wayground logo

Free Printable Worksheets

Font size

S
M
L
XL
Worksheets

ವ್ಯಾಕರಣ,(ವರ್ಣಮಾಲೆ, ಸಂಧಿ, ಕ್ರಿಯಾಪದ , ವಿಭಕ್ತಿ)

Total questions: 40

Worksheet time: 25mins

Name
Class
Date
1.

೧. ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷರಗಳಿಗೆ ಹೀಗೆನ್ನುವರು.

a)

ಎ) ದೀರ್ಘಸ್ವರ

b)

ಬಿ) ಹ್ರಸ್ವಸ್ವರ

c)

ಸಿ) ಪ್ಲುತಸ್ವರ

d)

ಡಿ) ಸಪ್ತಸ್ವರ

2.

೨. ಗ,ಜ,ಡ,ದ,ಬ ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ.

a)

ಎ) ದೀರ್ಘಸ್ವರಗಳು

b)

ಬಿ) ಅನುನಾಸಿಕಗಳು

c)

ಸಿ) ಮಹಾಪ್ರಾಣಗಳು

d)

ಡಿ) ಅಲ್ಪಪ್ರಾಣಗಳು

3.

೩. ಕನ್ನಡ ವರ್ಣಮಾಲೆಯ ಪ್ರತಿ ವರ್ಗದ ಕೊನೆಯ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ.

a)

ಎ) ಸ್ವರ

b)

ಬಿ) ಅಲ್ಪಪ್ರಾಣ

c)

ಸಿ) ಅನುನಾಸಿಕ

d)

ಡಿ) ಮಹಾಪ್ರಾಣ

4.

೪ ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ

ವ್ಯಂಜನಾಕ್ಷರಗಳ ಸಂಖ್ಯೆ:

a)

ಎ) ಒಂಬತ್ತು

b)

ಬಿ) ಹದಿಮೂರು

c)

ಸಿ) ಇಪ್ಪತ್ತೈದು

d)

ಡಿ) ನಲವತ್ತೊಂಬತ್ತು

5.

೫ . ಕನ್ನಡ ವರ್ಣಮಾಲೆಯಲ್ಲಿರುವ ಸ್ವರಾಕ್ಷರಗಳ ಸಂಖ್ಯೆ

a)

ಎ) ೧೩

b)

ಬಿ) ೩೪

c)

ಸಿ) ೦೨

d)

ಡಿ) ೦೫

6.

೬ ವರ್ಣಮಾಲೆಯ ವರ್ಗದ ಎರಡನೆಯ ಮತ್ತು ನಾಲ್ಕನೆಯ ಅಕ್ಷರಗಳನ್ನು ಹೀಗೆ ಕರೆಯುವರು.

a)

ಎ) ಮಹಾಪ್ರಾಣಾಕ್ಷರಗಳು

b)

ಬಿ) ಅನುನಾಸಿಕಾಕ್ಷರಗಳು

c)

ಸಿ) ಅಲ್ಪಪ್ರಾಣಾಕ್ಷರಗಳು

d)

ಡಿ) ಯೋಗವಾಹಗಳು

7.

೭. ‘ಸಮನಾಗಿ' ಪದದಲ್ಲಿರುವ ಅವರ್ಗೀಯ ವ್ಯಂಜನಾಕ್ಷರ.

a)

ಎ) ಮ

b)

ಬಿ) ಗಿ

c)

ಸಿ) ನಾ

d)

ಡಿ) ಸ

8.

೮. ಒಂದು ವ್ಯಂಜನಕ್ಕೆ ಸ್ವರ ಸೇರಿದಾಗ ಆಗುವ ಅಕ್ಷರ

a)

ಎ) ಒತ್ತಕ್ಷರ

b)

ಬಿ) ಸಂಯುಕ್ತಾಕ್ಷರ

c)

ಸಿ) ಗುಣಿತಾಕ್ಷರ

d)

ಡಿ) ಸಂಧ್ಯಕ್ಷರ

9.

೯. ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಹೀಗೆನ್ನುವರು.

a)

ಎ) ಗುಣಿತಾಕ್ಷರ

b)

ಬಿ) ಸಂಯುಕ್ತಾಕ್ಷರ

c)

ಸಿ) ಸಂಧ್ಯಕ್ಷರ

d)

ಡಿ) ಸ್ವರಾಕ್ಷರ

10.

೧೦. ಙ,ಞ,ಣ್‌, ನ್‌ ಮ್‌ - ಈ ಅಕ್ಷರಗಳನ್ನು ಹೀಗೆನ್ನುವರು

a)

ಎ) ಅಲ್ಪಪ್ರಾಣಾಕ್ಷರಗಳು

b)

ಬಿ) ಮಹಾಪ್ರಾಣಾಕ್ಷರಗಳು

c)

ಸಿ) ಅನುನಾಸಿಕಾಕ್ಷರಗಳು

d)

ಡಿ) ಸ್ವರಾಕ್ಷರಗಳು

11.

೧೧. ‘ಊರೂರು' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ.

a)

ಎ) ಲೋಪ ಸಂಧಿ

b)

ಬಿ) ಆದೇಶ ಸಂಧಿ

c)

ಸಿ) ಆಗಮ ಸಂಧಿ

d)

ಡಿ) ಗುಣ ಸಂಧಿ

12.

೧೨. 'ಮಳೆಯಿಂದ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.

a)

ಎ) ಆದೇಶ ಸಂಧಿ

b)

ಬಿ) ಲೋಪ ಸಂಧಿ

c)

ಸಿ) ಗುಣ ಸಂಧಿ

d)

ಡಿ) ಆಗಮ ಸಂಧಿ

13.

೧೩. ಆದೇಶ ಸಂಧಿಗೆ ಉದಾಹರಣೆಯಾದ ಪದವಿದು.

a)

ಎ) ಬೆಂಬತ್ತು

b)

ಬಿ) ಕೈಯನ್ನು

c)

ಸಿ) ಮಹಾತ್ಮ

d)

ಡಿ) ವಾಗ್ದೇವಿ

14.

೧೪. ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾಹರಣೆಯಾದ ಪದ.

a)

ಎ) ಮಳೆಯಿಂದ

b)

ಬಿ) ಬಲ್ಲೆನೆಂದು

c)

ಸಿ) ಬೆಂಬತ್ತು

d)

ಡಿ) ಮರವನ್ನು

15.

೧೫. ಆಗಮಸಂಧಿಗೆ ಉದಾಹರಣೆಯ ಪದವಿದು

a)

ಎ) ಹೊಸಗಾಲ

b)

ಬಿ) ಮನೆಯೊಳಗೆ

c)

ಸಿ) ತೆರೆದಿಕ್ಕುವ

d)

ಡಿ) ದಿಗಂತ

16.

೧೬. ‘ಸಂಪನ್ನರಾದ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಎ) ಆಗಮ

b)

ಬಿ) ಆದೇಶ

c)

ಸಿ) ಲೋಪ

d)

ಡಿ) ಗುಣ

17.

೧೭. ಸವರ್ಣದೀರ್ಘ ಸಂಧಿಗೆ ಉದಾಹರಣೆಯಾದ ಪದವಿದು

a)

ಎ) ವಾಗ್ದೇವಿ

b)

ಬಿ) ಸುರಾಸುರ

c)

ಸಿ) ಶಾಲೆಯಲ್ಲಿ

d)

ಡಿ) ಮಾತಂತು

18.

೧೮. ದೇವೇಂದ್ರ, ಜ್ಞಾನೇಶ್ವರ, ಸೂರ್ಯೋದಯ ಪದಗಳು ಈ ಸಂಧಿಗೆ ಉದಾಹರಣೆಯಾಗಿದೆ.

a)

ಎ) ಗುಣಸಂಧಿ

b)

ಬಿ) ಲೋಪಸಂಧಿ

c)

ಸಿ) ಸವರ್ಣದೀರ್ಘಸಂಧಿ

d)

ಡಿ) ಅನುನಾಸಿಕಸಂಧಿ

19.

೧೯. 'ಸದ್ವಂಶ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ

a)

ಎ) ಗುಣ

b)

ಬಿ) ಆದೇಶ

c)

ಸಿ) ಜಶ್ತ್ವ

d)

ಡಿ) ವೃದ್ಧಿ

20.

೨೦. ಪಯಶ್ಶಯನ, ಜಗಜ್ಜ್ಯೋತಿ, ಬೃಹಚ್ಛತ್ರ ಪದಗಳು ಈ ಸಂಧಿಗೆ ಉದಾಹರಣೆಯಾಗಿದೆ

a)

ಎ) ಶ್ಚುತ್ವ

b)

ಬಿ) ಅನುನಾಸಿಕ

c)

ಸಿ) ಯಣ್

d)

ಡಿ) ಗುಣ

21.

೨೧. ಅನುನಾಸಿಕ ಸಂಧಿಗೆ ಉದಾಹರಣೆಯಾದ ಪದವಿದು

a)

ಎ) ವಾಗ್ದೇವಿ

b)

ಬಿ) ಜಾತ್ಯತೀತ

c)

ಸಿ) ಸನ್ಮಾನ

d)

ಡಿ) ಏಕೈಕ

22.

೨೨. ಗತ್ಯಂತರ' ಇದು ಈ ಸಂಧಿ ಪದ

a)

ಎ) ಗುಣ

b)

ಬಿ) ಸವರ್ಣದೀರ್ಘ

c)

ಸಿ) ಯಣ್

d)

ಡಿ) ಆಗಮ

23.

೨೩. ಗುಂಪಿಗೆ ಸೇರದ ಪದವನ್ನು ಗುರುತಿಸಿ

a)

ಎ) ಷಣ್ಮುಖ

b)

ಬಿ) ದಿಗಂತ

c)

ಸಿ) ವಾಙ್ಮಯ

d)

ಡಿ) ತನ್ಮಯ

24.

೨೪. ವೃದ್ಧಿಸಂಧಿಗೆ ಉದಾಹರಣೆಯಾದ ಪದವಿದು

a)

ಎ) ವನೌಷಧ

b)

ಬಿ) ಅತ್ಯವಸರ

c)

ಸಿ) ವಧೂಪೇತ

d)

ಡಿ) ಮಹೇಶ

25.

೨೫. 'ಹಾಡು' ಪದದ ವಿಧ್ಯರ್ಥಕ ರೂಪ

a)

ಎ)ಹಾಡಲಿ

b)

ಬಿ) ಹಾಡಿಯಾನು

c)

ಸಿ) ಹಾಡನು

d)

ಡಿ) ಹಾಡಿದನು

26.

೨೬. ಕೆಳಗಿನವುಗಳಲ್ಲಿ ವಿದ್ಯರ್ಥಕ ಕ್ರಿಯಾಪದ

a)

ಎ) ನೋಡಳು

b)

ಬಿ) ಮಾಡರು

c)

ಸಿ) ಕೇಳುವರು

d)

ಡಿ) ಮುಟ್ಟೋಣ

27.

೨೭. ಇವುಗಳಲ್ಲಿ ಸಂಭಾವನಾರ್ಥಕ ರೂಪಕ್ಕೆ ಉದಾಹರಣೆ

a)

ಎ) ಮಾಡಲಿ

b)

ಬಿ) ಮಾಡನು

c)

ಸಿ) ಮಾಡಿಯಾನು

d)

ಡಿ) ಮಾಡಿದನು

28.

೨೮.ʼನೋಡನುʼ - ಈ ಕ್ರಿಯಾಪದ ಈ ರೂಪದಲ್ಲಿದೆ

a)

ಎ) ನಿಷೇಧಾರ್ಥಕ

b)

ಬಿ) ಸಂಭಾವನಾರ್ಥಕ

c)

ಸಿ) ವಿಧ್ಯರ್ಥಕ

d)

ಡಿ) ಆತ್ಮಾರ್ಥಕ

29.

೨೯. ಕ್ರಿಯಾಪದದ ಮೂಲ ರೂಪ

a)

ಎ) ಧಾತು

b)

ಬಿ) ಸಾಧಿತ ಧಾತು

c)

ಸಿ) ಅವ್ಯಯ

d)

ಡಿ) ನಿಷೇಧ

30.

೩೦. ʼಪ್ರೀತಿಯ ಹಣತೆ ಹಚ್ಚೋಣ' – ಈ ವಾಕ್ಯದಲ್ಲಿಯ ಕ್ರಿಯಾಪದವು ಈ ರೂಪದಲ್ಲಿದೆ

a)

ಎ) ಸಂಭಾವನಾರ್ಥಕ

b)

ಬಿ) ವಿಧ್ಯರ್ಥಕ

c)

ಸಿ) ನಿಷೇಧಾರ್ಥಕ

d)

ಡಿ) ಆತ್ಮಾರ್ಥಕ

31.

೩೧. ಇವುಗಳಲ್ಲಿ ಸಂಭಾವನಾರ್ಥಕ ರೂಪಕ್ಕೆ ಉದಾಹರಣೆಯಾದ ಪದವಿದು

a)

ಎ) ಮಾಡಲಿ

b)

ಬಿ)ಮಾಡನು

c)

ಸಿ) ಮಾಡಿಯಾನು

d)

ಡಿ) ಮಾಡು

32.

೩೨. ಕೊಟ್ಟಿರುವ ಧಾತುಗಳಲ್ಲಿ ಆಕರ್ಮಕಧಾತು ಪದವಿದು

a)

ಎ) ಕೊಡು

b)

ಬಿ) ಬಿಡು

c)

ಸಿ) ಓಡು

d)

ಡಿ) ನೋಡು

33.

೩೩. ಕರ್ಮಾರ್ಥದ ಕಾರಕವು ಈ ವಿಭಕ್ತಿಯಲ್ಲಿಕಂಡುಬರುವುದು

a)

ಎ) ದ್ವಿತೀಯಾ

b)

ಬಿ) ಸಪ್ತಮೀ

c)

ಸಿ) ತೃತೀಯಾ

d)

ಡಿ) ಪಂಚಮೀ

34.

೩೪. ‘ನೆತ್ತಿಯೊಳ್' ಪದವು ಈ ವಿಭಕ್ತಿಯಲ್ಲಿದೆ

a)

ಎ) ಪ್ರಥಮಾ

b)

ಬಿ) ಸಪ್ತಮೀ

c)

ಸಿ) ತೃತೀಯಾ

d)

ಡಿ) ಪಂಚಮೀ

35.

೩೫. 'ಗುರುವತ್ತಣಿಂ' ಪದವು ಈ ವಿಭಕ್ತಿಯಲ್ಲಿದೆ.

a)

ಎ) ಪ್ರಥಮಾ

b)

ಬಿ) ತೃತೀಯಾ

c)

ಸಿ) ಚತುರ್ಥೀ

d)

ಡಿ) ಪಂಚಮೀ

36.

೩೬. ಇವುಗಳಲ್ಲಿ ತೃತೀಯಾ ವಿಭಕ್ತಿಯುಳ್ಳ ಪದವಿದು

a)

ಎ) ಗುರುನತ್ತಣಿಂ

b)

ಬಿ) ದ್ರೋಣಂ

c)

ಸಿ) ಕುಂಭಸಂಭವನಂ

d)

ಡಿ) ಚಟ್ಟರಿಂ

37.

೩೭. ಚತುರ್ಥಿ ವಿಭಕ್ತಿಯ ಕಾರಕಾರ್ಥ ಇದು

a)

ಎ) ಅಪಾದಾನ

b)

ಬಿ) ಸಂಪ್ರದಾನ

c)

ಸಿ) ಅಧಿಕರಣ

d)

ಡಿ) ಕರಣಾರ್ಥ

38.

೩೮. ʼಬಿದ್ದುದನ್ನುʼ ಪದವು ಈ ವಿಭಕ್ತಿಗೆ ಉದಾಹರಣೆಯಾಗಿದೆ

a)

ಎ) ದ್ವಿತೀಯಾ

b)

ಬಿ) ಪ್ರಥಮಾ

c)

ಸಿ) ಚತುರ್ಥೀ

d)

ಡಿ) ಸಪ್ತಮೀ

39.

೩೯. ಷಷ್ಠಿವಿಭಕ್ತಿಗೆ ಉದಾಹರಣೆಯಾದ ಪದವಿದು

a)

ಎ) ಜಲದಿಂ

b)

ಬಿ) ಬಿರುಗಾಳಿಗೆ

c)

ಸಿ) ಭರವಸೆಗಳ

d)

ಡಿ) ಜಲಕ್ಕೆ

40.

೪೦. ʼರಾಯಂಗೆʼ ಪದವು ಈ ವಿಭಕ್ತಿಗೆ ಉದಾಹರಣೆಯಾಗಿದೆ

a)

ಎ) ಪ್ರಥಮಾ

b)

ಬಿ) ಚತುರ್ಥೀ

c)

ಸಿ) ತೃತೀಯ

d)

ಡಿ) ಸಪ್ತಮೀ