wayground logo

Free Printable Worksheets

NEW

Font size

S
M
L
XL
Worksheets

SSLC MODEL QUESTION PAPER -2

Total questions: 40

Worksheet time: 20mins

Name
Class
Date
1.

ವಿದ್ಯುತ್ ಮಂಡಲ ಮತ್ತು ವಿದ್ಯುತ್ ಉಪಕರಣಗಳನ್ನು ರಕ್ಷಿಸುವ ಸುರಕ್ಷಾ ಸಾಧನ

a)

ಅಮ್ಮೀಟರ್

b)

ದಿಕ್ಪರಿವರ್ತಕ

c)

ಪ್ಯೂಸ್

d)

ಗ್ಯಾಲ್ವನೋಮೀಟರ್

2.

ವಸ್ತುವನ್ನು ಪೀನ ಮಸೂರದ F1 & 2F1 ಗಳ ನಡುವೆ ಇರಿಸಿದಾಗ ಪ್ರತಿಬಿಂಬದ ಸ್ಥಾನ

a)

2 F2 ಗಿಂತ ದೂರ

b)

F2 & 2F2 ಗಳನಡುವೆ

c)

2F2 ನಲ್ಲಿ

d)

ಅನಂತ ದೂರದಲ್ಲಿ

3.

ಅದನ್ನು ಉತ್ಪಾದಿಸಲು ಟರ್ಬೈನ್ ನ್ನು ಉಪಯೋಗಿಸದೇ ಇರುವ ವಿದ್ಯುತ್ ಸ್ಥಾವರ

a)

ಜಲವಿದ್ಯುತ್ ಸ್ಥಾವರ

b)

ಸೌರ ವಿದ್ಯುತ್ ಸ್ಥಾವರ

c)

ಉಷ್ಣ ವಿದ್ಯುತ್ ಸ್ಥಾವರ

d)

ನ್ಯೂಕ್ಲಿಯರ್ ವಿದ್ಯುತ್ ಸ್ಥಾವರ

4.

a)

4 A

b)

36 A

c)

0.6 A

d)

0.25A

5.

ಫ್ಲೆಮಿಂಗನ ಬಲಗೈ ನಿಯಮ ದಲ್ಲಿ ಮಧ್ಯದ ಬೆರಳು ಸೂಚಿಸುವುದು

a)

ವಿದ್ಯುತ್ ಪ್ರವಾಹದ ದಿಕ್ಕು

b)

ಕಾಂತಕ್ಷೇತ್ರ ದ ದಿಕ್ಕು

c)

ವಾಹಕದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು

d)

ವಾಹಕದ ಚಲನೆಯ ದಿಕ್ಕು

6.
a)

Q

b)

P

c)

R

d)

S

7.

ತಾಮ್ರದ ಆಯತಾಕಾರದ ಸುರುಳಿಯನ್ನು ಕಾಂತ ಕ್ಷೇತ್ರದಲ್ಲಿ ತಿರುಗಿಸಿದಾಗ ಪ್ರೇರಿತ ವಿದ್ಯುತ್ ಪ್ರವಾಹ ದಿಕ್ಕು ಪ್ರತಿ ಬಾರಿಬದಲಾಗುವುದು

a)

ಎರಡು ಸುತ್ತುಗಳಿಗೆ ಒಮ್ಮೆ

b)

ಒಂದು ಸುತ್ತಿಗೆ ಒಮ್ಮೆ

c)

ನಾಲ್ಕನೆ ಒಂದು ಸುತ್ತಿಗೆ ಒಮ್ಮೆ

d)

ಅರ್ಧ ಸುತ್ತಿಗೆ ಒಮ್ಮೆ

8.

ಜೈವಿಕ ಅನಿಲದ ಪ್ರಧಾನ ಘಟಕ

a)

ಮಿಥೇನ್

b)

ಈಥೇನ್

c)

ಬ್ಯೂಟೇನ್

d)

ಪ್ರೋಪೇನ್

9.

ನಿಮ್ನ ಮಸೂರದ ಒಂದು ಗುಣ ಇದು

a)

ಬೆಳಕಿನ ಕಿರಣಗಳನ್ನು ವಿ ಕೇಂದ್ರೀಕರಿಸುತ್ತದೆ

b)

ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸುತ್ತದೆ

c)

ಸತ್ಯ ತಲೆಕೆಳಗಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ

d)

ಅಂಚುಗಳಲ್ಲಿ ತೆಳುವಾಗಿದ್ದು ಮಧ್ಯದಲ್ಲಿ ದಪ್ಪವಾಗಿರುತ್ತದೆ

10.

220 V ಒಂದು ಜನರೇಟರ್ ಗೆ ಒಂದು ವಿದ್ಯುತ್ ದೀಪ ಅಳವಡಸಲಾಗಿದೆ ಆ ಬಲ್ಬ ನಲ್ಲಿ 0.50 A ವಿದ್ಯುತ್ ಪ್ರವಾಹ ಪ್ರವಹಿಸಿದರೆ ಬಲ್ಬ್ ನ ಸಾಮರ್ಥ್ಯ

a)

110W

b)

220W

c)

44 W

d)

1100w

11.

ವಿದ್ಯುತ್ ಮಂಡಲದಲ್ಲಿ ಅಮ್ಮೀಟರ್ ಕಾರ್ಯ

a)

ವಿದ್ಯುತ್ಪ್ರವಾಹದ ದರವನ್ನು ಅಳೆಯುತ್ತದೆ

b)

ವಿದ್ಯುತ್ ಉಪಕರಣವನ್ನು ರಕ್ಷಿಸುತ್ತದೆ

c)

ವಿದ್ಯುತ್ ಪ್ರವಾಹವನ್ನು ದಿಕ್ಕನ್ನು ಹಿಮ್ಮುಖ ಗೊಳಿಸುತ್ತದೆ

d)

ವಿಭವಾಂತರವನ್ನು ಅಳೆಯುತ್ತದೆ.

12.

ಒಂದು ವಸ್ತುವಿನ ರೋಧಶೀಲತೆ ಯು ಹೆಚ್ಚಾದಂತೆ ಅದರ

a)

ರೋಧ ಕಡಿಮೆಯಾಗುತ್ತದೆ

b)

ವಾಹಕತೆ ಹೆಚ್ಚಾಗುತ್ತದೆ

c)

ದ್ರವನ ಬಿಂದು ಕಡಿಮೆಯಾಗುತ್ತದೆ

d)

ರೋಧ ಹೆಚ್ಚಾಗುತ್ತದೆ

13.

ಬೆಳಕು ಒಂದು ಪಾರದರ್ಶಕ ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹಾದುಹೋಗುವಾಗ ಬಾಗುತ್ತದೆ ಈ

a)

ಬೆಳಕಿನ ಪ್ರತಿಫಲನ

b)

ಬೆಳಕಿನ ವಕ್ರೀಭವನ

c)

ಬೆಳಕಿನ ಆಂತರಿಕ ಪ್ರತಿಫಲನ

d)

ಬೆಳಕಿನ ಪಾರ್ಶ್ವ ಪ್ರತಿವರ್ತನೆ

14.

ಇವುಗಳಲ್ಲಿ ಯಾವುದು ಕಾಂತೀಯ ಬಲ ರೇಖೆಗಳು ಲಕ್ಷಣವಲ್ಲ

a)

ಕಾಂತೀಯ ಬಲ ರೇಖೆಗಳು ಧ್ರುವಗಳ ಬಳಿ ದಟ್ಟವಾಗಿರುತ್ತದೆ

b)

ಕಾಂತಿಯ ಬಲ ರೇಖೆಗಳು ಒಂದನ್ನೊಂದು ಛೇದಿಸುತ್ತವೆ

c)

ಕಾಂತೀಯ ಬಲ ರೇಖೆಗಳು ಆವೃತ್ತ ಜಾಲ ಗಳಾಗಿವೆ

d)

ಉತ್ತರ ಧ್ರುವದಲ್ಲಿ ಉತ್ಸರ್ಜನ ವಾಗಿ ದಕ್ಷಿಣ ಧ್ರುವದಲ್ಲಿ ಲೀನವಾಗುತ್ತವೆ

15.

ತಾಮ್ರವನ್ನು ಗಾಳಿಯಲ್ಲಿ ದೀರ್ಘಕಾಲ ವಾಗಿ ಇರಿಸಿದಾಗ ಅದು ಹಸಿರು ಬಣ್ಣವನ್ನು ಪಡೆದುಕೊಳ್ಳುತ್ತದೆ ಏಕೆಂದರೆ

a)

ಸಲ್ಫರ್ ದೊಂದಿಗೆ ವರ್ತಿಸಿ

b)

ತೇವ ಪೂರಿತ ಆಮ್ಲಜನಕದೊಂದಿಗೆ ವರ್ತಿಸಿ

c)

ನೈಟ್ರೋಜನ್ ದೊಂದಿಗೆ ವರ್ತಿಸಿ

d)

ತೇವಪೂರಿತ ಇಂಗಾಲದ ಡೈಯಾಕ್ಸೈಡ್ ದೊಂದಿಗೆ ವರ್ತಿಸಿ

16.

ಬೆಂಜಿನ್ ಅಣುವಿನಲ್ಲಿರುವ ಏಕ ಬಂಧ ಮತ್ತು ದ್ವಿಬಂಧ ಗಳ ಸಂಖ್ಯೆ

a)

9 & 3

b)

6 & 6

c)

7 & 5

d)

3 & 9

17.

ಸೋಡಿಯಂ ಕಾರ್ಬೋನೇಟ್ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲ ದೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ

a)

ಹೈಡ್ರೋಜನ್

b)

ಕ್ಲೋರಿನ್

c)

ಕಾರ್ಬನ್ ಡೈಆಕ್ಸೈಡ್

d)

ನೈಟ್ರೋಜನ್ ಡೈಆಕ್ಸೈಡ್

18.

ಸೈಕ್ಲೋ ಪ್ರೋಪೇನ್ ಮತ್ತು ಪ್ರೋಪೀನ್ ಗಳೆರಡರ ಅಣು ಸೂತ್ರ

a)

C3H8

b)

C3H4

c)

C3H6

d)

C2H6

19.

ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ವಸ್ತು

a)

ಸೋಡಿಯಂ ಕ್ಲೋರೈಡ್ ದ್ರಾವಣ

b)

ಶುಧ್ಧ ನೀರು

c)

ಲಿಂಬೆ ರಸ

d)

ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ

20.

ಈ ಕೆಳಗಿನವುಗಳಲ್ಲಿ ಉದಯವರ್ತಿ ಆಕ್ಸೈಡ್

a)

ಸತುವಿನ ಆಕ್ಸೈಡ್

b)

ಕ್ಯಾಲ್ಸಿಯಂ ಆಕ್ಸೈಡ್

c)

ಪೊಟ್ಯಾಷಿಯಂ ಆಕ್ಸೈಡ್

d)

ಸೋಡಿಯಂ ಆಕ್ಸೈಡ್

21.

ತಾಮ್ರ ಮತ್ತು ತವರದಿಂದಾಗಿರುವ ಮಿಶ್ರ ಲೋಹ

a)

ಕಂಚು

b)

ಹಿತ್ತಾಳೆ

c)

ಬೆಸುಗೆ ಲೋಹ

d)

ಕಲೆರಹಿತ ಉಕ್ಕು

22.

ಕಾರ್ಬನ್ ಡೈಯಾಕ್ಸೈಡ್ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿದಾಗ ಲವಣ ಮತ್ತು ನೀರು ಉಂಟಾಗುತ್ತದೆ ಹಾಗಾದರೆ ಕಾರ್ಬನ್ ಡೈಆಕ್ಸೈಡ್ ನ ಗುಣ

a)

ಆಮ್ಲೀಯ

b)

ಪ್ರತ್ಯಾಮ್ಲೀಯ

c)

ಲೋಹೀಯ

d)

ಆಮ್ಲೀಯ ಮತ್ತು ಪ್ರತ್ಯಾಮ್ಲೀಯ

23.
a)

ಮೆಂಡಲೀವ್

b)

ಡೊಬರೈನರ

c)

ನ್ಯೂಲೆಂಡ್ಸ್

d)

ಹೆನ್ರಿ ಮೋಸ್ಲೆ

24.

ಕಾರ್ಬನ್ ಇತರೆ ಕಾರ್ಬನ್ ಪರಮಾಣುಗಳೊಂದಿಗೆ ಬಂಧಗಳನ್ನು ಏರ್ಪಡಿಸಿಕೊಂಡು ಬೃಹತ್ ಅಣುಗಳನ್ನು ಕೊಡತ್ತವೆ ಕಾರ್ಬನ್ ನ ಈ ಅನನ್ಯ ಗುಣ

a)

ಸಾಬೂನೀಕರಣ

b)

ಹೈಡ್ರಜನೀಕರಣ

c)

ಎಸ್ಟರೀಕರಣ

d)

ಕೆಟನೀಕರಣ

25.

ಇವುಗಳಲ್ಲಿ ಅನುರೂಪ ಶ್ರೇಣಿಯಲ್ಲಿ ರುವ ಸಂಯುಕ್ತಗಳ ಗುಂಪು

a)

CH4, C2H6, C3H8

b)

CH4, C2H4, C2H2

c)

CH4, CH3-OH, H-CHO

d)

C2H2, C3H6, C4H10

26.

ಆಧುನಿಕ ಆವರ್ತ ಕೋಷ್ಟಕದಲ್ಲಿ ಆವರ್ತ ಗಳ ಮತ್ತು ಗುಂಪುಗಳ ಸಂಖ್ಯೆ ಕ್ರಮವಾಗಿ

a)

18 & 7

b)

7 & 18

c)

7 & 9

d)

9 & 7

27.

ಸಸ್ಯಗಳಲ್ಲಿ ಅಬ್ಸಿಕ್ ಆಮ್ಲ ದ ಪ್ರಮುಖ ಕಾರ್ಯ

a)

ಕೋಶಗಳ ಉದ್ದವನ್ನು ಹೆಚ್ಚಿಸುತ್ತದೆ

b)

ಸಸ್ಯಗಳ ಬೆಳವಣಿಗೆಯನ್ನು ಪ್ರತಿಬಂಧಿಸುವುದು

c)

ಕೋಶ ವಿಭಜನೆಯನ್ನು ಉತ್ತೇಜಿಸುವುದು

d)

ಕಾಂಡದ ಬೆಳವಣಿಗೆಯನ್ನು ಉತ್ತೇಜಿಸುವುದು

28.

ಈ ಕೆಳಗಿನವುಗಳಲ್ಲಿ ಹೂ ಬಿಡುವ ಸಸ್ಯ ಮತ್ತು ಮಾನವನ ಸಂತಾನೋತ್ಪತ್ತಿ ವ್ಯೂಹದಲ್ಲಿ ಕಂಡುಬರುವ ಸಾಮಾನ್ಯ ಭಾಗ.

a)

ವೀರ್ಯನಾಳ

b)

ಪರಾಗಕೋಶ

c)

ಶಲಾಕಾನಳಿಕೆ

d)

ಅಂಡಾಶಯ

29.

ಈ ಕೆಳಗಿನವುಗಳಲ್ಲಿ ಅನುವಂಶೀಯವಾಗುವ ಗುಣ

a)

ಕ್ರೀಡಾ ಪಟುಗಳಲ್ಲಿ ಸ್ನಾಯುಗಳ ಬೆಳವಣಿಗೆ

b)

ಕಿವಿಯ ಹಾಲೆಯ ವಿಧ

c)

ಇಲಿಗಳ ಬಾಲವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವದು

d)

ಹಸಿವೆಯ ಕಾರಣದಿಂದ ಜೀವಿಯ ತೂಕ ಕಡಿಮೆ ಯಾಗುವುದು

30.

ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳ ಗಳು

a)

ಅಪಧಮನಿಗಳು

b)

ಅಭಿಧಮನಿಗಳು

c)

ಲೋಮನಾಳಗಳು

d)

ಪುಪ್ಪಸಕ ಅಪಧಮನಿಗಳು

31.

ಈ ಪ್ರಕ್ರಿಯೆಯಿಂದ ಸಸ್ಯಗಳು ಅಧಿಕ ನೀರನ್ನು ಹೊರಹಾಕುತ್ತವೆ

a)

ದ್ಯುತಿಸಂಶ್ಲೇಷಣೆ

b)

ಬಾಷ್ಪ ವಿಸರ್ಜನೆ

c)

ಉಸಿರಾಟ

d)

ವಸ್ತು ಸ್ಥಾನಾಂತರಣ

32.

ಮಾನವನ ವಿಸರ್ಜನಾಂಗ ವ್ಯೂಹದಲ್ಲಿ ಮುತ್ರ ಹರಿಯುವ ಸರಿಯಾದ ಮಾರ್ಗ

a)

ಮೂತ್ರಪಿಂಡ > ಮೂತ್ರನಾಳ > ಮೂತ್ರದ್ವಾರ > ಮೂತ್ರಕೋಶ

b)

ಮೂತ್ರಪಿಂಡ > ಮೂತ್ರನಾಳ > ಮೂತ್ರಕೋಶ> ಮೂತ್ರದ್ವಾರ

c)

ಮೂತ್ರಪಿಂಡ, > ಮೂತ್ರಕೋಶ, > ಮೂತ್ರದ್ವಾರ > ಮೂತ್ರನಾಳ

d)

ಮೂತ್ರಕೋಶ > ಮೂತ್ರಪಿಂಡ > ಮೂತ್ರನಾಳ > ಮೂತ್ರದ್ವಾರ

33.

ಈ ಕೆಳಗಿನವುಗಳಲ್ಲಿ ಯಾವುದು ಜೀವವೈವಿಧ್ಯ ತೆಯ ಸೂಕ್ಷ್ಮ ತಾಣಗಳು

a)

ಮರಭೂಮಿಗಳು

b)

ಅರಣ್ಯಗಳು

c)

ಸಾಗರಗಳು

d)

ನದಿಗಳು

34.

ಸಸ್ಯಗಳ ಹೂವಿನಲ್ಲಿ ಅಂಡಾಣುವಿನ ಕಡೆಗೆ ಪರಾಗರೇಣುವಿನ ನಳಿಕೆಗಳು ಬೆಳೆಯುವುದು

a)

ಗುರುತ್ವಾನುವರ್ತನೆ

b)

ರಾಸಾಯಾನುವರ್ತನೆ

c)

ದ್ಯುತಿ ಅನುವರ್ತನೆ

d)

ಜಲಾನುವರ್ತನೆ

35.

ಈ ಕೆಳಗಿನವುಗಳಲ್ಲಿ ಜೈವಿಕ ವಿಘಟನೆಗೆ ಒಳಗಾಗು ವಸ್ತುಗಳನ್ನು ಮಾತ್ರ ಒಳಗೊಂಡಿರುವ ಗುಂಪು

a)

ಪಾಲಿಥಿನ್ ,ಮರ ಚರ್ಮ

b)

ಮರ ಹುಲ್ಲು ಚರ್ಮ

c)

ಚರ್ಮ ಮಾರ್ಜಕ ಪ್ಲಾಸ್ಟಿಕ್

d)

ಕಾಗದ ಬೆಕಲೈಟ್ ಹುಲ್ಲು

36.

ಬಾಯಿಯಲ್ಲಿ ನೀರೂರುವಿಕೆ,ರಕ್ತದೊತ್ತಡ ದಂತಹ ಅನೈಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸುವ ಮಾನವನ ಮೆದುಳಿನ ಭಾಗ

a)

ಪಾನ್ಸ್

b)

ಮೆಡುಲ್ಲಾ

c)

ಮಹಾಮಸ್ತಿಷ್ಕ

d)

ಅನುಮಸ್ತಿಷ್ಕ

37.

ಕೆಳಗಿನವುಗಳಲ್ಲಿ ಯಾವುದು ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಭಾಗವಲ್ಲ

a)

ವೀರ್ಯನಾಳ

b)

ಅಂಡಾಶಯ

c)

ಗರ್ಭಕೋಶ

d)

ಅಂಡನಾಳ

38.

ಜಲಕೊಯ್ಲು ರಚನೆಗಳನ್ನು ನಿರ್ಮಿಸುವ ಮುಖ್ಯ ಉದ್ದೇಶ

a)

ಮಳೆ ನೀರನ್ನು ಭೂಮಿಯ ಮೇಲ್ಮೈಯಲ್ಲಿ ಹಿಡಿದಿಟ್ಟುಕೊಳ್ಳಲು

b)

ನೀರಾವರಿಗೆ ನೀರನ್ನು ಬಳಸಲು

c)

ಮೀನು ಕೃಷಿಗೆ ನೀರು ಬಳಸಲು

d)

ಅಂತರ್ಜಲವನ್ನು ಮರು ಭರ್ತಿಮಾಡಲು

39.
a)

3 : 1

b)

1:1

c)

1:3

d)

2:1

40.

ಬಾವಲಿ ಮತ್ತು ಪಾರಿವಾಳದ ರೆಕ್ಕೆಗಳು ಇವುಗಳಿಗೆ ಉದಾಹರಣೆಯಾಗಿವೆ

a)

ರಚನಾರೂಪಿ ಅಂಗಗಳು

b)

ಕಾರ್ಯಾನುರೂಪಿ ಅಂಗಗಳು

c)

ವೆಸ್ಟಿಜಿಯಲ್ ಅಂಗಗಳು

d)

ಹೊಂದಾಣಿಕೆಯ ಅಂಗಗಳು