wayground logo

Free Printable Worksheets

Font size

S
M
L
XL
Worksheets

ಅಧ್ಯಾಯ:9 ಆನುವಂಶೀಯತೆ ಮತ್ತು ಜೀವವಿಕಾಸ

Total questions: 20

Worksheet time: 10mins

Name
Class
Date
1.

ಆನುವಂಶೀಯತೆ (Heredity), ಭಿನ್ನತೆ (Variations) ಮತ್ತು ಅವುಗಳಿಗೆ ಕಾರಣವಾದ ಅಂಶಗಳ ಬಗ್ಗೆ ಕ್ರಮಬದ್ಧವಾಗಿ ಅಧ್ಯಯನ ಮಾಡುವ ಜೀವಶಾಸ್ತ್ರದ ಶಾಖೆ…

a)

ಕೋಶಿಕಾ ಶಾಸ್ತ್ರ (Cytology)

b)

ಅಂಗಾಂಶ ಶಾಸ್ತ್ರ (Histology)

c)

ತಳಿಶಾಸ್ತ್ರ (ತಳಿವಿಜ್ಞಾನ) (Genetics)

d)

ಅಂಗಾಂಶ ಕೃಷಿ (Tissue culture)

2.

ಆಧುನಿಕ ತಳಿ ವಿಜ್ಞಾನದ ಪಿತಾಮಹ

a)

ಕರೋಲಸ್ ಲಿನೇಯಸ್

b)

ಗ್ರೆಗೋರ್ ಜೋಹಾನ್ ಮೆಂಡಲ್

c)

ಅರಿಸ್ಟಾಟಲ್

d)

ಚರಕ ಮಹರ್ಷಿ

3.

ಮೆಂಡಲರು ತಳೀಕರಣದ ಪ್ರಯೋಗಕ್ಕೆ ಬಳಸಿಕೊಂಡ ಸಸ್ಯ

a)

ಆಲದ ಮರ

b)

ಬದನೆಕಾಯಿ ಗಿಡ

c)

ಬಟಾಣಿ ಸಸ್ಯ

d)

ಶೇಂಗಾ ಗಿಡ

4.

ಮೆಂಡಲರು ಬಟಾಣಿ ಸಸ್ಯವನ್ನು ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳಲು ಕಾರಣ

a)

ಸುಲಭವಾಗಿ ಕುಂಡಗಳಲ್ಲಿ ಬೆಳೆಸಬಹುದು.

b)

ಸಂಕ್ಷಿಪ್ತ ಜೀವನ ಚಕ್ರವನ್ನು ಹೊಂದಿವೆ.

c)

ಇವುಗಳಲ್ಲಿ ಸ್ವಕೀಯ ಪರಾಗಸ್ಪರ್ಶ ಮತ್ತು ಪರಕೀಯ ಪರಾಗಸ್ಪರ್ಶ ನಡೆಸಬಹುದು.

d)

ಮೇಲಿನ ಎಲ್ಲವೂ ಸರಿ.

5.

ಏಕತಳೀಕರಣ ದಲ್ಲಿ ಎತ್ತರ ಮತ್ತು ಗಿಡ್ಡ ಸಸ್ಯಗಳ ವ್ಯಕ್ತರೂಪ ಅನುಪಾತ

a)

1:2:1

b)

2:3

c)

3:1

d)

2:2

6.

ದ್ವಿತಳೀಕರಣದ ಅನುಪಾತ

a)

9:8:7:6

b)

9:3:3:1

c)

1:2:1

d)

3:1

7.

ತಳಿಕರಣದಲ್ಲಿ F2 ಪೀಳಿಗೆಯ ಫಲಿತಾಂಶವನ್ನುಸುಲಭವಾಗಿ ತಿಳಿಯಲು ಬಳಸುವ ಚೆಕ್ಕರ್ ಬೋರ್ಡ್ __________

a)

ಪುನೇಟ್ ಚೌಕ

b)

ಮೆಂಡಲ್‌ ಚೌಕ

c)

ಡಾರ್ವಿನ್‌ ಚೌಕ

d)

ಲೆಮಾರ್ಕ ಚೌಕ

8.

ಎರಡು ನಿರ್ದಿಷ್ಟ ಲಕ್ಷಣಗಳಿಗೆ ಸಂಬಂಧಿಸಿದಂತೆ ವಿಭಿನ್ನವಾದ ಎರಡು ರೂಪಗಳನ್ನು ತೋರಿಸುವ ಸಸ್ಯಗಳನ್ನು ಸಂಕರಿಸುವ ಕ್ರಿಯೆಗೆ ಹೀಗೆನ್ನುತ್ತಾರೆ.

a)

ಏಕತಳೀಕರಣ

b)

ದ್ವಿತಳೀಕರಣ

c)

ಮಿಶ್ರತಳೀಕರಣ

d)

ಮೇಲಿನ ಎಲ್ಲವೂ ಸರಿ.

9.

ಆದಿ ಜೀವಿಗಳ ಸಂರಕ್ಷಿಸಲ್ಪಟ್ಟ ಅವಶೇಷಗಳನ್ನು ಹೀಗೆಂದು ಕರೆಯುತ್ತಾರೆ.

a)

ಮಾರ್ಜಕಗಳು

b)

ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳು

c)

ತ್ಯಾಜ್ಯಗಳು

d)

ಪಳೆಯುಳಿಕೆಗಳು

10.

ಪುರುಷರಲ್ಲಿರುವ ಲಿಂಗ ನಿರ್ಧಾರಕ ವರ್ಣತಂತುಗಳು

a)

XX

b)

XY

c)

YY

d)

ಮೇಲಿನ ಮೂರು ಸರಿ

11.

ಸಣ್ಣ ಜೀವ ಸಮೂಹವೊಂದರಲ್ಲಿ ವಂಶವಾಹಿ ಹರಿವು ಮತ್ತು ನಿಸರ್ಗದ ಆಯ್ಕೆ ಒಟ್ಟಾಗಿ ಮೂಲ ಪ್ರಭೇದದೊಂದಿಗೆ ಸಂತಾನೋತ್ಪತ್ತಿ ಮಾಡಲಾಗದ ಜೀವ ಸಮೂಹವನ್ನು ಸೃಷ್ಟಿಸಿ, ಜೀವವಿಕಾಸದ ದಿಕ್ಕನ್ನು ಬದಲಿಸುವ ಪ್ರಕ್ರಿಯೆಗೆ ಹೀಗೆನ್ನುವರು.

a)

ಅನುವಂಶೀಯ ದಿಕ್ಚ್ಯುತಿ (Genetic drift)

b)

ವಂಶವಾಹಿಗಳ ಹರಿವು (Gene flow)

c)

ತಳೀಕರಣ (Hybridization)

d)

ಮೇಲಿನ ಯಾವುದೂ ಅಲ್ಲ.

12.

ಪ್ರಭೇದಿಕರಣಕ್ಕೆ ಕಾರಣಗಳು

a)

ನಿಸರ್ಗದ ಆಯ್ಕೆ (Natural selection)

b)

ಅನುವಂಶೀಯ ದಿಕ್ಚ್ಯುತಿ (Genetic drift)

c)

ಉತ್ಪರಿವರ್ತನೆ (Mutation)

d)

ಮೇಲಿನ ಎಲ್ಲವೂ ಸರಿ.

13.

ಜೀವವಿಕಾಸ ಅಧ್ಯಯನಮಾಡಲು ಪಳೆಯುಳಿಕೆಗಳು ಬಹುಮುಖ್ಯ ಏಕೆಂದರೆ

a)

ಅಳಿದುಹೋದ ಪ್ರಭೇದಗಳ ಅಸ್ತಿತ್ವವನ್ನು ಸೂಚಿಸುತ್ತವೆ.

b)

ಪೂರ್ವಜ ಪ್ರಾಣಿಗಳ ಬಗ್ಗೆ ವಿವರಗಳನ್ನು, ಸಂಬಂಧಗಳನ್ನು ಒದಗಿಸುತ್ತವೆ.

c)

ಜೀವಿಯು ಬದುಕಿದ್ದ ಕಾಲವನ್ನು ತಿಳಿಸುತ್ತವೆ.

d)

ಮೇಲಿನ ಮೂರು ಉತ್ತರಗಳು ಸರಿ.

14.

ರಚನೆ ಬೇರೆ ಬೇರೆಯಾಗಿದ್ದು ಕಾರ್ಯ ಮಾತ್ರ ಒಂದೇ ಆಗಿರುವ ಅಂಗಗಳ ಗುಂಪಿಗೆ ಹೀಗೆಂದು ಕರೆಯುತ್ತಾರೆ.

a)

ರಚನಾರೂಪಿ ಅಂಗಗಳು

b)

ಕಾರ್ಯಾನುರೂಪಿ ಅಂಗಗಳು

c)

ಸಮರೂಪಿ ಅಂಗಗಳು

d)

ಮೇಲಿನ ಎಲ್ಲವೂ ಸರಿ.

15.

ಪಳೆಯುಳಿಕೆಗಳ ವಯಸ್ಸನ್ನು ಅಂದಾಜಿಸಲು ಈ ಧಾತುವನ್ನು ಬಳಸುತ್ತಾರೆ.

a)

ಗಂಧಕ

b)

ಆಮ್ಲಜನಕ

c)

ಪೊಟ್ಯಾಶಿಯಂ

d)

ಕಾರ್ಬನ

16.

ತಮ್ಮ ತಮ್ಮಲ್ಲೇ ಪ್ರಜನನ ಕ್ರಿಯೆ ನಡೆಸಿ ಫಲವಂತ ಪೀಳಿಗೆಯನ್ನು ಉತ್ಪತ್ತಿ ಮಾಡಬಲ್ಲ ಜೀವಿಗಳ ಗುಂಪಿಗೆ ಹೀಗೆಂದು ಕರೆಯುತ್ತಾರೆ?

a)

ಪ್ರಭೇದ

b)

ಜಾತಿ

c)

ವಂಶ

d)

ಸಾಮ್ರಾಜ್ಯ

17.

ಒಂದು ಸಸ್ಯದಲ್ಲಿ ಒಂದು ಗುಣಕ್ಕೆ ಕಾರಣವಾದ ಎರಡು ವಿಭಿನ್ನವಾದ ಅಂಶಗಳು ಒಟ್ಟಿಗೆ ಇದ್ದಾಗ ಮುಂದಿನ ಪೀಳಿಗೆಯಲ್ಲಿ ಅವುಗಳಲ್ಲಿ ಯಾವ ಗುಣ ವ್ಯಕ್ತವಾಗುತ್ತದೆ.

a)

ಮಿಶ್ರ ಗುಣ

b)

ಪ್ರಬಲ ಗುಣ

c)

ದುರ್ಬಲ ಗುಣ

d)

ಯಾವುದೇ ಗುಣ ವ್ಯಕ್ತವಾಗುವುದಿಲ್ಲ

18.

ತಂದೆ-ತಾಯಿಯಿಂದ ಗುಣಗಳು ವಂಶಪಾರಂಪರ್ಯವಾಗಿ ಮಕ್ಕಳಿಗೆ ವರ್ಗಾವಣೆಯಾಗುವ ಪ್ರಕ್ರಿಯೆ

a)

ಉತ್ಪರಿವರ್ತನೆ

b)

ಆನುವಂಶಿಯತೆ

c)

ಪರಾಗಸ್ಪರ್ಶ ಕ್ರಿಯೆ

d)

ನಿಷೇಚನ

19.

ಜೀವವಿಕಾಸಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿವೆ?

a)

ಜೀವವಿಕಾಸ ಒಂದು ಪ್ರಭೇದ ನಾಶವಾಗಿ ಮತ್ತೊಂದು ಪ್ರಭೇದ ಹುಟ್ಟುವ ಪ್ರಕ್ರಿಯೆಯಲ್ಲ.

b)

ಹೊಸದಾಗಿ ಉಗಮವಾದ ಪ್ರಭೇದಗಳು ಯಾವುದೇ ರೀತಿಯಲ್ಲಿ ಹಳೆಯದಕ್ಕಿಂತ ಉತ್ತಮ ಎಂದಲ್ಲ.

c)

ಮಾನವರು ಮತ್ತೊಂದು ಪ್ರಭೇದ ಅಷ್ಟೇ. ಆದರೆ, ವಿಕಾಸದ ಪರಾಕಾಷ್ಠೆಯಲ್ಲ.

d)

ಮೇಲಿನ ಎಲ್ಲವೂ ಸರಿ

20.

ಇವುಗಳಲ್ಲಿ ಕಾರ್ಯಾನುರೂಪಿ ಅಂಗಗಳಿಗೆ ಉದಾಹರಣೆ ಎಂದರೆ.

a)

ಮನುಷ್ಯನ ಮುಂಗಾಲುಗಳು ಮತ್ತು ಕಪ್ಪೆಯ ಮುಂಗಾಲುಗಳು

b)

ಚಿಟ್ಟೆಯ ರೆಕ್ಕೆಗಳು ಮತ್ತು ಬಾವಲಿಯ ರೆಕ್ಕೆಗಳು

c)

ಮನುಷ್ಯನ ಮುಂಗಾಲುಗಳು ಮತ್ತು ಬಾವಲಿಯ ರೆಕ್ಕೆಗಳು

d)

ಹಲ್ಲಿಯ ಮುಂಗಾಲುಗಳು ಮತ್ತು ಬಾವಲಿಯ ಮುಂಗಾಲುಗಳು.