು ಸಾಧ್ಯವಾಗಲಿಲ್ಲ

a)

ದೋಬರೈನರ್ ನ ತ್ರಿವಳಿಗಳ ನಿಯಮ

b)

ನ್ಯೂಲ್ಯಾಂಡ್ ನ ಅಷ್ಟಕ ಗಳ ನಿಯಮ

c)

ಮೆಂಡಲೀವ್ ನಿಯಮ

d)

ಜಡ ಅನಿಲಗಳ ನಿಯಮ