wayground logo

Free Printable Worksheets

NEW

Font size

S
M
L
XL
Worksheets

ಲೋಹಗಳು ಮತ್ತು ಅಲೋಹಗಳು

Total questions: 25

Worksheet time: 10mins

Name
Class
Date
1.

ಲೋಹಗಳು ಹೊಳಪಾದ ಮೇಲ್ಮೈಯನ್ನು ಹೊಂದಿರುವ ಗುಣಕ್ಕೆ ಹೀಗೆಂದು ಕರೆಯುತ್ತಾರೆ

a)

ಲೋಹಿಯ ಹೊಳಪು

b)

ಬಿಧುರತೆ

c)

ಶಬ್ದ ನ

d)

ಯಾವುದು ಅಲ್ಲ

2.

ಕೆಲವು ಲೋಹಗಳನ್ನು ಕುಟ್ಟಿ ತೆಳುವಾದ ಹಾಳೆ ಗಳನ್ನಾಗಿ ಮಾಡಬಹುದಾದ ಗುಣಕ್ಕೆ ಹೀಗೆಂದು ಕರೆಯುತ್ತಾರೆ

a)

ಲೋಹಿಯ ಹೊಳಪು

b)

ಬಿಧುರತೆ

c)

ಶಬ್ದ ನ

d)

ಕುಟ್ಯತೆ

3.

ಅತಿ ಹೆಚ್ಚು ತನ್ಯ ಗುಣವನ್ನು ಹೊಂದಿರುವ ಲೋಹಗಳು

a)

ಕಬ್ಬಿಣ ಮತ್ತು ತಾಮ್ರ

b)

ಅಲುಮಿನಿಯಂ ಮತ್ತು ಬೆಳ್ಳಿ

c)

ಚಿನ್ನ ಮತ್ತು ಬೆಳ್ಳಿ

d)

ಮೇಲಿನ ಯಾವುದೂ ಅಲ್ಲ

4.

ಶಾಲೆಗಳಲ್ಲಿ ಲೋಹಗಳಿಂದ ಮಾಡಲ್ಪಟ್ಟಿರುವ ಗಂಟೆಗಳನ್ನು ಬಳಸುತ್ತಾರೆ. ಇಲ್ಲಿ ಲೋಹದ ಯಾವ ಗಣವನ್ನು ಬಳಸಲಾಗುತ್ತದೆ.

a)

ತನ್ಯತೆ

b)

ಶಬ್ದನ

c)

ಕುಟ್ಯತೆ

d)

ಹೊಳಪು

5.

ಕೊಠಡಿಯ ತಾಪಮಾನದಲ್ಲಿ ದ್ರವರೂಪದಲ್ಲಿರುವ ಲೋಹ

a)

ಕಬ್ಬಿಣ

b)

ಅಲ್ಯುಮಿನಿಯಂ

c)

ಪಾದರಸ

d)

ತಾಮ್ರ

6.

ಇವುಗಳಲ್ಲಿ ತುಂಬಾ ಮೃದುವಾಗಿರುವ (ಚಾಕುವಿನಿಂದ ಸುಲಭವಾಗಿ ಕತ್ತರಿಸಬಹುದು) ಲೋಹಗಳು ಎಂದರೆ

a)

ಕಬ್ಬಿಣ

b)

ಅಲ್ಯುಮಿನಿಯಂ

c)

ಸೋಡಿಯಂ

d)

ತಾಮ್ರ

7.

ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತು ಎಂದರೆ

a)

ಗ್ರಾಫೈಟ್

b)

ಗಂಧಕ

c)

ಕಾಡಿಗೆ

d)

ವಜ್ರ

8.

ಹೆಚ್ಚಿನ ಅಲೋಹಗಳು ನೀರಿನಲ್ಲಿ ಕರಗಿದಾಗ ಯಾವ ರೀತಿಯ ಆಕ್ಸೈಡ್ ಗಳನ್ನು ಉಂಟುಮಾಡುತ್ತದೆ

a)

ಪ್ರತ್ಯಾಮ್ಲೀಯ ಆಕ್ಸೈಡ್ ಗಳು

b)

ಆಮ್ಲೀಯ ಆಕ್ಸೈಡ್ಗಳು

c)

ಮೇಲಿನ ಎರಡೂ ಸರಿ

d)

ಯಾವುದು ಅಲ್ಲ

9.

ಉಭಯವರ್ತಿ ಆಕ್ಸೈಡ್ ಗಳಿಗೆ ಉದಾಹರಣೆ ಎಂದರೆ

a)

ಅಲುಮಿನಿಯಂ ಆಕ್ಸೈಡ್ ಮತ್ತು ಸತುವಿನ ಆಕ್ಸೈಡ್

b)

ಸೋಡಿಯಂ ಆಕ್ಸೈಡ್ ಮತ್ತು ಮೆಗ್ನಿಸಿಯಮ್ ಆಕ್ಸೈಡ್

c)

ತಾಮ್ರದ ಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್

d)

ಇಂಗಾಲದ ಡೈಆಕ್ಸೈಡ್

10.

ಸೋಡಿಯಂ ಮತ್ತು ಪೊಟ್ಯಾಷಿಯಂ ನಂತಹ ಲೋಹಗಳನ್ನು ಸೀಮೆ ಎಣ್ಣೆಯಲ್ಲಿ ಸಂಗ್ರಹಿಸಿಡುತ್ತಾರೆ. ಏಕೆಂದರೆ ಈ ಲೋಹಗಳನ್ನು ಗಾಳಿಗೆ ತೆರೆದಿಟ್ಟಾಗ

a)

ಸೀಮೆಎಣ್ಣೆ ತುಂಬಾ ಅಗ್ಗವಾಗಿರುವುದು

b)

ಕ್ಷಿಪ್ರವಾಗಿ ವರ್ತಿಸಿ ಬೆಂಕಿ ಹೊತ್ತಿಕೊಳ್ಳುತ್ತವೆ.

c)

ಸೀಮೆಎಣ್ಣೆ ಎಲ್ಲಾಕಡೆ ಸುಲಭವಾಗಿ ದೊರೆಯುವುದು

d)

ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುತ್ತವೆ

11.

ಇವುಗಳಲ್ಲಿ ಯಾವ ಲೋಹ ನೀರಿನ ಜೊತೆ ಪ್ರತಿ ವರ್ತಿಸುವುದಿಲ್ಲ

a)

ಕಬ್ಬಿಣ

b)

ಅಲ್ಯುಮಿನಿಯಂ

c)

ಸೋಡಿಯಂ

d)

ಚಿನ್ನ

12.

ತಾಮ್ರದ ಸಲ್ಫೇಟ್ ದ್ರಾವಣದಿಂದ ತಾಮ್ರವನ್ನು ಸ್ಥಾನಪಲ್ಲಟಗೊಳಿಸಿ ತಾಮ್ರವನ್ನು ಪಡೆಯಲು ಬಳಸುವ ಲೋಹ

a)

ಕಬ್ಬಿಣ

b)

ಅಲ್ಯುಮಿನಿಯಂ

c)

ಸೋಡಿಯಂ

d)

ಚಿನ್ನ

13.

ಇಲೆಕ್ಟ್ರಾನುಗಳ ವರ್ಗಾವಣೆಯಿಂದ ಉಂಟಾಗುವ ಬಂಧಕ್ಕೆ ಹೀಗೆಂದು ಕರೆಯುತ್ತಾರೆ

a)

ಹೈಡ್ರೋಜನ್ ಬಂಧ

b)

ಲೌಹಿಕ ಬಂಧ

c)

ಸಹವೇಲೇನ್ಸೀಯ ಬಂಧ

d)

ಅಯಾನಿಕ ಬಂಧ

14.

ಅಯಾನಿಕ ಸಂಯುಕ್ತಗಳು ಕಠಿಣವಾಗಿದ್ದು ಹೆಚ್ಚಿನ ಕರಗುವ ಬಿಂದು ಮತ್ತು ಹೆಚ್ಚಿನ ಕುದಿಬಿಂದುವನ್ನು ಹೊಂದಿರುತ್ತವೆ ಏಕೆಂದರೆ

a)

ಅವು ತುಂಬ ಅಶುದ್ಧತೆಯನ್ನು ಹೊಂದಿರುತ್ತವೆ

b)

ಅವುಗಳು ಶಿಲೆಗಳ ರೂಪದಲ್ಲಿ ದೊರೆಯುವುದರಿಂದ

c)

ಅವುಗಳಲ್ಲಿನ ಬಂಧವನ್ನು ಹೊಡೆಯಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ

d)

ಮೇಲಿನ ಯಾವುದೂ ಅಲ್ಲ

15.

ಅಯಾನಿಕ ಸಂಯುಕ್ತಗಳು ಯಾವಾಗ ತಮ್ಮ ಮೂಲಕ ವಿದ್ಯುತ್ ಹರಿಯಲು ಬಿಡುತ್ತವೆ

a)

ಸೂರ್ಯನ ಬಿಸಿಲಿನಲ್ಲಿ ಇಟ್ಟಾಗ

b)

ದ್ರವಿಸಿದ ಅಥವಾ ದ್ರಾವಣ ಸ್ಥಿತಿಯಲ್ಲಿದ್ದಾಗ

c)

ಅವುಗಳನ್ನು ಸೀಮೆಎಣ್ಣೆ ಒಳಗೆ ಇರಿಸಿದಾಗ

d)

ಮೇಲಿನ ಎಲ್ಲವೂ ಸರಿ

16.

ಇವುಗಳಲ್ಲಿ ಮುಕ್ತ ರೂಪದಲ್ಲಿ ದೊರೆಯುವ ಲೋಹಗಳ ಎಂದರೆ

a)

ಚಿನ್ನ, ಬೆಳ್ಳಿ, ತಾಮ್ರ ಮತ್ತು ಬಂಗಾರ

b)

ಅಲ್ಯುಮಿನಿಯಂ, ಗ್ರಾಫೈಟ್, ಗಂಧಕ

c)

ಸೋಡಿಯಂ, ಮೆಗ್ನೇಷಿಯಂ

d)

ತಾಮ್ರ, ನಿಕ್ಕೆಲ್, ಲೀಥಿಯಂ

17.

ಸಾಮಾನ್ಯವಾಗಿ ಭೂಮಿಯಿಂದ ಗಣಿಗಾರಿಕೆ ಮಾಡಿದ ಅದಿರುಗಳು ಮಣ್ಣು ಮರಳು ಇತ್ಯಾದಿ ಕಶ್ಮಲಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಲುಷಿತಗೊಂಡಿರುತ್ತವೆ. ಇದಕ್ಕೆ ಏನೆಂದು ಕರೆಯುತ್ತಾರೆ.

a)

ಅನುಪಯುಕ್ತ ಕಾರ್ಬನೇಟ್

b)

ಮಡ್ಡಿ

c)

ತ್ಯಾಜ್ಯ

d)

ಅನುಪಯುಕ್ತ ಕಶ್ಮಲ

18.

ಇವುಗಳಲ್ಲಿ ಯಾವುದು ಪಾದರಸದ ಒಂದು ಅದುರು ಆಗಿದೆ

a)

ಹೆಮಟೈಟ್

b)

ಸಿನ್ನಬಾರ್

c)

ಚಾಲ್ಕೋಪರೈಟ್

d)

ಲಿಮೋನೈಟ್

19.

ಸಲ್ಫೈಡ್ ಅದುರನ್ನು ಆಕ್ಸೈಡನ್ನಾಗಿ ಪರಿವರ್ತಿಸಲು ಅಧಿಕ ಪ್ರಮಾಣದ ಗಾಳಿಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಸುವ ವಿಧಾನಕ್ಕೆ ಹೀಗೆಂದು ಕರೆಯುತ್ತಾರೆ.

a)

ಕಾಸು ವಿಕೆ

b)

ಉರಿಯುವಿಕೆ

c)

ವಿದ್ಯುತ್ ವಿಭಜನೆ

d)

ಮೇಲಿನ ಯಾವುದೂ ಅಲ್ಲ

20.

ಕಾರ್ಬೋನೇಟ್ ಅದುರನ್ನು ಆಕ್ಸೈಡನ್ನಾಗಿ ಪರಿವರ್ತಿಸಲು ಕಡಿಮೆ ಪ್ರಮಾಣದ ಗಾಳಿಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಸುವ ವಿಧಾನಕ್ಕೆ ಹೀಗೆಂದು ಕರೆಯುತ್ತಾರೆ.

a)

ಕಾಸು ವಿಕೆ

b)

ಉರಿಯುವಿಕೆ

c)

ವಿದ್ಯುತ್ ವಿಭಜನೆ

d)

ಮೇಲಿನ ಯಾವುದೂ ಅಲ್ಲ

21.

ಅಲುಮಿನಿಯಂನೊಂದಿಗೆ ಕಬ್ಬಿಣದ ಆಕ್ಸೈಡ್ ನ ಪ್ರತಿ ವರ್ತನೆಯನ್ನು ರೈಲ್ವೆ ಹಳಿಗಳು ಅಥವಾ ಮುರಿದ ಯಂತ್ರ ಭಾಗಗಳ ಜೋಡಣೆಯಲ್ಲಿ ಬಳಸುವ ಪ್ರಕ್ರಿಯೆಯನ್ನು ಎಂದು ಕರೆಯುತ್ತಾರೆ

a)

ಥರ್ಮೈಟ್ ಕ್ರಿಯೆ

b)

ಲೋಹೋದ್ಧರಣ ಕ್ರಿಯೆ

c)

ವಿದ್ಯುಲ್ಲೇಪನ ಕ್ರಿಯೆ

d)

ವಿದ್ಯುತ್ ವಿಶ್ಲೇಷಣೆ ಕ್ರಿಯೆ

22.

ವಿದ್ಯುದ್ವಿಭಜನೀಯ ಶುದ್ಧೀಕರಣದಲ್ಲಿ ಶುದ್ಧ ಲೋಹವು ಎಲ್ಲಿ ಸಂಗ್ರಹವಾಗುತ್ತದೆ

a)

ಧನಾಗ್ರ

b)

‍ಋಣಾಗ್ರ

c)

ತಳಭಾಗದಲ್ಲಿ

d)

ಮೇಲಿನ ಯಾವುದೂ ಅಲ್ಲ

23.

ಉಕ್ಕು ಮತ್ತು ಕಬ್ಬಿಣ ವನ್ನು ತುಕ್ಕಿನಿಂದ ಸಂರಕ್ಷಿಸಲು ಗ್ಯಾಲ್ವನೀಕರಣ ವಿಧಾನದಲ್ಲಿ ಈ ಲೋಹದ ಲೇಪನವನ್ನು ಮಾಡಲಾಗುತ್ತದೆ

a)

ಸತು

b)

ತಾಮ್ರ

c)

ಅಯೋಡಿನ್

d)

ನಿಕ್ಕೆಲ್

24.

ಕಬ್ಬಿಣವನ್ನು ಶುದ್ಧರೂಪದಲ್ಲಿ ಎಂದಿಗೂ ಉಪಯೋಗಿಸಲು ಸಾಧ್ಯವಿಲ್ಲ. ಏಕೆಂದರೆ

a)

ಶುದ್ಧ ಕಬ್ಬಿಣವು ಬೇಗನೆ ಇತರೆ ಧಾತು ವಾಗಿ ಪರಿವರ್ತನೆಯಾಗುತ್ತದೆ

b)

ಶುದ್ಧ ಕಬ್ಬಿಣವು ತುಂಬಾ ಮೃದುವಾಗಿದ್ದು ಉಷ್ಣತೆ ನೀಡಿದಾಗ ಸುಲಭವಾಗಿ ಹಿಗ್ಗುತ್ತದೆ

c)

ಶುದ್ಧ ಕಬ್ಬಿಣವನ್ನು ಸಂಗ್ರಹಿಸುವುದು ಸುಲಭವಲ್ಲ

d)

ಮೇಲಿನ ಎಲ್ಲವೂ ಸರಿ

25.

ಮಿಶ್ರಲೋಹಗಳ ಒಂದು ಘಟಕ ಪಾದರಸ ವಾಗಿದ್ದರೆ ಅದನ್ನು ಹೀಗೆನ್ನುವರು

a)

ಸಿನ್ನಬಾರ್

b)

ಧನಾಗ್ರ ಮಡ್ಡಿ

c)

ಅಮಾಲ್ಗಂ

d)

ಥರ್ಮೈಟ್