NEW
Font size
WorksheetsKSEEB MODEL MCQ SCIENCE
Total questions: 40
Worksheet time: 20mins
ವಿದ್ಯುತ್ ಮಂಡಲದಲ್ಲಿ ರೋಧವನ್ನು ಬದಲಾಯಿಸಲು ಉಪಯೋಗಿಸುವ ಸಾಧನ...
ಅಮ್ಮಿಟರ್
ರಿಯೋಸ್ಟಾಟ್
ಗ್ಯಾಲ್ವನೋಮೀಟರ್
ವೋಲ್ಟ್ ಮೀಟರ್
ಫ್ಲೆಮಿಂಗನ ಎಡಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು...
ಕಾಂತ ಕ್ಷೇತ್ರದ ದಿಕ್ಕು
ವಾಹಕದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು
ವಿದ್ಯುತ್ ಪ್ರವಾಹದ ದಿಕ್ಕು
ವಾಹಕದ ಚಲನೆಯ ದಿಕ್ಕು
ಒಬ್ಬ ವೈದ್ಯರು - 0.5D ಸಾಮರ್ಥ್ಯವನ್ನು ಹೊಂದಿರುವ ಸರಿಪಡಿಸುವ ಮಸೂರವನ್ನು ಒಬ್ಬ ವ್ಯಕ್ತಿಗೆ ಸೂಚಿಸಿದ್ದಾರೆ
. ಈ ಮಸೂರದ ಸಂಗಮ ದೂರ ಮತ್ತು ವಿಧ....
-2ಮೀಟರ್ ಮತ್ತು ನಿಮ್ನ ಮಸೂರ
+2ಮೀಟರ್ ಮತ್ತು ಪೀನ ಮಸೂರ
+2ಮೀಟರ್ ಮತ್ತು ನಿಮ್ನ ಮಸೂರ
-2ಮೀಟರ್ ಮತ್ತು ಪೀನ ಮಸೂರ
ವಸ್ತುವನ್ನು ಪೀನ ಮಸೂರದ ಪ್ರಧಾನ ಸಂಗಮ F1 ಮತ್ತು ದೃಕ್ ಕೇಂದ್ರ O ಗಳ ಮಧ್ಯೆ ಇರಿಸಿದಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರ..
ಮಿಥ್ಯ, ನೇರ ಮತ್ತು ದೊಡ್ಡದು
ಸತ್ಯ, ತಲೆಕೆಳಗಾದ ಮತ್ತು ಚಿಕ್ಕದು
ಮಿಥ್ಯ, ತಲೆಕೆಳಗಾದ ಮತ್ತು ಚಿಕ್ಕದು
ಸತ್ಯ, ತಲೆಕೆಳಗಾದ ಮತ್ತು ದೊಡ್ಡದು
ಒಂದು ವಿದ್ಯುತ್ ಹೀಟರ್, ವಿದ್ಯುತ್ ಮೂಲದಿಂದ 4A ವಿದ್ಯುತ್ ಸೆಳೆಯುವಾಗ ಅದರ ತುದಿಗಳ ನಡುವಿನ ವಿಭವಾಂತರವು 60V ಆದರೆ, ಸದರಿ ವಿದ್ಯುತ್ ಹೀಟರ್ ನ ಸುರುಳಿಯ ರೋಧ...
15ಓಮ್
240ಓಮ್
24ಓಮ್
64ಓಮ್
ಗೋಳೀಯ ಮಸೂರದ ವೃತ್ತಾಕಾರದ ಸೀಮಾರೇಖೆಯ ವ್ಯಾಸ...
ದೃಕ್ ಕೇಂದ್ರ
ವಕ್ರತಾ ಕೇಂದ್ರ
ಅಪರ್ಚರ್
ಪ್ರಧಾನಾಕ್ಷ
ಸೌರಕುಕ್ಕರ್ ನ ಒಳ ಮೇಲ್ಮೈ ಗೆ ಕಪ್ಪು ಬಣ್ಣ ವನ್ನು ಬಳಿದಿರುತ್ತಾರೆ.. ಏಕೆಂದರೆ, ಅದು....
ಬೆಳಕನ್ನು ಪ್ರತಿಫಲಿಸಲು
ಹೆಚ್ಚು ಉಷ್ಣವನ್ನು ಹೀರಿಕೊಳ್ಳಲು
ತುಕ್ಕು ಹಿಡಿಯುವುದನ್ನು ತಡೆಗಟ್ಟಲು
ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸಲು
ವಿದ್ಯುತ್ ಜನಕದ ಕಾರ್ಯ
ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖ ಗೊಳಿಸುತ್ತದೆ
ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
ಒಂದು ಮಂಡಲದಲ್ಲಿ ವಿದ್ಯುತ್ ಪ್ರವಾಹದ ಉಪಸ್ಥಿತಿಯನ್ನು ಕಂಡು ಹಿಡಿಯುತ್ತದೆ
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
ವಾಹಕದ ವಿದ್ಯುತ್ ರೋಧವು ಅವಲಂಬಿಸದೆ ಇರುವುದು.....
ವಾಹಕದ ಉದ್ದ
ಅಡ್ಡಸೆಳೆ ವಿಸ್ತೀರ್ಣ (ಅಡ್ಡ ಕೊಯ್ತ)
ಕಾಂತೀಯ ಗುಣ
ವಸ್ತುವಿನ ಪ್ರಾಕೃತಿಕ ಗುಣ
ಡಿ. ಸಿ ವಿದ್ಯುಜ್ಜನಕವು ಕಾರ್ಯ ನಿರ್ವಹಿಸುವ ತತ್ವ...
ವಿದ್ಯುತ್ ಕಾಂತೀಯ ಪ್ರೇರಣೆ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
ವಿದ್ಯುತ್ ಪ್ರವಾಹದ ಉಷ್ಣೋತ್ಪಾದನಾ ಪರಿಣಾಮ
ವಿದ್ಯುತ್ ಪ್ರವಾಹದ ರಾಸಾಯಿನಿಕ ಪರಿಣಾಮ
"ವ್ಯಾಟ್ " ಎಂಬುದು ಇದರ SI ಏಕಮಾನವಾಗಿದೆ.
ವಿದ್ಯುತ್ ಪ್ರವಾಹ
ವಿದ್ಯುದಾವೇಶ
ವಿಭವಾಂತರ
ವಿದ್ಯುತ್ ಸಾಮರ್ಥ್ಯ
ಕೊಟ್ಟಿರುವ ಕೋಷ್ಟಕವನ್ನು ಗಮನಿಸಿ. ಇವುಗಳಲ್ಲಿ ಉತ್ತಮ ವಿದ್ಯುತ್ ವಾಹಕ ವಸ್ತು...
K
L
N
M
ಜೈವಿಕ ಅನಿಲದ ಒಂದು ಗುಣ
ಶಾಖ ದಕ್ಷತೆ ಹೆಚ್ಚು
ಉರಿಸಿದಾಗ ಬೂದಿಯನ್ನು ಉಳಿಸುತ್ತದೆ
ಹೊಗೆ ಸಹಿತ ಉರಿಯುತ್ತದೆ
ಶಾಖ ದಕ್ಷತೆ ಕಡಿಮೆ
ಒಂದು ಮಸೂರದ ವಸ್ತು ದೂರ ಮತ್ತು ಪ್ರತಿಬಿಂಬದ ದೂರಗಳು ಕ್ರಮವಾಗಿ
- 60cm ಮತ್ತು - 20cm ಆದರೆ, ಮಸೂರದ ವರ್ಧನೆ....
-0.33
+3.0
+0.33
+4.0
ಲೋಹದ ಕಾರ್ಬೋನೇಟ್ ಅದುರುಗಳನ್ನು ಅವುಗಳ ಆಕ್ಸೈಡ್ ಗಳಾಗಿ ಪರಿವರ್ತಿಸುವ ಪ್ರಕ್ರಿಯೆ..
ಹುರಿಯುವಿಕೆ
ಅಪಕರ್ಷಣೆ
ವಿದ್ಯುದ್ವಿಭಜನೆ
ಕಾಸುವಿಕೆ
ಪರ್ಯಾಪ್ತ ಹೈಡ್ರೋಕಾರ್ಬನ್ ಗಳ ಸರಿಯಾದ ಗುಂಪು....
CH4, C2H4, C3H4
C2H6, C3H8, C4H10
C2H2, C2H6, CH4
C2H2, C3H6, C4H6
X ಧಾತುವಿನ ಪರಮಾಣು ಸಂಖ್ಯೆ 11 ಮತ್ತು Y ಧಾತುವಿನ ಪರಮಾಣು ಸಂಖ್ಯೆ 17 ಆಗಿದೆ. ಹಾಗಾದರೆ ಈ ಧಾತುಗಳ ನಡುವೆ ಉಂಟಾಗುವ ಬಂಧದ ವಿಧ....
ಹೈಡ್ರೋಜನ್ ಬಂಧ
ಕೋವೆಲೆಂಟ್ ಬಂಧ (ಸಹವೇಲೆನ್ಸಿ)
ಅಯಾನಿಕ್ ಬಂಧ (ಇಲೆಕ್ಟ್ರೋವೇಲೆಂಟ್ ಬಂಧ)
ಲೋಹೀಯ ಬಂಧ
ಒಂದು ದ್ರಾವಣದ pH ಮೌಲ್ಯ ಕಡಿಮೆಯಾದಂತೆ....
OH- ಅಯಾನುಗಳ ಸಂಖ್ಯೆ ಹೆಚ್ಚಾಗುತ್ತದೆ
H+ ಅಯಾನುಗಳ ಸಂಖ್ಯೆ ಹೆಚ್ಚಾಗುತ್ತದೆ
H+ ಅಯಾನುಗಳ ಸಂಖ್ಯೆ ಕಡಿಮೆಯಾಗುತ್ತದೆ
H+ ಮತ್ತು OH- ಅಯಾನುಗಳ ಸಂಖ್ಯೆ ಸಮನಾಗಿರುತ್ತದೆ
ಈ ಕಾರ್ಬನ್ ಸಂಯುಕ್ತದಲ್ಲಿ ಇರುವ ಕ್ರಿಯಾಗುಂಪು..
ಆಲ್ಡಿಹೈಡ್
ಆಲ್ಕೋಹಾಲ್
ಕಿಟೋನ್
ಕಾರ್ಬಕ್ಸಿಲಿಕ್ ಆಮ್ಲ
ಒಂದು ಧಾತುವಿನ ಪರಮಾಣು ಸಂಖ್ಯೆ 20 ಆದರೆ, ಆಧುನಿಕ ಆವರ್ತಕ ಕೋಷ್ಟಕದಲ್ಲಿ ಈ ಧಾತುವಿನ ಆವರ್ತ ಸಂಖ್ಯೆ....
4
8
2
3
ಸೈಕ್ಲೋ ಹೆಕ್ಸೇನ್ ಅಣು ರಚನೆಯಲ್ಲಿರುವ ಏಕಬಂಧಗಳ ಸಂಖ್ಯೆ...
12
18
24
6
ಆಧುನಿಕ ಆವರ್ತಕ ಕೋಷ್ಟಕದಲ್ಲಿ ನಾವು ಒಂದು ವರ್ಗದ ಕೆಳಗೆ ಸಾಗಿದಂತೆ ಧಾತುಗಳ ಪರಮಾಣು ಗಾತ್ರವು..
ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಹೆಚ್ಚಾಗುತ್ತದೆ
ಮೊದಲು ಹೆಚ್ಚಾಗಿ ಅನಂತರ ಕಡಿಮೆಯಾಗುತ್ತದೆ
ಈ ಕೆಳಗಿನ ರಾಸಾಯನಿಕ ಕ್ರಿಯೆಗಳನ್ನು ಗಮನಿಸಿ.
ಈ ಕ್ರಿಯೆಯಲ್ಲಿ ಇರುವ ಲೋಹಗಳ ಕ್ರಿಯಾಶೀಲತೆಯ ಇಳಿಕೆಯ ಕ್ರಮ
Zn>Fe>Cu
Fe>Cu>Zn
Zn>Cu>Fe
Cu>Fe>Zn
ಸಾರರಿಕ್ತ ಸಲ್ಫ್ಯೂರಿಕ್ ಆಮ್ಲವು ಸತುವಿನ ಚೂರುಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ....
ಸಲ್ಫರ್ ಡೈ ಆಕ್ಸೈಡ್ (ಗಂಧಕದ ಡೈ ಆಕ್ಸೈಡ್)
ಕಾರ್ಬನ್ ಡೈ ಆಕ್ಸೈಡ್ (ಇಂಗಾಲದ ಡೈ ಆಕ್ಸೈಡ್)
ನೈಟ್ರೋಜನ್ (ಸಾರಜನಕ)
ಹೈಡ್ರೋಜನ್ (ಜಲಜನಕ)
ಈ ರಾಸಾಯನಿಕ ಕ್ರಿಯೆಯು ಇದರ ಉದಾಹರಣೆಯಾಗಿದೆ.
ತಟಸ್ಥೀಕರಣ ಕ್ರಿಯೆ
ಆದೇಶನ ಕ್ರಿಯೆ
ಸಂಕಲನ ಕ್ರಿಯೆ
ದಹನ ಕ್ರಿಯೆ
ಬೆಂಜೀನ್ ನ ಅಣುಸೂತ್ರ...
C5H12
C6H12
C6H6
C6H10
ಸಸ್ಯಗಳಲ್ಲಿ ಬೇರಿನಿಂದ ಎಲೆಗಳಿಗೆ ನೀರು ಮತ್ತು ಅದರಲ್ಲಿ ಕರಗಿರುವ ಲವಣಗಳ ಹೀರುವಿಕೆ ಮತ್ತು ಮೇಲ್ಮುಖ ಚಲನೆಗೆ ಸಹಾಯ ಮಾಡುವ ಪ್ರಕ್ರಿಯೆ..
ಉಸಿರಾಟ
ಭಾಷ್ಪ ವಿಸರ್ಜನೆ
ದ್ಯುತಿ ಸಂಶ್ಲೇಷಣೆ
ವಸ್ತು ಸ್ಥಾನಾಂತರಣ
ಮಾನವನ ದೇಹದಲ್ಲಿ ಆಕ್ಸಿಜನ್ ಸಹಿತ (ಸಮೃದ್ಧ) ರಕ್ತವು ಶ್ವಾಸಕೋಶಗಳಿಂದ ಹೃದಯಕ್ಕೆ ಬರುವ ಸರಿಯಾದ ಮಾರ್ಗ...
ಪುಪ್ಪುಸಕ ಅಪಧಮನಿಗಳು-->ಬಲ ಹೃತ್ಕುಕ್ಷಿ -->ಬಲ ಹೃತ್ಕರ್ಣ
ಪುಪ್ಪುಸಕ ಅಪಧಮನಿಗಳು-->ಬಲ ಹೃತ್ಕರ್ಣ -->ಬಲ ಹೃತ್ಕುಕ್ಷಿ
ಪುಪ್ಪುಸಕ ಅಭಿಧಮನಿಗಳು-->ಎಡ ಹೃತ್ಕುಕ್ಷಿ -->ಎಡ ಹೃತ್ಕರ್ಣ
ಪುಪ್ಪುಸಕ ಅಭಿಧಮನಿಗಳು-->ಎಡ ಹೃತ್ಕರ್ಣ -->ಎಡ ಹೃತ್ಕುಕ್ಷಿ
ಮಾನವನ ದೇಹದಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬು - ಇವುಗಳ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನ್...
ಟೆಸ್ಟೋಸ್ಟಿರಾನ್
ಅಡ್ರಿನಾಲಿನ್
ಥೈರಾಕ್ಸಿನ್
ಇನ್ಸುಲಿನ್
ಈ ಕೆಳಗಿನವುಗಳಲ್ಲಿ ಹೊಂದಿಕೆಯಾಗದ ಜೋಡಿ..
ಅಡ್ರಿನಾಲಿನ್ -->ಪಿಟ್ಯೂಟರಿ ಗ್ರಂಥಿ
ಟೆಸ್ಟೋಸ್ಟಿರಾನ್ -->ವೃಷಣ
ಇನ್ಸುಲಿನ್ --ಮೇದೋಜೀರಕ ಗ್ರಂಥಿ
ಥೈರಾಕ್ಸಿನ್-->ಥೈರಾಯ್ಡ್ ಗ್ರಂಥಿ
ಐಚ್ಛಿಕ ಕ್ರಿಯೆಗಳ ನಿಖರತೆ ಮತ್ತು ದೇಹದ ಭಂಗಿ ಹಾಗೂ ಸಮತೋಲನವನ್ನು ಕಾಪಾಡಲು ಕಾರಣವಾದ ಮಾನವನ ಮಿದುಳಿನ ಭಾಗ....
ಪಾನ್ಸ್
ಮಹಾಮಸ್ತಿಷ್ಕ
ಹೈಪೋಥಲಾಮಸ್
ಅನುಮಸ್ತಿಷ್ಕ
ಲೈಂಗಿಕ ಸಂಪರ್ಕದ ಮೂಲಕ ಹರಡುವ ಗೊನೋರಿಯಾ ಮತ್ತು ಸಿಫಿಲಿಸ್ ಗಳಿಗೆ ಕಾರಣವಾದ ರೋಗಕಾರಕ...
ಪ್ರೋಟೋಜೋವ
ಬ್ಯಾಕ್ಟೀರಿಯ
ವೈರಸ್
ಶಿಲೀಂಧ್ರ
ಹೂವಿನಲ್ಲಿ ಲೈಂಗಿಕ ಸಂತಾನೋತ್ಪತ್ತಿ ಪ್ರಕ್ರಿಯೆ ಜರುಗುವಾಗ ಕಂಡು ಬರುವ ಸರಿಯಾದ ಹಂತಗಳು....
ಪರಾಗಸ್ಪರ್ಶ, ನಿಶೇಚನ, ಭ್ರೂಣ, ಬೀಜ
ಬೀಜ, ಭ್ರೂಣ, ನಿಶೇಚನ, ಪರಾಗ ಸ್ಪರ್ಶ
ಭ್ರೂಣ, ಬೀಜ, ಪರಾಗ ಸ್ಪರ್ಶ, ನಿಶೇಚನ
ಪರಾಗ ಸ್ಪರ್ಶ, ನಿಶೇಚನ, ಬೀಜ, ಭ್ರೂಣ
ಬೀಜವು ಮೊಳಕೆ ಒಡೆಯುವಾಗ ಬೇರು ಆಗಿ ಬೆಳೆದು ಅಭಿವೃದ್ಧಿ ಆಗುವ ಸಸ್ಯ ಬೀಜದ ಭಾಗ.....
ಬೀಜ ದಳ
ಎಂಡೋಸ್ಪರ್ಮ್
ಪ್ರಥಮ ಮೂಲ
ಬೀಜದ ಪೊರೆ
ದುಂಡಾದ ಹಸಿರು ಬೀಜವನ್ನು ಹೊಂದಿರುವ ಬಟಾಣಿ ಸಸ್ಯ(RRyy) ವನ್ನು ಸುಕ್ಕಾದ ಹಳದಿ ಬೀಜವನ್ನು (rrYY) ಹೊಂದಿದ್ದಾರೆ ಬಟಾಣಿ ಸಸ್ಯದ ಜೊತೆಗೆ ಸಂಕರಣ ಗೊಳಿಸಿದಾಗ F1 ಪೀಳಿಗೆಯಲ್ಲಿ ಉಂಟಾಗುವ ಬೀಜಗಳು....
ದುಂಡನೆಯ ಹಸಿರು
ಸುಕ್ಕಾದ ಹಳದಿ
ಸುಕ್ಕಾದ ಹಸಿರು
ದುಂಡನೆಯ ಹಳದಿ
ಜೀವಿಯು ತನ್ನ ಜೀವಿತ ಅವಧಿಯಲ್ಲಿ ಪಡೆದ ಅನುಭವಗಳನ್ನು ಅದರ ಸಂತತಿಗೆ ವರ್ಗಾಯಿಸುವುದಿಲ್ಲ
ಏಕೆಂದರೆ ಅವುಗಳು...
ಅನುವಂಶೀಯ ಗುಣಗಳು
ಗಳಿಸಿದ ಗುಣಗಳು
ಪ್ರಬಲ ಗುಣಗಳು
ದುರ್ಬಲ ಗುಣಗಳು
ಕಾರ್ಯಾನುರೂಪಿ ಅಂಗಗಳು...
ಒಂದೇ ರೀತಿಯ ರಚನೆ ಮತ್ತು ಒಂದೇ ರೀತಿಯ ಕಾರ್ಯವನ್ನು ಹೊಂದಿವೆ
ಒಂದೇ ರೀತಿಯ ರಚನೆ ಮತ್ತು ವಿಭಿನ್ನ ರೀತಿಯ ಕಾರ್ಯಗಳನ್ನು ಹೊಂದಿವೆ
ವಿಭಿನ್ನ ರೀತಿಯ ರಚನೆ ಮತ್ತು ಒಂದೇ ರೀತಿಯ ಕಾರ್ಯವನ್ನು ಹೊಂದಿವೆ
ವಿಭಿನ್ನ ರೀತಿಯ ರಚನೆ ಮತ್ತು ವಿಭಿನ್ನ ರೀತಿಯ ಕಾರ್ಯಗಳನ್ನು ಹೊಂದಿವೆ
ವಾತಾವರಣದ ಉನ್ನತ ಸ್ತರದಲ್ಲಿ ಆಮ್ಲಜನಕವು ಓಝೋನ್ ಆಗಿ ರೂಪುಗಳ್ಳುವುದು ಇವುಗಳ ಪ್ರಭಾವದಿಂದ
ಕ್ಷ-ಕಿರಣಗಳು (X-ray)
ನೇರಳಾತೀತ ವಿಕಿರಣ (ultra violet ray) (UV ray)
ಆವೆಕೆಂಪು ವಿಕಿರಣ (infrared ray)
ರೇಡಿಯೋ ತರಂಗ
ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಇದ್ದರೆ ಅದನ್ನು ಬೇರೆ ಯಾವುದೇ ಉಪಯುಕ್ತ ಉದ್ದೇಶಕ್ಕೆ ಬಳಸುವುದು
ಮರು ಚಕ್ರೀಕರಣ
ಮಿತ ಬಳಕೆ
ಮರುಬಳಕೆ
ಮರು ಉದ್ದೇಶ
ಜಲಾನಯನ ಪ್ರದೇಶದ ನಿರ್ವಹಣೆಯು
ಜಲಾನಯನ ಪ್ರದೇಶದ ಜನರ(ಸಮುದಾಯದ) ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ
ಬರಗಾಲ ಮತ್ತು ಪ್ರವಾಹಗಳನ್ನು ಹೆಚ್ಚಿಸುತ್ತದೆ
ಜಲಾಶಯದ ಕೆಳ ಪ್ರದೇಶದ ಜೀವ ವೈವಿಧ್ಯವನ್ನು ಕಡಿಮೆ ಮಾಡುತ್ತದೆ
ಅರಣ್ಯ ನಾಶವನ್ನು ಹೆಚ್ಚಿಸುತ್ತದೆ
