wayground logo

Free Printable Worksheets

NEW

Font size

S
M
L
XL
Worksheets

ಲೋಹಗಳು ಮತ್ತು ಅಲೋಹಗಳು (10ನೇ ತರಗತಿ) ಭಾಗ -3

Total questions: 12

Worksheet time: 4mins

Name
Class
Date
1.

ಪ್ರಬಲ ಉತ್ಕರ್ಷಕಕ್ಕೆ ಉದಾಹರಣೆ

a)

H2S

b)

HCl

c)

HNO3

d)

NaOH

2.

ಸಾರಯುತ ನೈಟ್ರಿಕ್ ಆಮ್ಲದೊಂದಿಗೆ ಲೋಹಗಳು ವರ್ತಿಸಿದಾಗ

a)

ನೈಟ್ರಿಕ್ ಆಮ್ಲವು ನೈಟ್ರೋಜನ್ ನ ಆಕ್ಸೈಡ್ ಆಗಿ ಅಪಕರ್ಷಣೆ ಹೊಂದುತ್ತದೆ

b)

ಹೈಡ್ರೋಜನ್ ಅನಿಲ ಉತ್ಕರ್ಷಿಸಿ ನೀರು ಉಂಟಾಗುತ್ತದೆ

c)

ಲೋಹದ ನೈಟ್ರೇಟ್ ಉಂಟಾಗುತ್ತದೆ

d)

ಮೇಲಿನ ಎಲ್ಲವೂ

3.

ಅತ್ಯಂತ ಹೆಚ್ಚು ಮತ್ತು ಕಡಿಮೆ ಕ್ರಿಯಾಶೀಲ ಲೋಹಗಳು ಅನುಕ್ರಮವಾಗಿ

a)

ಚಿನ್ನ ಮತ್ತು ಪೊಟ್ಯಾಸಿಯಂ

b)

ಸೋಡಿಯಂ ಮತ್ತು ಚಿನ್ನ

c)

ಪೊಟ್ಯಾಸಿಯಂ ಮತ್ತು ಸೋಡಿಯಂ

d)

ಪೊಟ್ಯಾಸಿಯಂ ಮತ್ತು ಚಿನ್ನ

4.

ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಮುಳುಗಿಸಿಟ್ಟಾಗ ಮೊಳೆಯ ಮೇಲೆ ಲೇಪನವಾಗುವ ವಸ್ತು

a)

ಕಬ್ಬಿಣದ ಸಲ್ಫೇಟ್

b)

ತಾಮ್ರ

c)

ತಾಮ್ರದ ಸಲ್ಫೇಟ್

d)

ಕಬ್ಬಿಣ

5.

ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಮುಳುಗಿಸಿಟ್ಟಾಗ ಮೊಳೆಯ ಮೇಲೆ ಲೇಪನ ಕಂಡುಬರುತ್ತದೆ. ಆದರೆ ತಾಮ್ರದ ಪಟ್ಟಿಯನ್ನು ಕಬ್ಬಿಣದ ಸಲ್ಫೇಟ್ ದ್ರಾವಣದಲ್ಲಿ ಮುಳುಗಿಸಿಟ್ಟಾಗ ಅದರ ಮೇಲೆ ಯಾವುದೇ ಲೇಪನ ಕಂಡುಬರುವುದಿಲ್ಲ ಏಕೆ ?

a)

ತಾಮ್ರವು ಕಬ್ಬಿಣಕ್ಕಿಂತ ಹೆಚ್ಚು ಕ್ರಿಯಾಶೀಲ

b)

ಉಂಟಾದ ಉತ್ಪನ್ನ ಆವಿಯಾಗಿ ಹೋಗುತ್ತದೆ

c)

ತಾಮ್ರವು ಕಬ್ಬಿಣಕ್ಕಿಂತ ಕಡಿಮೆ ಕ್ರಿಯಾಶೀಲ

d)

ಉಂಟಾದ ಉತ್ಪನ್ನ ದ್ರಾವಣದಲ್ಲಿ ವಿಲೀನವಾಗುತ್ತದೆ

6.

ಈ ಕೆಳಗಿನವುಗಳಲ್ಲಿ ಅಪೂರ್ಣವಾಗಿ ಭರ್ತಿಯಾದ ವೆಲೆನ್ಸ್ ಕವಚವನ್ನು ಹೊಂದಿರುವ ಧಾತು

a)

ಫ್ಲೋರಿನ್

b)

ನಿಯಾನ್

c)

ಹೀಲಿಯಂ

d)

ಆರ್ಗಾನ್

7.

ಸಾಮಾನ್ಯವಾಗಿ ಧಾತುಗಳು ರಾಸಾಯನಿಕವಾಗಿ ಸ್ಥಿರವಾಗಲು ---------- ಸಂಖ್ಯೆಯ ಎಲೆಕ್ಟ್ರಾನುಗಳನ್ನು ಹೊಂದುವ ಪ್ರಯತ್ನ ಮಾಡುತ್ತಿರುತ್ತವೆ.

a)

ns2 np8

b)

ns2 np5

c)

ns2 np4

d)

ns2 np6

8.

ಲೋಹಗಳು ಸಾರರಿಕ್ತ ಆಮ್ಲದೊಂದಿಗೆ ವರ್ತಿಸಿದಾಗ ಉಂಟುಮಾಡುವ ಅನಿಲ

a)

ನೈಟ್ರೋಜನ್

b)

ಆಕ್ಸಿಜನ್

c)

ಹೈಡ್ರೋಜನ್

d)

ಕ್ಲೋರಿನ್

9.

ಲೋಹಗಳ ಕ್ರಿಯಾಶೀಲತೆಯ ಸರಿಯಾದ ಏರಿಕೆ ಕ್ರಮ

a)

Fe < Cu < Zn < Na

b)

Fe < Al < Mg < Na

c)

Pb < Zn < Hg < K

d)

Cu < Zn < Fe < K

10.

ಆವರ್ತ ಕೋಷ್ಟಕದ 18ನೇ ವರ್ಗದ ಧಾತುಗಳನ್ನು ಹೀಗೆಂದು ಕರೆಯುವರು

a)

ಸೊನ್ನೆ ಗುಂಪಿನ ಧಾತುಗಳು

b)

ರಾಜಾನಿಲಗಳು

c)

ಜಡಾನಿಲಗಳು

d)

ಮೇಲಿನ ಎಲ್ಲವೂ

11.

ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಮುಳುಗಿಸಿಟ್ಟಾಗ ನಡೆಯುವ ರಾಸಾಯನಿಕ ಕ್ರಿಯೆಯ ವಿಧ

a)

ರಾಸಾಯನಿಕ ದ್ವಿಸ್ಥಾನಪಲ್ಲಟ ಕ್ರಿಯೆ

b)

ರಾಸಾಯನಿಕ ಸಂಯೋಗ ಕ್ರಿಯೆ

c)

ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆ

d)

ರಾಸಾಯನಿಕ ವಿಭಜನೆ ಕ್ರಿಯೆ

12.

ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಸ್ವಲ್ಪ ಸಮಯ ಮುಳುಗಿಸಿಟ್ಟಾಗ ಉಂಟಾಗುವ ದ್ರಾವಣದ ಬಣ್ಣ

a)

ಹಳದಿ

b)

ಹಸಿರು

c)

ಕೆಂಪು

d)

ನೀಲಿ