Worksheetsಮಾದರಿ ಪ್ರಶ್ನೆಪತ್ರಿಕೆ -1 (ವಿಜ್ಞಾನ) ಭಾಗ-2
Total questions: 20
Worksheet time: 10mins
ಒಬ್ಬ ವೈದ್ಯರು -0.5D ಸಾಮರ್ಥ್ಯವನ್ನು ಹೊಂದಿರುವ ಸರಿಪಡಿಸುವ ಮಸೂರವನ್ನು ಒಬ್ಬ ವ್ಯಕ್ತಿಗೆ ಸೂಚಿಸಿದ್ದಾರೆ ಮಸೂರದ ಸಂಗಮ ದೂರ ಮತ್ತು ವಿಧ
+2m ಮತ್ತು ನಿಮ್ನಮಸೂರ
-2m ಮತ್ತು ಪೀನಮಸೂರ
-2m ಮತ್ತು ನಿಮ್ನಮಸೂರ
+2m ಮತ್ತು ಪೀನಮಸೂರ
ವಸ್ತುವನ್ನು ಪೀನಮಸೂರದ ಪ್ರಧಾನ ಸಂಗಮ 'F1' ಮತ್ತು ದೃಕ್ ಕೇಂದ್ರ 'O' ಗಳ ಮಧ್ಯೆ ಇರಿಸಿದಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರ
ಸತ್ಯ, ತಲೆಕೆಳಗಾದ ಮತ್ತು ಚಿಕ್ಕದು
ಸತ್ಯ, ತಲೆಕೆಳಗಾದ ಮತ್ತು ದೊಡ್ಡದು
ಮಿಥ್ಯ, ನೇರ ಮತ್ತು ದೊಡ್ಡದು
ಮಿಥ್ಯ, ತಲೆಕೆಳಗಾದ ಮತ್ತು ಚಿಕ್ಕದು
ಗೋಳೀಯ ಮಸೂರದ ವೃತ್ತಾಕಾರದ ಸೀಮಾರೇಖೆಯ ವ್ಯಾಸ
ದೃಕ್ ಕೇಂದ್ರ
ವಕ್ರತಾ ಕೇಂದ್ರ
ಪ್ರಧಾನಾಕ್ಷ
ಅಪರ್ಚರ್
ಸೌರಕುಕ್ಕರ್ ನ ಒಳ ಮೇಲ್ಮೈಗೆ ಕಪ್ಪು ಬಣ್ಣವನ್ನು ಬಳಿದಿರುತ್ತಾರೆ. ಏಕೆಂದರೆ, ಅದು
ಹೆಚ್ಚು ಉಷ್ಣವನ್ನು ಹೀರಿಕೊಳ್ಳಲು
ತುಕ್ಕು ಹಿಡಿಯುವುದನ್ನು ತಡೆಗಟ್ಟಲು
ಬೆಳಕನ್ನು ಪ್ರತಿಫಲಿಸಲು
ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸಲು
ಜೈವಿಕ ಅನಿಲದ ಒಂದು ಗುಣ
ಇದು ಹೊಗೆ ಸಹಿತ ಉರಿಯುತ್ತದೆ
ಉರಿಸಿದಾಗ ಬೂದಿಯನ್ನು ಉಳಿಸುತ್ತದೆ
ಇದರ ಶಾಖ ದಕ್ಷತೆ ಹೆಚ್ಚು
ಇದರ ಶಾಖ ದಕ್ಷತೆ ಕಡಿಮೆ
ಒಂದು ಮಸೂರದ ವಸ್ತು ದೂರ ಮತ್ತು ಪ್ರತಿಬಿಂಬದ ದೂರಗಳು ಕ್ರಮವಾಗಿ -60cm ಮತ್ತು -20cm ಆದರೆ, ಮಸೂರದ ವರ್ಧನೆ
+ 0.33
- 0.33
+ 3.0
+ 4.0
ಪರ್ಯಾಪ್ತ ಹೈಡ್ರೋಕಾರ್ಬನ್ ಗಳ ಸರಿಯಾದ ಗುಂಪು
C3H6, C4H10, C2H6
CH4, C2H4, C3H4
C3H8, C4H10, C5H12
C2H2, C3H6, C4H10
ಈ ಕಾರ್ಬನ್ ಸಂಯುಕ್ತದಲ್ಲಿರುವ ಕ್ರಿಯಾಗುಂಪು
ಕಾರ್ಬಾಕ್ಸಿಲಿಕ್ ಆಮ್ಲ
ಕೀಟೋನ್
ಆಲ್ಡಿಹೈಡ್
ಆಲ್ಕೋಹಾಲ್
ಒಂದು ಧಾತುವಿನ ಪರಮಾಣು ಸಂಖ್ಯೆ 20 ಆದರೆ, ಆಧುನಿಕ ಆವರ್ತಕ ಕೋಷ್ಟಕದಲ್ಲಿ ಈ ಧಾತುವಿನ ಆವರ್ತ ಸಂಖ್ಯೆ
3
2
4
5
ಸೈಕ್ಲೋಹೆಕ್ಸೇನ್ ಅಣು ರಚನೆಯಲ್ಲಿರುವ ಏಕ ಬಂಧಗಳ ಸಂಖ್ಯೆ
6
18
12
24
ಆಧುನಿಕ ಆವರ್ತಕ ಕೋಷ್ಟಕದಲ್ಲಿ ನಾವು ಒಂದು ವರ್ಗದ ಕೆಳಗೆ ಸಾಗಿದಂತೆ ಧಾತುಗಳ ಪರಮಾಣು ಗಾತ್ರವು
ಬದಲಾಗುವುದಿಲ್ಲ
ಕಡಿಮೆಯಾಗುತ್ತದೆ
ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
ಹೆಚ್ಚಾಗುತ್ತದೆ
ಬೆಂಜೀನ್ ನ ಅಣುಸೂತ್ರ
C6H12
C6H6
C6H10
C6H14
ಲೈಂಗಿಕ ಸಂಪರ್ಕದ ಮೂಲಕ ಹರಡುವ ಗೊನೋರಿಯಾ ಮತ್ತು ಸಿಫಿಲಿಸ್ ಗಳಿಗೆ ಕಾರಣವಾದ ರೋಗಕಾರಕ
ಬ್ಯಾಕ್ಟೀರಿಯಾ
ವೈರಸ್
ಪ್ರೋಟೋಜೋವ
ಶಿಲೀಂದ್ರ
ಹೂವಿನಲ್ಲಿ ಲೈಂಗಿಕ ಸಂತಾನೋತ್ಪತ್ತಿ ಪ್ರಕ್ರಿಯೆ ಜರುಗುವಾಗ ಕಂಡುಬರುವ ಸರಿಯಾದ ಹಂತಗಳು
ಪರಾಗಸ್ಪರ್ಶ, ನಿಶೇಚನ, ಬೀಜ, ಭ್ರೂಣ
ನಿಶೇಚನ, ಪರಾಗಸ್ಪರ್ಶ, ಭ್ರೂಣ, ಬೀಜ
ನಿಶೇಚನ, ಪರಾಗಸ್ಪರ್ಶ, ಬೀಜ, ಭ್ರೂಣ
ಪರಾಗಸ್ಪರ್ಶ, ನಿಶೇಚನ, ಭ್ರೂಣ, ಬೀಜ
ಬೀಜವು ಮೊಳಕೆಯೊಡೆಯುವಾಗ ಬೇರಾಗಿ ಬೆಳೆದು ಅಭಿವೃದ್ಧಿಯಾಗುವ ಸಸ್ಯಬೀಜದ ಭಾಗ
ಎಂಡೋಸ್ಪರ್ಮ್
ಪ್ರಥಮ ಮೂಲ
ಬೀಜದಳ
ಬೀಜದ ಪೊರೆ
ದುಂಡಾದ ಹಸಿರು ಬೀಜವನ್ನು ಹೊಂದಿರುವ ಬಟಾಣಿ ಸಸ್ಯವನ್ನು (RRyy) ಸುಕ್ಕಾದ ಹಳದಿ ಬೀಜವನ್ನು ಹೊಂದಿರುವ ಬಟಾಣಿ ಸಸ್ಯದ ಜೊತೆ (rrYY) ಸಂಕರಣಗೊಳಿಸಿದಾಗ F1 ಪೀಳಿಗೆಯಲ್ಲಿ ಉಂಟಾಗುವ ಬೀಜಗಳು
ದುಂಡನೆಯ ಹಳದಿ
ಸುಕ್ಕಾದ ಹಳದಿ
ಸುಕ್ಕಾದ ಹಸಿರು
ದುಂಡನೆಯ ಹಸಿರು
ಕಾರ್ಯಾನುರೂಪಿ ಅಂಗಗಳು
ವಿಭಿನ್ನ ರೀತಿಯ ರಚನೆಗಳು ಮತ್ತು ವಿಭಿನ್ನ ರೀತಿಯ ಕಾರ್ಯಗಳನ್ನು ಹೊಂದಿವೆ
ಒಂದೇ ರೀತಿಯ ಕಾರ್ಯಗಳು ಮತ್ತು ಒಂದೇ ರೀತಿಯ ರಚನೆಗಳನ್ನು ಹೊಂದಿವೆ
ಒಂದೇ ರೀತಿಯ ಕಾರ್ಯಗಳು ಮತ್ತು ವಿಭಿನ್ನ ರೀತಿಯ ರಚನೆಗಳನ್ನು ಹೊಂದಿವೆ
ಒಂದೇ ರೀತಿಯ ರಚನೆಗಳು ಮತ್ತು ವಿಭಿನ್ನ ರೀತಿಯ ಕಾರ್ಯಗಳನ್ನು ಹೊಂದಿವೆ
ಜೀವಿಯು ತನ್ನ ಜೀವಿತಾವಧಿಯಲ್ಲಿ ಪಡೆದ ಅನುಭವಗಳನ್ನು ಅದರ ಸಂತತಿಗೆ ವರ್ಗಾಯಿಸುವುದಿಲ್ಲ. ಏಕೆಂದರೆ ಅವುಗಳು
ಗಳಿಸಿದ ಗುಣಗಳು
ದುರ್ಬಲ ಗುಣಗಳು
ಅನುವಂಶೀಯ ಗುಣಗಳು
ಪ್ರಬಲ ಗುಣಗಳು
ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಇದ್ದರೆ ಅದನ್ನು ಬೇರೆ ಯಾವುದೇ ಉಪಯುಕ್ತ ಉದ್ದೇಶಕ್ಕೆ ಬಳಸುವುದು
ಮರುಬಳಕೆ
ಮರುಚಕ್ರೀಕರಣ
ಮಿತಬಳಕೆ
ಮರುಉದ್ದೇಶ
ಜಲಾನಯನ ಪ್ರದೇಶದ ನಿರ್ವಹಣೆಯು
ಜಲಾಶಯದ ಕೆಳ ಪ್ರದೇಶದ ಜೀವವೈವಿಧ್ಯವನ್ನು ಕಡಿಮೆಮಾಡುತ್ತದೆ
ಬರಗಾಲ ಮತ್ತು ಪ್ರವಾಹ ಗಳನ್ನು ಹೆಚ್ಚಿಸುತ್ತದೆ
ಅರಣ್ಯನಾಶವನ್ನು ಹೆಚ್ಚಿಸುತ್ತದೆ
ಆ ಪ್ರದೇಶದ ಜನರ ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ
