wayground logo

Free Printable Worksheets

Font size

S
M
L
XL
Worksheets

ಜೀವಕ್ರಿಯೆಗಳು

Total questions: 15

Worksheet time: 8mins

Name
Class
Date
1.

ಈ ಕೆಳಗಿನವುಗಳಲ್ಲಿ ಹೃದಯಕ್ಕೆ ಆಕ್ಸಿಜನ್ ಸಹಿತ ರಕ್ತವನ್ನು ಕೊಂಡೊಯ್ಯುವ ರಕ್ತನಾಳ

a)

ಪುಪ್ಪಸಕ ಅಪಧಮನಿ

b)

ಪುಪ್ಪಸಕ ಅಭಿಧಮನಿ

c)

ಮಹಾಪಧಮನಿ

d)

ಲೋಮನಾಳ

2.

ವಿಸರ್ಜನಾಂಗವ್ಯೂಹದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕಗಳು

a)

ನೆಫ್ರಾನ್ ಗಳು

b)

ನ್ಯೂರಾನ್ ಗಳು

c)

ಅಭಿಧಮನಿ

d)

ಗ್ಲಾಮರುಲಸ್

3.

ಇಮ್ಮಡಿ ಪರಿಚಲನೆ ರಕ್ತಪರಿಚಲನೆಯ ಒಂದು ವಿಧವಾಗಿದ್ದು ಈ ಕೆಳಗಿನ ಜೀವಿಗಳಲ್ಲಿ ಕಾಣಬಹುದು

a)

ಮೀನುಗಳು

b)

ಮಾನವರು

c)

ಸರೀಸೃಪಗಳು

d)

ಪಕ್ಷಿಗಳು

4.

ರಕ್ತದಲ್ಲಿ ಕಂಡುಬರುವ ದ್ರವರೂಪದ ವಸ್ತುವಿಗೆ ಹೀಗೆನ್ನುವರು

a)

ಕೆಂಪುರಕ್ತಕಣಗಳು

b)

ಬಿಳಿರಕ್ತಕಣಗಳು

c)

ಕಿರುತಟ್ಟೆಗಳು

d)

ಪ್ಲಾಸ್ಮಾ

5.

ಅಪಧಮನಿಗಳು ಅಭಿದಮನಿಗಳಿಗಿಂತ ದಪ್ಪವಾದ ಕೋಶಭಿತ್ತಿಯನ್ನು ಹೊಂದಿರಲು ಕಾರಣವೆಂದರೆ

a)

ಅಪಧಮನಿಗಳಲ್ಲಿ ರಕ್ತದ ಒತ್ತಡ ಹೆಚ್ಚು

b)

ದೇಹದ ಎಲ್ಲಾಭಾಗಗಳಿಂದ ರಕ್ತವನ್ನು ಹಿಂತರುತ್ತದೆ

c)

ಅಪಧಮನಿಗಳಲ್ಲಿ ಒತ್ತಡ ಕಡಿಮೆ

d)

ಅ ಮತ್ತು ಆ ಎರಡು ಸರಿಯಾಗಿವೆ

6.

ಮಾನವರಲ್ಲಿ ಮೂತ್ರಪಿಂಡಗಳ ಕಾರ್ಯ

a)

ಪೋಷಣೆ

b)

ಉಸಿರಾಟ

c)

ವಿಸರ್ಜನೆ

d)

ಸಾಗಾಣಿಕೆ

7.

ಸಸ್ಯಗಳಲ್ಲಿ ಕ್ಸೈಲಂನ ಹೊಣೆಗಾರಿಕೆ

a)

ನೀರಿನ ಸಾಗಾಣಿಕೆ

b)

ಆಹಾರದ ಸಾಗಾಣಿಕೆ

c)

ಅಮೈನೋಆಮ್ಲಗಳ ಸಾಗಾಣಿಕೆ

d)

ಆಕ್ಸಿಜನ್ ಸಾಗಾಣಿಕೆ

8.

ಸಸ್ಯಗಳು ತ್ಯಾಜ್ಯ ವಿಸರ್ಜನೆಗಾಗಿ ಈ ಕೆಳಗಿನ ವಿಧಾನವನ್ನು ಬಳಸುತ್ತವೆ.

a)

ಎಲೆಗಳನ್ನು ಉದುರಿಸುವಿಕೆ

b)

ಅಂಟು ಮತ್ತು ರಾಳಗಳ ಉತ್ಪಾದನೆ

c)

ಮಣ್ಣಿಗೆ ತ್ಯಾಜ್ಯ ವಿಸರ್ಜನೆ

d)

ಮೇಲಿನ ಎಲ್ಲವೂ

9.

ಮೂತ್ರಪಿಂಡಗಳಿಂದ ಹೊರಹಾಕಲ್ಪಡುವ ತ್ಯಾಜ್ಯವು ಈ ರೂಪದಲ್ಲಿರುತ್ತದೆ.

a)

ಬೆವರು

b)

ಯೂರಿಯಾ ಮತ್ತು ಯೂರಿಕ್ ಆಮ್ಲ

c)

ಕಾರ್ಬನ್ ಡೈ ಆಕ್ಸೈಡ್

d)

ಮೇಲಿನ ಎಲ್ಲವೂ

10.

ಸಸ್ಯಗಳಲ್ಲಿ ಪ್ಲೋಯಂನ ಹೊಣೆಗಾರಿಕೆ

a)

ನೀರಿನ ಸಾಗಾಣಿಕೆ

b)

ಆಹಾರದ ಸಾಗಾಣಿಕೆ

c)

ಅಮೈನೋಆಮ್ಲಗಳ ಸಾಗಾಣಿಕೆ

d)

2 ಮತ್ತು 3

11.

ಮಾನವರ ದೇಹದಲ್ಲಿ ದುಗ್ದರಸದ ಪಾತ್ರ

a)

ಆಕ್ಸಿಜನ್ ಸಾಗಾಣಿಕೆ

b)

ರಕ್ತ ಹೆಪ್ಪುಗಟ್ಟುವಿಕೆ

c)

ಕೊಬ್ಬಿನ ಸಾಗಾಣಿಕೆ

d)

ನೀರಿನ ಸಾಗಾಣಿಕೆ

12.

ಮಾನವರ ದೇಹದಲ್ಲಿ ಕಿರುತಟ್ಟೆಯ ಪಾತ್ರ

a)

ಆಕ್ಸಿಜನ್ ಸಾಗಾಣಿಕೆ

b)

ರಕ್ತ ಹೆಪ್ಪುಗಟ್ಟುವಿಕೆ

c)

ಕೊಬ್ಬಿನ ಸಾಗಾಣಿಕೆ

d)

ನೀರಿನ ಸಾಗಾಣಿಕೆ

13.

ಜೀವಕೋಶ ಮತ್ತು ರಕ್ತದ ನಡುವೆ ವಸ್ತುಗಳ ವಿನಿಮಯವು ಈ ಕೆಳಗಿನವುಗಳ ಮೂಲಕ ನಡೆಯುತ್ತದೆ.

a)

ಲೋಮನಾಳ

b)

ಅಪಧಮನಿ

c)

ಅಭಿಧಮನಿ

d)

ಮೇಲಿನ ಎಲ್ಲವೂ

14.

ಕೆಳಗಿನವುಗಳಲ್ಲಿ ರಕ್ತದ ಏಕಮುಖ ಸಂಚಾರಕ್ಕಾಗಿ ಕವಾಟುಗಳನ್ನು ಹೊಂದಿರುವ ಭಾಗವಿದು

a)

ಲೋಮನಾಳ

b)

ಅಪಧಮನಿ

c)

ಅಭಿಧಮನಿ

d)

ಮೇಲಿನ ಎಲ್ಲವೂ

15.

ಈ ಕೆಳಗಿನವುಗಳಲ್ಲಿ ಆಕ್ಸಿಜನ್ ರಹಿತ ರಕ್ತವನ್ನು ಶ್ವಾಸಕೋಶಕ್ಕೆ ಕೊಂಡೊಯ್ಯುವ ರಕ್ತನಾಳ

a)

ಪುಪ್ಪಸಕ ಅಪಧಮನಿ

b)

ಪುಪ್ಪಸಕ ಅಭಿಧಮನಿ

c)

ಮಹಾಪಧಮನಿ

d)

ಲೋಮನಾಳ