wayground logo

Free Printable Worksheets

NEW

Font size

S
M
L
XL
Worksheets

ACIDS, BASES AND SALTS MCQ KANNADA MEDIUM

Total questions: 25

Worksheet time: 25mins

Name
Class
Date
1.

ಲಿಂಬೆಹಣ್ಣು ಮತ್ತು ಟೊಮ್ಯಾಟೊ ಹಣ್ಣಿನ ರಸಗಳು

a)

ಹುಳಿ ರುಚಿ ಹೊಂದಿವೆ

b)

ಉಪ್ಪಿನ ರುಚಿ ಹೊಂದಿವೆ

c)

ಸಿಹಿ ರುಚಿ ಹೊಂದಿವೆ

d)

ಕಹಿ ರುಚಿ ಹೊಂದಿವೆ

2.

ನಾವು ಒಂದು ನೀರಿನ ಮಾದರಿಯನ್ನು ಆಮ್ಲೀಯ ನೀರು ಎಂದು ಕರೆಯುವುದಾದರೆ ಅದರ pH ಮೌಲ್ಯವು

a)

6.5 ಕ್ಕಿಂತ ಕಡಿಮೆ ಆದರೆ 5.6 ಕ್ಕಿಂತ ಹೆಚ್ಚು

b)

5.6 ಕ್ಕಿಂತ ಕಡಿಮೆ

c)

5.6 ಕ್ಕಿಂತ ಹೆಚ್ಚು

d)

7.0 ಯಿಂದ 14.0 ವರೆಗೆ

3.

ಚೆಲುವೆ ಪುಡಿಯ ರಾಸಾಯನಿಕ ಹೆಸರು

a)

ಕ್ಯಾಲ್ಸಿಯಂ ಫಾಸ್ಪೇಟ್

b)

ಸೋಡಿಯಂ ಕಾರ್ಬೊನೇಟ್

c)

ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್

d)

ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್

4.

ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್ ಅನ್ನು ಕಾಸಿದಾಗ ‘X’ ಎಂಬ ಸಂಯುಕ್ತವು ದೊರೆಯುತ್ತದೆ. ಹಾಗಾದರೆ ‘X’

a)

ಬ್ಲೀಚಿಂಗ್ ಪುಡಿ

b)

ಕಾಸ್ಟಿಕ್ ಸೋಡಾ

c)

ಬೇಕಿಂಗ್ ಸೋಡಾ

d)

ವಾಷಿಂಗ್ ಸೋಡಾ

5.

ಬ್ರೈನ್ ದ್ರಾವಣವು

a)

13% ಸೋಡಿಯಂ ಕ್ಲೋರೈಡ್ ಅನ್ನು ಹೊಂದಿರುವ ದ್ರಾವಣವಾಗಿದೆ

b)

33% ಸೋಡಿಯಂ ಕ್ಲೋರೈಡ್ ಅನ್ನು ಹೊಂದಿರುವ ದ್ರಾವಣವಾಗಿದೆ

c)

23% ಸೋಡಿಯಂ ಕ್ಲೋರೈಡ್ ಅನ್ನು ಹೊಂದಿರುವ ದ್ರಾವಣವಾಗಿದೆ

d)

43% ಸೋಡಿಯಂ ಕ್ಲೋರೈಡ್ ಅನ್ನು ಹೊಂದಿರುವ ದ್ರಾವಣವಾಗಿದೆ

6.

ಆಮ್ಲಗಳಿಗೆ ನೀರನ್ನು ಸೇರಿಸುವುದು ಹಾನಿಕರ. ಏಕೆಂದರೆ ಇದು

a)

ಅತಿ ಬಹಿರುಷ್ಣಕ ಕ್ರಿಯೆ

b)

ಅತಿ ಅಂತರುಷ್ಣಕ ಕ್ರಿಯೆ

c)

ಅತಿ ಆಮ್ಲೀಯ ಕ್ರಿಯೆ

d)

ಅತಿ ಪ್ರತ್ಯಾಮ್ಲೀಯ ಕ್ರಿಯೆ

7.

‘R’ ಎಂಬ ದ್ರಾವಣದ pH ಮೌಲ್ಯವು 13.5 ಆಗಿದೆ. ಹಾಗಾದರೆ ಆ ದ್ರಾವಣವು

a)

ತಟಸ್ಥ ದ್ರಾವಣ

b)

ದುರ್ಬಲ ಪ್ರತ್ಯಾಮ್ಲೀಯ ದ್ರಾವಣ

c)

ಪ್ರಬಲ ಆಮ್ಲೀಯ ದ್ರಾವಣ

d)

ಪ್ರಬಲ ಪ್ರತ್ಯಾಮ್ಲೀಯ ದ್ರಾವಣ

8.

ಗುಂಪಿಗೆ ಸೇರದಿರುವುದನ್ನು ಆಯ್ಕೆಮಾಡಿ.

a)

KOH

b)

H2SO4

c)

NaOH

d)

Ca(OH)2

9.

Na2O ಇದು

a)

ಆಮ್ಲೀಯ ಗುಣವನ್ನು ಹೊಂದಿದ್ದು, ಕೆಂಪು ಲಿಟ್ಮಸ್ ಕಾಗದವನ್ನು ನೀಲಿಯಾಗಿಸುತ್ತದೆ

b)

ಪ್ರತ್ಯಾಮ್ಲೀಯ ಗುಣವನ್ನು ಹೊಂದಿದ್ದು, ಕೆಂಪು ಲಿಟ್ಮಸ್ ಕಾಗದವನ್ನು ನೀಲಿಯಾಗಿಸುತ್ತದೆ

c)

ತಟಸ್ಥ ಗುಣವನ್ನು ಹೊಂದಿದ್ದು, ಕೆಂಪು ಲಿಟ್ಮಸ್ ಕಾಗದವನ್ನು ನೀಲಿಯಾಗಿಸುತ್ತದೆ

d)

ಆಮ್ಲೀಯ ಗುಣವನ್ನು ಹೊಂದಿದ್ದು, ನೀಲಿ ಲಿಟ್ಮಸ್ ಕಾಗದವನ್ನು ಕೆಂಪಾಗಿಸುತ್ತದೆ

10.

ಕೆಳಗಿನ ಒಂದನ್ನು ಆಮ್ಲಶಾಮಕವಾಗಿ ಬಳಕೆ ಮಾಡಲಾಗುತ್ತದೆ

a)

ಪೊಟಾಸಿಯಂ ಹೈಡ್ರಾಕ್ಸೈಡ್

b)

ಮೆಗ್ನೀಷಿಯಂ ಹೈಡ್ರಾಕ್ಸೈಡ್

c)

ಸೋಡಿಯಂ ಹೈಡ್ರಾಕ್ಸೈಡ್

d)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್

11.

ಜೇನು ನೊಣದ ಮುಳ್ಳಿನಲ್ಲಿರುವುದು

a)

ಸಿಟ್ರಿಕ್ ಆಮ್ಲ

b)

ಅಸಿಟಿಕ್ ಆಮ್ಲ

c)

ಮೆಥನೋಯಿಕ್ ಆಮ್ಲ

d)

ಎಥನೋಯಿಕ್ ಆಮ್ಲ

12.

ಸೋಡಿಯಂ ಬೈಕಾರ್ಬೊನೇಟ್ ಅನ್ನು ಕಾಸಿದಾಗ ಬರುವ ಉತ್ಪನ್ನಗಳು

a)

ಸೋಡಿಯಂ ಬೈಕಾರ್ಬೊನೇಟ್, ಕಾರ್ಬನ್ ಡೈಆಕ್ಸೈಡ್ ಮತ್ತು ನೀರು

b)

ಅಮೋನಿಯಂ ಕ್ಲೋರೈಡ್, ಕಾರ್ಬನ್ ಡೈಆಕ್ಸೈಡ್ ಮತ್ತು ನೀರು

c)

ಸೋಡಿಯಂ ಕಾರ್ಬೊನೇಟ್, ಕಾರ್ಬನ್ ಡೈಆಕ್ಸೈಡ್ ಮತ್ತು ನೀರು

d)

ಸೋಡಿಯಂ ಹೈಡ್ರಾಕ್ಸೈಡ್, ಕಾರ್ಬನ್ ಡೈಆಕ್ಸೈಡ್ ಮತ್ತು ನೀರು

13.

ಅಜೀರ್ಣತೆಯ ಶಮನಕ್ಕಾಗಿ ಬಳಸುವ ಒಂದು ಔಷಧದ ವಿಧ

a)

ಆಮ್ಲಶಾಮಕ

b)

ಜೀವನಿರೋಧಕ

c)

ಪ್ರತಿರೋಧಕ

d)

ಸೋಂಕುನಿವಾರಕ

14.

ಕೆಳಗಿನವುಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ.

a)

ನೀರಿನಲ್ಲಿರುವ ಕ್ರಿಮಿಗಳನ್ನು ನಾಶಪಡಿಸಲು ಸೋಡಿಯಂ ಕಾರ್ಬೊನೇಟ್ ಬಳಸುತ್ತಾರೆ

b)

ಸೋಡಿಯಂ ಬೈಕಾರ್ಬೊನೇಟ್ ಅನ್ನು ಬೆಂಕಿ ಆರಿಸುವ ಸೋಡಾ-ಆಸಿಡ್ ಉಪಕರಣಗಳಲ್ಲಿ ಬಳಕೆ ಮಾಡುತ್ತಾರೆ

c)

ಮುರಿದ ಮೂಳೆಗಳನ್ನು ಕ್ರಮವಾಗಿ ಜೋಡಿಸಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸುತ್ತಾರೆ

d)

ಕೈಗಾರಿಕೆಗಳಲ್ಲಿ ಉತ್ಕರ್ಷಣಕಾರಿಯಾಗಿ ಚೆಲುವೆ ಪುಡಿಯನ್ನು ಬಳಸುತ್ತಾರೆ

15.

ಕ್ಲೋರ್ – ಆಲ್ಕಲಿ ಪ್ರಕ್ರಿಯೆಯ ಉತ್ಪನ್ನಗಳು

a)

Na2CO3, H2O ಮತ್ತು Cl2

b)

NaCl, Cl2 ಮತ್ತು H2

c)

NaOH, Cl2 ಮತ್ತು HCl

d)

H2, Cl2 ಮತ್ತು NaOH

16.

ತಾಮ್ರದ ಸಲ್ಫೇಟ್ ನ ಜಲೀಯ ದ್ರಾವಣವು ಅಮೋನಿಯಂ ಹೈಡ್ರಾಕ್ಸೈಡ್ ನ ಜಲೀಯ ದ್ರಾವಣದೊಂದಿಗೆ ವರ್ತಿಸಿದಾಗ

a)

ಬಿಳಿಯ ಬಣ್ಣದ ಪ್ರಕ್ಷೇಪ ಉಂಟಾಗುತ್ತದೆ

b)

ಹಸಿರು ಬಣ್ಣದ ಪ್ರಕ್ಷೇಪ ಉಂಟಾಗುತ್ತದೆ

c)

ಕಂದು ಬಣ್ಣದ ಪ್ರಕ್ಷೇಪ ಉಂಟಾಗುತ್ತದೆ

d)

ತಿಳಿನೀಲಿ ಬಣ್ಣದ ಪ್ರಕ್ಷೇಪ ಉಂಟಾಗುತ್ತದೆ

17.

ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಸೋಡಿಯಂ ಹೈಡ್ರಾಕ್ಸೈಡ್ ತಯಾರಿಸುವಾಗ X ಎಂಬ ಅನಿಲವು ಉಪ-ಉತ್ಪನ್ನದ ರೂಪದಲ್ಲಿ ದೊರೆತಿದೆ. ಈ ಅನಿಲವು ಸುಣ್ಣದ ತಿಳಿನೀರಿನೊಂದಿಗೆ ವರ್ತಿಸಿ Y

ಎಂಬ ಸಂಯುಕ್ತವು ಉತ್ಪತ್ತಿಯಾಗಿದ್ದು, ಅದನ್ನು ರಾಸಾಯನಿಕ ಕಾರ್ಖಾನೆಗಳಲ್ಲಿ ಸ್ವಚ್ಛಕಾರಿಯಾಗಿ ಬಳಸುತ್ತಾರೆ. ಹಾಗಾದರೆ X ಮತ್ತು Y ಗಳು ಕ್ರಮವಾಗಿ

a)

CO2 ಮತ್ತು CaOCl2

b)

H2 ಮತ್ತು NaHCO3

c)

Cl2 ಮತ್ತು NaHCO3

d)

Cl2 ಮತ್ತು CaOCl2

18.

ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್ ನೊಂದಿಗೆ ಬಳಸಿರುವ A ಎಂಬ ಆಮ್ಲವು ಬೇಕರಿಗಳ ಉತ್ಪನ್ನಗಳನ್ನು ಮೃದುವಾಗಿಸಿದೆ. ಈ ಮೃದುತ್ವವು B ಎಂಬ ಅನಿಲದ ಬಿಡುಗಡೆಯಿಂದ ಸಾಧ್ಯವಾಗಿದೆ. ಹಾಗಾದರೆ A ಮತ್ತು B ಗಳು

a)

A : ಆಕ್ಸಾಲಿಕ್ ಆಮ್ಲ ಮತ್ತು B : ಕಾರ್ಬನ್ ಡೈಆಕ್ಸೈಡ್

b)

A : ಆಕ್ಸಾಲಿಕ್ ಆಮ್ಲ ಮತ್ತು B : ಹೈಡ್ರೋಜನ್

c)

A : ಟಾರ್ಟಾರಿಕ್ ಆಮ್ಲ ಮತ್ತು B : ಕಾರ್ಬನ್ ಡೈಆಕ್ಸೈಡ್

d)

A : ಟಾರ್ಟಾರಿಕ್ ಆಮ್ಲ ಮತ್ತು B : ಆಕ್ಸಿಜನ್

19.

ಕಬ್ಬಿಣದ (II) ಕ್ಲೋರೈಡ್ ಮತ್ತು ಕಬ್ಬಿಣದ (III) ಕ್ಲೋರೈಡ್ ಗಳನ್ನು ವ್ಯತ್ಯಾಸೀಕರಿಸಲು ಬಳಸುವ ಸೂಚಕ

a)

ಆಸವಿತ ನೀರು

b)

ಸೋಡಿಯಂ ಹೈಡ್ರಾಕ್ಸೈಡ್

c)

ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲ

d)

ಬೆಚ್ಚನೆಯ ನೀರು

20.

ಕೆಳಗಿನವುಗಳಲ್ಲಿ ತಪ್ಪಾಗಿರುವುದು

a)

ಮೆಗ್ನೀಷಿಯಂ ಹೈಡ್ರಾಕ್ಸೈಡ್ – MgOH

b)

ಕ್ಯಾಲ್ಸಿಯಂ ಕ್ಲೋರೈಡ್ – CaCl2

c)

ಸೋಡಿಯಂ ಕಾರ್ಬೊನೇಟ್ – Na2CO3

d)

ಸೋಡಿಯಂ ಕಾರ್ಬೊನೇಟ್ – NaHCO3

21.

ಸರಿಯಾದ ಆಯ್ಕೆಯನ್ನು ಗುರುತಿಸಿ.

a)

ಟೊಮ್ಯಾಟೊ – ಟಾರ್ಟಾರಿಕ್ ಆಮ್ಲ

b)

ಲಿಂಬೆಹಣ್ಣು – ಮೆಥನೋಯಿಕ್ ಆಮ್ಲ

c)

ವಿನೆಗರ್ – ಅಸಿಟಿಕ್ ಆಮ್ಲ

d)

ಕಿತ್ತಳೆ – ಲ್ಯಾಕ್ಟಿಕ್ ಆಮ್ಲ

22.

X ಎಂಬ ಸಂಯುಕ್ತವು Y ಎಂಬ ಸಂಯುಕ್ತದೊಂದಿಗೆ ಪ್ರತಿಕ್ರಿಯಿಸಿದಾಗ ಪಾಪ್ ಶಬ್ದದೊಂದಿಗೆ Z ಎಂಬ ಉತ್ಪನ್ನ ಉಂಟಾಗುತ್ತದೆ. ಹಾಗಾದರೆ X, Y ಮತ್ತು Z ಗಳು

a)

X = ದುರ್ಬಲ H2SO4, Y = ಸತುವಿನ ಚೂರುಗಳು ಮತ್ತು Z = H2 ಅನಿಲ

b)

X = ದುರ್ಬಲ HNO3, Y = ತಾಮ್ರದ ಚೂರುಗಳು ಮತ್ತು Z = H2 ಅನಿಲ

c)

X = ದುರ್ಬಲ HNO3, Y = ತಾಮ್ರದ ಚೂರುಗಳು ಮತ್ತು Z = CO2 ಅನಿಲ

d)

X = ದುರ್ಬಲ HCl, Y = ಸತುವಿನ ಚೂರುಗಳು ಮತ್ತು Z = H2 ಅನಿಲ

23.

ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ

1. CaOCl2

ಎ) ಗಾಜಿನ ಉತ್ಪಾದನೆಯಲ್ಲಿ ಬಳಸುತ್ತಾರೆ

2. NaHCO3

ಬಿ) ಗೊಂಬೆಗಳು ಹಾಗೂ ಅಲಂಕಾರಿಕ ವಸ್ತುಗಳ ತಯಾರಿಕೆಗೆ ಬಳಸುತ್ತಾರೆ

3. CaSO4. ½ H2O

ಸಿ) ನೀರಿನಲ್ಲಿರುವ ಕ್ರಿಮಿಗಳನ್ನು ನಾಶಪಡಿಸಲು ಬಳಸುತ್ತಾರೆ

4. Na2CO3

ಡಿ) ಆಹಾರ ಪದಾರ್ಥಗಳನ್ನು ಮೃದುವಾಗಿಸಲು ಉಪಯೋಗಿಸುತ್ತಾರೆ

a)

1 – a 2 – b 3 – c 4 – d

b)

1 – c 2 – d 3 – b 4 – a

c)

1 – d 2 – c 3 – b 4 – a

d)

1 – a 2 – c 3 – b 4 – d

24.

ಜಿಪ್ಸಂ ಲವಣವನ್ನು 373 K ತಾಪಮಾನದಲ್ಲಿ ಕಾಸಿದಾಗ ಬರುವ ಉತ್ಪನ್ನ

a)

ಕ್ಯಾಲ್ಸಿಯಂ ಸಲ್ಫೇಟ್ ಪೆಂಟಾಹೈಡ್ರೇಟ್

b)

ಕ್ಯಾಲ್ಸಿಯಂ ಸಲ್ಫೇಟ್ ಡೈಹೈಡ್ರೇಟ್

c)

ಕ್ಯಾಲ್ಸಿಯಂ ಸಲ್ಫೇಟ್ ಡೆಕಾಹೈಡ್ರೇಟ್

d)

ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹೈಡ್ರೇಟ್

25.

ಜಿಪ್ಸಂ ಲವಣ ಮತ್ತು ಎಪ್ಸಂ ಲವಣಗಳ ರಾಸಾಯನಿಕ ಹೆಸರು

a)

ಕ್ಯಾಲ್ಸಿಯಂ ಸಲ್ಫೇಟ್ ಮತ್ತು ಮೆಗ್ನೀಷಿಯಂ ಸಲ್ಫೇಟ್

b)

ಕ್ಯಾಲ್ಸಿಯಂ ಸಲ್ಫೇಟ್ ಮತ್ತು ಮೆಗ್ನೀಷಿಯಂ ಫಾಸ್ಫೇಟ್

c)

ಕ್ಯಾಲ್ಸಿಯಂ ಕ್ಲೋರೈಡ್ ಮತ್ತು ಮೆಗ್ನೀಷಿಯಂ ಕ್ಲೋರೈಡ್

d)

ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ಮೆಗ್ನೀಷಿಯಂ ಕಾರ್ಬೊನೇಟ್