wayground logo

Free Printable Worksheets

NEW

Font size

S
M
L
XL
Worksheets

ವಿದ್ಯುಚ್ಛಕ್ತಿ

Total questions: 21

Worksheet time: 7mins

Name
Class
Date
1.

ಒಂದು ಏಕಮಾನ ಸಮಯದಲ್ಲಿ ನಿರ್ದಿಷ್ಟ ಕ್ಷೇತ್ರದ ಮೂಲಕ ಪ್ರವಹಿಸುವ ಆವೇಶಗಳ ಪರಿಮಾಣವನ್ನು ಹೀಗೆಂದು ಕರೆಯುತ್ತಾರೆ

a)

ವಿದ್ಯುತ್ ಪ್ರವಾಹ

b)

ಆವೇಶ

c)

ವಿಭವಾಂತರ

d)

ಜೌಲ್

2.

ವಿದ್ಯುತ್ ಪ್ರವಾಹವನ್ನು ಕಂಡುಹಿಡಿಯಲು ಬಳಸುವ ಸೂತ್ರ

a)

I = t / Q

b)

I = Q / t

c)

t = I Q

d)

I = Q t

3.

ವಿದ್ಯುತ್ ಆವೇಶದ S.I. ಏಕಮಾನ

a)

ಜೌಲ್

b)

ಕೂಲಮ್

c)

ಅಂಪಿಯರ್

d)

ಓಮ್

4.

ವಿದ್ಯುತ್ ಪ್ರವಾಹದ S.I. ಏಕಮಾನ

a)

ಜೌಲ್

b)

ಕೂಲಮ್

c)

ಅಂಪಿಯರ್

d)

ಓಮ್

5.

ವಿದ್ಯುತ್ ಮಂಡಲದಲ್ಲಿ ವಿದ್ಯುತ್ಪ್ರವಾಹದ ದರವನ್ನು ಅಳೆಯಲು ಬಳಸುವ ಉಪಕರಣ

a)

ವೋಲ್ಟಾ ಮೀಟರ್

b)

ಅಮ್ಮೀಟರ

c)

ರಿಯೋಸ್ಟ್ಯಾಟ್

d)

ಮೇಲಿನ ಯಾವುದೂ ಅಲ್ಲ

6.

ಅಮ್ಮಿಟರ್ ಅನ್ನು ಮಂಡಲದಲ್ಲಿ ಯಾವಾಗಲೂ ಈ ಕ್ರಮದಲ್ಲಿ ಜೋಡಿಸಿರುತ್ತಾರೆ

a)

ಸಮಾಂತರ ಜೋಡಣೆಯಲ್ಲಿ

b)

ಸರಣಿ ಜೋಡಣೆಯಲ್ಲಿ

c)

ಮೇಲಿನ ಎರಡೂ ರೀತಿಯಲ್ಲಿ

d)

ಮೇಲಿನ ಯಾವುದೂ ಅಲ್ಲ

7.

ಇದರ ಸಹಾಯದಿಂದ ಮಂಡಲದಲ್ಲಿ ವಿಭವಾಂತರ ವನ್ನು ಸೃಷ್ಟಿಸಬಹುದು

a)

ಪೆನ್ಸಿಲ್ ನಿಂದ

b)

ವಾಹಕ ದಿಂದ

c)

ವಿದ್ಯುತ್ಕೋಶ ದಿಂದ

d)

ನೀರಿನಿಂದ

8.

ವಿಭವಾಂತರದ S.I. ಏಕಮಾನ

a)

ವೋಲ್ಟ

b)

ಕೂಲಮ್

c)

ಅಂಪಿಯರ್

d)

ಓಮ್

9.

ಎರಡು ಬಿಂದುಗಳ ನಡುವಿನ ವಿಭವಂತರ ವನ್ನು ಕಂಡು ಹಿಡಿಯಲು ಬಳಸುವ ಸೂತ್ರ

a)

V = W / Q

b)

W = Q / V

c)

V = Q / W

d)

Q = V / W

10.

ವೋಲ್ಟಾ ಮೀಟರ್ ಅನ್ನು ಮಂಡಲದಲ್ಲಿ ಯಾವಾಗಲೂ ಈ ಕ್ರಮದಲ್ಲಿ ಜೋಡಿಸಿರುತ್ತಾರೆ

a)

ಸಮಾಂತರ ಜೋಡಣೆಯಲ್ಲಿ

b)

ಸರಣಿ ಜೋಡಣೆಯಲ್ಲಿ

c)

ಮೇಲಿನ ಎರಡೂ ರೀತಿಯಲ್ಲಿ

d)

ಮೇಲಿನ ಯಾವುದೂ ಅಲ್ಲ

11.

ಓಮ್ ನ ನಿಯಮದ ಸೂತ್ರ

a)

Q = I / t

b)

V = W / Q

c)

V = I R

d)

R = V I

12.

ರೋಧದ S.I. ಏಕಮಾನ

a)

ವೋಲ್ಟ

b)

ಕೂಲಮ್

c)

ಅಂಪಿಯರ್

d)

ಓಮ್

13.

ಒಂದು ವಾಹಕದಲ್ಲಿ ಪ್ರವಹಿಸುವ ವಿದ್ಯುತ್ ಪ್ರವಾಹವು ಅದರ ರೋಧಕ್ಕೆ

a)

ನೇರ ಅನುಪಾತದಲ್ಲಿರುತ್ತದೆ

b)

ವಿಲೋಮಾನುಪಾತದಲ್ಲಿರುತ್ತದೆ

c)

ಸಮಾನುಪಾತದಲ್ಲಿ ಇರುತ್ತದೆ

d)

ದ್ವಿಗುಣವಾಗಿರುತ್ತದೆ

14.

ವಿದ್ಯುತ್ ವಿಭವಾಂತರ ದ ಮೂಲವನ್ನು ಬದಲಾಯಿಸದೆ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುವ ಉಪಕರಣಕ್ಕೆ ಹೀಗೆನ್ನುವರು

a)

ವೋಲ್ಟಾ ಮೀಟರ್

b)

ಅಮ್ಮೀಟರ

c)

ರಿಯೋಸ್ಟ್ಯಾಟ್

d)

ಮೇಲಿನ ಯಾವುದೂ ಅಲ್ಲ

15.

ಯಾವುದೇ ಏಕರೂಪ ಲೋಹಿಯ ವಾಹಕದ ರೋಧ ಅದರ ಉದ್ದಕ್ಕೆ

a)

ನೇರ ಅನುಪಾತದಲ್ಲಿರುತ್ತದೆ

b)

ವಿಲೋಮಾನುಪಾತದಲ್ಲಿರುತ್ತದೆ

c)

ಸಮಾನುಪಾತದಲ್ಲಿ ಇರುತ್ತದೆ

d)

ದ್ವಿಗುಣವಾಗಿರುತ್ತದೆ

16.

ರೋಧ ಶೀಲತೆಯ S.I. ಏಕಮಾನ

a)

ವೋಲ್ಟ

b)

ಕೂಲಮ್

c)

ಅಂಪಿಯರ್

d)

ಓಮ್ ಮೀಟರ್

17.

ಮಿಶ್ರ ಲೋಹಗಳನ್ನು ಇಸ್ತ್ರಿಪೆಟ್ಟಿಗೆ ಯ ತಯಾರಿಕೆಯಲ್ಲಿ ಬಳಸುತ್ತಾರೆ ಏಕೆಂದರೆ

a)

ಮಿಶ್ರಲೋಹಗಳ ರೋಧಶೀಲತೆ ಹೆಚ್ಚು

b)

ಮಿಶ್ರಲೋಹಗಳು ಹೆಚ್ಚಿನ ತಾಪದಲ್ಲಿ ಸುಲಭವಾಗಿ ದಹಿಸುವುದಿಲ್ಲ

c)

ಮೇಲಿನ ಎರಡು ಸರಿ

d)

ಮೇಲಿನ ಎರಡು ತಪ್ಪು

18.

ಹಲವಾರು ರೋಧಕ ಗಳನ್ನು ಎರಡು ಸಾಮಾನ್ಯ ತುದಿಗೆ ಜೋಡಿಸಿದರೆ ಅದು

a)

ಸರಣಿ ಜೋಡಣೆ

b)

ಸಮಾಂತರ ಜೋಡಣೆ

c)

ಮಿಶ್ರ ಜೋಡಣೆ

d)

ಪರಿವರ್ತಿತ ಜೋಡಣೆ

19.

ಮನೆಗಳಲ್ಲಿ, ಕಾರ್ಖಾನೆಗಳಲ್ಲಿ ರೋಧಕಗಳ ಈ ಜೋಡಣೆಯನ್ನು ಬಳಸುತ್ತಾರೆ

a)

ಸರಣಿ ಜೋಡಣೆ

b)

ಸಮಾಂತರ ಜೋಡಣೆ

c)

ಮಿಶ್ರ ಜೋಡಣೆ

d)

ಪರಿವರ್ತಿತ ಜೋಡಣೆ

20.

ಜೌಲ್ ನ ಉಷ್ಣೋತ್ಪಾದನಾ ನಿಯಮದ ಸೂತ್ರ

a)

Q = I / t

b)

V = W / Q

c)

V = I R

d)

H = I2 R t

21.

ವಿದ್ಯುತ್ ಬಲ್ಬ್ ನಲ್ಲಿ ತಂತಿಯ ದೀರ್ಘಕಾಲ ಬಾಳಿಕೆಗೆ ಈ ಅನಿಲವನ್ನು ತುಂಬಿರುತ್ತಾರೆ

a)

ಹೈಡ್ರೋಜನ್

b)

ಆಕ್ಸಿಜನ್

c)

ನೈಟ್ರೋಜೆನ್

d)

ಇಂಗಾಲದ ಡೈಯಾಕ್ಸೈಡ್