NEW
Font size
Worksheets10th ನಮ್ಮ ಪರಿಸರ Prashantha.SB
Total questions: 20
Worksheet time: 10mins
ಕೆಳಗಿನವುಗಳಲ್ಲಿ ಯಾವುದು ನೈಸರ್ಗಿಕ ಪರಿಸರ ವ್ಯವಸ್ಥೆಗೆ ಉದಾಹರಣೆಯಾಗಿದೆ?
ಉದ್ಯಾನವನ
ಪೈರುಗದ್ದೆ
ಮತ್ಸ್ಯಾಗಾರ
ಅರಣ್ಯಗಳು
ಕೆಳಗಿನವುಗಳಲ್ಲಿ ವಿಘಟಕರುಗಳ ಗುಂಪು_
ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು
ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು
ಬ್ಯಾಕ್ಟೀರಿಯಾ ಮತ್ತು ಪ್ರೋಟೋಜೋವಾಗಳು
ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಹಾವು
ಭೂ ಪರಿಸರವ್ಯವಸ್ಥೆಯಲ್ಲಿ ಎಲ್ಲಾ ಹಸಿರು ಸಸ್ಯಗಳು ತಮ್ಮ ಎಲೆಗಳ ಮೇಲೆ ಬೀಳುವ ಸೌರ ಬೆಳಕಿನಲ್ಲಿ ಸೆರೆಹಿಡಿಯುವ ಪ್ರಮಾಣ.
ಶೇ. 0.1
ಶೇ.10
ಶೇ.90
ಶೇ.1
ಈ ಕೆಳಗಿನವುಗಳಲ್ಲಿ ಒಂದು ಜೈವಿಕ ವಿಘಟನೆಗೆ ಒಳಗಾಗುವ ಮಾಲಿನ್ಯಕಾರಕ_
ಸಗಣಿ
ಸೀಸದ ಆವಿ
ಡಿ.ಡಿ.ಟಿ
ಪ್ಲಾಸ್ಟಿಕ್
ಪರಿಸರ ವ್ಯವಸ್ಥೆಯಲ್ಲಿ ಯಾವ ಜೀವರಾಶಿ ಹೆಚ್ಚಾಗಿರುತ್ತದೆ ?
ಉತ್ಪಾದಕರು
ಭಕ್ಷಕರು
ವಿಘಟಕರು
ಪರಾವಲಂಬಿಗಳು
ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಸಂಚಾರ ಏಕಮುಖವಾಗಿರಲು ಕಾರಣ_
ಶಕ್ತಿಯು ಪುನಃ ಸೌರಶಕ್ತಿಗೆ ಹಿಂದಿರುಗುವುದಿಲ್ಲ.
ವಿವಿಧ ಪೋಷಣಾಸ್ತರಗಳ ಮೂಲಕ ಶಕ್ತಿಯು ಮಂದೆ ಸಾಗಿದಂತೆ ಹಿಂದೆ ಬರುವುದಿಲ್ಲ.
ಪ್ರತಿ ಹಂತದಲ್ಲಿ ಶಕ್ತಿಯ ನಷ್ಟದಿಂದ ಕ್ರಮೇಣ ಕಡಿಮೆಯಾಗುತ್ತದೆ.
ಎಲ್ಲಾ ಆಯ್ಕೆಗಳು ಸರಿ.
ಆಹಾರ ಸರಪಳಿಯನ್ನು ಸೇರಿದ ರಾಸಾಯನಿಕಗಳು, ಇವುಗಳ ದೇಹದಲ್ಲಿ ಗರಿಷ್ಟ ಸಾಂಧ್ರತೆಯಲ್ಲಿ ಸಂಗ್ರಹವಾಗುತ್ತವೆ.
ಸಸ್ಯಪ್ಲವಕಗಳು
ಸಣ್ಣ ಮೀನು
ದೊಡ್ಡ ಮೀನು
ಹದ್ದು
ಪ್ರತಿಹಂತದಲ್ಲಿ ಕಂಡುಬರುವ ಸಾವಯವ ಪದಾರ್ಥದ ಪ್ರಮಾಣದಲ್ಲಿ ಸರಾಸರಿ ಮುಂದಿನ ಹಂತದ ಭಕ್ಷಕರಿಗೆ ತಲುಪುವ ಪ್ರಮಾಣ_
ಶೇ.1
ಶೇ.10
ಶೇ.90
ಶೇ.100
ಜೈವಿಕ ವಿಘಟನೆಗೆ ಒಳಪಡದ ತ್ಯಾಜ್ಯಗಳ ನಿರ್ವಹಣೆಗೆ ಈ ವಿಧಾನ ಉತ್ತಮ ಪರಿಹಾರವಾಗಿದೆ.
ದಹಿಸುವುದು
ಹೂತು ಹಾಕುವುದು
ಮರುಚಕ್ರೀಕರಣಗೊಳಿಸುವುದು.
ಎಲ್ಲಾ ಆಯ್ಕೆಗಳು ಸರಿ
ಚಿತ್ರದಲ್ಲಿ ನೀಡಿರು ಆಹಾರ ಸರಪಳಿಯನ್ನು ಗಮನಿಸಿ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಯನ್ನು ಆಯ್ಕೆ ಮಾಡಿ.
ಹಾವು ತೃತೀಯಕ ಭಕ್ಷಕವಾಗಿದೆ.
ಕಪ್ಪೆಯು ಮೂರನೇ ಫೋಷಣಾ ಸ್ತರವನ್ನು ಪ್ರತಿನಿಧಿಸುತ್ತದೆ.
ಕಪ್ಪೆಯಿಂದ ಹಾವಿಗೆ ದೊರಕುವ ಸಾವಯವ ಪದಾರ್ಥದ ಪ್ರಮಾಣ ಶೇ.10 ಮಾತ್ರ.
ಹಾವಿಗಿಂತ ಕಪ್ಪೆಯು ಹೆಚ್ಚು ಜೈವಿಕ ಸಂವರ್ಧನೆಗೊಳಗಾಗುತ್ತದೆ.
ಈ ಕೆಳಗಿನವುಗಳಲ್ಲಿ ಯಾವುದರಿಂದ ಒಂದು ಆಹಾರ ಸರಪಳಿಯನ್ನು ರಚಿಸಬಹುದು?
ಹುಲ್ಲು, ಭತ್ತ, ಮಾವು
ಹುಲ್ಲು, ಜಿಂಕೆ, ಜಿರಾಫೆ
ಹುಲ್ಲು, ಮೇಕೆ, ಮಾನವ
ಹುಲ್ಲು, ಹಾವು, ಹದ್ದು
ಸ್ವಪೋಷಕ ಪೋಷಣಾ ವಿಧಾನದ ಅವಶ್ಯಕತೆಗಳೆಂದರೆ_
ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು
ಸೌರಬೆಳಕು
ಕ್ಲೋರೋಫಿಲ್
ಎಲ್ಲಾ ಆಯ್ಕೆಗಳು ಸರಿ
ಈ ಕೆಳಗಿನ ಪದಾರ್ಥಗಳ ಗುಂಪು ಮಣ್ಣಿನ ಫಲವತ್ತತೆ ಕಡಿಮೆಯಾಗಲು ಕಾರಣವಾಗಿದೆ.
ಗಾಜು, ಪ್ಲಾಸ್ಟಿಕ್, ಪ್ಲಾಸ್ಟರ್ ಆಫ್ ಪ್ಯಾರಿಸ್
ಹಣ್ಣಿನ ಸಿಪ್ಪೆ, ಕಾಗದ, ಸಗಣಿ
ಹುಲ್ಲು, ಹೂವು, ಚರ್ಮ
ಮರ, ಬ್ರೇಡ್, ಮಾಂಸದ ಚೂರು
ಕೆಳಗಿನವುಗಲ್ಲಿ ತಪ್ಪಾದ ಹೇಳಿಕೆಯನ್ನು ಆಯ್ಕೆ ಮಾಡಿ.
ಓಝೋನ್ ಅಣುವು ಮೂರು ಆಕ್ಸಿಜನ್ ಪರಮಾಣುಗಳಿಂದಾಗಿದೆ.
ಓಝೋನ್ ಸೌರ ಬೆಳಕಿನಿಂದ ಬರುವ ನೇರಳಾತೀತ ವಿಕಿರಣದಿಂದ ಭೂಮಿಯ ಮೇಲ್ಮೈಯನ್ನು ರಕ್ಷಿಸುತ್ತದೆ.
ಓಝೋನ್ ಒಂದು ಪ್ರಾಣಾಂತಿಕ ವಿಷವಾಗಿದೆ.
ನೇರಳಾತೀತ ವಿಕಿರಣಗಳಿಂದ ಓಝೋನ್ ವಿಘಟನೆಗೊಳಗಾಗುತ್ತದೆ.
ಪರಿಸರದಲ್ಲಿ ಜೈವಿಕ ಸಂವರ್ಧನೆ ಉಂಟುಮಾಡುವ ವಸ್ತುಗಳು_
ಬೇಗನೆ ಮರುಚಕ್ರೀಕರಣಗೊಳ್ಳುತ್ತದೆ.
ಮಣ್ಣಿನಲ್ಲಿ ಮಾತ್ರ ವಿಘಟನೆಗೊಳ್ಳುತ್ತದೆ.
ಪೋಷಣಾ ಸ್ತರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಾಗುತ್ತವೆ.
ಶಾಶ್ವತ ಅವಶೇಷಗಳಾಗಿ ಉಳಿಯುತ್ತವೆ.
ಓಝೋನ್ ಪದರದ ನಾಶಕ್ಕೆ ಕಾರಣವಾದ ರಾಸಾಯನಿಕ_
ಡಿ.ಡಿ.ಟಿ
ಬಿ.ಹೆಚ್.ಸಿ
ಪಿ.ವಿ.ಸಿ
ಸಿ.ಎಫ್.ಸಿ
ಕೆಳಗಿನವುಗಳಲ್ಲಿ ಯಾವುದರ ಮೂಲಕ ಶಕ್ತಿಯು ಪರಿಸರ ವ್ಯವಸ್ಥೆಯನ್ನು ಪ್ರವೇಶಿಸುತ್ತದೆ ?
ಪ್ರಾಥಮಿಕ ಭಕ್ಷಕರು
ವಿಘಟಕರು
ಉತ್ಪಾದಕರು
ದ್ವಿತೀಯಕ ಭಕ್ಷಕರು
ಕೊಟ್ಟಿರುವ ಆಹಾರ ಸರಪಳಿಯನ್ನು ಗಮನಿಸಿ. ಮೊದಲನೇ ಪೋಷಣಾಸ್ತರಕ್ಕೆ ಲಭ್ಯವಿರುವ ಶಕ್ತಿ 5000 J ಗಳಾದರೆ, ಹಾವಿಗೆ ದೊರಕುವ ಶಕ್ತಿಯ ಪ್ರಮಾಣ_
5 J
10 J
50 J
500 J
ಕೆಳಗಿನವುಗಳಲ್ಲಿ ಯಾವುದು ಹೆಚ್ಚು ಶಕ್ತಿಯನ್ನು ಉಪಯೋಗಿಸುತ್ತದೆ?
ಪ್ರಾಥಮಿಕ ಭಕ್ಷಕರು
ವಿಘಟಕರು
ಉತ್ಪಾದಕರು
ದ್ವಿತೀಯಕ ಭಕ್ಷಕರು
ವಿವಿಧ ಪೋಷಣಾ ಸ್ತರಗಳನ್ನು ತೋರಿಸುವ ಪಿರಮಿಡ್‌ನ ಚಿತ್ರ ನೀಡಿದೆ. T4 ಪೋಷಣಾ ಸ್ತರವು ಕೆಳಗಿನ ಸ್ತರಕ್ಕೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಜೀವಿಗಳನ್ನು ಹೊಂದಿದೆ. ಇದಕ್ಕೆ ಕಾರಣ
ತೃತೀಯಕ ಭಕ್ಷಕರಿಗೆ ಆಹಾರದ ಕೊರತೆಯಾಗುವುದು.
ಶಕ್ತಿಯ ಪ್ರಮಾಣ ಕಡಿಮೆಯಾಗುವುದು.
ಜೈವಿಕ ಸಂವರ್ಧನೆ
ಪರಿಸರದ ನಾಶದ ಪರಿಣಾಮ
