NEW
Font size
Worksheetsಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ
Total questions: 40
Worksheet time: 20mins
ಸಾರಾ ಅಬೂಬಕರ್ ಅವರ ಜನ್ಮಸ್ಥಳ ಇದು
ಧಾರವಾಡ
ಮೈಸೂರು
ಬಿಜಾಪುರ್
ಕಾಸರಗೋಡು
ಮುದುಕಿಯ ಕೈಯಲ್ಲಿದ್ದ ದೀಪದ ಬೆಳಕು ಹೊರಬೀಳದಂತೆ ದೀಪದ ಒಂದು ಭಾಗಕ್ಕೆ ಅಂಟಿದ ವಸ್ತುವಿದು
ಕಾಗದ
ಬಟ್ಟೆ
ಎಲೆ
ಪುಟ್ಟಿ
ಭಾರತ ಸರ್ಕಾರವು ವಿಶ್ವೇಶ್ವರಯ್ಯನವರಿಗೆ ನೀಡಿದ ಪ್ರಶಸ್ತಿ
ಭಾರತರತ್ನ
ಸರ್
ಪದ್ಮಭೂಷಣ
ಜ್ಞಾನಪೀಠ
ಶಬರಿಯ ಪ್ರಕಾರ ಗುರು ಸಿದ್ಧರೇ ಮೆಚ್ಚಿದಂತಹ ಸನ್ಮಂಗಳ ಮೂರ್ತಿ
ರಾಮ
ಲಕ್ಷ್ಮಣ
ಧನು
ದಶರಥ
ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾದವರು
ವಿಶ್ವೇಶ್ವರಯ್ಯ
ನಾಲ್ವಡಿ ಕೃಷ್ಣರಾಜ ಒಡೆಯರು
ಲಾರ್ಡ್ ಸಂಡ್ ಹರ್ಸ್ಟ್
ರಂಗಾಚಾರ್ಲು
ವಚನಕಾರರ ದೃಷ್ಟಿಯಲ್ಲಿ ದೇವರೆಂದರೆ
ಪ್ರಜ್ಞೆ
ಇಷ್ಟಲಿಂಗ
ವಚನ
ಭೂಮಿ
ಶಾನುಭೋಗರ ರಾಜಭಕ್ತಿಯ ಲಾಂಛನ
ಹುಲಿಯ ಧರ್ಮಶ್ರದ್ಧೆ
ಖಿರ್ದಿ ಪುಸ್ತಕ
ಭಗವದ್ಗೀತೆ
ಪುಣ್ಯಕೋಟಿ
ವೃಕ್ಷಸಾಕ್ಷಿ ಪಾಠದ ಆಶಯ
ಗುಣಕ್ಕಿಂತ ಹಣ ಮೇಲು
ಹಣಕ್ಕಿಂತ ಗುಣ ಮೇಲು
ಹಣ ಮತ್ತು ಗುಣಕ್ಕಿಂತ ದೇವರು ಮೇಲು
ಇಂದು ಕಷ್ಟಪಟ್ಟರೆ ನಾಳೆ ಸುಖ
ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು ಲಕ್ಷ್ಮಣ ಇದರ ಮುಂದುವರೆದ ಭಾಗ
ಮರಣವಲ್ಲ ಮುಕ್ತಿ ಪ್ರಭೋ ಇದುವೇ ನನ್ನ ಪೂಣ್ಕೆ
ಬಾಳ ಸುತ್ತಿಹ ದೇವ ತೇಜವ | ಕಾಂಬರಿಗೆ ಇದೆ ಲಕ್ಷ್ಮಣ
ಭೂಮಿ ತಾಯಿಯು ತನ್ನ ಮಗಳನು ಎಲ್ಲಿರಲಿ ಅದೇ ತವರೆನೆ
ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!
ಎ ಎನ್ ಮೂರ್ತಿರಾವ್ ಅವರ ಪೂರ್ಣ ಹೆಸರು
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್
ಅಕ್ಕಿಹೆಬ್ಬಾಳ್ ಮೂರ್ತಿರಾವ್ ನರಸಿಂಹ
ಅಕ್ಕಿಹೆಬ್ಬಾಳು ಮೂರ್ತಿರಾವ್
ಅಕ್ಕಿಹೆಬ್ಬಾಳು ನರಸಿಂಹ
ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದುದು
ಗುಡಿಸಲಿನಲ್ಲಿ
ದೇವಸ್ಥಾನದಲ್ಲಿ
ಚಾವಣಿ ಇಲ್ಲದ ಗುಡಿಯಲ್ಲಿ
ಜನರ ಮನಸ್ಸಿನಲ್ಲಿ
ಧರ್ಮಬುದ್ಧಿ ತನ್ನ ಬೆಳಗಿನ ಹೊತ್ತನ್ನು ಕಳೆದದ್ದು ಹೀಗೆ
ಪುಸ್ತಕಗಳನ್ನು ಓದುತ್ತಾ
ದೇವ ಗುರು ಮತ್ತು ದ್ವಿಜರ ಪೂಜೆ ಮಾಡುತ್ತ
ತಿಂಡಿ ತಿಂದು ಮನೆಗೆಲಸ ಮಾಡುತ್ತಾ
ಊರೆಲ್ಲಾ ಅಡ್ಡಾಡುತ್ತಾ
'ಎದೆ ತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ ಪದ್ಯಭಾಗ
ಸಂಕಲ್ಪ ಗೀತೆ
ಹಕ್ಕಿಹಾರುತಿದೆ ನೋಡಿದಿರಾ
ಹಸುರು
ಹಲಗಲಿ ಬೇಡರು
ಹಕ್ಕಿಯ ಗರಿಯಲ್ಲಿರುವ ಬಣ್ಣಗಳು
ಹಳದಿ- ಕೆಂಪು
ನೀಲಿ- ಹಸಿರು
ಕರಿ-ನೆರೆ
ಬಿಳಿ-ಹೊಳೆ
ವೀರಕಲಿಗಳ ವೀರ ಸಾಹಸ ಉಜ್ವಲ ಜೀವನವನ್ನು ವರ್ಣಿಸುವ ಕಥನಾತ್ಮಕ ಕಾವ್ಯಗಳು
ಲಾವಣಿಗಳು
ಗೀತ ನಾಟಕಗಳು
ಪ್ರವಾಸ ಕಥನಗಳು
ಲಲಿತ ಪ್ರಬಂಧಗಳು
ರವಿಸುತನ ಕಿವಿಯಲ್ಲಿ ಭಯವನ್ನು ಬಿತ್ತಿದವನು
ಕೃಷ್ಣ
ಪಲ್ಗುಣ
ಕುರುಪತಿ
ಕಲಿಭೀಮ
ಕವಿ ಕುವೆಂಪುರವರಿಗೆ ಸಂಜೆಯ ಬಿಸಿಲು ಈ ರೀತಿ ಕಂಡಿದೆ
ಕೆಂಪಾಗಿ
ಹಸುರಾಗಿ
ಹಳದಿಯಾಗಿ
ಕಾರ್ಮೋಡದಂತೆ
ದುರ್ಯೋಧನನಿಗೆ ಯುದ್ಧವನ್ನು ಮಾಡದೆ ಪಾಂಡವರೊಂದಿಗೆ ಸಂಧಿ ಮಾಡಿಕೊಂಡು ಬದುಕಬೇಕೆಂಬ ಸಲಹೆಯನ್ನು ನೀಡಿದವರು
ಕರ್ಣ
ಭೀಷ್ಮಾಚಾರ್ಯರು
ಧರ್ಮರಾಯ
ದುಶ್ಯಾಸನ
ಶ್ರೀರಾಮನ ಯಜ್ಞಾಶ್ವವು ವಾಲ್ಮೀಕಿ ಮುನಿಯ ಆಶ್ರಮಕ್ಕೆ ಬರಲು ಕಾರಣ
ಹುಲ್ಲಿನ ಹಸುರಿಗೆ ಎಳಸಿ
ವಾಲ್ಮೀಕಿ ಮುನಿಯ ತೋಟವನ್ನು ಹಾಳುಮಾಡಲು
ಆಶ್ರಮದಲ್ಲಿ ಬೆಳೆದ ಹಣ್ಣುಗಳನ್ನು ತಿನ್ನಲು
ಆಶ್ರಮದ ಸೌಂದರ್ಯವನ್ನು ನೋಡಲು
ಹಲಗಲಿಯ ಊರನ್ನೆಲ್ಲಾ ಲೂಟಿ ಮಾಡಿರಿ ಎಂದು ಹೇಳಿದ ಬ್ರಿಟಿಷ್ ಅಧಿಕಾರಿ
ಹೆಬಲಕ್ ಸಾಹೇಬ
ಚಟೆಕಾರ
ಕಾರ ಸಾಹೇಬ
ಟಾರಾ ಸಾಹೇಬ
ನಕುಲ-ಸಹದೇವರ ತಾಯಿಯ ಹೆಸರು
ಕುಂತಿ
ಮಾದ್ರಿ
ದ್ರೌಪದಿ
ಗಾಂಧಾರಿ
ಕುವೆಂಪು ಅವರ ಆತ್ಮಕಥನ
ಪಕ್ಷಿಕಾಶಿ
ನೆನಪಿನ ದೋಣಿಯಲ್ಲಿ
ಕಾನೂರು ಹೆಗ್ಗಡತಿ
ಶ್ರೀ ರಾಮಾಯಣ ದರ್ಶನಂ
ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು
ಭೀಮ
ಅರ್ಜುನ
ದುರ್ಯೋಧನ
ಕರ್ಣ
ದ ರಾ ಬೇಂದ್ರೆಯವರ ಕಾವ್ಯನಾಮ
ಅಂಬಿಕಾತನಯದತ್ತ
ಕುವೆಂಪು
ವಿನಾಯಕ
ಪುತಿನ
ಲವನು ರಾಮನ ಯಜ್ಞಾಶ್ವವನ್ನು ಈ ಗಿಡಕ್ಕೆ ಕಟ್ಟಿದನು
ಬೇವು
ಬಾಳೆ
ಹೊಂಗೆ
ದಾಸವಾಳ
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಭರವಸೆಗಳ ಕಟ್ಟೋಣ
ಹೊಸ ಎಚ್ಚರದೊಳು ಬದುಕೋಣ
ಪ್ರೀತಿಯ ಹಣತೆಯ ಹಚ್ಚೋಣ
ಮುಂಗಾರಿನ ಮಳೆಯಾಗೋಣ
ಸರ್ವಧರ್ಮ ಸಮ್ಮೇಳನ ನಡೆದ ಸ್ಥಳ
ಚಿಕಾಗೋ
ಪ್ಯಾರಿಸ್
ಲಂಡನ್
ನ್ಯೂಯಾರ್ಕ್
ಕತ್ತಲೆ ಗವ್ವೆನ್ನುವ ಗುಡಿಸಲೊಳಗೆ ಬರಲು ಹೆದರಿದವರು
ಕಮ್ಮಾರ
ವಸಂತ
ಕುಂಬಾರ
ನೇಕಾರ
ಬದಿನಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು ಹೋಗೋರ ಮುಂಜೆರಗ ಹಿಡಿಯೋದು
ಗರಿಕೆ ಹುಲ್ಲು
ಉತ್ತರಾಣಿ ಗಿಡ
ಬೀಸುವ ಕಲ್ಲು
ತಾವರೆ ಬೇರು
ಭಗತ್ ಸಿಂಗ್ ಬ್ರಿಟಿಷ್ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಂಡಿದ್ದರು ಫಲ
ಮರಣದಂಡನೆಗೆ ಗುರಿಯಾದದ್ದು
ಪರಮ ವೀರ ಚಕ್ರ ಪ್ರಶಸ್ತಿ ಪಡೆದುದು
ಸರ್ ಪದವಿ ಪಡೆದುದು
ಎಲ್ಲರಿಂದಲೂ ಶ್ಲಾಘನೆಗೆ ಒಳಗಾದುದು
ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಬಳಸುವ ಲೇಖನ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ
ಆವರಣ ಚಿಹ್ನೆ
ವಿವರಣಾತ್ಮಕ ಚಿಹ್ನೆ
ಉದ್ಧರಣ ಚಿಹ್ನೆ
ಕಡೆಗಣ್ಣು ಪದವು
ಅಂಶಿ ಸಮಾಸ
ಕ್ರಿಯಾ ಸಮಾಸ
ಬಹುರ್ವೀಹಿ ಸಮಾಸ
ಗಮಕ ಸಮಾಸ
ಕರೋನಾ ಮಹಾಮಾರಿ ಹೆಚ್ಚಾಗಿರುವುದರಿಂದ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ವಾಕ್ಯದಲ್ಲಿರುವ ಅನ್ಯದೇಶಿಯ ಪದ
ಬಸ್ಸು
ತಾತ್ಕಾಲಿಕ
ಮಹಾಮಾರಿ
ಸಂಚಾರ
ಹಳೆಗನ್ನಡದ ಸಪ್ತಮಿ ವಿಭಕ್ತಿ ಪ್ರತ್ಯಯ
ಮ್
ಅಂ
ಒಳ್
ಅತ್ತಣಿಂ
ಉಪ್ಪಿಗಿಂತ ರುಚಿ ಇಲ್ಲ : ತಾಯಿಗಿಂತ
ಯೌವ್ವನವಿಲ್ಲ
ಬಂಧುವಿಲ್ಲ
ಮುಪ್ಪಿಲ್ಲ
ನೆಂಟರಿಲ್ಲ
2 ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥ ಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರಿ ಬಂದರೆ ಅಲಂಕಾರವು
ದೃಷ್ಟಾಂತಾಲಂಕಾರ
ಉಪಮಾಲಂಕಾರ
ರೂಪಕಾಲಂಕಾರ
ಉತ್ಪ್ರೇಕ್ಷಾಲಂಕಾರ
ಅಬ್ಬರ ಪದದಲ್ಲಿ ಕಂಡು ಬರುವ ಅಕ್ಷರ ಗಣ
ಮಗಣ
ತಗಣ
ಭಗಣ
ಯಗಣ
ಪಾದುಕಾ ಪದದ ತದ್ಭವ ರೂಪ
ಪೀಠಿಕೆ
ಹವುಗೆ
ಹವಗೆ
ಹಾವುಗೆ
ಕ್ರಿಯಾಪದದ ಸ್ಥಾನದಲ್ಲಿತ್ತು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳು
ಭಾವಸೂಚಕ ಅವ್ಯಯಗಳು
ಕ್ರಿಯಾರ್ಥಕಾವ್ಯಯಗಳು
ಅನುಕರಣಾವ್ಯಯಗಳು
ಸಮಾನಾರ್ಥಕಾವ್ಯಯ
ತಾಯಿಗೆ ಪತ್ರ ಬರೆಯುವಾಗ ಪತ್ರದ ಆರಂಭದ ಸಂಬೋಧನೆ ಹೀಗಿರಬೇಕು
ತೀರ್ಥರೂಪರವರಿಗೆ
ಮಾತೃಶ್ರೀಯವರಿಗೆ
ಪೂಜ್ಯ ಗುರುಗಳೇ
ಮಾನ್ಯರೇ
