wayground logo

Free Printable Worksheets

Font size

S
M
L
XL
Worksheets

ನಿಯಂತ್ರಣ ಮತ್ತು ಸಹಭಾಗಿತ್ವ

Total questions: 15

Worksheet time: 11mins

Name
Class
Date
1.

ನರವ್ಯೂಹದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ ಯಾವುದು?

a)

ನೆಫ್ರಾನ್

b)

ನ್ಯೂರಾನ್

c)

ಪ್ರೋಟಾನ್

d)

ಆಕ್ಸಾನ್

2.

ಈ ಕೆಳಗಿನ ಯಾವ ಕ್ರಿಯೆಯು ಪರಾವರ್ತಿತ ಪ್ರತಿಕ್ರಿಯೆ ಯಾಗಿದೆ?

a)

ಬಿಸಿಯಾದ ವಸ್ತುವನ್ನು ಮುಟ್ಟಿದಾಗ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವುದು

b)

ಶಿಕ್ಷಕರು ಹೇಳಿದ ವಿಷಯವನ್ನು ಪಟ್ಟಿಮಾಡುವುದು

c)

ಓಡುವುದು

d)

ಕ್ರಿಕೆಟ್ ಆಡುವುದು

3.

ಪರಾವರ್ತಿತ ಪ್ರತಿಕ್ರಿಯೆಯ ಕೇಂದ್ರ

a)

ಮೆದುಳು

b)

ನರಕೋಶ

c)

ಮೆದುಳು ಬಳ್ಳಿ

d)

ಮೇಲಿನ ಎಲ್ಲವೂ ಸರಿಯಾಗಿದೆ

4.

ಮಿದುಳಿನ ಪ್ರಮುಖ ಆಲೋಚನೆಯ ಭಾಗ ಯಾವುದು?

a)

ಹಿಮ್ಮೆದುಳು

b)

ಅನುಮಸ್ತಿಷ್ಕ

c)

ಮಧ್ಯ ಮೆದುಳು

d)

ಮುಮ್ಮೆದುಳು

5.

ರಕ್ತದ ಒತ್ತಡ, ಬಾಯಿಯಲ್ಲಿ ನೀರೂರರುವಿಕೆ ಮತ್ತು ವಾಂತಿ ಆಗುವಂತಹ ಎಲ್ಲಾ ಅನೈಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗ ಯಾವುದು?

a)

ಹಿಮ್ಮೆದುಳಿನ ಮೆಡುಲ್ಲಾ

b)

ಅನುಮಸ್ತಿಷ್ಕ

c)

ಮಹಾಮಸ್ತಿಷ್ಕ

d)

ಮಧ್ಯ ಮೆದುಳು

6.

ದೇಹದ ಭಂಗಿ ಹಾಗೂ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮೆದುಳಿನ ಭಾಗ ಯಾವುದು?

a)

ಮುಮ್ಮೆದುಳು

b)

ಮಧ್ಯ ಮೆದುಳು

c)

ಅನುಮಸ್ತಿಷ್ಕ

d)

ಹಿಮ್ಮೆದುಳಿನ ಮೆಡುಲ್ಲಾ

7.

ಸಸ್ಯಗಳು ಮಾಹಿತಿಯನ್ನು ಜೀವಕೋಶ ದಿಂದ ಜೀವಕೋಶಕ್ಕೆ ತಲುಪಿಸಲು ಈ ಕೆಳಗಿನ ಯಾವ ವಿಧಾನವನ್ನು ಬಳಸುತ್ತವೆ?

a)

ನ್ಯೂರಾನ್ ಗಳ ಸಹಾಯದಿಂದ

b)

ವಿದ್ಯುತ್ ರಾಸಾಯನಿಕ ವಿಧಾನದಿಂದ

c)

ಮೆದುಳು ಬಳ್ಳಿಯ ಸಹಾಯದಿಂದ

d)

ವಾಹಕ ಅಂಗಾಂಶ ಗಳ ಸಹಾಯದಿಂದ

8.

ಸೂರ್ಯಕಾಂತಿ ಹೂವು ಸೂರ್ಯನ ಕಡೆಗೆ ಬಾಗುವುದು ಈ ಕೆಳಗಿನ ಯಾವ ಅನುವರ್ತನೆಯಾಗಿದೆ?

a)

ಗುರುತ್ವಾನುವರ್ತನೆ

b)

ಸ್ಪರ್ಶಾನುವರ್ತನೆ

c)

ದ್ಯುತಿ ಅನುವರ್ತನೆ

d)

ಜಲಾನುವರ್ತನೆ

9.

ಎರಡು ನರಕೋಶಗಳ ನಡುವಿನ ಅಂತರವನ್ನು ಹೀಗೆಂದು ಕರೆಯುತ್ತಾರೆ.

a)

ಡೆಂಡ್ರೈಟ್

b)

ಸಂಸರ್ಗ

c)

ಆಕ್ಸಾನ್

d)

ಇಂಪಲ್ಸ್

10.

ಅಂಡಾಣುಗಳ ಕಡೆಗೆ ಪರಾಗರೇಣು ನಳಿಕೆಗಳ ಬೆಳವಣಿಗೆ ಯಾವ ಬಗೆಯ ಅನುವರ್ತನೆಯಾಗಿದೆ?

a)

ರಾಸಾಯನಿಕಾನುವರ್ತನೆ

b)

ಜಲಾನುವರ್ತನೆ

c)

ಗುರುತ್ವಾನುವರ್ತನೆ

d)

ದ್ಯುತಿ ಅನುವರ್ತನೆ

11.

ಸಸ್ಯಗಳಲ್ಲಿ ಅವುಗಳ ಬೆಳವಣಿಗೆಯನ್ನು ಆಧರಿಸಿ ಉಂಟಾಗದ ಪ್ರತಿಕ್ರಿಯೆಯೆಂದರೆ.

a)

ಕಾಂಡಗಳು ಬೆಳಕಿನ ಕಡೆ ಬಾಗುವುದು

b)

ಬೇರುಗಳು ಮಣ್ಣಿನಾಳಕ್ಕೆ ಇಳಿಯುವುದು

c)

ಎಲೆಗಳು ಸ್ಪರ್ಶಿಸಿದಾಗ ಮುದುರುವುದು

d)

ಬಳ್ಳಿಯೊಂದರ ಕುಡಿಗಳು ಮೇಲೇರುವುದು

12.

ಸಸ್ಯದ ಬೇರುಗಳ ಕೆಳಮುಖ ಬೆಳವಣಿಗೆ ಯಾವ ಬಗೆಯ ಅನುವರ್ತನೆಯಾಗಿದೆ?

a)

ರಾಸಾಯನಿಕ ಅನುವರ್ತನೆ

b)

ದ್ಯುತಿ ಅನುವರ್ತನೆ

c)

ಗುರುತ್ವಾನುವರ್ತನೆ

d)

ಸ್ಪರ್ಶಾನುವರ್ತನೆ

13.

ಕೇಂದ್ರ ನರವ್ಯೂಹ ವ್ಯವಸ್ಥೆಯು ಈ ಕೆಳಗಿನ ಭಾಗಗಳನ್ನು ಒಳಗೊಂಡಿದೆ.

a)

ಮೆದುಳು ಮತ್ತು ಮೆದುಳಿನಿಂದ ಹೊರಡುವ ನರಗಳು

b)

ಮೆದುಳುಬಳ್ಳಿ ಮತ್ತು ಮೆದುಳುಬಳ್ಳಿಯಿಂದ ಹೊರಡುವ ನರಗಳು

c)

ಮೆದುಳು ಮತ್ತು ಮೆದುಳುಬಳ್ಳಿ

d)

ಮೆದುಳಿನಿಂದ ಹೊರಡುವ ನರಗಳು ಮತ್ತು ಮೆದುಳುಬಳ್ಳಿಯಿಂದ ಹೊರಡುವ ನರಗಳು

14.

ಪರಿಸರದಲ್ಲಿ ಉಂಟಾಗುವ ಘಟನೆಗೆ ಪ್ರತಿಯಾಗಿ ವ್ಯಕ್ತವಾಗುವ ತತಕ್ಷಣದ ಪ್ರತಿಕ್ರಿಯೆಯನ್ನು ಹೀಗೆನ್ನುತ್ತಾರೆ.

a)

ಪರಾವರ್ತಿತ ಚಾಪ

b)

ಪ್ರತಿಕ್ರಿಯೆ

c)

ಸಂದೇಶ ರವಾನೆ

d)

ಪರಾವರ್ತಿತ ಪ್ರತಿಕ್ರಿಯೆ

15.

ಪ್ರಚೋದನೆ ಉಂಟಾದಾಗಿನಿಂದ ಪ್ರತಿಕ್ರಿಯೆ ಏರ್ಪಡುವವರೆಗೂ ನರ ಸಂದೇಶವು ಹಾದು ಹೋಗುವ ಮಾರ್ಗವನ್ನು ಹೀಗೆಂದು ಕರೆಯುತ್ತಾರೆ.

a)

ಪರಾವರ್ತಿತ ಪ್ರತಿಕ್ರಿಯೆ

b)

ಪ್ರಚೋದನೆ

c)

ಪರಾವರ್ತಿತ ಚಾಪ

d)

ಪ್ರತಿಕ್ರಿಯೆ