NEW
Font size
Worksheets10th Science ಬೆಳಕು-ಪ್ರತಿಫಲನ ಮತ್ತು ವಕ್ರೀಭವನ
Total questions: 17
Worksheet time: 9mins
ಗಾಜಿನ ಪಟ್ಟಕದಲ್ಲಿ ಬಿಳಿಯ ಬೆಳಕು ಏಳು ಬಣ್ಣಗಳಾಗಿ ವಿಭಜನೆಯಾಗಲು ಆರಣವಾದ ಬೆಳಕಿನ ಸ್ವಭಾವ
ವಿವರ್ತನೆ
ವ್ಯತಿಕರಣ
ಪ್ರತಿಫಲನ
ವಕ್ರೀಭವನ
ದರ್ಪಣದ ಮೇಲ್ಮೈಯನ್ನು ಬೆಳ್ಳಿಯಿಂದ ಪಾಲಿಶ್ ಮಾಡಲು ಕಾರಣವೆಂದರೆ
ಬೆಳ್ಳಿಯು ಬೆಳಕನ್ನು ಚದುರಿಸುವುದಿಲ್ಲ
ಬೆಳ್ಳಿಯು ಬೆಳಕನ್ನು ಅತ್ಯುತ್ತಮವಾಗಿ ಪ್ರತಿಫಲಿಸುತ್ತದೆ
ಬೆಳ್ಳಿಯು ದರ್ಪಣದ ಗಾಜನ್ನು ರಕ್ಷಿಸುತ್ತದೆ
ಬೆಳ್ಳಿಯು ಸುಲಭವಾಗಿ ದೊರೆಯುತ್ತದೆ.
ಪೀನ ಮಸೂರದ ಒಂದು ಉಪಯೋಗವೆಂದರೆ
ಕಾರಿನ ಹೆಡ್ ಲೈಟ್
ವಾಹನದ ಪಾರ್ಶ್ವ ಅಥವಾ ಹಿನ್ನೋಟದ ಸಾಧನ
ಗಡಿಯಾರ ರಿಪೇರಿ ಮಾಡುವಲ್ಲಿ
ಸಮೀಪ ದೃಷ್ಟಿ ದೋಷಕ್ಕೆ ಪರಿಹಾರವಾಗಿ ನೀಡುವ ಕನ್ನಡಕದಲ್ಲಿ
ಮಸೂರ ಸಾಮರ್ಥ್ಯದ ಏಕಮಾನ
ಮೀಟರ್
ಡಯಾಪ್ಟರ್
ಡೆಸಿಬಲ್
ಡಿಗ್ರಿ
ನೇರವಾದ ಮತ್ತು ವರ್ಧಿಸಿದ ವಸ್ತುವಿನ ಪ್ರತಿಬಿಂಬವನ್ನು ಪಡೆಯುವ ದರ್ಪಣವನ್ನು ಹೆಸರಿಸಿ.
ನಿಮ್ನ ದರ್ಪಣ
ಪೀನ ದರ್ಪಣ
ಸಮತಲ ದರ್ಪಣ
ಮೇಲಿನ ಎಲ್ಲವೂ
ಮಾನವನ ಕಣ್ಣಿನಲ್ಲಿ ಉಂಟಾಗುವ ಪ್ರತಿಬಿಂಬದ ಸ್ವಭಾವ
ನೇರವಾದ
ವರ್ಧಿಸಿದ
ಮಿಥ್ಯ
ತಲೆ ಕೆಳಗಾದ ಸತ್ಯ
ವಸ್ತುವಿಗಿಂತ ದೊಡ್ಡದಾದ ಪ್ರತಿಬಿಂಬವನ್ನು ಪಡೆಯಲು ವಸ್ತುವನ್ನು ನಿಮ್ನ ದರ್ಪಣದ ಮುಂದೆ ಇರಿಸಬೇಕಾದ ಸ್ಥಾನ
C ಮತ್ತು F ಗಳ ನಡುವೆ
C ಯಿಂದ ಹೊರಗೆ
ಅನಂತ ದೂರದಲ್ಲಿ
F ಮತ್ತು ದರ್ಪಣದ ಧ್ರುವಗಳ ನಡುವೆ
ದಂತ ವೈದ್ಯರು ರೋಗಿಗಳ ಹಲ್ಲುಗಳ ದೊಡ್ಡ ಪ್ರತಿಬಿಂಬವನ್ನು ನೋಡಲು ಇದನ್ನು ಬಳಸುತ್ತಾರೆ
ನಿಮ್ನ ದರ್ಪಣ
ನಿಮ್ನ ಮಸೂರ
ಪೀನ ಮಸೂರ
ಪೀನ ದರ್ಪಣ
ವಸ್ತುವಿನಷ್ಟೇ ಗಾತ್ರದ ಪ್ರತಿಬಿಂಬ ಪಡೆಯಲು ಪೀನ ಮಸೂರದ ಬಳಿ ವಸ್ತುವನ್ನು ಇರಿಸಬೇಕಾದ ಸ್ಥಾನ
ಪ್ರಧಾನ ಸಂಗಮದಲ್ಲಿ
ಸಂಗಮದೂರದ ಎರಡರಷ್ಟು
ಅನಂತ ದೂರದಲ್ಲಿ
ಪ್ರಧಾನ ಸಂಗಮ ಮತ್ತು ದೃಕ್ ಕೇಂದ್ರಗಳ ನಡುವೆ
ಗೋಳೀಯ ದರ್ಪಣದ ಸಂಗಮದೂರ ಎಂದರೆ
ದರ್ಪಣದಿಂದ ವಕ್ರತಾ ಕೇಂದ್ರಕ್ಕೆ ಇರುವ ದೂರ
ಪ್ರಧಾನ ಸಂಗಮ ಮತ್ತು ದರ್ಪಣದ ಧ್ರುವಗಳ ನಡುವಿನ ದೂರ
ದರ್ಪಣದಿಂದ ವಸ್ತುವಿಗೆ ಇರುವ ದೂರ
ದರ್ಪಣದಿಂದ ಪ್ರತಿಬಿಂಬಕ್ಕೆ ಇರುವ ದೂರ
ಶಬ್ದಕೋಶದಲ್ಲಿ ಇರುವ ಚಿಕ್ಕ ಅಕ್ಷರಗಳನ್ನು ಓದಲು ಈ ಕೆಳಗೆ ನಮೂದಿಸಿದ ಮಸೂರಗಳಲ್ಲಿ ನೀವು ಯಾವುದಕ್ಕೆ ಆದ್ಯತೆಯನ್ನು ನೀಡುತ್ತೀರಿ?
50 cm ಸಂಗಮ ದೂರವನ್ನು ಹೊಂದಿರುವ ಪೀನ ಮಸೂರ
50 cm ಸಂಗಮ ದೂರವನ್ನು ಹೊಂದಿರುವ ನಿಮ್ನ ಮಸೂರ
5 cm ಸಂಗಮ ದೂರವನ್ನು ಹೊಂದಿರುವ ಪೀನ ಮಸೂರ
5 cm ಸಂಗಮ ದೂರವನ್ನು ಹೊಂದಿರುವ ನಿಮ್ನ ಮಸೂರ
ಒಂದು ಗೋಳೀಯ ದರ್ಪಣ ಮತ್ತು ತೆಳುವಾದ ಗೋಳೀಯ ಮಸೂರಗಳ ಪ್ರಧಾನ ಸಂಗಮ ದೂರವು -15 cm ಹಾಗಾದರೆ ದರ್ಪಣ ಮತ್ತು ಮಸೂರಗಳು
ಎರಡೂ ನಿಮ್ನ
ಎರಡೂ ಪೀನ
ದರ್ಪಣವು ನಿಮ್ನ ಮತ್ತು ಮಸೂರವು ಪೀನ
ದರ್ಪಣವು ಪೀನ ಮತ್ತು ಮಸೂರವು ನಿಮ್ನ
ಒಂದು 2cm ಎತ್ತರವಿರುವ ವಸ್ತುವನ್ನು 10cm ಸಂಗಮದೂರವಿರುವ ಪೀನ ಮಸೂರದ ಪ್ರಧಾನ ಅಕ್ಷದ ಮೇಲೆ ಲಂಬವಾಗಿ ಇರಿಸಲಾಗಿದೆ. ವಸ್ತುವು ಮಸೂರದಿಂದ 15cm ದೂರದಲ್ಲಿದೆ. ಇದರ ವರ್ಧನೆಯನ್ನು ಕಂಡುಹಿಡಿಯಿರಿ
+2
-2
+2.5
-2.5
ಒಂದು ನಿಮ್ನ ಮಸೂರದ ಸಂಗಮ ದೂರವು 15 ಸೆಂ.ಮೀ ಇದೆ. ಮಸೂರದಿಂದ ಪ್ರತಿಬಿಂಬವು 10 ಸೆಂ.ಮೀ ದೂರದಲ್ಲಿ ಉಂಟಾಗಲು ವಸ್ತುವನ್ನು ಮಸೂರದಿಂದ ಎಷ್ಟು ದೂರದಲ್ಲಿ ಇಡಬೇಕು? ಹಾಗೂ ಮಸೂರದಿಂದ ಉಂಟಾದ ವರ್ಧನೆಯನ್ನು ಕಂಡು ಹಿಡಿಯಿರಿ
30cm, +0.33
30mm, +0.33
30cm, -0.33
30mm, -0.33
ಬೆಳಕಿನ ಪ್ರತಿಫಲನದ ನಿಯಮಗಳ ಬಗ್ಗೆ ಸರಿಯಾದ ಹೇಳಿಕೆ(1) ಪತನ ಕೋನವು ಪ್ರತಿಫಲನ ಕೋನಕ್ಕೆ ಸಮನಾಗಿರುತ್ತದೆ ಮತ್ತು (2) ಪತನ ಕಿರಣ, ಪ್ರತಿಫಲನ ಕಿರಣ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನದ ಮೇಲ್ಮೈಗೆ ಎಳೆದ ಲಂಬ, ಈ ಮೂರೂ ಒಂದೇ ಸಮತಲದಲ್ಲಿರುತ್ತವೆ.
(1) ಮಾತ್ರ ಸರಿ
(2) ಮಾತ್ರ ಸರಿ
(1) ಮತ್ತು (2) ಎರಡೂ ಸರಿ
ಯಾವುದೂ ಸರಿ ಇಲ್ಲ
4cm ಗಾತ್ರದ ವಸ್ತುವನ್ನು, 15cm ಸಂಗಮ ದೂರವನ್ನು ಹೊಂದಿರುವ ನಿಮ್ನ ದರ್ಪಣದ ಮುಂದೆ 25cm ದೂರದಲ್ಲಿ ಇರಿಸಿದೆ. ಸ್ಪಷ್ಟ ಪ್ರತಿಬಿಂಬವನ್ನು ಪಡೆಯಲು ಪರದೆಯನ್ನು ದರ್ಪಣದಿಂದ ಎಷ್ಟು ದೂರದಲ್ಲಿ ಇರಿಸಬೇಕು?
+6.0cm
-6.0cm
+12cm
-12.0cm
ಈ ಕೆಳಗಿನವುಗಳಲ್ಲಿ ಮಿಥ್ಯ ಪ್ರತಿಬಿಂಬ ಉಂಟಾಗುವುದು
ಸಿನಿಮಾ ಗೃಹದ ಪ್ರೊಜೆಕ್ಟರ್ ನಿಂದ
ಸಾಧಾರಣ ಕ್ಯಾಮೆರಾದಿಂದ
ಸರಳ ಸೂಕ್ಷ್ಮದರ್ಶಕದಿಂದ
ದೂರದರ್ಶಕದಿಂದ
